ವಿಶ್ವ ಸಮರಕ್ಕೆ ಭಾರತದ ವೇದಿಕೆ; ವರ್ಷದ ಆರಂಭದಲ್ಲೇ ನಡೆಯಬೇಕಿದ್ದ ಟೂರ್ನಿ!

By Kannadaprabha News  |  First Published Oct 3, 2023, 1:16 PM IST

ಈಗಾಗಲೇ ಪಾಲ್ಗೊಳ್ಳಲಿರುವ ಎಲ್ಲಾ ತಂಡಗಳಿಗೂ ಕೆಂಪು ಹಾಸಿನ ಸ್ವಾಗತ ಕೋರಿ, ಅಗತ್ಯ ಸೌಕರ್ಯಗಳನ್ನು ಒದಗಿಸಿರುವ ಬಿಸಿಸಿಐ, ಇದೊಂದು ಅವಿಸ್ಮರಣೀಯ ಟೂರ್ನಿಯಾಗಿ ರೂಪುಗೊಳ್ಳಲು ಬೇಕಿರುವ ಎಲ್ಲಾ ವ್ಯವಸ್ಥೆ ಕಲ್ಪಿಸಿರುವುದಾಗಿ ಹೇಳಿಕೊಂಡಿದೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ತಾವೇ ಮುಂದೆ ನಿಂತು ಎಲ್ಲಾ ವ್ಯವಸ್ಥೆ ಮಾಡಿರುವುದಾಗಿಯೂ ಹೇಳಿಕೊಂಡಿದ್ದಾರೆ. ಬಹಳ ಅಳೆದು ತೂಗಿ ವೇಳಾಪಟ್ಟಿ ಸಿದ್ದಗೊಳಿಸಿರುವುದಾಗಿ ಬಿಸಿಸಿಐ ಹೇಳಿಕೊಳ್ಳುತ್ತಿದ್ದು, ಪಂದ್ಯದಿಂದ ಪಂದ್ಯಕ್ಕೆ ರೋಚಕತೆ ಹೆಚ್ಚುವ ನಿರೀಕ್ಷೆಯಿದೆ ಎಂದು ಕ್ರಿಕೆಟ್ ತಜ್ಞರು ಅಭಿಪ್ರಾಯಿಸಿದ್ದಾರೆ.


ನವದೆಹಲಿ: ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿರುವ ದಿನ ಇನ್ನೇನು ಹತ್ತಿರದಲ್ಲೇ ಇದೆ. 2023ರ ಐಸಿಸಿ ಏಕದಿನ ವಿಶ್ವಕಪ್‌ಗೆ ಏಕಾಂಗಿಯಾಗಿ ಆತಿಥ್ಯ ವಹಿಸಲು ಸಕಲ ರೀತಿಯಲ್ಲಿ ಸಜ್ಜಾಗಿರುವ ಭಾರತ, ತನ್ನ ಪ್ರಶಸ್ತಿ ಬರವನ್ನು ತವರಿನಲ್ಲೇ ನೀಗಿಸಿಕೊಳ್ಳಲು ಹವಣಿಸುತ್ತಿದೆ. ಭಾರತ ನಾಲ್ಕನೇ ಬಾರಿಗೆ ವಿಶ್ವಕಪ್ ಟೂರ್ನಿಗೆ ಆತಿಥ್ಯ ವಹಿಸುತ್ತಿದ್ದರೂ, ಏಕಾಂಗಿಯಾಗಿ ಆಯೋಜನೆ ಮಾಡುತ್ತಿರುವುದು ಇದೇ ಮೊದಲು. ಈ ಹಿಂದೆ ನೆರೆಹೊರೆಯ ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶಗಳ ಜೊತೆ ಜಂಟಿಯಾಗಿ ಆತಿಥ್ಯ ವಹಿಸಲು ಅವಕಾಶ ದೊರೆತಿತ್ತು. ಆದರೆ ಈ ಬಾರಿ ಭಾರತ ಏಕಾಂಗಿಯಾಗಿ ತನ್ನ ಆತಿಥ್ಯ ಸಾಮರ್ಥ್ಯವನ್ನು ಪ್ರದರ್ಶಿಸಲು ಎಲ್ಲಾ ಸಿದ್ದತೆ ಮಾಡಿಕೊಂಡಿದೆ.

