56 ಎಸೆತಗಳಲ್ಲಿ 89 ರನ್ ಸಿಡಿಸಿದ ಇಶಾನ್ ಕಿಶನ್
ಮೊದಲ ವಿಕೆಟ್ ಗೆ ಶತಕದ ಜೊತೆಯಾಟ
ಶ್ರೀಲಂಕಾ ತಂಡಕ್ಕೆ ಸವಾಲಿನ ಗುರಿ
ಲಕ್ನೋ (ಫೆ.24): ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಇಶಾನ್ ಕಿಶನ್ (Ishan Kishan ) ಹಾಗೂ ಶ್ರೇಯಸ್ ಅಯ್ಯರ್ (Shreyas Iyer) ಪ್ರವಾಸಿ ಶ್ರೀಲಂಕಾ (Sri Lanka) ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾದ ಸವಾಲಿನ ಮೊತ್ತಕ್ಕೆ ಕಾರಣರಾಗಿದ್ದಾರೆ. 56 ಎಸೆತಗಳನ್ನು ಎದುರಿಸಿದ ಇಶಾನ್ ಕಿಶನ್ 10 ಬೌಂಡರಿ, 3 ಸಿಕ್ಸರ್ ಗಳೊಂದಿಗೆ 89 ರನ್ ಸಿಡಿಸುವ ಮೂಲಕ ಕೇವಲ 11 ರನ್ ಗಳಿಂದ ಶತಕ ವಂಚಿತರಾದರು.
ಗುರುವಾರ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕ್ನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ ಗಳಲ್ಲಿ2 ವಿಕೆಟ್ ಗೆ 199 ಮೊತ್ತ ಪೇರಿಸಿತು. ಮೊದಲ ವಿಕೆಟ್ ಗೆ ರೋಹಿತ್ ಶರ್ಮ ಹಾಗೂ ಇಶಾನ್ ಕಿಶನ್ ಸ್ಪೋಟಕ ಜೊತೆಯಾಟವಾಡಿದ್ದರಿಂದ ತಂಡ ದೊಡ್ಡ ಮೊತ್ತ ಪೇರಿಸಲು ಸಾಧ್ಯವಾಯಿತು.
ಇಶಾನ್ ಕಿಶನ್ ಹಾಗೂ ನಾಯಕ ರೋಹಿತ್ ಶರ್ಮ ಜೋಡಿ ಮೊದಲ ವಿಕೆಟ್ ಗೆ ಕೇವಲ 71 ಎಸೆತಗಳಲ್ಲಿ 111 ರನ್ ಸಿಡಿಸಿದರು. ರೋಹಿತ್ ಶರ್ಮ ಸ್ವಲ್ಪ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದರೆ, ಇಶಾನ್ ಕಿಶನ್ ಮಾತ್ರ ಶ್ರೀಲಂಕಾ ಬೌಲರ್ ಗಳ ಚಳಿ ಬಿಡಿಸಿದರು. ತಾವು ಎದುರಿಸಿದ ಎಲ್ಲಾ ಎಸೆತಗಳನ್ನು ಬೌಂಡರಿ ಗೆರೆ ದಾಟಿಸುವ ಪ್ರಯತ್ನದಲ್ಲಿಯೇ ಆಟವಾಡಿದ ಇಶಾನ್ ಕಿಶನ್ 158ರ ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟಿಂಗ್ ಮಾಡಿದರು. ಇವರಿಗೆ ಉತ್ತಮ ಸಾಥ್ ನೀಡಿದ ರೋಹಿತ್ ಶರ್ಮ, 32 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಇದ್ದ 44 ರನ್ ಬಾರಿಸಿ ಲಹಿರು ಕುಮಾರ ಎಸೆತದಲ್ಲಿ ಬೌಲ್ಡ್ ಆಗಿ ನಿರ್ಗಮಿಸಿದರು.
