ಪಂದ್ಯಕ್ಕೂ ಮುನ್ನ ಅರೆಸ್ಟ್? ರೋಹಿತ್ ಫೋಟೋ ಹಂಚಿದ ಪೊಲೀಸ್ ಕಮಿಷನರ್‌ಗೆ ಫ್ಯಾನ್ಸ್ ಪ್ರಶ್ನೆ!

Published : Oct 04, 2022, 05:32 PM IST
ಪಂದ್ಯಕ್ಕೂ ಮುನ್ನ ಅರೆಸ್ಟ್? ರೋಹಿತ್ ಫೋಟೋ ಹಂಚಿದ ಪೊಲೀಸ್ ಕಮಿಷನರ್‌ಗೆ ಫ್ಯಾನ್ಸ್ ಪ್ರಶ್ನೆ!

ಸಾರಾಂಶ

ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ 3ನೇ ಹಾಗೂ ಅಂತಿಮ ಟಿ20 ಪಂದ್ಯಕ್ಕೆ ವೇದಿಕೆ ರೆಡಿಯಾಗಿದೆ. ಆದರೆ ಅಸ್ಸಾಂ ಪೊಲೀಸ್ ಡೆಪ್ಯೂಟಿ ಕಮಿಷನರ್ ಸಾಮಾಜಿಕ ಜಾತಾಣದಲ್ಲಿ ಹಂಚಿಕೊಂಡ ಫೋಟೋ ಇದೀಗ ಭಾರಿ ಗೊಂದಲಕ್ಕೆ ಕಾರಣವಾಗಿದೆ. ಈ ಕುರಿತ ವಿವರ ಇಲ್ಲಿದೆ

ಇಂದೋರ್(ಅ.04): ಸೌತ್ ಆಫ್ರಿಕಾ ವಿರುದ್ಧದ ಆರಂಭಿಕ 2 ಟಿ20 ಪಂದ್ಯ ಗೆದ್ದು ಸರಣಿ ಗೆದ್ದಿರುವ ಟೀಂ ಇಂಡಿಯಾ ಇದೀಗ 3ನೇ ಹಾಗೂ ಅಂತಿಮ ಪಂದ್ಯಕ್ಕೆ ಸಜ್ಜಾಗಿದೆ. ಇಂದೋರ್‌ನ ಹೋಲ್ಕರ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಈ ಪಂದ್ಯ ಆಯೋಜಿಸಲಾಗಿದೆ.  ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಕ್ಲೀನ್ ಸ್ಪೀಪ್ ಗೆಲುವಿಗೆ ತಯಾರಿ ನಡೆಸಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಅಸ್ಸಾಂ ಡೆಪ್ಯೂಟಿ ಕಮಿಷನರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪೋಸ್ಟ್ ಅಭಿಮಾನಿಗಳಲ್ಲಿ ಗೊಂದಲ ಸೃಷ್ಟಿಸಿದ್ದು ಸುಳ್ಳಲ್ಲ. ಕಾರಣ ನಾಯಕ ರೋಹಿತ್ ಶರ್ಮಾಗೆ ಶುಭಹಾರೈಸಲು ಡೆಪ್ಯೂಟಿ ಕಮಿಷನರ್ ಪೊಂಜಿತ್ ದೊವ್ರ ರೋಹಿತ್ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ. ಇಷ್ಟೇ ಅಲ್ಲ ಒಂದು ಶತಕ ಬೇಕಾಗಿದೆ ಎಂದು ಬರೆದುಕೊಂಡಿದ್ದಾರೆ. ಆದರೆ ಈ ಫೋಟೋ ನೋಡಿದರೆ ರೋಹಿತ್ ಶರ್ಮಾ ಅರೆಸ್ಟ್ ಆದಂತೆ ಕಾಣುತ್ತಿದೆ ಎಂದು ಅಭಿಮಾನಿಗಳು ಕಾಲೆಳೆದಿದ್ದಾರೆ.

ಅಸ್ಸಾಂ ಡೆಪ್ಯೂಟಿ ಪೊಲೀಸ್ ಕಮಿಷನರ್ ಟೀಂ ಇಂಡಿಯಾಗೆ ಶುಭಕೋರುವ ಮೂಲಕ ಎಲ್ಲರ ಮೆಚ್ಚುಗೆ ಪಾತ್ರರಾಗಿದ್ದಾರೆ. ಕ್ರಿಕೆಟ್ ತಂಡಕ್ಕೆ ಪೊಲೀಸ್ ಅಧಿಕಾರಿ ಶುಭಕೋರಿರುವುದು ಮೆಚ್ಚಲೇಬೇಕು. ಆದರೆ ಪೊಲೀಸರ ಮುಂದೆ ರೋಹಿತ್ ನೀಡಿರುವ ಫೋಸ್ ಇದೀಗ ಚರ್ಚೆಯಾಗುತ್ತಿದೆ. ರೋಹಿತ್ ಅತೀವ ಭಯದಿಂದ ಫೋಟೋಗೆ ಪೋಸ್ ನೀಡಿದ್ದಾರೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ರೋಹಿತ್ ಶರ್ಮಾರನ್ನು ಸ್ಟೇಶನ್‌ಗೆ ಕರೆಸಿ ಡ್ರಿಲ್ ಮಾಡಿದಂತಿದೆ ಎಂದಿದ್ದಾರೆ. ರೋಹಿತ್ ಶರ್ಮಾನನ್ನು ಅರೆಸ್ಟ್ ಮಾಡಬೇಡಿ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.  

