'ನಮಗೆ ಟ್ರೋಫಿ ಬೇಡ, ಭಾರತವನ್ನು ಸೋಲಿಸಬೇಕಷ್ಟೇ': ವಹಾಬ್ ರಿಯಾಜ್ ಎದುರು ನೋವು ಹೊರಹಾಕಿದ ಪಾಕಿಸ್ತಾನ ಅಭಿಮಾನಿ

Published : Sep 09, 2026, 01:04 PM IST
Pakistan Fan Viral Video

ಸಾರಾಂಶ

ಮಹಿಳಾ ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ಸೆಮಿಫೈನಲ್‌ ಪ್ರವೇಶಿಸಿದ ಬಳಿಕ, ಅಭಿಮಾನಿಯೊಬ್ಬರು ಕೋಚ್ ವಹಾಬ್ ರಿಯಾಜ್ ಬಳಿ ಭಾರತವನ್ನು ಸೋಲಿಸುವಂತೆ ಮನವಿ ಮಾಡಿದ್ದಾರೆ. ನಮಗೆ ಏಷ್ಯಾಕಪ್ ಟ್ರೋಫಿಗಿಂತ ಭಾರತದ ವಿರುದ್ಧದ ಗೆಲುವೇ ಮುಖ್ಯ ಎಂದು ಹತಾಶೆಯಿಂದ ಕೇಳಿಕೊಂಡಿದ್ದು, ಈ ವಿಡಿಯೋ ವೈರಲ್ ಆಗಿದೆ.

ಮಹಿಳಾ ಏಷ್ಯಾಕಪ್‌: ಸೆಮೀಸ್‌ ಖಚಿತವಾದ ಬೆನ್ನಲ್ಲೇ ಪಾಕ್‌ ಫ್ಯಾನ್‌ ವಿಚಿತ್ರ ಬೇಡಿಕೆ; ವಿಡಿಯೋ ವೈರಲ್

ಬೆಂಗಳೂರು: ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಮಹಿಳಾ ಏಷ್ಯಾಕಪ್ ಟಿ20 ಟೂರ್ನಿಯ ಪಾಕಿಸ್ತಾನ ಹಾಗೂ ಹಾಂಕಾಂಗ್ ನಡುವಿನ ಪಂದ್ಯದ ಬಳಿಕ ಒಂದು ವಿಚಿತ್ರ ಸಂಗತಿಗೆ ಸಾಕ್ಷಿಯಾಯಿತು. ಸನಾ ಫಾತೀಮಾ ನೇತೃತ್ವದ ಪಾಕಿಸ್ತಾನ ಮಹಿಳಾ ತಂಡವು ಸೆಮಿಫೈನಲ್‌ ಸ್ಥಾನ ಖಚಿತಪಡಿಸಿಕೊಳ್ಳುತ್ತಿದ್ದಂತೆಯೇ, ತಮ್ಮ ಬೆಂಬಲಿಗರಿಗೆ ಧನ್ಯವಾದ ಅರ್ಪಿಸಲು ಪಾಕ್ ಮಹಿಳಾ ತಂಡದ ಹೆಡ್ ಕೋಚ್ ವಹಾಬ್ ರಿಯಾಜ್, ಬೌಂಡರಿ ಲೈನ್ ಬಳಿ ತೆರಳಿದರು. ಈ ವೇಳೆ ಓರ್ವ ಅಭಿಮಾನಿ ತಮ್ಮ ಹತಾಶೆ ಹೊರಹಾಕಿದ್ದಾರೆ.

ಓರ್ವ ಅಭಿಮಾನಿ, ಟೂರ್ನಿಯಲ್ಲಿ ಚಾಂಪಿಯನ್‌ಶಿಪ್‌ ಪ್ರಶಸ್ತಿಯನ್ನು ಗೆಲ್ಲುವುದಕ್ಕಿಂತಲೂ ನೆರೆಯ ಬದ್ದ ಎದುರಾಳಿ ಎದುರು ಗೆಲ್ಲುವುದು ಹೆಚ್ಚು ಮಹತ್ವದ್ದಾಗಿದೆ ಎಂದು ಪ್ರತಿಪಾದಿಸಿದ್ದಾರೆ. 'ವಹಾಬ್ ಸಾಹೆಬ್ರೇ, ಭಾರತವನ್ನು ಸೋಲಿಸಲು ಪ್ರಯತ್ನಪಡಿ. ನಾವು ಭಾರತವನ್ನು ಸೋಲಿಸಬೇಕಿದೆ. ನಮಗೆ ಏಷ್ಯಾಕಪ್ ಟ್ರೋಫಿ ಬೇಡ. ಆದ್ರೆ ಭಾರತವನ್ನು ಸೋಲಿಸಬೇಕು. ಭಾರತವನ್ನು ಸೋಲಿಸದೇ ಬಿಡಬೇಡಿ' ಎಂದು ಹತಾಶೆಯಿಂದ ಪಾಕ್ ಅಭಿಮಾನಿ ವಹಾಬ್ ರಿಯಾಜ್ ಅವರ ಬಳಿ ಕೈ ಮುಗಿದು ಕೇಳಿಕೊಂಡಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹೀಗಿದೆ ನೋಡಿ ಆ ವೈರಲ್ ವಿಡಿಯೋ:

