IND vs NZ: ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ, ತಂಡದಲ್ಲಿ 1 ಮಹತ್ವದ ಬದಲಾವಣೆ!

By Suvarna NewsFirst Published Nov 19, 2021, 6:35 PM IST
Highlights
  • ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ 2ನೇ ಟಿ20 ಪಂದ್ಯ
  • ಟಾಸ್ ಗೆದ್ದ ಟೀಂ ಇಂಡಿಯಾ ಫೀಲ್ಡಿಂಗ್ ಆಯ್ಕೆ
  • ರಾಂಚಿಯಲ್ಲಿ ನಡೆಯುತ್ತಿರುವ ಮಹತ್ವದ ಪಂದ್ಯ

ರಾಂಚಿ(ನ.19):  ಭಾರತ(Team India) ಹಾಗೂ ನ್ಯೂಜಿಲೆಂಡ್ ನಡುವಿನ 2ನೇ ಟಿ20 ಪಂದ್ಯಕ್ಕೆ ರಾಂಚಿ(Ranchi) ಕ್ರೀಡಾಂಗಣ ಸಜ್ಜಾಗಿದೆ. ಈ ಮಹತ್ವದ ಪಂದ್ಯದಲ್ಲಿ ಟಾಸ್(Toss) ಗೆದ್ದಿರುವ  ಟೀಂ ಇಂಡಿಯಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ತಂಡದಲ್ಲಿ(Squad) ಒಂದು ಬದಲಾವಣೆ ಮಾಡಲಾಗಿದೆ. ಮೊಹಮ್ಮದ್ ಸಿರಾಜ್ ಬದಲು ಹರ್ಷಲ್ ಪಟೇಲ್ ತಂಡ ಸೇರಿಕೊಂಡಿದ್ದಾರೆ. ನ್ಯೂಜಿಲೆಂಡ್(New Zealand) ತಂಡದಲ್ಲಿ ಮೂರು ಬದಲಾವಣೆ ಮಾಡಲಾಗಿದೆ. ಆಡ್ಯಮ್ ಮಿಲ್ನೆ, ಜೇಮ್ಸ್ ನೀಶಮ್ ಹಾಗೂ ಐಶ್ ಸೋಧಿ ತಂಡ ಸೇರಿಕೊಂಡಿದ್ದಾರೆ. 

ಟೀಂ ಇಂಡಿಯಾ ಪ್ಲೇಯಿಂಗ್ 11:
ಕೆಎಲ್ ರಾಹುಲ್, ರೋಹಿತ್ ಶರ್ಮಾ(ನಾಯಕ), ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ದೀಪಕ್ ಚಹಾರ್, ಹರ್ಷಲ್ ಪಟೇಲ್

ನ್ಯೂಜಿಲೆಂಡ್ ಪ್ಲೇಯಿಂಂಗ್ 11:
ಮಾರ್ಟಿನ್ ಗುಪ್ಟಿಲ್, ಡರಿಲ್ ಮಿಚೆಲ್, ಮಾರ್ಕ್ ಚಂಪನ್, ಗ್ಲೆನ್ ಫಿಲಿಪ್ಸ್, ಟಿಮ್ ಸೈಫರ್ಟ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಐಶ್ ಸೋಧಿ, ಟಿಮ್ ಸೌಧಿ(ನಾಯಕ), ಆ್ಯಡಮ್ ಮಿಲ್ನೆ, ಟ್ರೆಂಟ್ ಬೋಲ್ಟ್

Ind vs NZ Series: ನನ್ನ ವೀಕ್ನೆಸ್ ಗೊತ್ತು, ಬೌಲ್ಟ್ ಕುರಿತು ಅಚ್ಚರಿಯ ಹೇಳಿಕೆ ನೀಡಿದ ರೋಹಿತ್ ಶರ್ಮಾ..!

ಪಿಚ್ ರಿಪೋರ್ಟ್:
ರಾಂಚಿ ಮೈದಾನದಲ್ಲಿ ಸರಾಸರಿ ಸ್ಕೋರ್ 155 ರನ್. ಪಿಚ್‌ನಲ್ಲಿ ಗ್ರಾಸ್ ಕಡಿಮೆ ಇದೆ. ಹೀಗಾಗಿ ಸ್ಪಿನ್ನರ್ಸ್ ಹಾಗೂ ವೇಗಿಗಳು ಆರಂಭಿಕ ಮೇಲುಗೈ ಸಾಧಿಸುವ ಸಾಧ್ಯತೆ ಹೆಚ್ಚು. ಇಬ್ಬನಿ ಕೂಡ ಸೆಕೆಂಡ್ ಬೌಲಿಂಗ್‌ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ತಂಡಕ್ಕೆ ಗೆಲುವಿನ ಅವಕಾಶ ಹೆಚ್ಚಿದೆ.

