1 SIX, 6 ಬೌಂಡರಿ, 37 ಬಾಲ್‌ನಲ್ಲಿ ಸೆಂಚುರಿ; ಲೆಜೆಂಡ್ಸ್‌ ಲೀಗ್‌ನಲ್ಲಿ ಎಬಿಡಿ ಅಬ್ಬರ, ಕುಣಿದು ಕುಪ್ಪಳಿಸಿದ ಪತ್ನಿ-ಮಕ್ಕಳು!

Published : Oct 09, 2026, 10:08 PM IST
ABD

ಸಾರಾಂಶ

ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್ ಕೇವಲ 37 ಎಸೆತಗಳಲ್ಲಿ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಆಸ್ಟ್ರೇಲಿಯಾ ಚಾಂಪಿಯನ್ಸ್ ನೀಡಿದ್ದ 205 ರನ್‌ಗಳ ಬೃಹತ್ ಗುರಿಯನ್ನು ದಕ್ಷಿಣ ಆಫ್ರಿಕಾ ತಂಡವು ಕೇವಲ 15.4 ಓವರ್‌ಗಳಲ್ಲಿ 8 ವಿಕೆಟ್‌ಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿತು.

ದ.ಆಫ್ರಿಕಾದ ಮಾಜಿ ದಿಗ್ಗಜ, ಮಿಸ್ಟರ್‌ 360 ಡಿಗ್ರಿ, ಆರ್‌ಸಿಬಿಯ ಆಪತ್ಬಾಂಧವ ಎಬಿ ಡಿವಿಲಿಯರ್ಸ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿರಬಹುದು, ಆದರೆ ಅವರ ಬ್ಯಾಟಿಂಗ್ ಅಬ್ಬರ ಇನ್ನೂ ಕಡಿಮೆಯಾಗಿಲ್ಲ. ಇತ್ತೀಚಿನ ಉದಾಹರಣೆಯೆಂದರೆ ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್‌ನಲ್ಲಿ 37 ಎಸೆತಗಳಲ್ಲಿ ಶತಕ ಭಾರಿಸಿದ್ದಾರೆ. ಚಾಂಪಿಯನ್‌ಗಳ ಪರ ಆಡುತ್ತಿರುವ ಡಿವಿಲಿಯರ್ಸ್ ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದ ಬೌಲರ್‌ಗಳನ್ನು ಕಾಡಿದ್ದಾರೆ.

ಅಜೇಯ ಶತಕ!

ಡಿವಿಲಿಯರ್ಸ್ ತಮ್ಮ ತಂಡಕ್ಕಾಗಿ 40 ಎಸೆತಗಳಲ್ಲಿ ಅಜೇಯ 111 ರನ್ ಗಳಿಸಿದರು. ಈ ಇನ್ನಿಂಗ್ಸ್‌ನಲ್ಲಿ ಎಬಿಡಿ 11 ಸಿಕ್ಸ, ಮತ್ತು 6 ಬೌಂಡರಿ. 42 ವರ್ಷದ ಡಿವಿಲಿಯರ್ಸ್ ಅವರ ಈ ಸ್ಫೋಟಕ ಬ್ಯಾಟಿಂಗ್ ನೋಡಿ ಅವರ ಮಕ್ಕಳು ಮತ್ತು ಪತ್ನಿ ಸಂತೋಷದಿಂದ ಕುಣಿದು ಕುಪ್ಪಳಿಸಿದ್ದಾರೆ. ಈ ವಯಸ್ಸಿನಲ್ಲೂ ಡಿವಿಲಿಯರ್ಸ್ ಇನ್ನೂ ಪರಿಣಾಮಕಾರಿಯಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂದು ಯಾರಿಗೂ ನಂಬಲು ಸಾಧ್ಯವಾಗಲಿಲ್ಲ. ಚಾಂಪಿಯನ್ಸ್ ದಕ್ಷಿಣ ಆಫ್ರಿಕಾ ತಂಡವು ಪಂದ್ಯವನ್ನು 8 ವಿಕೆಟ್‌ಗಳಿಂದ ಗೆದ್ದುಕೊಂಡಿತು.

