207 ರನ್ ಟಾರ್ಗೆಟ್ ಚೇಸಿಂಗ್ ವೇಳೆ ಭಾರತಕ್ಕೆ ಆಘಾತ, ಘಟಾನುಘಟಿ ವಿಕೆಟ್ ಪತನ!

By Suvarna NewsFirst Published Jan 5, 2023, 9:46 PM IST
Highlights

ಶ್ರೀಲಂಕಾ ನೀಡಿರುವ 207 ರನ್ ಬೃಹತ್ ಮೊತ್ತ ನೋಡಿದ ಭಾರತ ತಂಡ ಬೆಚ್ಚಿ ಬಿದ್ದಿದೆ. ತೀವ್ರ ಒತ್ತಡಕ್ಕೆ ಸಿಲುಕಿದ ಟೀಂ ಇಂಡಿಯಾ ರನ್ ಗಳಿಸುವ ಬದಲು ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
 

ಪುಣೆ(ಜ.05): ಶ್ರೀಲಂಕಾ ವಿರುದ್ದದ 2ನೇ ಟಿ20 ಪಂದ್ಯದಲ್ಲಿ ಭಾರತದ ನಿರೀಕ್ಷೆಗಳು ತಲೆಕೆಳಗಾಗಿದೆ. ಒಂದೆಡೆ ಲಂಕಾ ತಂಡವನ್ನು ನಿಯಂತ್ರಿಸಲು ಸಾಧ್ಯವಾಗದೆ ಪರದಾಡಿದರೆ, ಇತ್ತ ಬ್ಯಾಟಿಂಗ್‌ನಲ್ಲಿ ಮತ್ತೆ ವೈಫಲ್ಯ ಕಂಡಿದೆ. 207 ರನ್ ಬೃಹತ್ ಟಾರ್ಗೆಟ್ ಟೀಂ ಇಂಡಿಯಾಗೆ ತೀವ್ರ ಸವಾಲು ಒಡ್ಡಿದೆ. ಹೀಗಾಗಿ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. 12 ರನ್‌ಗಳಿಸುವಷ್ಟರಲ್ಲೇ ಮೊದಲ ವಿಕೆಟ್ ಪತನ ಭಾರತಕ್ಕೆ ತೀವ್ರ ಹಿನ್ನಡೆ ತಂದಿತ್ತು. ಒಂದರ ಹಿಂದೆ ಮತ್ತೊಂದರಂತೆ ಪ್ರಮುಖ ನಾಲ್ವರು ಬ್ಯಾಟ್ಸ್‌ಮನ್ ಪೆವಿಲಿಯನ್‌ಗೆ ವಾಪಸ್ ಆಗಿದ್ದಾರೆ. 

ಚೇಸಿಂಗ್ ಮಾಡಲು ಕಣಕ್ಕಿಳಿದ ಟೀಂ ಇಂಡಿಯಾ ಇಶಾನ್ ಕಿಶನ್ ವಿಕೆಟ್ ಕಳೆದುಕೊಂಡಿತು. ಕಿಶನ್ 2 ರನ್ ಸಿಡಿಸಿ ಔಟಾದರು. ಇನ್ನು ಶುಭಮನ್ ಗಿಲ್ ಕೇವಲ 5 ರನ್ ಸಿಡಿಸಿ ನಿರ್ಗಮಿಸಿದರು. ಈ ಮೂಲಕ 21 ರನ್‌ಗಳಿಗೆ ಪ್ರಮುಖ 2 ವಿಕೆಟ್ ಕಳೆದುಕೊಂಡಿತು. ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ ರಾಹುಲ್ ತ್ರಿಪಾಠಿ ಅವಕಾಶ ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ. ಕೇವಲ 5 ರನ್ ಸಿಡಿಸಿ ಔಟಾದರು.

IND vs SL ಹ್ಯಾಟ್ರಿಕ್ ನೋ ಬಾಲ್, ಟ್ರೋಲ್‌ಗೆ ಗುರಿಯಾದ ವೇಗಿ ಅರ್ಶದೀಪ್!

