ದಕ್ಷಿಣ ಆಫ್ರಿಕಾ ಒನ್‌ಡೇ ಚಾಲೆಂಜ್‌ಗೆ ಟೀಂ ಇಂಡಿಯಾ ರೆಡಿ, ಇಂದು ಮೊದಲ ಪಂದ್ಯ

By Kannadaprabha News  |  First Published Dec 17, 2023, 10:01 AM IST

ಟಿ20 ಸರಣಿಯಲ್ಲಿ ಆಡದ ಕೆ.ಎಲ್‌.ರಾಹುಲ್‌, ಏಕದಿನ ಸರಣಿಯಲ್ಲಿ ತಮ್ಮ ಆಟದ ಮೂಲಕ ತಾವು ಟಿ20 ಮಾದರಿಯಲ್ಲಿ ಎಷ್ಟು ಪರಿಣಾಮಕಾರಿ ಎನ್ನುವುದನ್ನು ಆಯ್ಕೆಗಾರರಿಗೆ ಮನದಟ್ಟು ಮಾಡಿಸಲು ಕಾಯುತ್ತಿದ್ದಾರೆ. ಮುಂದಿನ ವರ್ಷದ ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಇಟ್ಟುಕೊಂಡಿರುವ ರಾಹುಲ್, ಈ ಸರಣಿಯಲ್ಲಿ ನಿರೀಕ್ಷೆಗೂ ಮೀರಿದ ಪ್ರದರ್ಶನ ತೋರಬೇಕಿದೆ.


ಜೋಹಾನ್ಸ್‌ಬರ್ಗ್‌(ಡಿ.17): ಒಂದು ತಿಂಗಳ ಹಿಂದೆ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮಹತ್ವದ ಏಕದಿನ ಪಂದ್ಯದಲ್ಲಿ ಸೋಲುಂಡಿದ್ದವು. ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ದ.ಆಫ್ರಿಕಾ ಸೋತರೆ, ಭಾರತಕ್ಕೆ ಫೈನಲ್‌ನಲ್ಲಿ ಆಘಾತ ಎದುರಾಗಿತ್ತು. ಭಾನುವಾರ ಎರಡೂ ತಂಡಗಳು 50 ಓವರ್ ಕ್ರಿಕೆಟ್‌ನಲ್ಲಿ ಹೊಸ ಜರ್ನಿ ಆರಂಭಿಸಲಿದ್ದು, ಮಾಡು ಇಲ್ಲವೇ ಮಡಿ ಎಂಬ ಒತ್ತಡವಿಲ್ಲದೆ ಆಡಲಿವೆ. ಉಭಯ ತಂಡಗಳು ಈ ಸರಣಿಯಲ್ಲಿ ಕೆಲ ಹೊಸ ಪ್ರತಿಭೆಗಳನ್ನು ಆಡಿಸುವ ಪ್ರಯೋಗ ನಡೆಸಲಿದ್ದು, ಕೆಲ ಹಿರಿಯ ಆಟಗಾರರಿಗೂ ಇದು ಸರಣಿ ಉತ್ತಮ ಅವಕಾಶವೆನಿಸಿದೆ.

ಟಿ20 ಸರಣಿಯಲ್ಲಿ ಆಡದ ಕೆ.ಎಲ್‌.ರಾಹುಲ್‌, ಏಕದಿನ ಸರಣಿಯಲ್ಲಿ ತಮ್ಮ ಆಟದ ಮೂಲಕ ತಾವು ಟಿ20 ಮಾದರಿಯಲ್ಲಿ ಎಷ್ಟು ಪರಿಣಾಮಕಾರಿ ಎನ್ನುವುದನ್ನು ಆಯ್ಕೆಗಾರರಿಗೆ ಮನದಟ್ಟು ಮಾಡಿಸಲು ಕಾಯುತ್ತಿದ್ದಾರೆ. ಮುಂದಿನ ವರ್ಷದ ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಇಟ್ಟುಕೊಂಡಿರುವ ರಾಹುಲ್, ಈ ಸರಣಿಯಲ್ಲಿ ನಿರೀಕ್ಷೆಗೂ ಮೀರಿದ ಪ್ರದರ್ಶನ ತೋರಬೇಕಿದೆ.

Latest Videos

undefined

ರೋಹಿತ್‌ಗೆ ನಾಯಕತ್ವದಿಂದ ಗೇಟ್‌ಪಾಸ್ ಬೆನ್ನಲ್ಲೇ ಕಂಗಾಲಾದ ಸೂರ್ಯ-ಬುಮ್ರಾ..! ಸೋಷಿಯಲ್ ಮೀಡಿಯಾ ಪೋಸ್ಟ್ ವೈರಲ್

ಟಿ20 ಸರಣಿಯಲ್ಲಿ ಆಕರ್ಷಕ ಆಟವಾಡಿದ ರಿಂಕು ಸಿಂಗ್‌ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಲು ಉತ್ಸುಕರಾಗಿದ್ದು, ಟೆಸ್ಟ್‌ ಸರಣಿಯತ್ತ ಗಮನ ಹರಿಸುವ ಸಲುವಾಗಿ ಏಕದಿನ ಸರಣಿಯಲ್ಲಿ ಶುಭ್‌ಮನ್‌ ಗಿಲ್‌ ಆಡದ ಕಾರಣ, ತಮಿಳುನಾಡಿನ ಯುವ ಪ್ರತಿಭೆ ಬಿ.ಸಾಯಿ ಸುರ್ದಶನ್‌ಗೆ ಆರಂಭಿಕನ ಸ್ಥಾನ ಸಿಗುವ ನಿರೀಕ್ಷೆ ಇದೆ.

