Rajkot Test ರಾಜ್‌ಕೋಟ್ ಟೆಸ್ಟ್‌ನಲ್ಲಿ ಭಾರತ ತಂಡ ಭರ್ಜರಿ ಗೆಲುವು ಕಂಡಿದೆ. ಇಂಗ್ಲೆಂಡ್ ತಂಡವನ್ನು 2ನೇ ಇನ್ನಿಂಗ್ಸ್‌ನಲ್ಲಿ 122 ರನ್‌ಗಳಿಗೆ ಕಟ್ಟಿಹಾಕಿದ ಭಾರತ ತಂಡ 434 ರನ್‌ಗಳ ಗೆಲುವು ಕಂಡಿದೆ.
ರಾಜ್‌ಕೋಟ್ (ಫೆ.18): ಪ್ರವಾಸಿ ಇಂಗ್ಲೆಂಡ್ ತಂಡವನ್ನು ಮೂರನೇ ಟೆಸ್ಟ್ ಪಂದ್ಯದಲ್ಲಿ 434 ರನ್‌ಗಳಿಂದ ಮಣಿಸಿದ ಭಾರತ ತಂಡ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1 ಮುನ್ನಡೆಗೇರಿದೆ. ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ರನ್ ಅಂತರದಲ್ಲಿ ಭಾರತ ತಂಡದ 577 ಟೆಸ್ಟ್‌ಗಳಲ್ಲಿ ಅತ್ಯಂತ ದೊಡ್ಡ ಗೆಲುವು ಎನಿಸಿದೆ.2021ರಲ್ಲಿ ನ್ಯೂಜಿಲೆಂಡ್ ವಿರುದ್ಧ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭಾರತ 372 ರನ್‌ಗಳಿಂದ ಗೆಲುವು ಕಂಡಿದ್ದು ಈವರೆಗಿನ ದಾಖಲೆಯಾಗಿತ್ತು. ಇನ್ನು ಇಂಗ್ಲೆಂಡ್ ತಂಡದ ಪಾಲಿಗೂ 2ನೇ ಅತಿದೊಡ್ಡ ಅಂತರದ ಸೋಲಾಗಿದೆ. 1934ರಲ್ಲಿ ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 562 ರನ್‌ಗಳಿಂದ ಸೋಲು ಕಂಡಿದ್ದು ಇಂಗ್ಲೆಂಡ್‌ನ ಈವರೆಗಿನ ಅತಿದೊಡ್ಡ ಅಂತರದ ಸೋಲು ಎನಿಸಿದೆ. ಟೆಸ್ಟ್ ತಂಡದ ನಾಯಕನಾಗಿ ಬೆನ್ ಸ್ಟೋಕ್ಸ್ ಸತತ 2 ಪಂದ್ಯಗಳಲ್ಲಿ ಸೋಲು ಕಂಡಿರುವುದು ಇದು 2ನೇ ಬಾರಿ. 2023ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಸತತ 2 ಪಂದ್ಯಗಳಲ್ಲಿ ಸ್ಟೋಕ್ಸ್ ನಾಯಕತ್ವದಲ್ಲಿ ಇಂಗ್ಲೆಂಡ್ ಸೋಲು ಕಂಡಿತ್ತು.
