IND vs NZ ಶುಭಮನ್ ಗಿಲ್ ಡಬಲ್ ಸೆಂಚುರಿ, ನ್ಯೂಜಿಲೆಂಡ್‌ಗೆ 350 ರನ್ ಗುರಿ!

By Suvarna NewsFirst Published Jan 18, 2023, 5:39 PM IST
Highlights

ಶುಭಮನ್ ಗಿಲ್ ಡಬಲ್ ಸೆಂಚುರಿ ನೆರವಿನಿಂದ ಟೀಂ ಇಂಡಿಯಾ, ನ್ಯೂಜಿಲೆಂಡ್ ವಿರುದ್ದಧ ಮೊದಲ ಏಕದಿನ ಪಂದ್ಯದಲ್ಲಿ 349 ರನ್ ಸಿಡಿಸಿದೆ. ಇದೀಗ ನ್ಯೂಜಿಲೆಂಡ್‌ಗೆ ಚೇಸಿಂಗ್ ಕಠಿಣ ಸವಾಲು ಎದುರಾಗಲಿದೆ.

ಹೈದರಾಬಾದ್(ಜ.18):  ನ್ಯೂಜಿಲೆಂಡ್ ವಿರುದ್ಧದ ಮೊದಲ ಏಖದಿನ ಪಂದ್ಯದಲ್ಲಿ ಟೀಂ ಇಂಡಿಯಾ ಶುಭಮನ್ ಗಿಲ್ ಒನ್ ಮ್ಯಾನ್ ಶೋ ನೀಡದರು. ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ಸೇರಿದಂತೆ ಘಟಾನುಘಟಿ ಬ್ಯಾಟ್ಸ‌ಮನ್‌ಗಳ ಅಬ್ಬರಿಸಲಿಲ್ಲ. ಆದರೆ ಏಕಾಂಗಿ ಹೋರಾಟ ನೀಡಿದ ಶುಭಮನ್ ಗಿಲ್ ಸ್ಫೋಟಕ ಬ್ಯಾಟಿಂಗ್ ಮೂಲಕ ಮಂಚಿದರು. ಇಷ್ಟೇ ಅಲ್ಲ ದ್ವಿಶತಕ ಸಿಡಿಸಿ ದಾಖಲೆ ಬರೆದರು. ಗಿಲ್ ಡಬಲ್ ಸೆಂಚುರಿ ನೆರವಿನಿಂದ ಭಾರತ 8 ವಿಕೆಟ್ ಕಳೆದುಕೊಂಡು 349 ರನ್ ಸಿಡಿಸಿದೆ.

ಟಾಸ್ ಗೆದ್ದ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೀಂ ಇಂಡಿಯಾ(Team india) ಡೀಸೆಂಟ್ ಆರಂಭ ಪೆಡಯಿತು. ರೋಹಿತ್ ಶರ್ಮಾ ಹಾಗೂ ಗಿಲ್(Shubman Gill) ಜೋಡಿ ಮೊದಲ ವಿಕೆಟ್‌ಗೆ 60 ರನ್ ಜೊತೆಯಾಟ ನೀಡಿದರು. ರೋಹಿತ್ ಶರ್ಮಾ 34 ರನ್ ಸಿಡಿಸಿ ಔಟಾದರು. ಆದರೆ ಗಿಲ್ ಹೋರಾಟ ಮುಂದುವರೆಯಿತು. ವಿರಾಟ್ ಕೊಹ್ಲಿ ಕೇವಲ 8  ರನ್ ಸಿಡಿಸಿ ಔಟಾದರು. ಇನ್ನು ಇಶಾನ್ ಕಿಶನ್ ಕೂಡ ಬಂದ ಹಾಗೆ ಪೆವಿಲಿಯನ್ ಸೇರಿಕೊಂಡರು. ಕಿಶನ್ ಕೇವಲ 5 ರನ್ ಸಿಡಿಸಿ ಔಟಾದರು.

IND vs NZ ನ್ಯೂಜಿಲೆಂಡ್ ವಿರುದ್ಧ ಗಿಲ್ ದ್ವಿಶತಕ, ತೆಂಡೂಲ್ಕರ್ ಸೇರಿ ಹಲವರ ದಾಖಲೆ ಪುಡಿ ಪುಡಿ!

