ಕನ್ನಡಿಗ ಪಡಿಕ್ಕಲ್, ಗಾಯಕ್ವಾಡ್‌ಗೆ ನಾಯಕ ಪಟ್ಟ, ರಜತ್ ಪಾಟೀದಾರ್, ಪಾಂಡ್ಯಗೂ ಚಾನ್ಸ್‌..! ಆಸೀಸ್‌ ಸರಣಿಗೆ ಬಿಸಿಸಿಐನಿಂದ ತಂಡ ಪ್ರಕಟ

Published : Sep 09, 2026, 04:31 PM IST
Devdutt Padikkal

ಸಾರಾಂಶ

ಮುಂಬರುವ ಆಸ್ಟ್ರೇಲಿಯಾ 'ಎ' ವಿರುದ್ಧದ ಏಕದಿನ ಹಾಗೂ ಮಲ್ಟಿ ಡೇ ಪಂದ್ಯಗಳಿಗೆ ಬಿಸಿಸಿಐ ಭಾರತ 'ಎ' ತಂಡವನ್ನು ಪ್ರಕಟಿಸಿದೆ. ಮಲ್ಟಿ ಡೇ ಪಂದ್ಯಗಳಿಗೆ ಕನ್ನಡಿಗ ದೇವದತ್ ಪಡಿಕ್ಕಲ್ ನಾಯಕರಾದರೆ, ಏಕದಿನ ಸರಣಿಗೆ ಋತುರಾಜ್ ಗಾಯಕ್ವಾಡ್ ಸಾರಥ್ಯ ವಹಿಸಲಿದ್ದಾರೆ. ಈ ಎಲ್ಲಾ ಪಂದ್ಯಗಳು ಪುದುಚೆರಿಯಲ್ಲಿ ನಡೆಯಲಿವೆ.

ಮುಂಬೈ: ಮುಂಬರುವ ಆಸ್ಟ್ರೇಲಿಯಾ 'ಎ' ಎದುರಿನ ಏಕದಿನ ಹಾಗೂ ಮಲ್ಟಿ ಡೇ ಪಂದ್ಯಗಳಿಗೆ ಬಿಸಿಸಿಐ, ಭಾರತ 'ಎ' ತಂಡವನ್ನು ಆಯ್ಕೆ ಮಾಡಿದೆ. ಎರಡು ತಂಡಗಳು ಮೊದಲಿಗೆ ಎರಡು ಮಲ್ಟಿ ಡೇ ಪಂದ್ಯಗಳನ್ನು ಆಡಲಿವೆ. ಇದಾದ ಬಳಿಕ ಉಭಯ ತಂಡಗಳು ಮೂರು ಏಕದಿನ ಪಂದ್ಯಗಳನ್ನು ಆಡಲಿವೆ. ಈ ಪಂದ್ಯಗಳು ಪುದುಚೆರಿಯಲ್ಲಿ ನಡೆಯಲಿವೆ.

ಮಲ್ಟಿ ಡೇ ಪಂದ್ಯಗಳಿಗೆ ದೇವದತ್ ಪಡಿಕ್ಕಲ್‌ಗೆ ನಾಯಕತ್ವ ಪಟ್ಟ:

ಇತ್ತೀಚಿಗಿನ ಐಪಿಎಲ್ ಹಾಗೂ ದೇಶಿ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿರುವ ಕನ್ನಡಿಗ ದೇವದತ್ ಪಡಿಕ್ಕಲ್, ಇದೀಗ ಆಸ್ಟ್ರೇಲಿಯಾ 'ಎ' ಎದುರಿನ ಮಲ್ಟಿ ಡೇ ಪಂದ್ಯಕ್ಕೆ ಭಾರತ 'ಎ' ತಂಡದ ನಾಯಕರಾಗಿ ನೇಮಕವಾಗಿದ್ದಾರೆ. ದೇವದತ್ ಪಡಿಕ್ಕಲ್ ಇತ್ತೀಚೆಗಷ್ಟೇ ಮುಕ್ತಾಯವಾದ ಶ್ರೀಲಂಕಾ ಎದುರಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಎರಡು ಶತಕ ಸಿಡಿಸಿ ಮಿಂಚಿದ್ದರು. ಇನ್ನು ಮಲ್ಟಿ ಡೇ ಪಂದ್ಯಗಳ ಸರಣಿಗೆ ಉಪನಾಯಕರಾಗಿ ಸಾಯಿ ಸುದರ್ಶನ್ ನೇಮಕವಾಗಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಸಾಯಿ ಸುದರ್ಶನ್ ಶ್ರೀಲಂಕಾ ಎದುರಿನ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದರು. ಇದೀಗ ಸಾಯಿ ಸುದರ್ಶನ್ ಭಾರತ 'ಎ' ತಂಡದ ಮೂಲಕ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡಲು ಎದುರು ನೋಡುತ್ತಿದ್ದಾರೆ. ಮಲ್ಟಿ ಡೇ ಪಂದ್ಯಗಳು ನಾಲ್ಕು ದಿನಗಳ ಕಾಲ ನಡೆಯಲಿದೆ.

