IND vs SA ಅಬ್ಬರಿಸಿದ ಟೀಂ ಇಂಡಿಯಾ, ಸೌತ್ ಆಫ್ರಿಕಾ ತಂಡಕ್ಕೆ 211 ರನ್ ಟಾರ್ಗೆಟ್

By Suvarna NewsFirst Published Jun 9, 2022, 8:34 PM IST
Highlights
  • 48 ಎಸೆತದಲ್ಲಿ 76 ರನ್ ಸಿಡಿಸಿದ ಇಶಾನ್ ಕಿಶನ್
  • ಸೌತ್ ಆಫ್ರಿಕಾಗೆ ಬೃಹತ್ ರನ್ ಟಾರ್ಗೆಟ್ ನೀಡಿದ ಭಾರತ
  • ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಟೀಂ ಇಂಡಿಯಾ

ದೆಹಲಿ(ಜೂ.09): ಇಶಾನ್ ಕಿಶನ್ ಹಾಫ್ ಸೆಂಚುರಿ ಹಾಗೂ ಟಾಪ್ ಆರ್ಡರ್ ಮಿಡ್ಲರ್ ಆರ್ಡರ್ ಬ್ಯಾಟ್ಸ್‌ಮನ್‌ಗಳ ದಿಟ್ಟ ಹೋರಾಟದಿಂದ ಸೌತ್ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 211 ರನ್ ಸಿಡಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯಿತು. ಇಶಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್ ಸ್ಪೋಟಕ ಬ್ಯಾಟಿಂಗ್ ಸೌತ್ ಆಫ್ರಿಕಾ ತಂಡಕ್ಕೆ ತಲೆನೋವಾಯಿತು. ಆದರೆ ಗಾಯಕ್ವಾಡ್ 15 ಎಸೆತದಲ್ಲಿ 23 ರನ್ ಸಿಡಿಸಿ ಔಟಾದರು. 

Latest Videos

ಹಲವು ದಾಖಲೆಗಳಿಗೆ ಸಾಕ್ಷಿಯಾಗಲಿದೆ ಇಂಡೋ-ಆಫ್ರಿಕಾ ಮೊದಲ ಟಿ20 ಪಂದ್ಯ..!

ಶ್ರೇಯಸ್ ಅಯ್ಯರ್ ಜೊತೆ ಸೇರಿದ ಇಶಾನ್ ಕಿಶನ್ ದಿಟ್ಟ ಹೋರಾಟ ನೀಡಿದರು. ಈ ಮೂಲಕ ಹಾಫ್ ಸೆಂಚುರಿ ಸಿಡಿಸಿದರು. ಇಶಾನ್ ಕಿಶನ್ 48 ಎಸೆತದಲ್ಲಿ 11 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 76 ರನ್ ಸಿಡಿಸಿದರು. 

ಇತ್ತ ಶ್ರೇಯಸ್ ಅಯ್ಯರ್ 36 ರನ್ ಕಾಣಿಕೆ ನೀಡಿದರು. ನಾಯಕ ರಿಷಬ್ ಪಂತ್ ಹಾಗೂ ಹಾರ್ಧಿಕ್ ಪಾಂಡ್ಯ ಜೊತೆಯಾಟದಿಂದ ಟೀಂ ಇಂಡಿಯಾ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿತು.

ಪಂತ್ 29 ರನ್ ಸಿಡಿಸಿ ಔಟಾದರು. ಪಾಂಡ್ಯ ಅಜೇಯ 31 ರನ್ ಸಿಡಿಸಿದರು. ಈ ಮೂಲಕ ಟೀಂ ಇಂಡಿಯಾ 4 ವಿಕೆಟ್ ನಷ್ಟಕ್ಕೆ 211 ರನ್ ಸಿಡಿಸಿತು. 

ಕಿಂಗ್ ಕೊಹ್ಲಿ ಹೆಸರಿನಲ್ಲಿದ್ದ ಅಪರೂಪದ ದಾಖಲೆ ಮುರಿದ ಪಾಕ್ ನಾಯಕ ಬಾಬರ್ ಅಜಂ..!