ಸತತ ವಿಕೆಟ್ ಕಳೆದುಕೊಂಡ ತಂಡಕ್ಕೆ ಸೂರ್ಯಕುಮಾರ್ ಯಾದವ್ ಎಚ್ಚರಿಕೆಯಿಂದ ಬ್ಯಾಟಿಂಗ್ ನಡೆಸಿದರು. ಆದರೆ ಮತ್ತೊಂದೆಡೆಯಿಂದ ನಾಯಕ ಹಾರ್ದಿಕ್ ಪಾಂಡ್ಯ ವಿಕೆಟ್ ಪತನಗೊಂಡಿತು. ಪಾಂಡ್ಯ 12 ರನ್ ಸಿಡಿಸಿ ಔಟಾದರು. 34 ರನ್‌ಗಳಿಸುವಷ್ಟರಲ್ಲೇ 4 ವಿಕೆಟ್ ಪತನಗೊಂಡಿತು. ಹೀಗಾಗಿ ತಂಡದ ಸಂಪೂರ್ಣ ಜವಾಬ್ದಾರಿ ಸೂರ್ಯಕುಮಾರ್ ಯಾದವ್ ಹಾಗೂ ದೀಪಕ್ ಹೂಡ ಹೆಗಲಮೇಲೇರಿತು. ಆದರೆ ದೀಪಕ್ ಹೂಡ ಅಬ್ಬರಿಸಲಿಲ್ಲ. 9 ರನ್ ಸಿಡಿಸಿ ಔಟಾದರು. 57 ರನ್‌ಗಳಿಗೆ ಟೀಂ ಇಂಡಿಯಾ 5 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತು. ಬೃಹತ್ ಮೊತ್ತದ ಚೇಸಿಂಗ್‌ನಲ್ಲಿ ಟೀಂ ಇಂಡಿಯಾ ಹೀನಾಯ ಸೋಲಿಗೆ ಗುರಿಯಾಗುವ ಆತಂಕ ಎದುರಿಸು. 

ಶ್ರೀಲಂಕಾ ಇನ್ನಿಂಗ್ಸ್
2ನೇ ಟಿ20 ಪಂದ್ಯದಲ್ಲಿ ಶ್ರೀಲಂಕಾ ಇನ್ನಿಂಗ್ಸ್‌ಗೆ ಭಾರತ ಕಕ್ಕಾಬಿಕ್ಕಿಯಾಯಿಯುತ. ಅಂತಿಮ ಹಂತದಲ್ಲಿ ನಾಯಕ ದಸೂನ್ ಶನಕ ಹೋರಾಟಕ್ಕೆ ಭಾರತದ ಬಳಿ ಉತ್ತರವೇ ಇರಲಿಲ್ಲ. ಸಿಕ್ಸರ್ ಮೂಲಕವೇ ದಸೂನ್ ಶನಕ ಅಬ್ಬರಿಸಿದರು. 20 ಎಸೆತದಲ್ಲಿ ಹಾಫ್ ಸೆಂಚುರಿ ಸಿಡಿಸಿದರು. 

IND vs SL ಶನಕ ಹೊಡಿಬಡಿ ಆಟಕ್ಕೆ ಭಾರತ ಕಂಗಾಲು, ಹಾರ್ದಿಕ್ ಸೈನ್ಯಕ್ಕೆ 207 ರನ್ ಸವಾಲು!

ಪಥುಮ್ ನಿಸಂಕ 33 ರನ್ ಕಾಣಿಕೆ ನೀಡಿದರೆ, ಕುಸಾಲ್ ಮೆಂಡೀಸ್ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಕುಸಾಲ್ ಮೆಂಡೀಸ್ 31 ಎಸೆತದಲ್ಲಿ 52 ರನ್ ಕಾಣಿಕೆ ನೀಡಿದರು. ಚಾರಿತ್ ಅಸಲಂಕಾ 19 ಎಸೆತದಲ್ಲಿ 37 ರನ್ ಸಿಡಿಸಿದರು. ಶ್ರೀಲಂಕಾ ತಂಡದ ಪ್ರಮುಖ ಬ್ಯಾಟ್ಸ್‌ಮನ್ ಕೊಡುಗೆಯಿಂದ 207ರನ್ ಬೃಹತ್ ಮೊತ್ತ ಪೇರಿಸಿತು.
 

click me!