IND vs SA T20 ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ, ಕೊಹ್ಲಿ ಸೇರಿ ಮೂರು ಬದಲಾವಣೆ!

By Suvarna NewsFirst Published Oct 4, 2022, 6:36 PM IST
Highlights

ಟೀಂ ಇಂಡಿಯಾ ಹಾಗೂ ಸೌತ್ ಆಫ್ರಿಕಾ ನಡುವಿನ ಟಿ20 ಸರಣಿ ಅಂತಿಮ ಘಟ್ಟದಲ್ಲಿದೆ. ಕೊನೆಯ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ತಂಡದಲ್ಲಿ ಮಹತ್ವದ 3 ಬದಲಾವಣೆ ಮಾಡಲಾಗಿದೆ.

ಇಂದೋರ್(ಅ.04): ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಅಂತಿಮ ಟಿ20 ಪಂದ್ಯ. ಎರಡು ಪಂದ್ಯ ಗೆದ್ದು ಸರಣಿ ವಶಪಡಿಸಿಕೊಂಡಿರುವ ಟೀಂ ಇಂಡಿಯಾ ಇದೀಗ ಕ್ಲೀನ್ ಸ್ವೀಪ್ ಗೆಲುವಿಗೆ ತಯಾರಿ ಮಾಡಿಕೊಂಡಿದೆ. ಈ ಮಹತ್ವದ ಪಂದ್ಯದಲ್ಲಿ ಟೀಂ ಇಂಡಿಯಾ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಟೀಂ ಇಂಡಿಯಾದಲ್ಲಿ ಮಹತ್ವದ ಮೂರು ಬದಲಾವಣೆ ಮಾಡಲಾಗಿದೆ. ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್‌ಗೆ ವಿಶ್ರಾಂತಿ ನೀಡಲಾಗಿದೆ. ಇನ್ನು ವೇಗಿ ಅರ್ಶದೀಪ್ ಸಿಂಗ್ ಇಂಜುರಿಗೆ ತುತ್ತಾಗಿದ್ದಾರೆ. ಹೀಗಾಗಿ ಮೂರು ಬದಲಾವಣೆ ಮಾಡಲಾಗಿದೆ. ಇವರ ಸ್ಥಾನಕ್ಕೆ ಶ್ರೇಯಸ್ ಅಯ್ಯರ್, ಉಮೇಶ್ ಯಾದವ್ ಹಾಗೂ ಮೊಹಮ್ಮದ್ ಸಿರಾಜ್ ಆಯ್ಕೆಯಾಗಿದ್ದಾರೆ. ಇದು ಹೈಸ್ಕೋರಿಂಗ್ ಕ್ರೀಡಾಂಗಣ ಆಗಿರುವ ಕಾರಣ ಫೀಲ್ಡಿಂಗ್ ಆಯ್ಕೆ ಪ್ರಮುಖವಾಗಿದೆ. ನಮ್ಮ ಮುಂದೆ ನಿಗಧಿತ ಟಾರ್ಗೆಟ್ ಇರಲಿದೆ. ಈ ಮೂಲಕ ಚೇಸಿಂಗ್ ಮಾಡಲು ಅನುಕೂಲವಾಗಲಿದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. ಸೌತ್ ಆಫ್ರಿಕಾ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಅನ್ರಿಚ್ ನೋರ್ಜೆ ಬದಲು ಡ್ವೇನ್ ಪ್ರೆಟೋರಿಯಸ್ ತಂಡ ಸೇರಿಕೊಂಡಿದ್ದಾರೆ.

ಟೀಂ ಇಂಡಿಯಾ ಪ್ಲೇಯಿಂಗ್ 11
ರೋಹಿತ್ ಶರ್ಮಾ(ನಾಯಕ), ರಿಷಬ್ ಪಂತ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್, ಅಕ್ಸರ್ ಪಟೇಲ್, ಆರ್ ಅಶ್ವಿನ್, ಹರ್ಷಲ್ ಪಟೇಲ್, ದೀಪಕ್ ಚಹಾರ್, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್ 

ಪಂದ್ಯಕ್ಕೂ ಮುನ್ನ ಅರೆಸ್ಟ್? ರೋಹಿತ್ ಫೋಟೋ ಹಂಚಿದ ಪೊಲೀಸ್ ಕಮಿಷನರ್‌ಗೆ ಫ್ಯಾನ್ಸ್ ಪ್ರಶ್ನೆ!