ಈಗಾಗಲೇ ಪಾಲ್ಗೊಳ್ಳಲಿರುವ ಎಲ್ಲಾ ತಂಡಗಳಿಗೂ ಕೆಂಪು ಹಾಸಿನ ಸ್ವಾಗತ ಕೋರಿ, ಅಗತ್ಯ ಸೌಕರ್ಯಗಳನ್ನು ಒದಗಿಸಿರುವ ಬಿಸಿಸಿಐ, ಇದೊಂದು ಅವಿಸ್ಮರಣೀಯ ಟೂರ್ನಿಯಾಗಿ ರೂಪುಗೊಳ್ಳಲು ಬೇಕಿರುವ ಎಲ್ಲಾ ವ್ಯವಸ್ಥೆ ಕಲ್ಪಿಸಿರುವುದಾಗಿ ಹೇಳಿಕೊಂಡಿದೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ತಾವೇ ಮುಂದೆ ನಿಂತು ಎಲ್ಲಾ ವ್ಯವಸ್ಥೆ ಮಾಡಿರುವುದಾಗಿಯೂ ಹೇಳಿಕೊಂಡಿದ್ದಾರೆ. ಬಹಳ ಅಳೆದು ತೂಗಿ ವೇಳಾಪಟ್ಟಿ ಸಿದ್ದಗೊಳಿಸಿರುವುದಾಗಿ ಬಿಸಿಸಿಐ ಹೇಳಿಕೊಳ್ಳುತ್ತಿದ್ದು, ಪಂದ್ಯದಿಂದ ಪಂದ್ಯಕ್ಕೆ ರೋಚಕತೆ ಹೆಚ್ಚುವ ನಿರೀಕ್ಷೆಯಿದೆ ಎಂದು ಕ್ರಿಕೆಟ್ ತಜ್ಞರು ಅಭಿಪ್ರಾಯಿಸಿದ್ದಾರೆ.

Latest Videos

undefined

ICC World Cup 2023: ವಿಶ್ವ ಸಮರಕ್ಕೆ 10 ಸೈನ್ಯಗಳು ಸನ್ನದ್ದ..!

1987ರಲ್ಲಿ ಮೊದಲ ಸಲ ಭಾರತದಲ್ಲಿ ವಿಶ್ವಕಪ್‌

ಭಾರತಕ್ಕೆ ಈ ವರೆಗೂ 3 ಬಾರಿ ವಿಶ್ವಕಪ್‌ ಆತಿಥ್ಯ ಸಿಕ್ಕಿದೆ. ಮೂರೂ ಬಾರಿ ಭಾರತ, ನೆರೆಹೊರೆಯ ರಾಷ್ಟ್ರಗಳ ಜೊತೆ ಜಂಟಿ ಆತಿಥ್ಯ ವಹಿಸಿದೆ.

1987: ಇಂಗ್ಲೆಂಡ್‌ನಿಂದ ಹೊರಗೆ ಮೊದಲ ಸಲ ವಿಶ್ವಕಪ್‌ ನಡೆಸಲು ಐಸಿಸಿ ನಿರ್ಧರಿಸಿದಾಗ ಭಾರತಕ್ಕೆ ಆತಿಥ್ಯ ಹಕ್ಕು ಸಿಕ್ಕಿತು. 1987ರಲ್ಲಿ ಪಾಕಿಸ್ತಾನದ ಜೊತೆ ಜಂಟಿ ಆತಿಥ್ಯ ವಹಿಸಿದ ಭಾರತ, ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸಿತು. ಭಾರತದ 14 ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆದಿದ್ದವು. ಬೆಂಗಳೂರಲ್ಲೂ ಒಂದು ಪಂದ್ಯ ನಡೆದಿತ್ತು.

