IND vs SA T20 ರೊಸೋ ಸೆಂಚುರಿ , ಅಂತಿಮ ಪಂದ್ಯದಲ್ಲಿ ಭಾರತಕ್ಕೆ ಬೃಹತ್ ಗುರಿ!

By Suvarna NewsFirst Published Oct 4, 2022, 8:49 PM IST
Highlights

ಭಾರತ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಸೌತ್ ಆಫ್ರಿಕಾ ಅಬ್ಬರಿಸಿದೆ. ಕ್ವಿಂಟನ್ ಡಿಕಾಕ್ ಹಾಫ್ ಸೆಂಚುರಿ ಹಾಗೂ ರೀಲೆ ರೂಸೋ ಆಕರ್ಷಕ ಸೆಂಚುರಿಯಿಂದ  ಭಾರತಕ್ಕೆ ಬೃಹತ್ ಮೊತ್ತ ನೀಡಿದೆ. 

ಇಂದೋರ್(ಅ.04):  ರಿಲೆ ರೋಸೋ ಆಕರ್ಷಕ ಶತಕ, ಅಬ್ಬರದ ಬ್ಯಾಟಿಂಗ್‌ನಿಂದ  ಭಾರತ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಸೌತ್ ಆಫ್ರಿಕಾ 227 ರನ್ ಸಿಡಿಸಿದೆ.  ಕ್ಲೀನ್ ಸ್ವೀಪ್ ತವಕದಲ್ಲಿರುವ ಟೀಂ ಇಂಡಿಯಾ ಅಲ್ಪಮೊತ್ತಕ್ಕೆ ಸೌತ್ ಆಫ್ರಿಕಾ ತಂಡ ಕಟ್ಟಿಹಾಕುವ ಪ್ರಯತ್ನ ಮಾಡಿತ್ತು. ಆದರೆ ಭಾರತದ ಪ್ರಯತ್ನಕೆ ರಿಲೆ ರೊಸೋ ಅಡ್ಡಗಾಲು ಹಾಕಿದರು. ಆರಂಭದಲ್ಲಿ ಕ್ವಿಂಟನ್ ಡಿಕಾಕ್ ಹಾಫ್ ಸೆಂಚುರಿ ಮೂಲಕ ಟೀಂ ಇಂಡಿಯಾ ತಲೆನೋವು ಹೆಚ್ಚಿಸಿದ್ದರೆ, ಅಂತಿಮ ಹಂತದಲ್ಲಿ ರೋಸೋ ಸ್ಫೋಟಕ ಬ್ಯಾಟಿಂಗ್ ಸೌತ್ ಆಫ್ರಿಕಾ ತಂಡದ ಬೃೃಹತ್ ಮೊತ್ತಕ್ಕೆ ಕಾರಣವಾಯಿತು. ಕೇವಲ 48 ಎಸೆತದಲ್ಲಿ ಸೆಂಚುರಿ ಸಿಡಿಸಿದ ರೋಸೋ ಹೊಸ ಇತಿಹಾಸ ರಚಿಸಿದರು. ಇದರೊಂದಿಗೆ ಸೌತ್ ಆಫ್ರಿಕಾ 3 ವಿಕೆಟ್ ನಷ್ಟಕ್ಕೆ 227 ರನ್ ಸಿಡಿಸಿತು.

ರೋಸೋ, ಡಿಕಾಕ್ ಹಾಗೂ ಡೇವಿಡ್ ಮಿಲ್ಲರ್ ಸಿಕ್ಸರ್ ಅಬ್ಬರದಿಂದ ಹಲವು ದಾಖಲೆಗಳು ನಿರ್ಮಾಣವಾಗಿದೆ.
ಭಾರತ ವಿರುದ್ಧದ ಟಿ20ಯಲ್ಲಿ ಗರಿಷ್ಟ ಸಿಕ್ಸರ್ ಸಾಧನೆ
21 ಸಿಕ್ಸರ್, ವೆಸ್ಟ್ ಇಂಡೀಸ್, 2016
16 ಸಿಕ್ಸರ್, ಆಸ್ಟ್ರೇಲಿಯಾ, 2010
16 ಸಿಕ್ಸರ್, ಸೌತ್ ಆಫ್ರಿಕಾ, 2022 *
15 ಸಿಕ್ಸರ್, ವೆಸ್ಟ್ ಇಂಡೀಸ್, 2019

ಪಂದ್ಯಕ್ಕೂ ಮುನ್ನ ಅರೆಸ್ಟ್? ರೋಹಿತ್ ಫೋಟೋ ಹಂಚಿದ ಪೊಲೀಸ್ ಕಮಿಷನರ್‌ಗೆ ಫ್ಯಾನ್ಸ್ ಪ್ರಶ್ನೆ!

