ಲಂಕಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಯಾದವ್ ಸೆಂಚುರಿ ಸಿಡಿಸಿ ಮಿಂಚಿದ್ದಾರೆ. ಸೂರ್ಯಕುಮಾರ್ ಯಾದವ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನಕ್ಕೆ ಹಲವು ದಾಖಲೆ ನಿರ್ಮಾಣವಾಗಿದೆ.
ರಾಜ್‌ಕೋಟ್(ಜ.07): ಸೂರ್ಯಕುಮಾರ್ ಯಾದವ್ ಸ್ಫೋಟಕ ಬ್ಯಾಟಿಂಗ್ ಮೂಲಕ ಆಕರ್ಷಕ ಶತಕ ಸಿಡಿಸಿದ್ದಾರೆ. ಶ್ರೀಲಂಕಾ ವಿರುದ್ದಧ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ 45 ಎಸೆತದಲ್ಲಿ ಸೆಂಚುರಿ ಪೂರೈಸಿದರು. 6 ಬೌಂಡರಿ ಹಾಗೂ 8 ಸಿಕ್ಸರ್ ಮೂಲಕ ಸೂರ್ಯಕುಮಾರ್ ಯಾದವ್ ಶತಕ ಪೂರೈಸಿದರು. ಸೂರ್ಯುಕುಮಾರ್ ಯಾದವ್ 222.22 ಸ್ಟ್ರೈಕ್ ರೇಟ್ ನಲ್ಲಿ ಸೆಂಚುರಿ ಪೂರೈಸಿದರು. ಭಾರತದ ಪರ ಅತೀ ವೇಗದ ಸೆಂಚುರಿ ಸಿಡಿಸಿದ ಆಟಾಗರರ ಪೈಕಿ ಸೂರ್ಯಕುಮಾರ್ ಯಾದವ್ 2ನೇ ಸ್ಥಾನದಲ್ಲಿದ್ದಾರೆ.
ಒಂದಡೆ ವಿಕೆಟ್ ಪತನಗೊಳ್ಳುತ್ತಿದ್ದರೂ ಸೂರ್ಯಕುಮಾರ್ ಯಾದವ್(Suryakumar yadav Century) ಅಬ್ಬರ ಮುಂದುವರಿಯಿತು. ಬೌಂಡರಿ ಸಿಕ್ಸರ್ ಮೂಲಕ ಲಂಕಾ ಬೌಲರ್‌ಗಳ ತಲೆನೋವು ಹೆಚ್ಚಿಸಿದರು. ಟಿ20 ಮಾದರಿಯಲ್ಲಿ ಸೂರ್ಯಕುಮಾರ್ ಯಾದವ್ 3ನೇ ಸೆಂಚುರಿ ದಾಖಲಿಸಿದರು. ಇದಕ್ಕೂ ಮೊದಲು ಸೂರ್ಯಕುಮಾರ್ ಯಾದವ್ 2 ಟಿ20 ಸೆಂಚುರಿ ದಾಖಲಿಸಿದ್ದಾರೆ. 2022ರಲ್ಲಿ ಸೂರ್ಯಕುಮಾರ್ ಯಾದವ್ ಇಂಗ್ಲೆಂಡ್ ವಿರುದ್ದ ಟಿ20 ಶತಕ ಸಿಡಿಸಿದ್ದಾರೆ. ಇನ್ನು 2022ರಲ್ಲೇ ನ್ಯೂಜಿಲೆಂಡ್ ವಿರುದ್ಧವೂ ಸೂರ್ಯಕುಮಾರ್ ಯಾದವ್ ಸೆಂಚುರಿ ದಾಖಲಿಸಿದ್ದಾರೆ.
ಲಂಕಾ ಸರಣಿ ತಯಾರಿ ನಡುವೆ ರೋಹಿತ್ ಶರ್ಮಾ ಡ್ಯಾನ್ಸ್, ವೈರಲ್ ವಿಡಿಯೋಗೆ ಭರ್ಜರಿ ರೆಸ್ಪಾನ್ಸ್!