1996: ಇದಾದ ಬಳಿಕ ಭಾರತದಲ್ಲಿ ಮತ್ತೆ ವಿಶ್ವಕಪ್‌ ನಡೆದಿದ್ದು 1996ರಲ್ಲಿ. ಆ ವರ್ಷ ಭಾರತ, ಪಾಕಿಸ್ತಾನ ಹಾಗೂ ಶ್ರೀಲಂಕಾ ಜಂಟಿಯಾಗಿ ಟೂರ್ನಿ ಆಯೋಜಿಸಿದ್ದವು. ಭಾರತದ 17 ಕ್ರೀಡಾಂಗಣಗಳಲ್ಲಿ ತಲಾ ಒಂದು ಪಂದ್ಯ ನಡೆದಿತ್ತು. ಬೆಂಗಳೂರಲ್ಲಿ ನಡೆದ ಭಾರತ-ಪಾಕಿಸ್ತಾನ ನಡುವಿನ ಕ್ವಾರ್ಟರ್‌ ಫೈನಲ್‌, ವಿಶ್ವಕಪ್‌ನ ಅವಿಸ್ಮರಣೀಯ ಪಂದ್ಯಗಳಲ್ಲೊಂದು.

World Cup 2023 ಭಾರತ vs ನೆದರ್‌ಲೆಂಡ್ಸ್‌ ಅಭ್ಯಾಸ ಪಂದ್ಯಕ್ಕೂ ಮಳೆ ಅಡ್ಡಿ?

2011: ಭಾರತ 3ನೇ ಬಾರಿಗೆ ವಿಶ್ವಕಪ್‌ಗೆ ಆತಿಥ್ಯ ವಹಿಸಿದ್ದು 2011ರಲ್ಲಿ. ಭಾರತದ ಜೊತೆ ಶ್ರೀಲಂಕಾ, ಬಾಂಗ್ಲಾದೇಶಕ್ಕೂ ಪಂದ್ಯಗಳನ್ನು ಆಯೋಜಿಸುವ ಅವಕಾಶ ಸಿಕ್ಕಿತ್ತು. ಬೆಂಗಳೂರು ಸೇರಿ ಭಾರತದ 8 ನಗರಗಳಲ್ಲಿ ಪಂದ್ಯಗಳು ನಡೆದಿದ್ದವು. ಭಾರತ-ಶ್ರೀಲಂಕಾ ನಡುವಿನ ಫೈನಲ್‌ ಪಂದ್ಯಕ್ಕೆ ಮುಂಬೈನ ವಾಂಖೇಡೆ ಕ್ರೀಡಾಂಗಣ ವೇದಿಕೆಯಾಗಿತ್ತು.

ವರ್ಷದ ಆರಂಭದಲ್ಲೇ ನಡೆಯಬೇಕಿದ್ದ ಟೂರ್ನಿ!

ಏಕದಿನ ವಿಶ್ವಕಪ್‌ 2023ರ ಫೆ.9ರಿಂದ ಮಾ.26ರ ವರೆಗೂ ನಿಗದಿಯಾಗಿತ್ತು. ಆದರೆ 2020ರಲ್ಲಿ ಕೊರೋನಾ ಸೋಂಕಿನಿಂದಾಗಿ ಟೂರ್ನಿಗಳೇ ನಡೆಯಲಿಲ್ಲ. ಇದರಿಂದಾಗಿ ವಿಶ್ವಕಪ್‌ನ ಅರ್ಹತಾ ಅವಧಿಯನ್ನು ವಿಸ್ತರಿಸಬೇಕಾದ ಅನಿವಾರ್ಯತೆಗೆ ಐಸಿಸಿ ಸಿಲುಕಿತು. ಇದೇ ಕಾರಣದಿಂದಾಗಿ ಐಸಿಸಿ ಮುಂದೆ ವಿಶ್ವಕಪ್‌ ಟೂರ್ನಿಯನ್ನು 6 ತಿಂಗಳ ಕಾಲ ಮುಂದೂಡದೆ ಬೇರೆ ದಾರಿ ಇರಲಿಲ್ಲ.

click me!