ದೇಶ ಮೊದಲು, ರೆಕಾರ್ಡ್‌ ಆಮೇಲೆ: ಕಿಂಗ್‌ ಕೊಹ್ಲಿಯ ನಿಸ್ವಾರ್ಥ ಗುಣಕ್ಕೆ ನೆಟ್ಟಿಗರು ಫಿದಾ

ದ್ವಿತೀಯ ಟಿ20 ಪಂದ್ಯ ಅಸ್ಸಾಂನ ಗುವ್ಹಾಟಿಯಲ್ಲಿ ನಡೆದಿತ್ತು. ಈ ವೇಳೆ ರೋಹಿತ್ ಶರ್ಮಾ ಜೊತೆ ಡೆಪ್ಯೂಟಿ ಕಮಿಷನರ್ ಪೋಟೋ ತೆಗೆಸಿಕೊಂಡಿದ್ದರು. 3ನೇ ಪಂದ್ಯ ಆರಂಭಕ್ಕೂ ಮುನ್ನ ರೋಹಿತ್ ಶರ್ಮಾ ಹಾಗೂ ಟೀಂ ಇಂಡಿಯಾಗೆ ಶುಭಕೋರಲು ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

 

ಸೌತ್ ಆಫ್ರಿಕಾ ವಿರುದ್ಧದ ಆರಂಭಿಕ ಎರಡೂ ಪಂದ್ಯಗಳು ತೀವ್ರ ರೋಚಕತೆಯನ್ನು ಹುಟ್ಟು ಹಾಕಿತ್ತು. ದ್ವಿತೀಯ ಪಂದ್ಯದಲ್ಲಿ ಟೀಂ ಇಂಡಿಯಾ ರೋಚಕ ಗೆಲುವು ಕಂಡಿದೆ. ಆದರೆ ಡೇವಿಡ್ ಮಿಲ್ಲರ್ ಹೋರಾಟ ಎಲ್ಲರ ಪ್ರಶಂಸೆಗೆ ಪಾತ್ರವಾಗಿತ್ತು. ರನ್‌ ಮಳೆಯೇ ಹರಿದ 2ನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 16 ರನ್‌ ಗೆಲುವು ಸಾಧಿಸಿದ್ದು, 3 ಪಂದ್ಯಗಳ ಸರಣಿಯನ್ನು ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಕೈವಶ ಪಡಿಸಿಕೊಂಡಿತು. ಇದರೊಂದಿಗೆ ತವರಿನಲ್ಲಿ ಭಾರತ ತಂಡ ದ.ಆಫ್ರಿಕಾ ವಿರುದ್ಧ ಮೊದಲ ಟಿ20 ಸರಣಿ ಗೆದ್ದ ಸಾಧನೆ ಮಾಡಿತು.

ಹುಟ್ಟುಹಬ್ಬಕ್ಕೆ ಫ್ಲೈಯಿಂಗ್‌ ಕಿಸ್‌ ಕೊಟ್ಟು ಶುಭ ಕೋರಿದ ನಟಿ ಊರ್ವಶಿ ರೌಟೆಲಾ..!

ಮೊದಲು ಬ್ಯಾಟ್‌ ಮಾಡಿದ ಭಾರತ ಸೂರ್ಯಕುಮಾರ್‌ ಯಾದವ್‌, ಕೆ.ಎಲ್‌.ರಾಹುಲ್‌ ಸೇರಿದಂತೆ ಬ್ಯಾಟರ್‌ಗಳ ಅಬ್ಬರದಿಂದ 3 ವಿಕೆಟ್‌ಗೆ 237 ರನ್‌ ಕಲೆ ಹಾಕಿತು. ಬೃಹತ್‌ ಮೊತ್ತ ಬೆನ್ನತ್ತಿದ ಪ್ರವಾಸಿ ತಂಡ 3 ವಿಕೆಟ್‌ಗೆ 221 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಡೇವಿಡ್‌ ಮಿಲ್ಲರ್‌(47 ಎಸೆತಗಳಲ್ಲಿ 106) ಸ್ಫೋಟಕ ಶತಕ ಹಾಗೂ ಕ್ವಿಂಟನ್‌ ಡಿ ಕಾಕ್‌(48 ಎಸೆತಗಳಲ್ಲಿ 69) ಆಭರ್ಟಸಿದರೂ ತಂಡಕ್ಕೆ ಗೆಲುವು ತಂದುಕೊಡಲಾಗಲಿಲ್ಲ. ಮಾರ್ಕ್ರಮ್‌ 33 ರನ್‌ ಗಳಿಸಿದರು. ಭಾರತದ ಪರ ಅಶ್‌ರ್‍ದೀಪ್‌ ಸಿಂಗ್‌ 2 ವಿಕೆಟ್‌ ಕಿತ್ತರೂ 62 ರನ್‌ ನೀಡಿ ದುಬಾರಿಯಾದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸೈಲೆಂಟ್ ಆದ ಸೌತ್ ಆಫ್ರಿಕಾ , 74 ರನ್‌ಗೆ ಆಲೌಟ್ ಮಾಡಿ 101 ರನ್ ಗೆಲುವು ದಾಖಲಿಸಿದ ಭಾರತ
100 ಸಿಕ್ಸರ್ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ, ಸೌತ್ ಆಫ್ರಿಕಾಗೆ 176 ರನ್ ಟಾರ್ಗೆಟ್