IND vs NZ T20:ಕಿವೀಸ್ ವಿರುದ್ಧ ಭಾರತಕ್ಕೆ 7 ವಿಕೆಟ್ ಗೆಲುವು, ಸರಣಿ ಗೆದ್ದ ರೋಹಿತ್ ಸೈನ್ಯ!

Published : Nov 19, 2021, 10:53 PM ISTUpdated : Nov 19, 2021, 11:02 PM IST
IND vs NZ T20:ಕಿವೀಸ್ ವಿರುದ್ಧ ಭಾರತಕ್ಕೆ 7 ವಿಕೆಟ್ ಗೆಲುವು, ಸರಣಿ ಗೆದ್ದ ರೋಹಿತ್ ಸೈನ್ಯ!

ಸಾರಾಂಶ

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ ಭಾರತದ ಕೈವಶ 2ನೇ ಟಿ20 ಪಂದ್ಯದಲ್ಲಿ ಭಾರತಕ್ಕೆ ವಿಕೆಟ್ ಗೆಲುವು ಇನ್ನೊಂದು ಪಂದ್ಯ ಬಾಕಿ ಇರುವಂತೆ 2-0 ಅಂತರದಲ್ಲಿ ಸರಣಿ ಗೆಲುವು

ರಾಂಚಿ(ನ.19):  ಕೆಎಲ್ ರಾಹುಲ್(KL Rahul) ಹಾಗೂ ರೋಹಿತ್ ಶರ್ಮಾ(Rohit Sharma) ಅದ್ಭುತ ಆರಂಭ ನ್ಯೂಜಿಲೆಂಡ್(New zealand) ತಂಡದ ಸರಣಿ ಉಳಿಸಿಕೊಳ್ಳುವ ಲೆಕ್ಕಾಚಾರವನ್ನು ಉಲ್ಟಾ ಮಾಡಿತು. ಆರಂಭಿಕ ಪತನದ ಬೆನ್ನಲ್ಲೇ ದಿಢೀರ್ ವಿಕೆಟ್ ಕಳೆದುಕೊಂಡರು ಟೀಂ ಇಂಡಿಯಾ(Team India) ಯಾವುದೇ ಆತಂಕವಿಲ್ಲದೆ ನ್ಯೂಜಿಲೆಂಡ್ ವಿರುದ್ಧ 7 ವಿಕೆಟ್ ಗೆಲುವು ಕಂಡಿದೆ. ರೋಹಿತ್ ಶರ್ಮಾ ನಾಯಕತ್ವ ಹಾಗೂ ರಾಹುಲ್ ದ್ರಾವಿಡ್(Rahul Dravid) ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ 3 ಪಂದ್ಯಗಳ ಟಿ20 ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ಗೆದ್ದುಕೊಂಡಿದೆ.  

ಟಾಸ್ ಗೆದ್ದ ಭಾರತ ನ್ಯೂಜಿಲೆಂಡ್ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತ್ತು. ಟೀಂ ಇಂಡಿಯಾ ಉತ್ತಮ ದಾಳಿ ಸಂಘಟಿಸಿತು. ಹೀಗಾಗಿ ನ್ಯೂಜಿಲೆಂಡ್ ತಂಡ ಅಬ್ಬರಿಸಲು ಸಾಧ್ಯವಾಗಿಲ್ಲ. ನ್ಯೂಜಿಲೆಂಡ್ 6 ವಿಕೆಟ್ ನಷ್ಟಕ್ಕೆ 153 ರನ್ ಸಿಡಿಸಿತು. ಮಾರ್ಟಿನ್ ಗಪ್ಟಿಲ್ 3231 ರನ್ ಸಿಡಿಸುವ ಮೂಲಕ ಟಿ20 ಮಾದರಿಯಲ್ಲಿ ಗರಿಷ್ಠ ರನ್ ಸಿಡಿಸಿದ ಹೆಗ್ಗಳಿಕೆಗೆ ಪಾತ್ರರಾದರು.

154 ರನ್ ಟಾರ್ಗೆಟ್ ಪಡೆದ ಟೀಂ ಇಂಡಿಯಾ ಆರಂಭಕ್ಕೆ ನ್ಯೂಜಿಲೆಂಡ್ ಬೆಚ್ಚಿ ಬಿದ್ದಿತು. ಸರಣಿ ಉಳಿಸಿಕೊಳ್ಳುವ ಲೆಕ್ಕಾಚಾರದಲ್ಲಿ ಕಣಕ್ಕಿಳಿದ ನ್ಯೂಜಿಲೆಂಡ್ ತಂಡಕ್ಕೆ ಕೆಎಲ್ ರಾಹುಲ್ ಹಾಗೂ ನಾಯಕ ರೋಹಿತ್ ಶರ್ಮಾ ಜೊತೆಯಾಟ ಶಾಕ್ ನೀಡಿತು.  ದಿಟ್ಟ ಆರಂಭ ಟೀಂ ಇಂಡಿಯಾವನ್ನು ಗೆಲುವಿನ ಹಾದಿಯಲ್ಲಿ ಮುನ್ನಡೆಸಿತು.