Shreyas Iyer's half-century helps India end up with a total of 199/2 in their 20 overs 🔢
Can Sri Lanka chase this down? | 📝 https://t.co/YXIT9WrBeI pic.twitter.com/h4UPPQwKNP
ಕಳೆದ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ನೀರಸ ಆಟವಾಡಿದ್ದ ಇಶಾನ್ ಕಿಶನ್, ಪವರ್ ಪ್ಲೇಯಲ್ಲಿ ಭಾರತದ ಭರ್ಜರಿ ಆಟಕ್ಕೆ ಕಾರಣವಾದರು. ಇದರಿಂದಾಗಿ ಪವರ್ ಪ್ಲೇಯಲ್ಲಿ ಟೀಂ ಇಂಡಿಯಾ 58 ರನ್ ಗಳನ್ನು ಕಲೆಹಾಕಿತ್ತು. ಇನ್ನು ಪವರ್ ಪ್ಲೇ ಮುಗಿದ ಬೆನ್ನಲ್ಲಿಯೇ ಇಶಾನ್ ಕಿಶನ್ ಅವರ ಕ್ಯಾಚ್ ಅನ್ನು ಕೈಚೆಲ್ಲಿದ್ದು ಲಂಕಾ ತಂಡಕ್ಕೆ ಮಾರಕವಾಗಿ ಪರಿಣಮಿಸಿತು. ಈ ವೇಳೆ ಅವರು 40ರ ಸಮೀಪದಲ್ಲಿ ಆಟವಾಡುತ್ತಿದ್ದರು
Ind vs SL: ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಬೌಲಿಂಗ್ ಆಯ್ಕೆ
ಇಶಾನ್ ಕಿಶನ್ ಜೊತೆ ಆಕರ್ಷಕ ಜೊತೆಯಾಟವಾಡಿದ ರೋಹಿತ್ ಶರ್ಮ ಈ ಹಾದಿಯಲ್ಲಿ ಟಿ20 ಕ್ರಿಕೆಟ್ ನಲ್ಲಿ ಗರಿಷ್ಠ ರನ್ ಸ್ಕೋರ್ ಮಾಡಿದ ಆಟಗಾರರ ಪಟ್ಟಿಯಲ್ಲಿ ಮಾರ್ಟಿನ್ ಗುಪ್ಟಿಲ್ ಹಾಗೂ ವಿರಾಟ್ ಕೊಹ್ಲಿಯನ್ನು ಹಿಂದೆ ಹಾಕಿದರು. ಶತಕದಿಂದ 11 ರನ್ ದೂರವಿದ್ದಾಗ ಇಶಾನ್ ಕಿಶನ್ ಔಟಾದರೆ, ಅವರ ಸ್ಥಾನದಲ್ಲಿ ಆಡಲು ಬಂದ ಶ್ರೇಯಸ್ ಅಯ್ಯರ್, ಡೆತ್ ಓವರ್ ಗಳಲ್ಲಿ ಲೀಲಾಜಾಲವಾಗಿ ಬ್ಯಾಟ್ ಬೀಸಿ ತಂಡದ ಮೊತ್ತವನ್ನು 199ಕ್ಕೆ ಏರಿಸಲು ಸಹಾಯ ಮಾಡಿದರು. ಮೊದಲ 17 ರನ್ ಗಳನ್ನು ಬಾರಿಸಲು 14 ಎಸೆತ ಆಟವಾಡಿದ್ದ ಶ್ರೇಯಸ್ ಅಯ್ಯರ್, ನಂತರದ 14 ಎಸೆತಗಳಲ್ಲಿ 40 ರನ್ ಸಿಡಿಸುವ ಮೂಲಕ ಲಂಕಾ ಬೌಲರ್ ಗಳ ಬೆಂಡೆತ್ತಿದರು. ಪ್ರಮುಖ ಬೌಲರ್ ಗಳ ಅಲಭ್ಯತೆಯಿಂದಾಗಿ ಶ್ರೀಲಂಕಾ ತಂಡ ಮತ್ತಷ್ಟು ಸಂಕಷ್ಟ ಎದುರಿಸಿತು.
Ranji Trophy: ದಿಢೀರ್ ಕುಸಿದ ಕರ್ನಾಟಕಕ್ಕೆ ಕರುಣ್ ನಾಯರ್ ಆಸರೆ
ಇನ್ನು ಇಶಾನ್ ಕಿಶನ್ ಬಾರಿಸಿದ 89 ರನ್ ಅಂತಾರಾಷ್ಟ್ರೀಯ ಟಿ20ಯಲ್ಲಿ ಭಾರತದ ವಿಕೆಟ್ ಕೀಪರ್ ಬಾರಿಸಿದ ಗರಿಷ್ಠ ಮೊತ್ತ ಎನಿಸಿದೆ. ಅದಲ್ಲದೆ, ಅಂತಾರಾಷ್ಟ್ರೀಯ ಟಿ20ಯಲ್ಲಿ ಇದು ಅವರ 2ನೇ ಅರ್ಧಶತಕ ಎನಿಸಿದೆ.