ಟಿ20ಯಲ್ಲಿ ಭಾರತ ವಿರುದ್ಧ ಗರಿಷ್ಠ ಮೊತ್ತ
245/6 ರನ್, ವೆಸ್ಟ್ ಇಂಡೀಸ್,  2016
227/3 ರನ್ ಸೌತ್ ಆಫ್ರಿಕಾ, 2022 *
221/3 ರನ್, ಸೌತ್ ಆಫ್ರಿಕಾ, 2022
221/5 ರನ್, ಐರ್ಲೆಂಡ್, 2022

ಟಾಸ್ ಸೋತು ಬ್ಯಾಟಿಂಗ್ ಇಳಿದ ಸೌತ್ ಆಫ್ರಿಕಾ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತು. ನಾಯಕ ತೆಂಬಾ ಬುವುಮಾ ಕೇವಲ 3 ರನ್ ಸಿಡಿಸಿ ಔಟಾದರು. ಆದರೆ ಕ್ವಿಂಟನ್ ಡಿಕಾಕ್ ಹಾಗೂ ರಿಲೆ ರೊಸೋ ಹೋರಾಟದಿಂದ ಸೌತ್ ಆಫ್ರಿಕಾ ಚೇತರಿಸಿಕೊಂಡಿತು. ಡಿಕಾಕ್ ಹಾಗೂ ರೋಸೋ ಹಾಫ್ ಸೆಂಚುರಿ ಸಿಡಿಸಿ ಅಬ್ಬರಿಸಿದರು. 

ಡಿಕಾಕ್ 43 ಎಸೆತದಲ್ಲಿ 68 ರನ್ ಸಿಡಿಸಿ ಔಟಾದರು. ಆದೆ ರೋಸೋ ಅಬ್ಬರ ಮುಂದುವರಿಯಿತು. ಟ್ರಿಸ್ಟನ್ ಸ್ಟಬ್ಸ್ ಜೊತೆ ಸೇರಿದ ರೋಸೋ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅಬ್ಬರಿಸಿದ ರೋಸೋ ಆಕರ್ಷಕ ಶತಕ ಸಿಡಿಸಿದರು. ರೋಸೋ 48 ಎಸೆತದಲ್ಲಿ ಸೆಂಚುರಿ ಸಿಡಿಸಿದರು. 200ಕ್ಕೂ ಹೆಚ್ಚು ಸ್ಟ್ರೈಕ್‌ರೇಟ್‌ನಲ್ಲಿ ರೋಸೋ ಬ್ಯಾಟ್ ಬೀಸಿದರು. ರೋಸೋ ವಿಕೆಟ್ ಕಬಳಿಸಲು ಟೀಂ ಇಂಡಿಯಾ ಪರದಾಡಿತು. 

ಟ್ರಿಸ್ಟನ್ ಸ್ಟಬ್ಸ್ 23 ರನ್ ಸಿಡಿಸಿ ಔಟಾದರು. ಕೊನೆಯ ಓವರ್‌ನಲ್ಲಿ ರೋಸೋ ಹಾಗೂ ಡೇವಿಡ್ ಮಿಲ್ಲರ್ ಅಬ್ಬರ ಹೆಚ್ಚಾಯಿತು. ಮಿಲ್ಲರ್ 3 ಸಿಕ್ಸರ್ ಮೂಲಕ ಅಜೇಯ 19 ರನ್ ಸಿಡಿಸಿದರು. ಇತ್ತ ರೋಸೋ ಅಜೇಯ 100 ರನ್ ಸಿಡಿಸಿದರು. ಈ ಮೂಲಕ ಸೌತ್ ಆಫ್ರಿಕಾ 3 ವಿಕೆಟ್ ನಷ್ಟಕ್ಕೆ 227ರನ್ ಸಿಡಿಸಿತು.

click me!