T20 World Cup IND vs PAK; ಈ ಪಂದ್ಯ ನಮಗೆ ಬಿಟ್ಟು ಬಿಡಿ, ಧೋನಿಗೆ ಪಾಕ್ ಯುವತಿಯ ಮನವಿ!

Published : Oct 24, 2021, 06:24 PM IST
T20 World Cup IND vs PAK; ಈ ಪಂದ್ಯ ನಮಗೆ ಬಿಟ್ಟು ಬಿಡಿ, ಧೋನಿಗೆ ಪಾಕ್ ಯುವತಿಯ ಮನವಿ!

ಸಾರಾಂಶ

ಭಾರತ ಹಾಗೂ ಪಾಕಿಸ್ತಾನ ನಡುವಿನ ರೋಚಕ ಪಂದ್ಯ ಪಾಕಿಸ್ತಾನ ವಿರುದ್ಧ ಪಂದ್ಯ ಸೋಲುವಂತೆ ಧೋನಿಗೆ ಮನವಿ ಪಾಕಿಸ್ತಾನ ಯುವತಿಯಿಂದ ಮೆಂಟರ್ ಧೋನಿಗೆ ಮನವಿ

ದುಬೈ(ಅ.24): ಭಾರತ ಹಾಗೂ ಪಾಕಿಸ್ತಾನ(India vs Pakistan) ನಡುವಿನ ಹೈವೋಲ್ಟೇಜ್ ಪಂದ್ಯ ಅಭಿಮಾನಿಗಳಿಗೆ ಪ್ರತಿಷ್ಠೆಯ ಕದನ. ಇಲ್ಲಿ ಯಾರೂ ಕೂಡ ಸೋಲನ್ನು ಸಹಿಸುವುದಿಲ್ಲ. ಈಗಾಗಲೇ ಅಭಿಮಾನಿಗಳ ನಡುವಿನ ಹಲವು ವಿಡಿಯೋ ವೈರಲ್ ಆಗಿದೆ. ಇದೀಗ ಟೀಂ ಇಂಡಿಯಾ ಕ್ರಿಕೆಟಿಗರು ಹಾಗೂ ಮೆಂಟರ್ ಎಂ.ಎಸ್.ಧೋನಿಗೆ(MS Dhoni) ಪಾಕಿಸ್ತಾನ ಯುವತಿ ವಿಶೇಷ ಮನವಿ ಮಾಡಿದ ವಿಡಿಯೋ ವೈರಲ್ ಆಗಿದೆ.. ಈ ಪಂದ್ಯ ನಮಗೆ ಬಿಟ್ಟು ಬಿಡಿ ಮುಂದಿನ ಪಂದ್ಯದಿಂದ ಟೀಂ ಇಂಡಿಯಾ ಗೆಲುವು ಸಾಧಿಸಲಿ ಎಂದು ಪಾಕ್ ಯುವತಿ ಧೋನಿ ಬಳಿ ಮನವಿ ಮಾಡಿದ್ದಾರೆ.

T20 World Cup: Ind vs Pak ಪಾಕ್‌ ವಿರುದ್ದದ ಪಂದ್ಯಕ್ಕೆ ಟೀಂ ಇಂಡಿಯಾ ಸಂಭಾವ್ಯ ತಂಡ ಪ್ರಕಟ

ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಅಭ್ಯಾಸ(Practice) ನಡೆಸಿತ್ತು. ಅಭ್ಯಾಸ ಮುಗಿಸಿ ಮರಳುತ್ತಿದ್ದ ಮೆಂಟರ್ ಧೋನಿ ಹಾಗೂ ಟೀಂ ಇಂಡಿಯಾ ಆಟಗಾರರ ಬಳಿ ಕ್ರೀಡಾಂಗಣದಲ್ಲಿ ಹಾಜರಿದ್ದ ಪಾಕಿಸ್ತಾನ ಯುವತಿ ಮನವಿ ಮಾಡಿದ್ದಾರೆ. ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ಸೋಲಬೇಕಾಗಿ ಧೋನಿ ಬಳಿ ಮನವಿ ಮಾಡಿದ್ದಾರೆ.

T20 World Cup: ಭಾರತ vs ಪಾಕಿಸ್ತಾನ ನಡುವಿನ ಪಂದ್ಯ ಗೆಲ್ಲೋರು ಯಾರು..?

