ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ; ಕೊಹ್ಲಿಗೆ ರೆಸ್ಟ್

By Suvarna News  |  First Published Feb 2, 2020, 12:08 PM IST

5ನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ದುಕೊಂಡಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ..


ಮೌಂಟ್‌ ಮಾಂಗನ್ಯುಯಿ(ಫೆ.02): ಭಾರತ-ನ್ಯೂಜಿಲೆಂಡ್ ನಡುವಿನ 5ನೇ ಹಾಗೂ ಕೊನೆಯ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ದುಕೊಂಡಿದೆ.

Captain wins the toss and elects to bat first in the 5th T20I. pic.twitter.com/wriypfDO6v

— BCCI (@BCCI)

ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದ್ದು, ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದಾರೆ. ಸಂಜು ಸ್ಯಾಮ್ಸನ್ ಹಾಗೂ ಕೆ.ಎಲ್. ರಾಹುಲ್ ಆರಂಭಿಕರಾಗಿ ಕಣಕ್ಕಿಳಿಯಲಿದ್ದು, ರೋಹಿತ್ ಶರ್ಮಾ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಇನ್ನುಳಿದಂತೆ ಟೀಂ ಇಂಡಿಯಾದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇನ್ನು ನ್ಯೂಜಿಲೆಂಡ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

Latest Videos

ಕಿವೀಸ್ ಎದುರು ಕ್ಲೀನ್ ಸ್ವೀಪ್ ಹೊಸ್ತಿಲಲ್ಲಿ ಟೀಂ ಇಂಡಿಯಾ

5 ಪಂದ್ಯಗಳ ಟಿ20 ಸರಣಿಯಲ್ಲಿ ಟೀಂ ಇಂಡಿಯಾ 4-0 ಅಂತರದ ಮುನ್ನಡೆ ಸಾಧಿಸಿದ್ದು, ಚೊಚ್ಚಲ ಸರಣಿ ಕೈವಶ ಮಾಡಿಕೊಂಡಿದೆ. ಇದೀಗ ವೈಟ್‌ವಾಶ್‌ನತ್ತ ಭಾರತ ಚಿತ್ತ ನೆಟ್ಟಿದೆ. ಇನ್ನು ಕಿವೀಸ್ ಪಡೆ ತವರಿನಲ್ಲಿ ಕೊನೆಯ ಪಂದ್ಯ ಗೆದ್ದು ಮಾನ ಉಳಿಸಿಕೊಳ್ಳಲು ಎದುರು ನೋಡುತ್ತಿದೆ.

ರಾಸ್ ಟೇಲರ್‌ಗಿದು ನೂರನೇ ಟಿ20 ಪಂದ್ಯ: ಕಿವೀಸ್ ಅನುಭವಿ ಬ್ಯಾಟ್ಸ್‌ಮನ್ ರಾಸ್ ಟೇಲರ್ ಪಾಲಿಗಿದು ನೂರನೇ ಟಿ20 ಪಂದ್ಯವಾಗಿದೆ. ಈ ಮೂಲಕ ಕಿವೀಸ್ ಪರ 100 ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ ಮೊದಲ ಕ್ರಿಕೆಟಿಗ ಎನ್ನುವ ಗೌರವಕ್ಕೆ ಟೇಲರ್ ಪಾತ್ರರಾಗಿದ್ದಾರೆ. ಇದರ ಜತೆಗೆ 100 ಟಿ20 ಪಂದ್ಯವನ್ನಾಡಿದ ವಿಶ್ವದ ಮೂರನೇ ಕ್ರಿಕೆಟಿಗ ಎನ್ನುವ ಗೌರವಕ್ಕೂ ಟೇಲರ್ ಪಾತ್ರರಾಗಿದ್ದಾರೆ. ಈ ಮೊದಲು ಶೋಯೆಬ್ ಮಲಿಕ್(113) ಹಾಗೂ ರೋಹಿತ್ ಶರ್ಮಾ(108*) ಈ ಸಾಧನೆ ಮಾಡಿದ್ದಾರೆ.

ತಂಡಗಳು ಹೀಗಿವೆ:

ಭಾರತ:

5th T20I. India XI: KL Rahul, S Samson, R Sharma, S Iyer, S Dube, M Pandey, W Sundar, S Thakur, Y Chahal, N Saini, J Bumrah https://t.co/3a7zBdAcuu

— BCCI (@BCCI)

ನ್ಯೂಜಿಲೆಂಡ್:

5th T20I. New Zealand XI: M Guptill, C Munro, T Seifert, T Bruce, R Taylor, D Mitchell, M Santner, S Kuggeleijn, T Southee, I Sodhi, H Bennett https://t.co/3a7zBdAcuu

— BCCI (@BCCI)


 

click me!