ಆಸ್ಟ್ರೇಲಿಯಾ ಇತ್ತೀಚೆಗೆ ಅತೀ ದೊಡ್ಡ ಬೆಂಕಿ ಅನಾಹುತಕ್ಕೆ ತುತ್ತಾಗಿ ಇದೀಗ ಚೇತರಿಸಿಕೊಳ್ಳುತ್ತಿದೆ. ಆಸ್ಟ್ರೇಲಿಯಾದ ಕಾಡು ಬಹುತೇಕ ಬೆಂಕಿಗೆ ಬಂದು ಹೋಗಿದೆ. ಪ್ರಾಣಿ ಹಾಗೂ ಸಸ್ಯ ಸಂಕುಲ ಸುಟ್ಟು ಬೂದಿಯಾಗಿದೆ. ಈ ಭೀಕರ ಕಾಡ್ಗಿಚ್ಚು ಪರಿಹಾರಕ್ಕೆ ಆಯೋಜಿಸಿರುವ ಟೂರ್ನಿಗೆ ತಂಡ ಪ್ರಕಟಗೊಂಡಿದೆ.
ಸಿಡ್ನಿ(ಫೆ.01): ಕಾಡ್ಗಿಚ್ಚು ಪರಿಹಾರ ಕ್ರಿಕೆಟ್ ಟೂರ್ನಿಯಾದ ಬುಶ್‌ಫೈರ್ ಕ್ರಿಕೆಟ್ ಪಂದ್ಯಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ ತಂಡ ಪ್ರಕಟಸಿದೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಹಾಗೂ ವಿಂಡೀಸ್ ದಿಗ್ಗಜ ಕರ್ಟ್ನಿ ವಾಲ್ಶ್ ಮಾರ್ಗದರ್ಶನದಲ್ಲಿ ಬಲಿಷ್ಠ ತಂಡ ರೋಚಕ ಪಂದ್ಯಕ್ಕೆ ಸಜ್ಜಾಗಿದೆ.
ಇದನ್ನೂ ಓದಿ: INDvNZ 5ನೇ ಟಿ20: ಬದಲಾವಣೆಗೆ ಮುಂದಾದ ಭಾರತ! ಇಲ್ಲಿದೆ ಸಂಭವನೀಯ ತಂಡ!
undefined
ಫೆಬ್ರವರಿ 8 ರಂದು ಬುಶ್‌ಫೈರ್ ಕ್ರಿಕೆಟ್ ಪಂದ್ಯ ನಡೆಯಲಿದೆ. ಸಿಡ್ನಿ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ರಿಕಿ ಪಾಂಟಿಂಗ್ ಹಾಗೂ ಶೇನ್ ವಾರ್ನ್ ತಂಡ ಮುನ್ನಡೆಸಲಿದ್ದಾರೆ. ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಕೂಡ ಬುಶ್‌ಫೈರ್ ಕ್ರಿಕೆಟ್ ಪಂದ್ಯ ಆಡುತ್ತಿದ್ದಾರೆ.
ಇದನ್ನೂ ಓದಿ: ಮತ್ತೆ ಸೂಪರ್ ಓವರ್ ಗೆದ್ದ ಟೀಂ ಇಂಡಿಯಾ
ಬುಶ್‌ಫೈರ್ ಕ್ರಿಕೆಟ್ ತಂಡ:
ರಿಕಿ ಪಾಂಟಿಂಗ್(ನಾಯಕ), ಶೇನ್ ವಾರ್ನ್(ನಾಯಕ), ಯುವರಾಜ್ ಸಿಂಗ್, ಆ್ಯಡಮ್ ಗಿಲ್‌ಕ್ರಿಸ್ಟ್, ಜಸ್ಟಿನ್ ಲ್ಯಾಂಗರ್, ಲ್ಯೂಕ್ ಹಾಡ್ಜ್, ಮ್ಯಾಥ್ಯೂ ಹೇಡನ್, ಮೈಕಲ್ ಕ್ಲಾರ್ಕ್, ಮೈಕ್ ಹಸ್ಸಿ, ಫೊಬೆ ಲಿಚ್‌ಫೀಲ್ಡ್, ಶೇನ್ ವ್ಯಾಟ್ಸನ್, ಅಲೆಕ್ಸ್ ಬ್ಲಾಕ್‌ವೆಲ್, ಆ್ಯಂಡ್ರೂ ಸೈಮಂಡ್ಸ್, ಬ್ರಾಡ್ ಫಿಟ್ಲರ್ ಬ್ರಾಡ್ ಹ್ಯಾಡಿನ್, ಬ್ರೆಟ್ ಲಿ, ಬ್ರಿಯಾನ್ ಲಾರಾ, ಡ್ಯಾನ್ ಕ್ರಿಸ್ಟಿಯನ್, ನಿಕ್ ರಿವೋಲ್ಡ್, ಎಲ್ಸೆ ವಿಲಾನಿ, ಗ್ರೇಸ್ ಹ್ಯಾರಿಸ್, ಹೊಲಿ ಫರ್ಲಿಂಗ್
ಕೋಚ್:
ಸಚಿನ್ ತೆಂಡುಲ್ಕರ್, ಕರ್ಟ್ನಿ ವಾಲ್ಶ್