ಗ್ರೂಪ್‌ ಹಂತದಲ್ಲಿ ಭಾರತ ಎದುರು ಪಾಕ್‌ಗೆ ಹೀನಾಯ ಸೋಲು:

ಅಂದಹಾಗೆ ಮಹಿಳಾ ಏಷ್ಯಾಕಪ್ ಟೂರ್ನಿಯ ಗ್ರೂಪ್ ಹಂತದಲ್ಲಿ ಭಾರತ ಹಾಗೂ ಪಾಕಿಸ್ತಾನ ಮಹಿಳಾ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಬದ್ದ ಎದುರಾಳಿ ಪಾಕಿಸ್ತಾನವನ್ನು ಹರ್ಮನ್‌ಪ್ರೀತ್ ಕೌರ್ ಪಡೆ ಹೀನಾಯವಾಗಿ ಸೋಲಿಸಿತ್ತು. ಮೊದಲು ಬ್ಯಾಟ್ ಮಾಡಿದ ಪಾಕ್ 18.1 ಓವರ್‌ಗಳಲ್ಲಿ 55 ರನ್‌ಗಳಿಗೆ ಸರ್ವಪತನ ಕಂಡಿತ್ತು. ಈ ಸಾಧಾರಣ ಗುರಿ ಬೆನ್ನತ್ತಿದ ಭಾರತ ತಂಡವು ಕೇವಲ 3 ವಿಕೆಟ್ ಕಳೆದುಕೊಂಡು 8.4 ಓವರ್‌ಗಳಲ್ಲೇ ಗೆಲುವಿನ ನಗೆ ಬೀರಿತ್ತು

ನಾಕೌಟ್‌ ಪಂದ್ಯಾಟಕ್ಕೆ ವೇದಿಕೆ ರೆಡಿ

ಇದೀಗ ಮಹಿಳಾ ಏಷ್ಯಾಕಪ್ ಟೂರ್ನಿಯ ಗ್ರೂಪ್ ಹಂತದ ಪಂದ್ಯಗಳು ಮುಕ್ತಾಯವಾಗಿದ್ದು, ನಾಕೌಟ್ ಪಂದ್ಯಾಟಕ್ಕೆ ವೇದಿಕೆ ಸಜ್ಜಾಗಿದೆ. ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡವು ಬಾಂಗ್ಲಾದೇಶವನ್ನು ಎದುರಿಸಲಿದೆ. ಇನ್ನು ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಶ್ರೀಲಂಕಾವನ್ನು ಎದುರಿಸಲಿದೆ. ಈ ಎರಡು ತಂಡಗಳು ಸೆಮೀಸ್‌ನಲ್ಲಿ ಗೆಲುವು ಸಾಧಿಸಿದರೇ, ಫೈನಲ್‌ನಲ್ಲಿ ಮತ್ತೊಮ್ಮೆ ಭಾರತ ಹಾಗೂ ಪಾಕಿಸ್ತಾನ ನಡುವಿನ ಕಾದಾಟಕ್ಕೆ ಸಾಕ್ಷಿಯಾಗಬಹುದು. ಫೈನಲ್‌ ಪಂದ್ಯ ಸೆ.13ರಂದು ನಿಗದಿಯಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಭಾರತ-ಆಫ್ಘಾನಿಸ್ತಾನ ಟಿ20 ಸರಣಿ ಯಾವಾಗಿನಿಂದ ಆರಂಭ? ಎಲ್ಲಿ ನೇರ ಪ್ರಸಾರ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
ಕೊಹ್ಲಿ ದಾಖಲೆಯನ್ನೇ ಪುಡಿಪುಡಿ ಮಾಡಿದ್ದ ಆಟಗಾರ! ಧೋನಿ-ಸಾಹಾ ಎದುರು ಮಂಕಾಯ್ತಾ ಈ ಕ್ರಿಕೆಟಿಗನ ಕನಸು?