ಯುವತಿ ಮನವಿಗೆ ಧೋನಿ ನಸು ನಕ್ಕು ಸುಮ್ಮನಾಗಿದ್ದಾರೆ. ಇದಕ್ಕೂ ಮುನ್ನ ಅಭಿಮಾನಿಗಳ ಕಡೆಯಿಂದ ಪ್ರಶ್ನೆಯೊಂದನ್ನು ಕೇಳಲಾಗಿದೆ. ಆದರೆ ಈ ಪ್ರಶ್ನೆ ವಿಡಿಯೋದಲ್ಲಿ ಸ್ಪಷ್ಟವಾಗಿಲ್ಲ. ಆದರೆ ಧೋನಿ ಇದು ನಮ್ಮ ಕೆಲಸ ಎಂದು ಉತ್ತರ ನೀಡಿದ್ದಾರೆ. ಇತ್ತ ಧೋನಿ ಬಳಿಕ ಕೆಎಲ್ ರಾಹುಲ್‌ಗೆ(KL Rahul) ವಿಶೇಷ ಮನವಿಯೊಂದನ್ನು ಯುವತಿ ಮಾಡಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ರಾಹುಲ್ ಉತ್ತಮ ಪ್ರದರ್ಶನ ನೀಡಬಾರದು ಎಂದು ಮನವಿ ಮಾಡಿದ್ದಾರೆ. ಆದರೆ ರಾಹುಲ್ ಯಾವುದೇ ಪ್ರತಿಕ್ರಿಯೆ ನೀಡಿದ ಮುನ್ನಡೆದಿದ್ದಾರೆ. ಅಭ್ಯಾಸ ಮುಗಿಸಿ ಮರಳುತ್ತಿದ್ದ ಧೋನಿ, ಕೆಎಲ್ ರಾಹುಲ್ ಹಾಗೂ ಜಸ್ಪ್ರೀತ್ ಬುಮ್ರಾ ಬಳಿ ಮನವಿ ಮಾಡಲಾಗಿದೆ. 

 

T20 World Cup 2021:ಕೊಹ್ಲಿ ಸೈನ್ಯಕ್ಕೆ ಬಾಬರ್ ಅಜಮ್ ಎಚ್ಚರಿಕೆ, ಶುರುವಾಯ್ತು ಜಟಾಪಟಿ!

ಭಾರತ ಹಾಗೂ ಪಾಕಿಸ್ತಾನ ತಂಡ 2019ರ ಏಕದಿನ ವಿಶ್ವಕಪ್ ಬಳಿಕ ಮುಖಾಮುಖಿಯಾಗುತ್ತಿದೆ. ಅಕ್ಟೋಬರ್ 24 ರಂದು ದುಬೈ ಕ್ರೀಡಾಂಗಣದಲ್ಲಿನ ಈ ಪಂದ್ಯ ಕ್ರಿಕೆಟ್ ಇತಿಹಾಸದ ಅತ್ಯಂದ ರೋಚಕ ಹಾಗೂ ಬದ್ಧವೈರಿಗಳ ಕದನ ಎಂದೇ ಬಿಂಬಿಸಲಾಗಿದೆ. ಪ್ರತಿ ಭಾರಿ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿ ಅತ್ಯಂತ ರೋಚಕತೆಯಿಂದ ಕೂಡಿರುತ್ತದೆ.

T20 World Cup: ಭಾರತ ವಿರುದ್ದದ ಪಂದ್ಯಕ್ಕೆ 12 ಆಟಗಾರರನ್ನೊಳಗೊಂಡ ಪಾಕಿಸ್ತಾನ ತಂಡ ಪ್ರಕಟ

ಉಭಯ ತಂಡಗಳು ಮಹತ್ವದ ಪಂದ್ಯಕ್ಕಾಗಿ ಅಭ್ಯಾಸ ನಡೆಸಿದೆ. ಇತ್ತ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಯುದ್ಧ ಆರಂಭಿಸಿದ್ದಾರೆ. ಪ್ರತಿಷ್ಠೆಯ ಕದನಕ್ಕಾಗಿ ಕಳೆದ ಹಲವು ದಿನಗಳಿಂದ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹೋರಾಟ ನಡೆಸುತ್ತಲೇ ಇದ್ದಾರೆ. ಬೆಂಗಳೂರು ಸೇರಿದಂತೆ ಹಲವು ಭಾಗಗಳಲಲಿ ಟೀಂ ಇಂಡಿಯಾ ಗೆಲುವಿಗಾಗಿ ಅಭಿಮಾನಿಗಳು ಪಾರ್ಥಿಸಿದ್ದಾರೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!
ಹೃತಿಕ್‌ ರೋಶನ್‌ 'ಕ್ರಿಶ್‌' ಸಿನಿಮಾದಲ್ಲಿ ಬಾಲನಟಿಯಾಗಿದ್ರಾ ಧೋನಿ ಪತ್ನಿ ಸಾಕ್ಷಿ?