2016ರ ಟಿ20 ವಿಶ್ವಕಪ್ ಟೂರ್ನಿಯಿಂದ ಟೀಂ ಇಂಡಿಯಾ ಇದುವರೆಗೆ ಮೊದಲು ಬ್ಯಾಟಿಂಗ್ ಮಾಡಿ 17 ಪಂದ್ಯಗಳನ್ನು ಸೋತಿದೆ. ಇನ್ನು ಚೇಸಿಂಗ್ ಮಾಡಿ 26 ಪಂದ್ಯಗಳನ್ನು ಗೆದ್ದುಕೊಂಡಿದೆ. ಇನ್ನು 2016ರಿಂದ ತವರಿನಲ್ಲಿ ಭಾರತ ಸೋಲಿಲ್ಲದ ಸರದಾರನಾಗಿದೆ. ತವರಿನಲ್ಲಿ ಆಡಿದ 11 ಟಿ20 ಪಂದ್ಯದಲ್ಲಿ 10 ಪಂದ್ಯಗಳನ್ನು ಗೆದ್ದುಕೊಂಡಿದೆ. ಇನ್ನು ಕಳೆದ ನಾಲ್ಕು ತವರಿನ ಟಿ20 ಸರಣಿಯನ್ನು ಭಾರತ ಕೈವಶ ಮಾಡಿಕೊಂಡಿದೆ.

Ind vs NZ: ಸೂರ್ಯನ ಆಟಕ್ಕೆ ಕರಗಿಹೋದ ಕೀವಿಸ್, ಗೆದ್ದು ಬೀಗಿದ ಭಾರತ

ರೋಹಿತ್ ಶರ್ಮಾ:
ಟಾಸ್ ಗೆದ್ದ ರೋಹಿತ್ ಶರ್ಮಾ(Rohit Sharma) ನೇರವಾಗಿ ಬೌಲಿಂಗ್ ಆಯ್ಕೆ ಮಾಡಿಕೊಂಡರು. ರಾಂಚಿ ಪಿಚ್ ಸಕೆಂಡ್ ಬ್ಯಾಟಿಂಗ್‌ಗೆ ಹೆಚ್ಚು ನೆರವು ನೀಡಲಿದೆ. ಹೀಗಾಗಿ ಚೇಸಿಂಗ್ ಮಾಡುವುದಾಗಿ ಹೇಳಿದರು. ಮೊದಲ ಪಂದ್ಯದಲ್ಲಿ ಯುವ ಪಡೆ ಉತ್ತಮ ಹೋರಾಟ ನೀಡಿದೆ. ಇಂದಿನ ಪಂದ್ಯದಲ್ಲೂ ಅದೇ ಪ್ರದರ್ಶನ ಮುಂದುವರಿಸುವ ವಿಶ್ವಾಸದಲ್ಲಿದ್ದೇವೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ಟಿಮ್ ಸೌಥಿ:
ನ್ಯೂಜಿಲೆಂಡ್ ಮೊದಲು ಬೌಲಿಂಗ್ ಮಾಡಲು ಉದ್ದೇಶಿಸಿತ್ತು.ಮೊದಲ ಪಂದ್ಯದಲ್ಲಿ ಹೋರಾಟ ನೀಡಿದ್ದೇವೆ. ಆದರೆ ಗೆಲುವು ನಮ್ಮದಾಗಲಿಲ್ಲ. ಇಂದಿನ ಪಂದ್ಯದಲ್ಲಿ ಶಕ್ತಿ ಮೀರಿ ಹೋರಾಡಲಿದ್ದೇವೆ. ಡ್ಯೂ ಫ್ಯಾಕ್ಟರ್ ನಡುವೆ ಹೋರಾಟ ಮಾಡಬೇಕು. ಹಿಂದಿನ ಸೋಲಿಗೆ ಇಬ್ಬಿನಿ ಕಾರಣವಾಗಲ್ಲ. ಉತ್ತಮ ಪ್ರದರ್ಶನ ನೀಡಿದರೆ ಗೆಲುವು ಸಾಧ್ಯ ಎಂದು ಟಿಮ್ ಸೌಥಿ(Tim Soutee) ಹೇಳಿದ್ದಾರೆ.

ಮೊದಲ ಟಿ20 ಪಂದ್ಯ
ಜೈಪುರದಲ್ಲಿ ನಡೆದ ಮೊದಲ ಟಿ20 ಪಂದ್ಯ ಟೀಂ ಇಂಡಿಯಾ ಪಾಲಿಗೆ ವಿಶೇಷತೆಗಳ ಪಂದ್ಯದ ಜೊತೆಗೆ ಅತೀ ಮುಖ್ಯದ ಪಂದ್ಯವಾಗಿತ್ತು. ಕಾರಣ ಟಿ20 ವಿಶ್ವಕಪ್ ಟೂರ್ನಿಯಿಂದ ಲೀಗ್ ಹಂತದಿಂದ ಹೊರಬಿದ್ದ ಟೀಂ ಇಂಡಿಯಾ ಟೀಕೆಗೆ ಗುರಿಯಾಗಿತ್ತು. ಇತ್ತ ವಿರಾಟ್ ಕೊಹ್ಲಿ ನಾಯಕತ್ವದಿಂದ ನಿರ್ಗಮಿಸಿದ ಬಳಿಕ ರೋಹಿತ್ ಶರ್ಮಾ ನಾಯಕತ್ವದಲ್ಲಿ ನಡೆದ ಮೊದಲ ಪಂದ್ಯ. ಇಷ್ಟೇ ಅಲ್ಲ ನೂತನ ಕೋಚ್ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ನಡೆದ ಮೊದಲ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ಟೀಂ ಇಂಡಿಯಾ 5 ವಿಕೆಟ್ ಗೆಲುವು ಕಂಡಿದೆ.

click me!