ಇಂಗ್ಲೆಂಡ್ ವಿರುದ್ದದದ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ರನ್ ಗೆಲುವು ದಾಖಲಿಸಿದೆ. ಈ ಮೂಲಕ ಸರಣಿಯನ್ನು 1-1 ಅಂತರದಲ್ಲಿ ಸಮಬಲಗೊಳಿಸಿದೆ.
ವಿಶಾಖಪಟ್ಟಣ(ಫೆ.05) ಇಂಗ್ಲೆಂಡ್ ವಿರುದ್ದದ ಮೊದಲ ಟೆಸ್ಟ್ ಪಂದ್ಯದಲ್ಲಿ ಮುಗ್ಗರಿಸಿದ್ದ ಭಾರತ ಇದೀಗ ಎರಡನೇ ಟೆಸ್ಟ್ ಪಂದ್ಯದಲ್ಲಿ ಗೆಲುವಿನ ನಗೆ ಬೀರಿದೆ.2ನೇ ಇನ್ನಿಂಗ್ಸ್‌ನಲ್ಲಿ ಭಾರತ ನೀಡಿದ 399 ರನ್ ಟಾರ್ಗೆಟ್ ಚೇಸ್ ಮಾಡಲು ಕಣಕ್ಕಿಳಿದ ಇಂಗ್ಲೆಂಡ್ 292 ರನ್‌ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಭಾರತ 106 ರನ್ ಭರ್ಜರಿ ಗೆಲುವು ದಾಖಲಿಸಿದೆ. ಇಷ್ಟೇ ಅಲ್ಲ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ.
ಅಂತಿಮ ದಿನದಾಟದಲ್ಲಿ 9 ವಿಕೆಟ್‌ಗಳೊಂದಿಗೆ ದಿನದಾಟ ಆರಂಭಿಸಿದ ಇಂಗ್ಲೆಂಡ್ ಜಸ್ಪ್ರೀತ್ ಬುಮ್ರಾ ಹಾಗೂ ಆರ್ ಅಶ್ವಿನ್ ದಾಳಿಗೆ ತತ್ತರಿಸಿತು. ಝ್ಯಾಕ್ ಕ್ರಾವ್ಲೇ ದಿಟ್ಟ ಹೋರಾಟ ನೀಡಿದರೆ, ಇತರರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರಲಿಲ್ಲ. ಅಂತಿಮ ಹಂತದಲ್ಲಿ ಬೆನ್ ಫೋಕ್ಸ್ ಹಾಗೂ ಟಾಮ್ ಹಾರ್ಟ್ಲೇ ಜೊತೆಯಾಟ ಇಂಗ್ಲೆಂಡ್ ತಂಡಕ್ಕೆ ಚೇತರಿಕೆ ನೀಡಿತು. ಆದರೆ ಗೆಲುವಿನ ದಡ ಸೇರಲಿಲ್ಲ. ಇವರಿಬ್ಬರ ಜೊತೆಯಾಟದಿಂದ ಇಂಗ್ಲೆಂಡ್ ಸೋಲಿನ ಅಂತರವನ್ನು ಕಡಿಮೆ ಮಾಡಿಕೊಂಡಿತು.
undefined
ರೆಹಾನ್ ಅಹಮ್ಮದ್ 23, ಒಲ್ಲಿ ಪೋಪ್ 23, ಜೂ ರೂಟ್ 16 ರನ್ ಸಿಡಿಸಿ ಔಟಾದರು. ಇತ್ತ ಜ್ಯಾಕ್ ಕ್ರಾವ್ಲೇ ಹಾಫ್ ಸೆಂಚುರಿ ಸಿಡಿಸುವ ಮೂಲಕ ಇಂಗ್ಲೆಂಡ್ ತಂಡದ ಚೇಸಿಂಗ್ ಆತಂಕಕ್ಕೆ ಉತ್ತರ ನೀಡಿದರು. ಆಧರೆ ಕ್ರಾವ್ಲೇ 73 ರನ್ ಸಿಡಿಸಿ ನಿರ್ಗಮಿಸಿದರು. ಇತ್ತ ಜಾನಿ ಬೈರ್‌ಸ್ಟೋ 26 ರನ್ ಸಿಡಿಸಿ ಔಟಾದರು. ನಾಯಕ ಬೆನ್ ಸ್ಟೋಕ್ಸ್ 11 ರನ್ ಸಿಡಿಸಿ ನಿರ್ಗಮಿಸಿದರು. ಆದರೆ ಬೆನ್ ಫೋಕ್ಸ್ ಹಾಗೂ ಟಾಮ್ ಹಾರ್ಟ್ಲೇ ಜೊತೆಯಾಟ ನೀಡುವ ಮೂಲಕ ತಿರುಗೇಟು ನೀಡುವ ಸೂಚನೆ ನೀಡಿತು. ಆದರೆ ಜಸ್ಪ್ರೀತ್ ಬುಮ್ರಾ ಇಂಗ್ಲೆಂಡ್ ಅಂತಿಮ ಹಂತದ ಪ್ರಯತ್ನವನ್ನೂ ವಿಫಲಗೊಳಿಸಿದರು. ಫೋಕ್ಸ್ 36 ಹಾಗೂ ಹಾರ್ಟ್ಲೇ 36 ರನ್ ಸಿಡಿಸಿ ಔಟಾದರು. ಇಂಗ್ಲೆಂಡ್ ದ್ವಿತೀಯ ಇನ್ನಿಂಗ್ಸ್‌ನಲ್ಲಿ 292 ರನ್‌ಗೆ ಆಲೌಟ್ ಆಯಿತು.
ಭಾರತ 2ನೇ ಇನ್ನಿಂಗ್ಸ್‌ನಲ್ಲಿ 255ಕ್ಕೆ ಆಲೌಟ್ ಆಗಿತ್ತು. 2ನೇ ಇನ್ನಿಂಗ್ಸ್‌ನಲ್ಲಿ ಶುಭಮನ್ ಗಿಲ್ ಹೋರಾಟ ಭಾರತಕ್ಕೆ ನೆರವಾಗಿತ್ತು. ಶುಭ್‌ಮನ್ ಗಿಲ್-ಅಕ್ಷರ್ ಪಟೇಲ್(45) 89 ರನ್ ಜೊತೆಯಾಟವಾಡಿದ್ದು ತಂಡಕ್ಕೆ ಆಸರೆಯಾಗಿದ್ದರು. ಅಬ್ಬರಿಸಿದ ಗಿಲ್, ಟೆಸ್ಟ್‌ನಲ್ಲಿ 3ನೇ ಶತಕ ಪೂರ್ಣಗೊಳಿಸಿದರು. ಇಂಗ್ಲೆಂಡ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಅವರು 147 ಎಸೆತಗಳಲ್ಲಿ 11 ಬೌಂಡರಿ, 2 ಸಿಕ್ಸರ್‌ನೊಂದಿಗೆ 104 ರನ್ ಗಳಿಸಿ ಔಟಾಗಿದ್ದರು.