ಭಾರತದ ಪರ ಅತೀವೇಗದ ಟಿ20 ಸೆಂಚುರಿ ಸಾಧಕರು
ರೋಹಿತ್ ಶರ್ಮಾ 35 ಎಸೆತ, 2017
ಸೂರ್ಯಕುಮಾರ್ 45 ಎಸೆತ, 2023
ಕೆಎಲ್ ರಾಹುಲ್ 46 ಎಸೆತದ, 2016
ಸೂರ್ಯಕುಮಾರ್ ಯಾದವ್ 48 ಎಸೆತ, 2022
ಸೂರ್ಯಕುಮಾರ್ ಯಾದವ್ 49 ಎಸೆತ, 2022
ಸೂರ್ಯಕುಮಾರ್ ಯಾದವ್ 51 ಎಸೆತದಲ್ಲಿ ಅಜೇಯ 112 ರನ್ ಸಿಡಿಸಿದರು. 220ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ಸೂರ್ಯಕುಮಾರ್ ಯಾದವ್ 7 ಬೌಂಡರಿ ಹಾಗೂ 9 ಸಿಕ್ಸರ್ ಮೂಲಕ ಅಬ್ಬರಿಸಿದ್ದಾರೆ. ಸೂರ್ಯಕುಮಾರ್ ಸೆಂಚುರಿ ಅಬ್ಬರಕ್ಕೆ ಭಾರತ 228 ರನ್ ಸಿಡಿಸಿತು. ಈ ಬೃಹತ್ ಗುರಿ ಲಂಕಾಗೆ(Indi vs Sri lanka) ಸವಾಲಾಗಿ ಪರಿಣಮಿಸಿದೆ.
ಹಸರಂಗಗೆ 6 6 6 ಹ್ಯಾಟ್ರಿಕ್ ಸಿಕ್ಸರ್ ಚಚ್ಚಿದ ಅಕ್ಷರ್ ಪಟೇಲ್..! ವಿಡಿಯೋ ವೈರಲ್
ಸೂರ್ಯಕುಮಾರ್ ಯಾದವ್ ಟಿ20 ಶತಕ
ಇಂಗ್ಲೆಂಡ್ ವಿರುದ್ಧ115 ರನ್, 55 ಎಸೆತ, ಜುಲೈ 2022
ನ್ಯೂಜಿಲೆಂಡ್ ವಿರುದ್ಧ ಅಜೇಯ 111 ರನ್, 51 ಎಸೆತ, ನವೆಂಬರ್ 2022
ಶ್ರೀಲಂಕಾ ವಿರುದ್ಧ ಅಜೇಯ 112 ರನ್ 51 ಎಸೆತ, ಜನವರಿ 2023
ಸೆಂಚುರಿ ಬಳಿಕ ಮಾತನಾಡಿದ ಸೂರ್ಯಕುಮಾರ್ ಯಾದವ್ ಸಂತಸ ವ್ಯಕ್ತಪಡಿಸಿದ್ದಾರೆ. ಇಂದಿನ ಇನ್ನಿಂಗ್ಸ್ ಬ್ಯಾಟಿಂಗ್ ಹೆಚ್ಚು ಖುಷಿ ನೀಡಿದೆ. ನಾಯಕ ಹಾರ್ದಿಕ್ ಪಾಂಡ್ಯ ಬ್ಯಾಟ್ಸ್‌ಮನ್ ಮೇಲೆ ನಂಬಿಕೆ ಇಟ್ಟು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆಮಾಡಿಕೊಂಡರು. ಕೆಲ ಹೊಡೆತ ಉದ್ದೇಶಪೂರ್ವಕವಾಗಿತ್ತು. ಮೊದಲೇ ನಿಗದಿಪಡಿಸಿದ್ದ ಶಾಟ್ಸ್ ಅದಾಗಿತ್ತು. ಕಳೆದ ಕೆಲ ವರ್ಷಗಳಿಂದ ಈ ರೀತಿಯ ಬ್ಯಾಟಿಂಗ್ ಶಾಟ್ಸ್ ಹೊಡೆದಿದ್ದೇನೆ. 2022ರ ಫಾರ್ಮ್ ಮುಗಿದಿದೆ. ಇದೀಗ 2023ರ ಹೊಸ ವರ್ಷ. ಇಡೀ ವರ್ಷ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವ ವಿಶ್ವಾಸವಿದೆ ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.