ವಿಂಡೀಸ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ಫೇಲಾದ ಭಾರತ 2 ವಿಕೆಟ್ ಸೋಲು ಅನುಭವಿಸಿತು. 5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಪಡೆದಿರುವ ವಿಂಡೀಸ್, ಬಹು ವರ್ಷಗಳ ಬಳಿಕ ಭಾರತ ವಿರುದ್ಧ ಸರಣಿ ಗೆಲುವಿನ ಸನಿಹಕ್ಕೆ ತಲುಪಿದೆ.
ಪ್ರಾವಿಡೆನ್ಸ್(ಗಯಾನ): ವೆಸ್ಟ್‌ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತೀಯ ಬ್ಯಾಟರ್‌ಗಳು ಎರಡೂ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದು, ಇದನ್ನು ನಾಯಕ ಹಾರ್ದಿಕ್ ಪಾಂಡ್ಯ ಒಪ್ಪಿಕೊಂಡಿದ್ದಾರೆ. ಭಾನುವಾರದ 2ನೇ ಟಿ20 ಪಂದ್ಯದಲ್ಲಿ 2 ವಿಕೆಟ್ ಸೋಲನುಭವಿಸಿದ ಬಳಿಕ ಮಾತನಾಡಿದ ಅವರು, ‘ನಮ್ಮ ಬ್ಯಾಟಿಂಗ್ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಒಂದೆಡೆ ಪಿಚ್ ನಿಧಾನಗತಿಯದ್ದಾಗಿದ್ದು, ಮತ್ತೊಂದೆಡೆ ವಿಕೆಟ್‌ಗಳು ಬೀಳುತ್ತಿದ್ದವು. ನಾವು ಇನ್ನೂ ಉತ್ತಮವಾಗಿ ನಾವು ಬ್ಯಾಟ್ ಮಾಡಬಹುದಿತ್ತು’ ಎಂದರು.
‘ಬ್ಯಾಟರ್‌ಗಳು ಹೆಚ್ಚಿನ ಜವಾಬ್ದರಿ ಅರಿತು ಆಡಬೇಕು. ಸದ್ಯದ ಸಂಯೋಜನೆಯ ಅನುಸಾರ ನಾವು ನಮ್ಮ ಅಗ್ರ 7 ಬ್ಯಾಟರ್‌ಗಳಿಂದ ಉತ್ತಮ ಪ್ರದರ್ಶನ ನಿರೀಕ್ಷಿಸಿ, ಬೌಲರ್‌ಗಳು ಪಂದ್ಯ ಗೆಲ್ಲಿಸಲಿದ್ದಾರೆ ಎನ್ನುವ ವಿಶ್ವಾಸದೊಂದಿಗೆ ಆಡಬೇಕು. ಉತ್ತಮ ಸಮತೋಲನ ಕಂಡುಕೊಳ್ಳಲು ದಾರಿ ಹುಡುಕಿಕೊಳ್ಳಬೇಕಿದೆ. ಇದೇ ವೇಳೆ ಬ್ಯಾಟರ್‌ಗಳು ತಮ್ಮ ಮೇಲಿರುವ ಜವಾಬ್ದಾರಿಯನ್ನು ನಿಭಾಯಿಸಬೇಕಿದೆ’ ಎಂದು ಹಾರ್ದಿಕ್ ಬ್ಯಾಟರ್‌ಗಳಿಗೆ ಸ್ಪಷ್ಟಸಂದೇಶ ರವಾನಿಸಿದರು.
ಇನ್ನು ಎರಡೂ ಪಂದ್ಯಗಳಲ್ಲಿ ಆಕರ್ಷಕ ಆಟವಾಡಿದ ತಿಲಕ್ ವರ್ಮಾ ಬಗ್ಗೆ ಹಾರ್ದಿಕ್ ಮೆಚ್ಚುಗೆಯ ಮಾತುಗಳನ್ನಾಡಿದ್ದು, ‘ತಿಲಕ್ ಕೇವಲ 2ನೇ ಅಂತಾರಾಷ್ಟ್ರೀಯ ಪಂದ್ಯ ಆಡುತಿದ್ದಾರೆಂದು ಅನಿಸುತ್ತಿಲ್ಲ. ಅತ್ಯುತ್ತಮವಾಗಿ ಬ್ಯಾಟ್ ಮಾಡುತ್ತಿದ್ದಾರೆ. 4ನೇ ಕ್ರಮಾಂಕದಲ್ಲಿ ಎಡಗೈ ಬ್ಯಾಟರ್ ಆಡುವುದರಿಂದ ಬ್ಯಾಟಿಂಗ್‌ನಲ್ಲಿ ಸಮತೋಲನ ಕಾಪಾಡಲು ಸಾಧ್ಯವಾಗುತ್ತದೆ ಎಂದಿದ್ದಾರೆ.
