
ಭಾರತ ಅಂಡರ್-19 ತಂಡ ನೀಡಿದ್ದ 209 ರನ್ಗಳ ಗುರಿಯನ್ನು ಪಾಕಿಸ್ತಾನ 48.1 ಓವರ್ಗಳಲ್ಲಿ 7 ವಿಕೆಟ್ಗಳ ನಷ್ಟಕ್ಕೆ ತಲುಪಿತು. ಹಮ್ಜಾ ಜಹೂರ್ ಪಾಕಿಸ್ತಾನದ ಗೆಲುವಿನ ರೂವಾರಿ. ಜಹೂರ್ 108 ಎಸೆತಗಳಲ್ಲಿ ಅಜೇಯ 100 ರನ್ ಗಳಿಸಿದರು. ಭಾರತ ಪರ ಮನಾಲ್ ಚೌಹಾಣ್ 3 ವಿಕೆಟ್, ಮೋಹಿತ್ ಉಲ್ವಾ 2 ವಿಕೆಟ್ ಪಡೆದರು. ಇದಲ್ಲದೆ, ಇಶಾನ್ ಸೂದ್ ಮತ್ತು ಕಾವ್ಯಾ ಪಟೇಲ್ ತಲಾ 1 ವಿಕೆಟ್ ಪಡೆದರು. ಇಲ್ಲಿ ಜ್ಯೂನಿಯರ್ ದ್ರಾವಿಡ-ಸೆಹ್ವಾಗ್ ಪ್ಲಾಪ್ ಆದರೂ, ಕ್ಯಾಪ್ಟನ್ ಸೋಲಿನ ಗಂಟೆ ಬೇರೆಯವರಿಗೆ ಕಟ್ಟಿದ್ದಿರಾ? ಎನ್ನುವ ಪ್ರಶ್ನೆ ಎದುರಾಗಿದೆ.
ಭಾರತದ 209 ರನ್ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ ಕಳಪೆ ಆರಂಭ ಪಡೆಯಿತು. ಪಾಕಿಸ್ತಾನ 61 ರನ್ಗಳಿಗೆ 5 ವಿಕೆಟ್ಗಳನ್ನು ಕಳೆದುಕೊಂಡಿತ್ತು, ಆದರೆ ಅದರ ನಂತರ ಹಮ್ಜಾ ಜಹೂರ್ ಒನ್ ಹ್ಯಾಂಡ್ ಹೋರಾಟ ನಡೆಸಿ ಪಾಕಿಸ್ತಾನಕ್ಕೆ ರೋಮಾಂಚಕ ಗೆಲುವು ತಂದುಕೊಟ್ಟರು. ಹಮ್ಜಾಗೆ ಹಸ್ನೈನ್ ಅಬ್ಬಾಸ್ ದಾರ್ 38 ರನ್ ಗಳಿಸಿ ಬೆಂಬಲ ನೀಡಿದರು. ಈ ಪಂದ್ಯದಲ್ಲಿ, ಟೀಮ್ ಇಂಡಿಯಾ ನಾಯಕಿ ಲಕ್ಷ್ಯ ರಾಯ್ಚಂದಾನಿ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು, ನಂತರ ಆರಂಭಿಕನಾಗಿ ಬಂದ ಲಕ್ಷ್ಯ 2 ಎಸೆತಗಳಲ್ಲಿ ಶೂನ್ಯ ರನ್ಗಳಿಗೆ ಔಟಾದರು. ಲಕ್ಷ್ಯ ವಿಕೆಟ್ ಪಡೆದ ನಂತರವೂ ಟೀಮ್ ಇಂಡಿಯಾದ ಕುಸಿತ ಮುಂದುವರೆಯಿತು. ಭಾರತ 86 ರನ್ಗಳಿಗೆ 5 ವಿಕೆಟ್ಗಳನ್ನು ಕಳೆದುಕೊಂಡಿತ್ತು.
ವೀರೇಂದ್ರ ಸೆಹ್ವಾಗ್ ಅವರ ಮಗ ಆರ್ಯವೀರ್ ಸೆಹ್ವಾಗ್ 22 ರನ್ ಗಳಿಸಿ ಔಟಾದರು ಮತ್ತು ರಾಹುಲ್ ದ್ರಾವಿಡ್ ಅವರ ಮಗ ಅನ್ವೇ ದ್ರಾವಿಡ್ 10 ರನ್ ಗಳಿಸಿ ಔಟಾದರು. ಇದಾದ ನಂತರ, ಅರ್ಜುನ್ ರಜಪೂತ್ ಏಕಾಂಗಿಯಾಗಿ ಹೋರಾಡಿ 107 ರನ್ ಗಳಿಸಿ ಭಾರತವನ್ನು 208 ರನ್ ಗಳಿಗೆ ಕೊಂಡೊಯ್ದರು.
ಪಾಕಿಸ್ತಾನ ವಿರುದ್ಧದ ಸೋಲಿನ ನಂತರ, ನಾಯಕಿ ಲಕ್ಷ್ಯ ರಾಯ್ಚಂದಾನಿ ಸೋಲಿಗೆ ಬೌಲರ್ಗಳನ್ನೇ ಹೊಣೆ ಮಾಡಿದ್ದಾರೆ. ಭಾರತದ ಬ್ಯಾಟಿಂಗ್ ವಿಫಲವಾದರೂ, ಬೌಲರ್ಗಳ ಪ್ರದರ್ಶನದ ಬಗ್ಗೆ ಲಕ್ಷ್ಯ ರಾಯ್ಚಂದಾನಿ ನಿರಾಶೆ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನ 61 ರನ್ಗಳಿಗೆ 5 ವಿಕೆಟ್ಗಳನ್ನು ಕಳೆದುಕೊಂಡಾಗ, ಗೆಲ್ಲಲು ಉತ್ತಮ ಅವಕಾಶವಿತ್ತು, ಆದರೆ ಬೌಲರ್ಗಳು ಅದರ ಲಾಭ ಪಡೆಯಲಿಲ್ಲ ಎಂದು ರಾಯ್ಚಂದಾನಿ ಹೇಳಿದರು.
ನಮ್ಮ ಸ್ಕೋರ್ ಗೆಲ್ಲಲು ಸಾಕಾಗಲಿಲ್ಲ, ನಾವು 20-30 ರನ್ಗಳಿಂದ ಕಡಿಮೆಯಾದೆವು, ಅರ್ಜುನ್ ಜತೆಗೆ ಇನ್ನೂ ಒಬ್ಬ ಆಟಗಾರ ಸ್ಟ್ಯಾಂಡ್ ಆಗಿದ್ದರೂ, ನಮ್ಮ ಸ್ಕೋರ್ ಇನ್ನೂ ಹೆಚ್ಚಾಗುತ್ತಿತ್ತು ಎಂದು ಲಕ್ಷ್ಯ ಹೇಳಿದರು. ನಾವು ಸೋತಿದ್ದರೂ, ಕೆಲ ವಿಷಯಗಳು ಸಹ ಕಲಿತಿದ್ದೇವೆ. ಅಷ್ಟೇಅಲ್ಲ ಇದರಿಂದ ಕಲಿತ ಪಾಠ ಮುಂದಿನ ಪಂದ್ಯದಲ್ಲಿ ಉತ್ತಮವಾಗಿ ಪ್ರದರ್ಶನ ನೀಡಲು ಸಹಕರಿಸಲಿದೆ ಎಂದು ಲಕ್ಷ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.