ಸೂರ್ಯಕುಮಾರ್ ಯಾದವ್ ಹಾಗೂ ಶುಭಮ್ ಗಿಲ್ ಹೋರಾಟದಿಂದ ಟೀಂ ಇಂಡಿಯಾ ಚೇತರಿಸಿಕೊಂಡಿತು, ಆದರೆ ಯಾದವ್ 31 ರನ್ ಸಿಡಿಸಿ ಔಟಾದರು. ಇತ್ತ ಸ್ಫೋಟಕ ಬ್ಯಾಟಿಂಗ್ ಮೂಲಕ ಗಿಲ್ ನ್ಯೂಜಿಲೆಂಡ್(New zeland) ಬೌಲರ್‌ಗಳ ತಲೆನೋವಾದರು. ಗಿಲ್ ಅಬ್ಬರಕ್ಕೆ ಬ್ರೇಕ್ ಹಾಕಲು ಕಿವೀಸ್ ಬೌಲರ್‌ಗಳು ಇನ್ನಿಲ್ಲದ ಪ್ರಯತ್ನ ಮಾಡಿದರು. ಆದರೆ ಸಾಧ್ಯವಾಗಲಿಲ್ಲ. ಹಾಫ್ ಸೆಂಚುರಿ, ಸೆಂಚುರಿ ಸಿಡಿಸಿ ಮುನ್ನಗ್ಗಿದ ಗಿಲ್, ಟೀಂ ಇಂಡಿಯಾದ ಬೃಹತ್ ಮೊತ್ತಕ್ಕೆ ನೆರವಾದರು.

ಹಾರ್ದಿಕ್ ಪಾಂಡ್ಯ ಹಾಗೂ ಗಿಲ್ ಜೊತೆಯಾಟ ತಂಡಕ್ಕೆ ನೆರವಾಯಿತು. ಆದರೆ ಹಾರ್ದಿಕ್ ಪಾಂಡ್ಯ 28 ರನ್ ಸಿಡಿಸಿ ಔಟಾದರು. ಇತ್ತ ಗಿಲ್ ಆಕರ್ಷಕ ದ್ವಿಶತಕ ಸಿಡಿಸಿ ಮಿಂಚಿದರು.  ಏಕದಿನದಲ್ಲಿ ದ್ವಿಶತಕ ಸಿಡಿಸಿದಿ ಅತೀ ಕಿರಿಯ ಬ್ಯಾಟ್ಸ್‌ಮನ್ ಅನ್ನೋ ಹೆಗ್ಗಳಿಕಗೆ ಪಾತ್ರರಾದರು. ಶ್ರೀಲಂಕಾ ಸರಣಿಯಲ್ಲಿ ಶತಕ ಸಿಡಿಸಿದ್ದ ಗಿಲ್, ಇದೀಗ ದ್ವಿಶತಕದ ಮೂಲಕ ಅಬ್ಬರಿಸಿದರು.

 ವಾಶಿಂಗ್ಟನ್ ಸುಂದರ್ 12 ರನ್ ಸಿಡಿಸಿದರು. ಶಾರ್ದೂಲ್ ಠಾಕೂರ್ 3 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು. ಗಿಲ್ 149 ಎಸೆತದಲ್ಲಿ 208 ರನ್ ಸಿಡಿಸಿ ಔಟಾದರು. ಕುಲ್ದೀಪ್ ಯಾದವ್ ಅಜೇಯ 5 ರನ್ ಹಾಗೂ ಮೊಹಮ್ಮದ್ ಶಮಿ ಅಜೇಯ 2 ರನ್ ಸಿಡಿಸಿದರು. ಈ ಮೂಲಕ ಇತ್ತ ಟೀಂ ಇಂಡಿಯಾ 8 ವಿಕೆಟ್ ಕಳೆದುಕೊಂಡು 349 ರನ್ ಸಿಡಿಸಿತು. 

ನೂರಾರು ಪಂದ್ಯಗಳನ್ನಾಡಿದರೂ ಒಂದೂ ನೋ ಬಾಲ್‌ ಎಸೆಯದ ಟಾಪ್ 5 ಬೌಲರ್‌ಗಳಿವರು..!

ಶ್ರೀಲಂಕಾ ವಿರುದ್ದದ ಏಕದಿನ ಪದ್ಯದಲ್ಲಿ ಎರಡು ಬಾರಿ ಬೃಹತ್ ಮೊತ್ತ ಸಿಡಿಸಿದ್ದ ಭಾರತ, ಇದೀಗ ನ್ಯೂಲೆಂಡ್ ವಿರುದ್ದದ ಮೊದಲ ಪಂದ್ಯದಲ್ಲಿ ಬೃಹತ್ ಮೊತ್ತ ಸಿಡಿಸಿದೆ. 

click me!