Ind vs NZ: ಸೂರ್ಯನ ಆಟಕ್ಕೆ ಕರಗಿಹೋದ ಕೀವಿಸ್, ಗೆದ್ದು ಬೀಗಿದ ಭಾರತ

ರಾಹುಲ್ ಹಾಗೂ ರೋಹಿತ್ ಶರ್ಮಾ ಟಿ20 ಮಾದರಿಯಲ್ಲಿ ಅತ್ಯುತ್ತಮ ಪಾರ್ಟ್ನಶಿಪ್ ನೀಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕಳೆದ 5 ಟಿ20 ಪಂದ್ಯದಲ್ಲಿ ರೋಹಿತ್ ಹಾಗೂ ರಾಹುಲ್ ಅರ್ಧಶತಕದ ಜೊತೆಯಾಟ ನೀಡಿದ್ದಾರೆ. ಅದರಲ್ಲೂ ಟಿ20 ವಿಶ್ವಕಪ್ ಟೂರ್ನಿಯ ಆಫ್ಘಾನಿಸ್ತಾನ ವಿರುದ್ಧ ಶತಕದ ಜೊತೆಯಾಟ ನೀಡಿದ್ದಾರೆ. 

ಅದ್ಭುತ ಪ್ರದರ್ಶನ ನೀಡಿದ ಕೆಎಲ್ ರಾಹುಲ್ ಹಾಫ್ ಸೆಂಚುರಿ ಸಿಡಿಸಿದರು. ಟಿ20ಯಲ್ಲಿ ರಾಹುಲ್ 16ನೇ ಅರ್ಧಶತಕ ಪೂರೈಸಿದರು. ಕಳೆದ 5 ಟಿ20 ಪಂದ್ಯದಲ್ಲಿ ರಾಹುಲ್ ಸಿಡಿಸಿದ ನಾಲ್ಕನೇ ಅರ್ಧಶತಕ ಇದಾಗಿದೆ.  ರಾಹುಲ್ 65 ರನ್ ಸಿಡಿಸಿ ಔಟಾದರು. 

Team Indiaದಲ್ಲಿ ವಿರಾಟ್ ಕೊಹ್ಲಿ ಪಾತ್ರದ ಬಗ್ಗೆ ತುಟಿಬಿಚ್ಚಿದ ಕ್ಯಾಪ್ಟನ್ ರೋಹಿತ್ ಶರ್ಮಾ..!

ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಕಳೆದ 5 ಟಿ20 ಪಂದ್ಯದಲ್ಲಿ ಜೊತೆಯಾಟ
117 ರನ್ ಜೊತೆಯಾಟvs ನ್ಯೂಜಿಲೆಂಡ್
140 ರನ್ ಜೊತೆಯಾಟ vs ಆಫ್ಘಾನಿಸ್ತಾನ
70  ರನ್ ಜೊತೆಯಾಟ vs ಸ್ಕಾಟ್‌ಲೆಂಡ್
86  ರನ್ ಜೊತೆಯಾಟvs ನಮಿಬಿಯಾ
50  ರನ್ ಜೊತೆಯಾಟvs ನ್ಯೂಜಿಲೆಂಡ್

ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ 100+ ಜೊತೆಯಾಟ:
13 ರೋಹಿತ್ ಶರ್ಮಾ*
12 ಬಾಬರ್ ಅಜಮ್ 
12 ಮಾರ್ಟಿನ್ ಗಪ್ಟಿಲ್ 
11 ಡೇವಿಡ್ ವಾರ್ನರ್

ರಾಹುಲ್ ಬೆನ್ನಲ್ಲೇ ರೋಹಿತ್ ಶರ್ಮಮಾ 55 ರನ್ ಸಿಡಿಸಿ ಔಟಾದರು.  ರೋಹಿತ್ ಶರ್ಮಾ ಟಿ20 ಕ್ರಿಕೆಟ್‌ನಲ್ಲಿ 29ನೇ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು.

ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ 50+ ಸ್ಕೋರ್ 
29 ವಿರಾಟ್ ಕೊಹ್ಲಿ
29 ರೋಹಿತ್ ಶರ್ಮಾ
25 ಬಾಬರ್ ಅಜಮ್
22 ಡೇವಿಡ್ ವಾರ್ನರ್

ಕಳೆದ ಪಂದ್ಯದಲ್ಲಿ ಅಬಬ್ಬರಿಸಿದ ಸೂರ್ಯಕುಮಾರ್ ಯಾದವ್ 1 ರನ್ ಸಿಡಿಸಿ ಔಟಾದರು.  ವೆಂಕಟೇಶ್ ಅಯ್ಯರ್ ಅಜೇಯ 13 ರನ್ ಹಾಗೂ ರಿಷಬ್ ಪಂತ್ ಅಜೇಯ 12 ರನ್ ಸಿಡಿಸಿದರು ಸತತ ಎರಡು ಸಿಕ್ಸರ್ ಮೂಲಕ ಪಂತ್ ತಂಡವನ್ನು ಗೆಲುವಿನ ದಡ ಸೇರಿಸಿದರು. ಭಾರತ 17.2 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು. ಸರಣಿ ಕೈವಶ ಮಾಡಿತು. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಚೇರ್ ಮೇಲೆ ಕೂತು ಹೋಮ ಹವನ ಮಾಡಿದ ಶ್ರೇಯಸ್ ಅಯ್ಯರ್, ಸನಾತನಿಯೋ, ಅಲ್ವೋ ಚರ್ಚೆ!
ಐಸಿಸಿ ಟಿ20 ವಿಶ್ವಕಪ್‌ಗೂ ಮುನ್ನ ಆಸೀಸ್‌, ಆಫ್ಘನ್‌ಗೆ ಟಿ20 ಪಂದ್ಯಗಳೇ ಇಲ್ಲ! ಯಾಕೆ?