ಆಸಿಸ್‌ ವಿರುದ್ಧ 8 ವಿಕೆಟ್‌ಗಳ ವಿಜಯ!

ಇದರ ಮಧ್ಯ, ದಕ್ಷಿಣ ಆಫ್ರಿಕಾ ಆಸ್ಟ್ರೇಲಿಯಾ ಚಾಂಪಿಯನ್ಸ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಚಾಂಪಿಯನ್ಸ್ ಡಿ'ಆರ್ಸಿ ಶಾರ್ಟ್ ಅವರ 66 ರನ್ ಮತ್ತು ನಾಯಕ ಡೇವಿಡ್ ವಾರ್ನರ್ ಅವರ 48 ರನ್‌ಗಳ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 205 ರನ್‌ಗಳ ಬೃಹತ್ ಮೊತ್ತವನ್ನು ಗಳಿಸಿತು. ಹಾರ್ಡಸ್ ವಿಲ್ಜೋಯೆನ್ 3 ವಿಕೆಟ್‌ಗಳೊಂದಿಗೆ ಅತಿ ಹೆಚ್ಚು ವಿಕೆಟ್ ಪಡೆದರು. ಮಾರ್ಚಂಟ್ ಡಿ ಲ್ಯಾಂಗೆ ಮತ್ತು ಇಮ್ರಾನ್ ತಾಹಿರ್ ಕೂಡ ತಲಾ 1 ವಿಕೆಟ್ ಪಡೆದರು.

ಅದ್ಭುತ ಬ್ಯಾಟಿಂಗ್‌ ಪ್ರದರ್ಶನ!

ಇದಕ್ಕೆ ಪ್ರತಿಯಾಗಿ ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ಅದ್ಭುತವಾಗಿತ್ತು. ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಕೇವಲ 15.4 ಓವರ್‌ಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ 210 ರನ್ ಗಳಿಸುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿತು. ಡಿವಿಲಿಯರ್ಸ್ ಜೊತೆಗೆ, ರಿಚರ್ಡ್ ಲಿವಿ ಕೂಡ 29 ಎಸೆತಗಳಲ್ಲಿ 5 ಸಿಕ್ಸರ್ ಮತ್ತು 3 ಬೌಂಡರಿಗಳ ಸಹಾಯದಿಂದ 62 ರನ್ ಗಳಿಸಿದರು. ಜೆಪಿ ಡುಮಿನಿ ಕೂಡ 22 ಎಸೆತಗಳಲ್ಲಿ 27 ರನ್ ಗಳಿಸಿದರು. ಆಸ್ಟ್ರೇಲಿಯಾ ಪರ ಬೌಲಿಂಗ್‌ನಲ್ಲಿ ಕೇನ್ ರಿಚರ್ಡ್ಸನ್ ಮಾತ್ರ ಯಶಸ್ವಿಯಾದರು. ರಿಚರ್ಡ್ಸನ್ 3 ಓವರ್‌ಗಳಲ್ಲಿ 26 ರನ್‌ಗಳಿಗೆ 2 ವಿಕೆಟ್ ಪಡೆದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Cricket: ವೈಭವ್‌ಗೆ ವಿನೋದ್ ಕಾಂಬ್ಳಿ ಉದಾಹರಣೆ ನೀಡಿದ ಕಪಿಲ್ ದೇವ್; ದಿಗ್ಗಜ ಕೊಟ್ಟ ವಾರ್ನ್‌ ಏನು?
Cricket: ಒಮ್ಮೆ ಅಲ್ಲ 2 ಬಾರಿ; ರಾಂಗ್‌ ಪ್ಲೇಯರ್‌ ಕ್ಯಾಚ್‌ ಡ್ರಾಫ್‌! 243 ಸ್ಟ್ರೈಕ್‌ ರೇಟ್‌ ಸ್ಯಾಮ್‌ಸನ್‌ ಅಬ್ಬರದ ಬ್ಯಾಟಿಂಗ್‌