ನಿರಂಜನ್ ಶಾ ಮೈದಾನದಲ್ಲಿ ಭಾನುವಾರ ಮುಕ್ತಾಯಗೊಂಡ ಪಂದ್ಯದಲ್ಲಿ ಭಾರತ ತಂಡದ ಬೌಲರ್‌ಗಳು ತೀರಾ ಸರಳವಾಗಿ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳ ವಿಕೆಟ್ ಉರುಳಿಸಿದರು. ಸರಣಿಯಲ್ಲಿ ಇದೇ ಮೊದಲ ಬಾರಿಗೆ ಇಂಗ್ಲೆಂಡ್ ತಂಡದ ಡ್ರೆಸಿಂಗ್ ರೂಮ್‌ನಲ್ಲಿ ಸೋಲಿನ ಬಗ್ಗೆ ಆತಂಕ ಕಾಡುತ್ತಿತ್ತು. ಅದಕ್ಕೆ ಕಾರಣ, ರಾಜ್‌ಕೋಟ್ ಟೆಸ್ಟ್‌ನ ಸೋಲು ಕಾರಣವಾಗಿರಲಿಲ್ಲ. ಬದಲಾಗಿ ತಮ್ಮ ಆಕ್ರಮಣಕಾರಿ ಆಟವಾದ ಬಜ್‌ಬಾಲ್‌ಗೆ ಎದುರಾಗಿರುವ ಸೋಲು ಅದಾಗಿತ್ತು. ಬಜ್‌ಬಾಲ್ ತಂತ್ರದಿಂದ ಭಾರತದಲ್ಲಿ ಅಪರೂಪದ ಸರಣಿ ಗೆಲುವಿನ ನಿರೀಕ್ಷೆ ಇಟ್ಟಿದ್ದ ಇಂಗ್ಲೆಂಡ್‌ಗೆ ಭಾರತದ ಬೌಲರ್‌ಗಳು ಕಡಿವಾಣ ಹಾಕಿದರು. ಬಜ್‌ಬಾಲ್ ಶೈಲಿಯ ಆಟದ ಮೂಲ ವಿನ್ಯಾಸಕಾರರಲ್ಲಿ ಒಬ್ಬರಾಗಿರುವ ಇಂಗ್ಲೆಂಡ್ ತಂಡದ ಮುಖ್ಯ ಕೋಚ್ ಬ್ರೆಂಡನ್ ಮೆಕ್ಕಲಂ ಕೂಡ ತಂಡದ ಬ್ಯಾಟ್ಸ್‌ಮನ್‌ಗಳು ಔಟಾಗುತ್ತಿದ್ದ ರೀತಿಗೆ ಅಚ್ಚರಿ ವ್ಯಕ್ತಪಡಿಸಿದರು.
2ನೇ ಟೆಸ್ಟ್ ಪಂದ್ಯದಲ್ಲಿ 399 ರನ್‌ಗಳ ಚೇಸಿಂಗ್ ಮಾಡುವ ವೇಳೆ ಇಂಗ್ಲೆಂಡ್ 107 ರನ್‌ಗಳಿಂದ ಸೋಲು ಕಂಡಿತ್ತು. ಆದರೆ, ಇಂಗ್ಲೆಂಡ್‌ನ ಆಟದಲ್ಲಿ ಗೆಲ್ಲುವ ಛಲ ಕಂಡಿತ್ತು. ಅದಕ್ಕೂ ಮುನ್ನ ತಂಡದ ವೇಗಿ ಜೇಮ್ಸ್ ಆಂಡರ್‌ಸನ್ ಕೂಡ ಈಗಿನ ಇಂಗ್ಲೆಂಡ್ ತಂಡ 600 ರನ್ ಚೇಸ್ ಮಾಡಲು ಕೂಡ ಶಕ್ತವಾಗಿದೆ ಎಂದಿದ್ದರು. ಆದರೆ, ರಾಜ್‌ಕೋಟ್ ಟೆಸ್ಟ್‌ನಲ್ಲಿ ಅದ್ಯಾವ ತಂತ್ರಗಳೂ ಕೂಡ ನಡೆಯಲಿಲ್ಲ. ಆದರೆ, ಭಾನುವಾರ ಇಂಗ್ಲೆಂಡ್‌ಬ ಬಜ್‌ಬಾಲ್ ತಂತ್ರಕ್ಕೆ ದೊಡ್ಡ ಸೋಲು ಎದುರಾಗಿದೆ. ಕೇವಲ 39.4 ಓವರ್‌ಗಲ್ಲಿ ಇಂಗ್ಲೆಂಡ್ 122 ರನ್‌ಗೆ ಆಲೌಟ್ ಆಯಿತು. ಭಾರತದ ಸ್ಪಿನ್ನರ್‌ಗಳ ಮುಂದೆ ಆಟವಾಡಲು ಕೂಡ ಇಂಗ್ಲೀಷ್ ಬ್ಯಾಟ್ಸ್‌ಮನ್‌ಗಳು ಪರದಾಡಿದರು. 3ನೇ ಟೆಸ್ಟ್‌ನ 4ನೇ ದಿನದ ಅಂತಿಮ ಅವಧಿಯ ಆಟದಲ್ಲಿ ತವರಿನ ಆಟಗಾರ ರವೀಂದ್ರ ಜಡೇಜಾ ಇಂಗ್ಲೆಂಡ್ ಪಾಲಿಗೆ ಕಬ್ಬಿಣದ ಕಡಲೆಯಾದರು. 577 ರನ್‌ಗಳ ಟಾರ್ಗೆಟ್ ಪಡೆದುಕೊಂಡಿದ್ದ ಇಂಗ್ಲೆಂಡ್ ಭಾರತದ ಬೌಲರ್‌ಗಳ ಎದುರು ಅಕ್ಷರಶಃ ಪರದಾಟ ನಡೆಸಿತು. ರವೀಂದ್ರ ಜಡೇಜಾ ಟೆಸ್ಟ್‌ನಲ್ಲಿ 13ನೇ ಬಾರಿಗೆ ಐದು ವಿಕೆಟ್ ಸಾಧನೆ ಮಾಡಿ ಮಿಂಚಿದರು.
ಏಷ್ಯಾ ಟೀಮ್ ಚಾಂಪಿಯನ್‌ಷಿಪ್ ಗೆದ್ದ ಭಾರತ, ಇತಿಹಾಸ ನಿರ್ಮಿಸಿದ ಭಾರತ ಬ್ಯಾಡ್ಮಿಂಟನ್ ತಂಡ!
ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 445 ರನ್ ಬಾರಿಸಿದರೆ, ಪ್ರತಿಯಾಗಿ ಇಂಗ್ಲೆಂಡ್ 319 ರನ್‌ಗೆ ಆಲೌಟ್ ಆಗಿತ್ತು. 2ನೇ ಇನ್ನಿಂಗ್ಸ್‌ನಲ್ಲಿ ಯಶಸ್ವಿ ಜೈಸ್ವಾಲ್ ಸ್ಪೋಟಕ ದ್ವಿಶತಕದೊಂದಿಗೆ ಭಾರತ 4 ವಿಕೆಟ್‌ಗೆ 430 ರನ್ ಬಾರಿಸಿ ಡಿಕ್ಲೇರ್ ಘೋಷಣೆ ಮಾಡಿತ್ತು. ಇದರಿಂದಾಗಿ 577 ರನ್ ಟಾರ್ಗೆಟ್ ಪಡೆದುಕೊಂಡಿದ್ದ ಇಂಗ್ಲೆಂಡ್ 122 ರನ್‌ಗೆ ಆಲೌಟ್ ಆಯಿತು. ರವೀಂದ್ರ ಜಡೇಜಾ 41 ರನ್ ನೀಡಿ 5 ವಿಕೆಟ್ ಉರುಳಿಸಿದರೆ, ಕುಲದೀಪ್ ಯಾದವ್ 19 ರನ್‌ಗೆ 2 ವಿಕೆಟ್ ಉರುಳಿಸಿದರು.
Breaking: ಮೂರನೇ ಟೆಸ್ಟ್ ತ್ಯಜಿಸಿದ ಆರ್.ಅಶ್ವಿನ್, 10 ಆಟಗಾರರೊಂದಿಗೆ ಆಡಲಿದೆ ಭಾರತ!