
ಕೋಲ್ಕತಾ(ಜ.12): ಭಾರತ ಹಾಗೂ ಶ್ರೀಲಂಕಾ ನಡುವಿನ 2ನೇ ಏಕದಿನ ಪಂದ್ಯ ಆರಂಭದಲ್ಲೇ ರೋಚಕಘಟ್ಟ ತಲುಪಿದೆ. ಟೀಂ ಇಂಡಿಯಾ ಕರಾರುವಕ್ ದಾಳಿಗೆ ಲಂಕಾ ತತ್ತರಿಸಿತು. ಮೊಹಮ್ಮದ್ ಸಿರಾಜ್ ಹಾಗೂ ಕುಲ್ದೀಪ್ ಯಾದವ್ ಮೋದಿ ಲಂಕಾಗೆ ಮುಳುವಾದರೆ, ಇತ್ತ ಉಮ್ರಾನ್ ಮಲಿಕ್ ಹಾಗೂ ಅಕ್ಸರ್ ಪಟೇಲ್ ಜಾದುವಿನಿಂದ ಅಬ್ಬರಿಸಲು ಸಾಧ್ಯವಾಗಲಿಲ್ಲ. ಇದರ ಪರಿಣಾಮ ಶ್ರೀಲಂಕಾ 39.4 ಓವರ್‌ಗಳಲ್ಲಿ 215 ರನ್ ಸಿಡಿಸಿ ಆಲೌಟ್ ಆಯಿತು. ಲಂಕಾಗೆ ನವಾನಿಂಡು ಫರ್ನಾಂಡೋ ಸಿಡಿಸಿದ ಅರ್ಧಶತಕ ಹಾಗೂ ಕುಸಾಲ್ ಮೆಂಡೀಸ್ 34 ರನ್ ಹಾಗೂ ದುನೀತ್ ವೆಲ್ಲಾಲೆಗಾ 32 ರನ್ ಕಾಣಿಕೆಯಿಂದ ಲಂಕಾ 200 ರನ್ ಗಡಿ ದಾಟಿ ಸ್ಪರ್ಧಾತ್ಮಕ ಮೊತ್ತ ಪೇರಿಸಲು ಸಾಧ್ಯವಾಯಿತು.
ಟಾಸ್ ಗೆದ್ದ ಶ್ರೀಲಂಕಾ (India vs Sri lanka) ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭದಲ್ಲೇ ಮೊಹಮ್ಮದ್ ಸಿರಾಜ್ ಮಾರಕ ದಾಳಿಗೆ ಶ್ರೀಲಂಕಾ ಆವಿಷ್ಕ ಫರ್ನಾಂಡೋ ವಿಕೆಟ್ ಕಳೆದುಕೊಂಡರು. ಆವಿಷ್ಕಾ 20 ರನ್ ಸಿಡಿಸಿ ಔಟಾದರು. ನುವಾನಿಂಡು ಫರ್ನಾಂಡೋ ಹಾಗೂ ಕುಸಾಲ್ ಮೆಂಡೀಸ್ ಜೊತೆಯಾಟದಿಂದ ಶ್ರೀಲಂಕಾ ಚೇತರಿಸಿಕೊಂಡಿತು.
ರೋಹಿತ್ ಶರ್ಮಾರಂತೆ ಹಣ್ಣು ತಿಂದು ತೂಕ ಇಳಿಸ್ಕೊಳ್ಳಿ
ಸ್ಪೋಟಕ ಬ್ಯಾಟಿಂಗ್ ಮೂಲಕ ಬ್ಯಾಟಿಂಗ್ ಆರಂಭಿಸಿದ ಕುಸಾಲ್ ಮೆಂಡೀಸ್ ಲಂಕಾದ ರನ್ ವೇಗ ಹೆಚ್ಚಿಸಿದರು. ಆದರೆ ಕುಸಾಲ್ ಮೆಂಡೀಸ್ ಅಬ್ಬರ ಹೆಚ್ಚು ಹೊತ್ತು ಇರಲಿಲ್ಲ. 34 ಎಸೆತದಲ್ಲಿ 34 ರನ್ ಸಿಡಿಸಿ ಔಟಾದರು. ಧನಂಜಯ ಡಿಸಿಲ್ವಾ ಡಕೌಟ್ ಆದರೆ, ಅಸಲಂಕ 15 ರನ್ ಕಾಣಿಕೆ ನೀಡಿದರು. ಕಳೆದ ಪಂದ್ಯದಲ್ಲಿ ಅಬ್ಬರಿಸಿ ಶತಕ ಸಿಡಿಸಿದ ನಾಯಕ ದಸೂನ್ ಶನಕ ಕೇವಲ 2 ರನ್ ಸಿಡಿಸಿ ನಿರ್ಗಮಿಸಿದರು.
ಹೋರಾಟ ನೀಡಿದ ನುವಾನಿಂಡು ಫರ್ನಾಂಡೋ ಹಾಫ್ ಸೆಂಚುರಿ ಸಿಡಿಸಿದರು.ಫರ್ನಾಂಡೋ 50 ರನ್ ಸಿಡಿಸಿ ಔಟಾದರು. ವೆಲ್ಲಾಲೆಗಾ 32 ರನ್ ಕಾಣಿಕೆ ನೀಡಿದರು. ಚಮಿಕಾ ಕರುಣಾರತ್ನೆ 17 ರನ್ ಸಿಡಿಸಿ ಔಟಾದರು. ರಾಜಿತ ಅಜೇಯ 17 ರನ್ ಸಿಡಿಸಿದರು. ಲಹಿರು ಕುಮಾರ್ ಡಕೌಟ್ ಆಗುವ ಮೂಕ ಶ್ರೀಲಂಕಾ 39.4 ಓವರ್‌ಗಳಲ್ಲಿ 215 ರನ್‌ಗೆ ಆಲೌಟ್ ಆಯಿತು.
ಸತತ ಎರಡು ಶತಕ ಸಿಡಿಸಿದ ಕೊಹ್ಲಿ, ರ‍್ಯಾಂಕಿಂಗ್‌ನಲ್ಲಿ ಮಹತ್ತರ ಬದಲಾವಣೆ..!
ಮೊದಲ ಪಂದ್ಯದಲ್ಲಿ ಭಾರತಕ್ಕೆ ಗೆಲುವು
ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ, ರೋಹಿತ್ ಶರ್ಮಾ ಸೇರಿದಂತೆ ಇತರ ಬ್ಯಾಟ್ಸ್‌ಮನ್‌ಗಳ ಅಬ್ಬರದಿಂದ ಟೀಂ ಇಂಡಿಯಾ 373 ರನ್ ಸಿಡಿಸಿತ್ತು. ಈ ಬೃಹತ್ ಮೊತ್ತ ಚೇಸ್ ಮಾಡಲು ಕಣಕ್ಕಿಳಿದ ಶ್ರೀಲಂಕಾ ತಂಡಕ್ಕ ನಾಯಕ ದಸೂನ್ ಶನಕಾ ಆಸರೆಯಾಗಿದ್ದರು. ಶನಕಾ ಸೆಂಚುರಿ ಸಿಡಿಸಿ ಮಿಂಚಿದರು. ಆದರೆ ಶ್ರೀಲಂಕಾ 8 ವಿಕೆಟ್ ನಷ್ಟಕ್ಕೆ 308 ರನ್ ಸಿಡಿಸಿತು. ಈ ಮೂಲಕ ಭಾರತ 67 ರನ್ ಗೆಲುವು ದಾಖಲಿಸಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.