ಇನ್ನು ದ.ಆಫ್ರಿಕಾ ತಂಡವೂ ಬಹುತೇಕ ಅನನುಭವಿಗಳಿಂದಲೇ ಕೂಡಿದ್ದು, 10 ಅಥವಾ ಅದಕ್ಕಿಂತ ಕಡಿಮೆ ಏಕದಿನ ಪಂದ್ಯಗಳನ್ನಾಡಿದ ಐವರು ಆಟಗಾರರಿದ್ದಾರೆ. ಕ್ವಿಂಟನ್‌ ಡಿ ಕಾಕ್‌ ನಿವೃತ್ತಿ ಪಡೆದ ಕಾರಣ, ರೀಜಾ ಹೆಂಡ್ರಿಕ್ಸ್‌ಗೆ ಹೆಚ್ಚಿನ ಅವಕಾಶಗಳು ಸಿಗಲಿದ್ದು, ಎಲ್ಲರ ಕಣ್ಣು ಅವರ ಮೇಲಿದೆ.

ರೋಹಿತ್ ಶರ್ಮಾ ಕೈಬಿಟ್ಟು ಹಾರ್ದಿಕ್ ಪಾಂಡ್ಯಗೆ ಮುಂಬೈ ಇಂಡಿಯನ್ಸ್ ನಾಯಕತ್ವ ನೀಡಿದ್ದೇಕೆ?

ಒಟ್ಟು ಮುಖಾಮುಖಿ: 91

ಭಾರತ: 38

ದ.ಆಫ್ರಿಕಾ: 50

ಫಲಿತಾಂಶವಿಲ್ಲ: 03

ಸಂಭವನೀಯ ಆಟಗಾರರ ಪಟ್ಟಿ

ಭಾರತ: ಋತುರಾಜ್‌ ಗಾಯಕ್ವಾಡ್, ಸಾಯಿ ಸುದರ್ಶನ್‌, ತಿಲಕ್‌ ವರ್ಮಾ, ಶ್ರೇಯಸ್‌ ಅಯ್ಯರ್, ಕೆ ಎಲ್ ರಾಹುಲ್‌(ನಾಯಕ), ರಿಂಕು ಸಿಂಗ್/ಸಂಜು ಸ್ಯಾಮ್ಸನ್‌, ಅಕ್ಷರ್‌, ಅರ್ಶ್‌ದೀಪ್‌ ಸಿಂಗ್, ಆವೇಶ್‌ ಖಾನ್, ಕುಲ್ದೀಪ್‌ ಯಾದವ್, ಮುಕೇಶ್‌ ಕುಮಾರ್.

ದ.ಆಫ್ರಿಕಾ: ರೀಜಾ ಹೆಂಡ್ರಿಕ್ಸ್‌, ಡೆ ಜೊರ್ಜಿ, ವ್ಯಾನ್ ಡರ್ ಡುಸ್ಸೆನ್‌, ಏಯ್ಡನ್ ಮಾರ್ಕ್‌ರಮ್‌(ನಾಯಕ), ಹೆನ್ರಿಚ್ ಕ್ಲಾಸೆನ್‌, ಡೇವಿಡ್ ಮಿಲ್ಲರ್‌, ಫೆಲುಕ್ವಾಯೋ, ಮುಲ್ಡರ್‌, ಬರ್ಗರ್‌, ಕೇಶವ್‌/ಶಮ್ಸಿ, ವಿಲಿಯಮ್ಸ್‌.

ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌/ಡಿಸ್ನಿ+ ಹಾಟ್‌ಸ್ಟಾರ್‌

ಪಿಚ್‌ ರಿಪೋರ್ಟ್‌

ವ್ಯಾಂಡರರ್ಸ್‌ ಕ್ರೀಡಾಂಗಣದ ಪಿಚ್‌ ಸಾಮಾನ್ಯವಾಗಿ ಬ್ಯಾಟಿಂಗ್‌ ಸ್ನೇಹಿ. ಇಲ್ಲಿ ಕಳೆದ 4 ಪಂದ್ಯಗಳಲ್ಲಿ 3ರ ಮೊದಲ ಇನ್ನಿಂಗ್ಸ್‌ಗಳಲ್ಲಿ 300ಕ್ಕೂ ಹೆಚ್ಚು ರನ್‌ ದಾಖಲಾಗಿದೆ. ಭಾನುವಾರ ಮಳೆ ಮುನ್ಸೂಚನೆ ಇಲ್ಲ.
 

click me!