ಟಿ20 ಹೋರಾಟದಲ್ಲಿ ವೆಸ್ಟ್ ಇಂಡೀಸ್‌ಗೆ ಶರಣಾದ ಭಾರತ, ಹಾರ್ದಿಕ್ ಪಾಂಡ್ಯ ಪಡೆಗೆ ಸತತ 2ನೇ ಸೋಲು!
2024ರಲ್ಲಿ ವಿಂಡೀಸ್‌ನಲ್ಲೇ ನಡೆಯಲಿರುವ ಟಿ20 ವಿಶ್ವಕಪ್ಗೆ ಸಿದ್ಧತೆ ನಡೆಸಲು ‘ಐಪಿಎಲ್ ಸ್ಟಾರ್’ಗಳನ್ನು ಒಟ್ಟುಗೂಡಿಸಿ ಕಟ್ಟಿರುವ ತಂಡ, ಯಾರೂ ಊಹಿಸದಷ್ಟುವೇಗವಾಗಿ ಕುಸಿಯುತ್ತಿರುವಂತೆ ಕಾಣುತ್ತಿದೆ. ವಿಂಡೀಸ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ಫೇಲಾದ ಭಾರತ 2 ವಿಕೆಟ್ ಸೋಲು ಅನುಭವಿಸಿತು. 5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಪಡೆದಿರುವ ವಿಂಡೀಸ್, ಬಹು ವರ್ಷಗಳ ಬಳಿಕ ಭಾರತ ವಿರುದ್ಧ ಸರಣಿ ಗೆಲುವಿನ ಸನಿಹಕ್ಕೆ ತಲುಪಿದೆ.
ತಿಲಕ್ ವರ್ಮಾ ಹೊರತುಪಡಿಸಿ ಉಳಿದವರಿಂದ ಸಾಧಾರಣ ಬ್ಯಾಟಿಂಗ್ ಪ್ರದರ್ಶನ ಮೂಡಿಬಂದ ಕಾರಣ, 20 ಓವರಲ್ಲಿ ಭಾರತ 7 ವಿಕೆಟ್‌ಗೆ 152 ರನ್ ಕಲೆಹಾಕಿತು. ನಿಧಾನಗತಿಯ ಪಿಚ್‌ನಲ್ಲಿ ಭಾರತದ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆ ಎಂದು ಮೊದಲ ಇನ್ನಿಂಗ್‌್ಸ ಬಳಿಕ ವೀಕ್ಷಕ ವಿವರಣೆಗಾರರು ವಿಶ್ಲೇಷಿಸಿದ್ದರು. ಆದರೆ ನಿಕೋಲಸ್ ಪೂರನ್‌ರ ಸ್ಫೋಟಕ ಆಟ, ವಿಂಡೀಸ್ ಗೆಲುವಿನ ಆಸೆಯನ್ನು ಕೈಬಿಡದಂತೆ ನೋಡಿಕೊಂಡಿತು.
ವಿಶ್ವಕಪ್ ಟೂರ್ನಿಗೂ ಮುನ್ನ ಟೀಂ ಇಂಡಿಯಾಗೆ ವಾರ್ನಿಂಗ್ ಕೊಟ್ಟ ಪಾಕ್ ಮಾಜಿ ಕ್ರಿಕೆಟಿಗ..!
ಹಾರ್ದಿಕ್ ಎಡವಟ್ಟು!
ವಿಂಡೀಸ್ ಗೆಲುವಿನತ್ತ ಮುನ್ನುಗ್ಗುತ್ತಿದ್ದಾಗ ಇನ್ನಿಂಗ್‌್ಸನ 16ನೇ ಓವರಲ್ಲಿ 3 ವಿಕೆಟ್ ಪತನಗೊಂಡವು. ಶೆಫರ್ಡ್ ರನೌಟ್ ಆದರೆ, ಅಪಾಯಕಾರಿ ಹೋಲ್ಡರ್ ಹಾಗೂ ಹೆಟ್ಮೇಯರ್ರನ್ನು ಚಹಲ್ ಔಟ್ ಮಾಡಿದರು. ಇದರಿಂದಾಗಿ ವಿಂಡೀಸ್ ಒತ್ತಡಕ್ಕೆ ಸಿಲುಕಿತು. ಆದರೆ ನಾಯಕ ಹಾರ್ದಿಕ್ ಮುಂದಿನ 3 ಓವರ್ ವೇಗಿಗಳಿಂದ ಬೌಲ್ ಮಾಡಿಸಿದರು. ಚಹಲ್‌ರ ಎಸೆತಗಳನ್ನು ಎದುರಿಸಲು ವಿಂಡೀಸ್ ದಾಂಡಿಗರು ಪರದಾಡುತ್ತಿದ್ದದ್ದು ಸ್ಪಷ್ಟವಾಗಿ ಕಂಡುಬಂದರೂ, ಅವರಿಗೆ ಮತ್ತೊಂದು ಓವರ್ ನೀಡದೆ ಹಾರ್ದಿಕ್ ಎಡವಟ್ಟು ಮಾಡಿದರು.