ಇಂದು 3ನೇ ಟಿ20 ಮ್ಯಾಚ್: ಜಿಂಬಾಬ್ವೆ ವಿರುದ್ಧ ಸರಣಿ ಮುನ್ನಡೆಗೆ ಯಂಗ್‌ ಇಂಡಿಯಾ ಕಾತರ

Published : Jul 10, 2024, 10:43 AM ISTUpdated : Jul 10, 2024, 11:12 AM IST
ಇಂದು 3ನೇ ಟಿ20 ಮ್ಯಾಚ್: ಜಿಂಬಾಬ್ವೆ ವಿರುದ್ಧ ಸರಣಿ ಮುನ್ನಡೆಗೆ ಯಂಗ್‌ ಇಂಡಿಯಾ ಕಾತರ

ಸಾರಾಂಶ

ಭಾರತ ಹಾಗೂ ಜಿಂಬಾಬ್ವೆ ನಡುವಿನ ಮೂರನೇ ಟಿ20 ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಪಂದ್ಯವನ್ನು ಗೆದ್ದು ಗಿಲ್ ನೇತೃತ್ವದ ಟೀಂ ಇಂಡಿಯಾ ಸರಣಿಯಲ್ಲಿ ಮುನ್ನಡೆ ಸಾಧಿಸಲು ಎದುರು ನೋಡುತ್ತಿದೆ.

ಹರಾರೆ: ಆರಂಭಿಕ ಪಂದ್ಯದ ಆಘಾತದ ಹೊರತಾಗಿಯೂ 2ನೇ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಸವಾರಿ ಮಾಡಿದ್ದ ಟೀಂ ಇಂಡಿಯಾ ಮತ್ತೊಂದು ದೊಡ್ಡ ಗೆಲುವಿನ ತವಕದಲ್ಲಿದ್ದು, ಬುಧವಾರ 3ನೇ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. 5 ಪಂದ್ಯಗಳ ಸರಣಿ ಸದ್ಯ 1-1 ಸಮಬಲಗೊಂಡಿದ್ದು, ಸರಣಿ ಮುನ್ನಡೆ ಪಡೆದುಕೊಳ್ಳಲು ಇತ್ತಂಡಗಳು ಪೈಪೋಟಿ ನಡೆಸಲಿವೆ. ಆತಿಥೇಯ ಜಿಂಬಾಬ್ವೆ ಕಳೆದ ಪಂದ್ಯದ ಹಿನ್ನಡೆಯಿಂದ ಪುಟಿದೆದ್ದು ಭಾರತಕ್ಕೆ ಮತ್ತೊಮ್ಮೆ ಆಘಾತ ನೀಡುವ ವಿಶ್ವಾಸದಲ್ಲಿದೆ.

ಟಿ20 ವಿಶ್ವಕಪ್‌ ತಂಡದಲ್ಲಿದ್ದ ಶಿವಂ ದುಬೆ, ಯಶಸ್ವಿ ಜೈಸ್ವಾಲ್‌ ಹಾಗೂ ಸಂಜು ಸ್ಯಾಮ್ಸನ್‌ ಮೊದಲೆರಡು ಪಂದ್ಯಕ್ಕೆ ಅಲಭ್ಯರಾಗಿದ್ದು, ಸದ್ಯ ತಂಡವನ್ನು ಕೂಡಿಕೊಂಡಿದ್ದಾರೆ. ಹೀಗಾಗಿ ಈ ಪಂದ್ಯದಲ್ಲಿ ಭಾರತಕ್ಕೆ ಆಯ್ಕೆ ಗೊಂದಲ ಎದುರಾಗುವ ಸಾಧ್ಯತೆ ಹೆಚ್ಚು.

ಟೀಂ ಇಂಡಿಯಾ ನೂತನ ಕೋಚ್ ಆಗಿ ಗೌತಮ್ ಗಂಭೀರ್ ಆಯ್ಕೆ ಘೋಷಿಸಿದ ಜಯ್ ಶಾ!

ಜೈಸ್ವಾಲ್‌ ಆರಂಭಿಕನಾಗಿ ಆಡಬೇಕಿದ್ದರೆ ಕಳೆದ ಪಂದ್ಯದಲ್ಲಿ ಸ್ಫೋಟಕ ಶತಕ ಸಿಡಿಸಿದ್ದ ಅಭಿಷೇಕ್‌ ಶರ್ಮಾ ಅಥವಾ ನಾಯಕ ಶುಭ್‌ಮನ್‌ ಗಿಲ್‌ ಸ್ಥಾನ ಬಿಟ್ಟುಕೊಡಬೇಕಾಗುತ್ತದೆ. ಆದರೆ ಇವರಿಬ್ಬರೂ ಆರಂಭಿಕರಾಗಿಯೇ ಮುಂದುವರಿಯುವ ನಿರೀಕ್ಷೆಯಿದೆ. ಹೀಗಾಗಿ ಜೈಸ್ವಾಲ್‌ 3ನೇ, ಋತುರಾಜ್‌ ಗಾಯಕ್ವಾಡ್‌ 4ನೇ ಕ್ರಮಾಂಕದಲ್ಲಿ ಆಡಬೇಕಾಗಬಹುದು.

