
ವಿರಾಟ್ ಕೊಹ್ಲಿ ಆಟದಲ್ಲಿ ಎಷ್ಟು ಸಿರೀಯಸ್ ಆಗಿರುತ್ತಾರೋ, ಅಷ್ಟೇ ತಮಾಷೆ ಮಾಡುವ ಜೀವಿ ಕೂಡ ಹೌದು. ಮೈದಾನದಲ್ಲಿದ್ದಾಗ ಆಗಾಗ ಡ್ಯಾನ್ಸ್ ಮಾಡಿ, ಇತರೆ ಆಟಗಾರರನ್ನು ಅಣುಕಿಸೋದನ್ನು ನೋಡಿಯೇ ಇರುತ್ತೀವಿ. ಇದೀಗ ತಮ್ಮ ಸಹ ಆಟಗಾರ ಇಶಾನ್ ಕಿಶನ್ ಮೇಲೆ ಸೇಡು ತೀರಿಸಿಕೊಂಡಿರೋದಕ್ಕೆ ಸಂಬಂಧಿಸಿ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ.
ವಿರಾಟ್ ಕೊಹ್ಲಿ, ಇಶಾನ್ ಕಿಶನ್ ಅವರಿಂದ ಸೇಡು ತೀರಿಸಿಕೊಂಡಿದ್ದಾರೆ. ಕೊಹ್ಲಿ ಮತ್ತು ಇಶಾನ್ ಕಿಶನ್ ಒಟ್ಟಿಗೆ ಇದ್ದಾಗ ಅಲ್ಲಿ ಕಾಮಿಡಿ ಇಲ್ಲದಿರಲು ಸಾಧ್ಯವೇ ಇಲ್ಲ. ಡ್ರಿಂಗ್ಸ್ ಬ್ರೇಕ್ ಸಮಯದಲ್ಲಿ ಇಶಾನ್ ಕಿಶನ್ ತಮ್ಮ ಆಟಗಾರರಿಗಾಗಿ ಬಾಳೆ ಹಣ್ಣು ಹಿಡಿದು ಬಂದಾಗ, ವಿರಾಟ್ ಕೊಹ್ಲಿ ಅವರ ನಡೆಯುವ ಶೈಲಿಯನ್ನು ನೋಡಿ ಅಣುಕಿಸಿದ್ದರು. ಇದು ಪಕ್ಕಾ ಪಕ್ಕಾ ಸೇಡಿನ ಕ್ರಮವಾಗಿತ್ತು. ಯಾಕೆಂದರೆ.. ಹಿಂದೆ ವಿರಾಟ್ ಕೊಹ್ಲಿ ಅವರನ್ನ ಇಶಾನ್ ಕಿಶನ್ ಅಣುಕಿಸಿದ್ದರು. ಕೊಹ್ಲಿ ಮಾಡುವ ಚಿತ್ರ ವಿಚಿತ್ ಬೌಲಿಂಗ್ ಶೈಲಿಯನ್ನ ಅನುಕರಿಸಿ ಅಣುಕ ಮಾಡಿದ್ದರು. ಇಂದು ಅವರು ಇಶಾನ್ ಕಿಶನ್ ಅವರನ್ನು ಅಣುಕಿಸಿ ಸೇಡು ತೀರಿಸಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಅವರು ಮೈದಾನದಲ್ಲಿದ್ದಾಗ ತಮಾಷೆ, ಕೀಟಲೆಗಳಿೆಗೇನೂ ಕಮ್ಮಿ ಇರಲ್ಲ. ಅದು ಎದುರಾಳಿ ಇರಬಹುದು, ಸಹ ಆಟಗಾರ ಇರಬಹುದು. ಆಗಾಗ ಕಾಲೆಳೆಯುತ್ತಲೇ ಇರುತ್ತಾರೆ. ಈ ಹಿಂದೆ ಜಸ್ಪ್ರಿತ್ ಬೂಮ್ರಾ ಅವರ ಬೌಲಿಂಗ್ ಶೈಲಿಯನ್ನು ಅಣುಕ ಮಾಡಿ ಟ್ರೋಲ್ ಮಾಡಿದ್ದರು. ಇವತ್ತು ಇಶಾನ್ ಕಿಶನ್ ಅವರಿಗೆ ಟಾಂಗ್ ನೀಡಿದ್ದಾರೆ. ಇನ್ನು ಕೊಹ್ಲಿ ಅಷ್ಟೇ ಮುಂಗೋಪಿಯೂ ಹೌದು. ಆದರೆ ಅವರು ಖುಷಿಯಲ್ಲಿದ್ದಾಗ ಇತರೆ ಆಟಗಾರರನ್ನು ಖುಷಿಯಲ್ಲಿ ಇಡಲು ಪ್ರಯತ್ನಿಸುತ್ತಲೇ ಇರುತ್ತಾರೆ.
ಸದ್ಯ ಟೀಂ ಇಂಡಿಯಾ ನ್ಯೂಜಿಲೆಂಡ್ ಪ್ರವಾಸದಲ್ಲಿದೆ. ನ್ಯೂಜಿಲೆಂಡ್ ವಿರುದ್ಧ ಐದು ಏಕದಿನ ಪಂದ್ಯಗಳನ್ನ ಆಡಲಿದೆ. ಈಗಾಗಲೇ ಎರಡು ಏಕದಿ ಪಂದ್ಯಗಳನ್ನ ಆಡಿದ್ದು, ಎರಡನ್ನೂ ಗೆದ್ದುಕೊಂಡಿದೆ. ಮೂರನೇ ಪಂದ್ಯ ಗೆದ್ದರೆ ಏಕದಿನ ಸರಣಿ ಟೀಂ ಇಂಡಿಯಾ ಪಾಲಾಗಲಿದೆ. ಸದ್ಯ ಈಗಾಗಲೇ ಭಾರತ ತಂಡವು ಟಿ-20 ಸರಣಿಯನ್ನ ತನ್ನ ವಶಕ್ಕೆ ಪಡೆದಿದೆ. ಇನ್ನು ಏಕದಿನ ಪಂದ್ಯಗಳು ಮುಗಿದ ಬಳಿಕ ಭಾರತ ತಂಡವು ಟೆಸ್ಟ್ ಪಂದ್ಯಗಳನ್ನೂ ಆಡಲಿದೆ.
ಇನ್ನು ನ್ಯೂಜಿಲೆಂಡ್ ವಿರುದ್ಧದ ಟಿ-20 ಸರಣಿಯಲ್ಲಿ ಇಶಾನ್ ಕಿಶನ್ ಗಾಯಗೊಂಡಿದ್ದರು. ಅದಾದ ಬಳಿಕ ಕೊನೆಯ ಎರಡು ಪಂದ್ಯಗಳಿಗೆ ಲಭ್ಯರಾಗಿದ್ದರು. ಇದೀಗ ಏಕದಿನ ಪಂದ್ಯಗಳಲ್ಲಿ ಅವರಿಗೆ ಆಡುವ ಅವಕಾಶ ಸಿಕ್ಕಿಲ್ಲ. ವಿರಾಟ್ ಕೊಹ್ಲಿ ಅವರು ಕಳೆದ ಎರಡೂ ಪಂದ್ಯಗಳಿಗೂ ಆಡಿದ್ದಾರೆ. ಮೊದಲ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಆಡಿದ್ದ ಕೊಹ್ಲಿ ಎರಡನೇ ಮ್ಯಾಚ್ನಲ್ಲಿ ಅವರ ಪ್ರದರ್ಶನ್ ನಿರಾಸದಾಯಕವಾಗಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.