
ಕೊಲೊಂಬೊ(ಜು.29): ಭಾರತ ಹಾಗೂ ಶ್ರೀಲಂಕಾ ನಡುವಿನ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಟೀಂ ಇಂಡಿಯಾದ ಅಬ್ಬರ ಬ್ಯಾಟಿಂಗ್ ಎದುರುನೊಡುತ್ತಿದ್ದ ಫ್ಯಾನ್ಸ್, ಬ್ಯಾಟಿಂಗ್ ವೈಫಲ್ಯ ನೋಡಬೇಕಾಯಿತು. ಶ್ರೀಲಂಕಾ ದಾಳಿಗೆ ತತ್ತರಿಸಿದ ಟೀಂ ಇಂಡಿಯಾ ರನ್ 8 ವಿಕೆಟ್ ನಷ್ಟಕ್ಕೆ 81 ರನ್ ಸಿಡಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಟೀಂ ಇಂಡಿಯಾ ಯಾವ ಹಂತದಲ್ಲೂ ಹೋರಾಟ ನೀಡಲಿಲ್ಲ. ಆರಂಭದಿಂದ ಅಂತ್ಯದವರೆಗೆ ಎಲ್ಲರೂ ಬಂದ ಹಾಗೇ ಪೆವಿಲಿಯನ್ ಸೇರಿಕೊಂಡರು. ಕುಲ್ದೀಪ್ ಯಾದವ್ ಸಿಡಿಸಿದ 23 ರನ್, ಭುವನೇಶ್ವರ್ ಕುಮಾರ್ ಸಿಡಿಸಿದ 16 ರನ್ ಹಾಗೂ ರುತರಾಜ್ ಗಾಯಕ್ವಾಡ್ ಸಿಡಿಸಿದ 14 ರನ್‌ಗಳೆ ಗರಿಷ್ಟ.
ನಾಯಕ ಶಿಖರ್ ಧವನ್ ಡಕೌಟ್, ದೇವದತ್ತ್ ಪಡಿಕ್ಕಲ್ 9, ಸಂಜು ಸ್ಯಾಮ್ಸನ್ ಶೂನ್ಯ, ನೀತೀಶ್ ರಾಣಾ 6, ರಾಹುಲ್ ಚಹಾರ್ 5 ರನ್ ಸಿಡಿಸಿ ಔಟಾದರು. ಕುಲ್ದೀಪ್ ಯಾದವ್ ಅಜೇಯ ರನ್ ಸಿಡಿಸಿದರೆ ಚೇತನ್ ಸಕಾರಿಯಾ ಅಜೇಯ 5 ರನ್ ಸಿಡಿಸಿದರು. ಈ ಮೂಲಕ ಟೀಂ ಇಂಡಿಯಾ 8 ವಿಕೆಟ್ ನಷ್ಟಕ್ಕೆ 81 ರನ್‌ಗೆ ಸಿಡಿಸಿತು. ಈ ಮೂಲಕ ಶ್ರೀಲಂಕಾಗೆ 82 ರನ್ ಸುಲಭ ಗುರಿ ನೀಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.