ಸೌತ್ ಆಫ್ರಿಕಾ ಪ್ಲೇಯಿಂಗ್11
ತೆಂಬಾ ಬವುಮಾ(ನಾಯಕ), ಕ್ವಿಂಟನ್ ಡಿಕಾಕ್, ರಿಲೆ ರೊಸೋ, ಆ್ಯಡಿನ್ ಮರ್ಕ್ರಮ್, ಡೇವಿಡ್ ಮಿಲ್ಲರ್,ತ್ರಿಸ್ಟನ್ ಸ್ಟಬ್ಸ್, ವೈಯ್ನ್ ಪಾರ್ನೆಲ್, ಡ್ವೇನ್ ಪ್ರೋಟೋರಿಯಸ್, ಕೇಶವ್ ಮಹಾರಾಜ್, ಕಾಗಿಸೋ ರಬಡಾ, ಲುಂಗಿ ಎನ್‌ಗಿಡಿ

ದ.ಆಫ್ರಿಕಾ ವಿರುದ್ಧ 2ನೇ ಟಿ20: ಟೀಂ ಇಂಡಿಯಾಕ್ಕೆ 16 ರನ್‌ ಗೆಲುವು
ಸೌತ್ ಆಫ್ರಿಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ರನ್ ಮಳೆ ಸುರಿಸಿತ್ತು. ಆದರೆ ಭಾರತ 16 ರನ್ ಗೆಲುವು ದಾಖಲಿಸಿತ್ತು. ಟೀಂ ಇಂಡಿಯಾ ಆರಂಭದಲ್ಲೇ ಸ್ಫೋಟಕ ಆಟಕ್ಕೆ ಒತ್ತು ನೀಡಿತು. ರಾಹುಲ್‌ ಕೇವಲ 28 ಎಸೆತಗಳಲ್ಲಿ 57(5 ಬೌಂಡರಿ, 4 ಸಿಕ್ಸರ್‌) ರನ್‌ ಸಿಡಿಸಿದರೆ, ಸೂರ್ಯಕುಮಾರ್‌ 22 ಎಸೆತಗಳಲ್ಲಿ 61 ರನ್‌(5 ಬೌಂಡರಿ, 5 ಸಿಕ್ಸರ್‌) ಬಾರಿಸಿದರು. ಅವರು ಕೇವಲ 18 ಎಸೆತಗಳಲ್ಲಿ ಫಿಫ್ಟಿಪೂರ್ತಿಗೊಳಿಸಿದರು. ನಾಯಕ ರೋಹಿತ್‌ ಶರ್ಮಾ 43(37 ಎಸೆತ), ವಿರಾಟ್‌ ಕೊಹ್ಲಿ ಔಟಾಗದೆ 49(28 ಎಸೆತ) ರನ್‌ ಬಾರಿಸಿದರೆ, ದಿನೇಶ್‌ ಕಾರ್ತಿಕ್‌ 17(7 ಎಸೆತ) ರನ್‌ ಕೊಡುಗೆ ನೀಡಿದರು. 

ಹುಟ್ಟುಹಬ್ಬಕ್ಕೆ ಫ್ಲೈಯಿಂಗ್‌ ಕಿಸ್‌ ಕೊಟ್ಟು ಶುಭ ಕೋರಿದ ನಟಿ ಊರ್ವಶಿ ರೌಟೆಲಾ..!

ಸ್ಕೋರ್‌
ಭಾರತ 20 ಓವರಲ್ಲಿ 237/3 (ಸೂರ್ಯ 61, ರಾಹುಲ್‌ 57, ಮಹಾರಾಜ್‌ 2-23), ದ.ಆಫ್ರಿಕಾ 20 ಓವರಲ್ಲಿ 221/3 (ಮಿಲ್ಲರ್‌ 106, ಡಿ ಕಾಕ್‌ 69, ಅಶ್‌ರ್‍ದೀಪ್‌ 2-62) 

ಮೊದಲ ಪಂದ್ಯದಲ್ಲಿ 8 ವಿಕೆಟ್ ಭರ್ಜರಿ ಗೆಲುವು
ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಬೌಲಿಂಗ್‌ನಲ್ಲಿ ಅಕ್ಷರಶಃ ಅಬ್ಬರಿಸಿತ್ತು. ಸೌತ್ ಆಫ್ರಿಕಾ ತಂಡವನ್ನು 106 ರನ್‌ಗಳಿಗೆ ಕಟ್ಟಿ ಹಾಕಿತ್ತು. ಸುಲಭ ಗುರಿಯನ್ನು ಭಾರತ 2 ವಿಕೆಟ್ ಕಳೆದುಕೊಂಡು ಚೇಸ್ ಮಾಡಿತ್ತು. ಈ ಮೂಲಕ 8 ವಿಕೆಟ್ ಭರ್ಜರಿ ಗೆಲುವು ದಾಖಲಿಸಿ ಸರಣಿಯಲ್ಲಿ ಶುಭಾರಂಭ ಮಾಡಿತ್ತು.

click me!