ಏಕದಿನ ಪಂದ್ಯಕ್ಕೆ ಗಾಯಕ್ವಾಡ್‌ಗೆ ನಾಯಕ ಪಟ್ಟ:

ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ನಾಯಕ ಋತುರಾಜ್ ಗಾಯಕ್ವಾಡ್, ಇದೀಗ ಆಸ್ಟ್ರೇಲಿಯಾ 'ಎ' ಎದುರಿನ 3 ಪಂದ್ಯಗಳ ಏಕದಿನ ಸರಣಿಗೆ ನಾಯಕರಾಗಿ ನೇಮಕವಾಗಿದ್ದಾರೆ. ಇನ್ನು ದೇವದತ್ ಪಡಿಕ್ಕಲ್ ಈ ಸರಣಿಗೆ ಉಪನಾಯಕರಾಗಿ ನೇಮಕವಾಗಿದ್ದಾರೆ. ಇನ್ನು ಏಕದಿನ ಸರಣಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಾಟೀದಾರ್‌ಗೆ ಅವಕಾಶ ನೀಡಲಾಗಿದ್ದು, ಈ ಸರಣಿ ಮೂಲಕ ಟೀಂ ಇಂಡಿಯಾಗೆ ಎಂಟ್ರಿ ಕೊಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ಇದಷ್ಟೇ ಅಲ್ಲದೇ ಹಾರ್ದಿಕ್ ಪಾಂಡ್ಯಗೂ ಏಕದಿನ ಸರಣಿಯಲ್ಲಿ ಸ್ಥಾನ ನೀಡಲಾಗಿದೆ.

ಭಾರತ 'ಎ' ಹಾಗೂ ಆಸ್ಟ್ರೇಲಿಯಾ 'ಎ' ಸರಣಿಯ ವೇಳಾಪಟ್ಟಿ

ಸೆಪ್ಟೆಂಬರ್ 22ರಿಂದ 26: ಮೊದಲ ಮಲ್ಟಿ ಡೇ ಪಂದ್ಯ: ಪುದುಚೆರಿ

ಸೆಪ್ಟೆಂಬರ್ 29ರಿಂದ ಅಕ್ಟೋಬರ್ 02: ಮಲ್ಟಿ ಡೇ ಪಂದ್ಯ: ಪುದುಚೆರೆ

ಅಕ್ಟೋಬರ್ 06: ಮೊದಲ ಏಕದಿನ ಪಂದ್ಯ: ಪುದುಚೆರಿ

ಅಕ್ಟೋಬರ್ 09: ಎರಡನೇ ಏಕದಿನ ಪಂದ್ಯ: ಪುದುಚೆರಿ

ಅಕ್ಟೋಬರ್ 11: ಮೂರನೇ ಏಕದಿನ ಪಂದ್ಯ: ಪುದುಚೆರಿ

ಮಲ್ಟಿ ಡೇ ಪಂದ್ಯಕ್ಕೆ ಭಾರತ 'ಎ' ತಂಡ:

ಅಮನ್ ಮೋಖಾಡೆ, ಆಯುಷ್ ಪಾಂಡೆ, ದೇವದತ್ ಪಡಿಕ್ಕಲ್(ನಾಯಕ), ಸಾಯಿ ಸುದರ್ಶನ್(ಉಪನಾಯಕ), ಯಶ್ ರಾಥೋಡ್, ಶೇಕ್ ರಶೀದ್, ಕುಮಾರ್ ಕುಶಾಗ್ರ(ವಿಕೆಟ್ ಕೀಪರ್), ಶಮ್ಸ್ ಮುಲಾನಿ, ತನುಷ್ ಕೊಟ್ಯಾನ್, ತುಷಾರ್ ದೇಶಪಾಂಡೆ, ಅನ್ಸೂಲ್ ಕಂಬೋಜ್, ಪ್ರಫುಲ್ ಹಿಂಗೆ, ಎನ್. ಜಗದೀಶನ್(ವಿಕೆಟ್ ಕೀಪರ್), ನಚಿಕೇತ್ ಬೌವುತೆ, ವಿಜಯ್ ಕುಮಾರ್ ವೈಶಾಕ್*.

ಏಕದಿನ ಸರಣಿಗೆ ಭಾರತ 'ಎ' ತಂಡ:

ಪ್ರಿಯಾನ್ಶ್‌ ಆರ್ಯಾ, ಸಾಯಿ ಸುದರ್ಶನ್, ದೇವದತ್ ಪಡಿಕ್ಕಲ್(ಉಪನಾಯಕ), ಋತುರಾಜ್ ಗಾಯಕ್ವಾಡ್(ನಾಯಕ), ರಜತ್ ಪಾಟೀದಾರ್, ಕುಮಾರ್ ಕುಶಾಗ್ರ(ವಿಕೆಟ್ ಕೀಪರ್), ನಿಶಾಂತ್ ಸಿಂಧು, ಅರ್ಶಿನ್ ಕುಲಕರ್ಣಿ, ಅರ್ಶದ್ ಖಾನ್, ನಮನ್ ಧೀರ್, ಹಾರ್ದಿಕ್ ಪಾಂಡ್ಯ*, ಪ್ರಭ್‌ಸಿಮ್ರನ್ ಸಿಂಗ್(ವಿಕೆಟ್‌ ಕೀಪರ್), ಗುರ್ಜಪನೀತ್ ಸಿಂಗ್, ಯಶ್ ಠಾಕೂರ್.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

'ನಮಗೆ ಟ್ರೋಫಿ ಬೇಡ, ಭಾರತವನ್ನು ಸೋಲಿಸಬೇಕಷ್ಟೇ': ವಹಾಬ್ ರಿಯಾಜ್ ಎದುರು ನೋವು ಹೊರಹಾಕಿದ ಪಾಕಿಸ್ತಾನ ಅಭಿಮಾನಿ
ಭಾರತ-ಆಫ್ಘಾನಿಸ್ತಾನ ಟಿ20 ಸರಣಿ ಯಾವಾಗಿನಿಂದ ಆರಂಭ? ಎಲ್ಲಿ ನೇರ ಪ್ರಸಾರ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್