ಸಾಮಾನ್ಯವಾಗಿ 3ನೇ ಕ್ರಮಾಂಕದಲ್ಲಿ ಆಡುತ್ತಿದ್ದ ಸಂಜು ಸ್ಯಾಮ್ಸನ್‌ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡರೆ, 5ನೇ ಕ್ರಮಾಂಕದಲ್ಲಿ ಆಡುವ ನಿರೀಕ್ಷೆಯಿದ್ದು, ಹೀಗಾದರೆ ಧ್ರುವ್ ಜುರೆಲ್‌ ತಂಡದಿಂದ ಹೊರಗುಳಿಯಬೇಕಾಗುತ್ತದೆ. ರಿಯಾನ್‌ ಪರಾಗ್‌ಗೆ ಮತ್ತೊಂದು ಅವಕಾಶ ಸಿಗಲಿದೆಯೋ ಅಥವಾ ಶಿವಂ ದುಬೆಯನ್ನು ಆಡಿಸುತ್ತಾರೊ ಎಂಬ ಕುತೂಹಲವಿದೆ.

ಇನ್ನು, ಆಲ್ರೌಂಡರ್‌ ವಾಷಿಂಗ್ಟನ್‌ ಸುಂದರ್‌ 2 ಪಂದ್ಯಗಳಲ್ಲಿ ಸಾಧಾರಣ ಪ್ರದರ್ಶನ ನೀಡಿದ್ದು, ಈ ಪಂದ್ಯದಲ್ಲಾದರೂ ಮಿಂಚಬೇಕಾದ ಅಗತ್ಯವಿದೆ. ಸ್ಪಿನ್ನರ್‌ ರವಿ ಬಿಷ್ಣೋಯ್‌ ಅಮೋಘ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿದ್ದಾರೆ. 2 ಪಂದ್ಯಗಳಲ್ಲಿ 8 ಓವರ್‌ ಎಸೆದಿರುವ ಅವರು ಕೇವಲ 24 ರನ್ ಬಿಟ್ಟುಕೊಟ್ಟು, 6 ವಿಕೆಟ್‌ ಪಡೆದಿದ್ದಾರೆ. ಈ ಮೂಲಕ ತಂಡದಲ್ಲಿ ಸ್ಥಾನ ಗಟ್ಟಿಗೊಳಿಸುವ ಪ್ರಯತ್ನದಲ್ಲಿದ್ದಾರೆ.

ಸಂಭ್ರಮಾಚರಣೆಗೆ ಬನ್ನಿ: ಟಿ20 ವಿಶ್ವಕಪ್ ಗೆದ್ದ ಭಾರತ ಕ್ರಿಕೆಟ್ ತಂಡಕ್ಕೆ ಮಾಲ್ಡೀವ್ಸ್ ಆಹ್ವಾನ!

ಪುಟಿದೇಳುವ ಗುರಿ: ಸರಣಿಯ ಮೊದಲ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ನೀಡಿದ್ದ ಜಿಂಬಾಬ್ವೆ ಕಳೆದ ಪಂದ್ಯದಲ್ಲಿ ಮುಗ್ಗರಿಸಿತ್ತು. ಈ ಪಂದ್ಯದಲ್ಲಿ ಮತ್ತೆ ಪುಟಿದೇಳುವ ನಿರೀಕ್ಷೆಯಲ್ಲಿದೆ. ನಾಯಕ ಸಿಕಂದರ್‌ ರಝಾ ಆಲ್ರೌಂಡ್‌ ಪ್ರದರ್ಶನ ನೀಡುತ್ತಿದ್ದು, ಇತರರಿಂದ ಸೂಕ್ತ ಬೆಂಬಲದ ನಿರೀಕ್ಷೆಯಲ್ಲಿದ್ದಾರೆ.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ಗಿಲ್‌(ನಾಯಕ), ಅಭಿಷೇಕ್‌, ಜೈಸ್ವಾಲ್‌, ಋತುರಾಜ್‌, ಸಂಜು, ದುಬೆ, ರಿಂಕು, ವಾಷಿಂಗ್ಟನ್‌, ಆವೇಶ್‌, ಮುಕೇಶ್‌, ಬಿಷ್ಣೋಯ್‌.

ಜಿಂಬಾಬ್ವೆ: ಇನೋಸೆಂಟ್‌, ಮಧವೆರೆ, ಬೆನೆಟ್‌, ಮೈರ್ಸ್‌, ಸಿಕಂದರ್‌(ನಾಯಕ), ಮಡಂಡೆ, ಕ್ಯಾಂಪ್‌ಬೆಲ್‌, ಮಸಕಜ, ಜೊಂಗ್ವೆ, ಮುಜರಬಾನಿ, ಚಟಾರ.

ಒಟ್ಟು ಮುಖಾಮುಖಿ: 10

ಭಾರತ: 07

ಜಿಂಬಾಬ್ವೆ: 03

ಪಂದ್ಯ: ಸಂಜೆ 4.30(ಭಾರತೀಯ ಕಾಲಮಾನ) 
ನೇರಪ್ರಸಾರ: ಸೋನಿ ಸ್ಪೋರ್ಟ್ಸ್‌ ನೆಟ್ವರ್ಕ್‌, ಸೋನಿ ಲೈವ್‌
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?