ಭಾರತದ ಅತೀ ಕಿರಿಯ ನಾಯಕರು
23 ವರ್ಷ. 197 ದಿನ, ಸುರೇಶ್ ರೈನಾ
24 ವರ್ಷ, 248ದಿನ, ರಿಷಬ್ ಪಂತ್
26 ವರ್ಷ 68 ದಿನ, ಎಂ.ಎಸ್.ಧೋನಿ
27 ವರ್ಷ,41 ದಿನ, ಅಜಿಂಕ್ಯ ರಹಾನೆ

ಜೂನ್ 12, ಎರಡನೇ ಟಿ20 ಪಂದ್ಯ, ಬಾರಬತಿ ಕ್ರೀಡಾಂಗಣ ಕಟಕ್, ಸಂಜೆ 7 ಗಂಟೆಗೆ
ಜೂನ್ 14, ಮೂರನೇ ಟಿ20 ಪಂದ್ಯ, ವೈಎಸ್ಆರ್ ಕ್ರೀಡಾಂಗಣ ವಿಶಾಖಪಟ್ಟಣಂ, ಸಂಜೆ 7 ಗಂಟೆಗೆ
ಜೂನ್ 17, ನಾಲ್ಕನೇ ಟಿ20 ಪಂದ್ಯ, ಸೌರಾಷ್ಟ್ರ ಕ್ರೀಡಾಂಗಣ ರಾಜ್‌ಕೋಟ್, ಸಂಜೆ 7 ಗಂಟೆಗೆ
ಜೂನ್ 19, ಐದನೇ ಟಿ20 ಪಂದ್ಯ, ಚಿನ್ನಸ್ವಾಮಿ ಕ್ರೀಡಾಂಗಣ ಬೆಂಗಳೂರು, ಸಂಜೆ 7 ಗಂಟೆಗೆ

ಭಾರತಕ್ಕೆ ಇಂಜುರಿ ಸಮಸ್ಯೆ
ಸೌತ್ ಆಫ್ರಿಕಾ ವಿರುದ್ಧದ ಸರಣಿಗೆ ಟೀಂ ಇಂಡಿಯಾಗೆ ಗಾಯದ ಸಮಸ್ಯೆ ಅತೀಯಾಗಿ ಕಾಡುತ್ತಿದೆ. ಐಪಿಎಲ್ ಟೂರ್ನಿ ಮುಗಿದ ಬೆನ್ನಲ್ಲೇ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಯಿತು. ಹೀಗಾಗಿ ಕೊಹ್ಲಿ ಹಾಗೂ ರೋಹಿತ್ ಅಲಭ್ಯತೆಯಲ್ಲಿ ಯುವ ತಂಡವನ್ನು ಬಿಸಿಸಿಐ ಆಯ್ಕೆ ಮಾಡಿತ್ತು. ಆದರೆ ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಟಿ20 ಸರಣಿ ಆರಂಭಕ್ಕೆ ಒಂದು ದಿನ ಮೊದಲೇ ಮತ್ತೆರೆಡು ಗಾಯದ ಸಮಸ್ಸೆ ತಂಡದಲ್ಲಿ ಕಾಣಿಸಿಕೊಂಡಿತು. ಅಭ್ಯಾಸದ ವೇಳೆ ಗಾಯಗೊಂಡ ನಾಯಕ ಕೆಎಲ್ ರಾಹುಲ್ ಹಾಗೂ ಕುಲ್ದೀಪ್ ಯಾದವ್ ಟೂರ್ನಿಯಿಂದಲೇ ಹೊರಬಿದ್ದರು. ಹೀಗಾಗಿ ರಿಷಬ್ ಪಂತ್‌ಗೆ ನಾಯಕತ್ವ ನೀಡಿದರೆ, ಹಾರ್ದಿಕ್ ಪಾಂಡ್ಯಗೆ ಉಪನಾಯಕನ ಪಟ್ಟ ನೀಡಲಾಯಿತು.
 

click me!