INDvsENG 1ನೇ ಟಿ20: ಇಂಗ್ಲೆಂಡ್‌ಗೆ ಸುಲಭ ಗುರಿ ನೀಡಿದ ಟೀಂ ಇಂಡಿಯಾ!

By Suvarna NewsFirst Published Mar 12, 2021, 9:00 PM IST
Highlights

ಟಾಪ್ ಆರ್ಡರ್ ಬ್ಯಾಟ್ಸ್‌ಮನ್ ವೈಫಲ್ಯ, ಮಧ್ಯಮ ಕ್ರಮಾಂಕ  ಬ್ಯಾಟ್ಸ್‌ಮನ್‌ಗಳ ಹೋರಾಟದಿಂದ ಟೀಂ ಇಂಡಿಯಾ ಸ್ಪರ್ಧಾತ್ಮಕ ಮೊತ್ತ ನೀಡಿದೆ. ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಬ್ಯಾಟಿಂಗ್ ಹೈಲಟ್ ಇಲ್ಲಿದೆ.
 

ಅಹಮ್ಮದಾಬಾದ್(ಮಾ.12): ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ವೈಫಲ್ಯ ಅನುಭವಿಸಿದೆ. ಶಿಖರ್ ಧವನ್, ಕೆಎಲ್ ರಾಹುಲ್, ನಾಯಕ ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನದಿಂದ ಟೀಂ ಇಂಡಿಯಾ ಕೇವಲ 124 ರನ್ ಸಿಡಿಸಿದೆ.

ಮಹಿಳಾ ಕ್ರಿಕೆಟ್‌: ಭಾರತದ ಗೆಲುವು ಕಸಿದ ಆಫ್ರಿಕಾದ ಲೀ

ಶಿಖರ್ ಧವನ್ 4, ಕೆಎಲ್ ರಾಹುಲ್ 1, ವಿರಾಟ್ ಕೊಹ್ಲಿ ಡಕೌಟ್ ಆದರೆ ರಿಷಬ್ ಪಂತ್ 21 ರನ್ ಸಿಡಿಸಿ ಔಟಾದರು. ಆದರೆ ಶ್ರೇಯಸ್ ಅಯ್ಯರ್ ಹೋರಾಟ ನೀಡಿದರು. ಅಯ್ಯರ್ ಹೋರಾಟದಿಂದ ಟೀಂ ಇಂಡಿಯಾ ಅಲ್ಪ ಮೊತ್ತ ಭೀತಿಯಿಂದ ಪಾರಾಯಿತು.

ಹಾರ್ದಿಕ್ ಪಾಂಡ್ಯ 19 ರನ್ ಸಿಡಿಸಿದರೆ, ಅಯ್ಯರ್ 67 ರನ್ ಸಿಡಿಸಿದರು. ಈ ಮೂಲಕ ಟೀಂ ಇಂಡಿಯಾ 7 ವಿಕೆಟ್ ನಷ್ಟಕ್ಕೆ 124 ರನ್ ಸಿಡಿಸಿತು ಇಂಗ್ಲೆಂಡ್ ಪರ ಜೋಫ್ರಾ ಆರ್ಚರ್ 3  ವಿಕೆಟ್ ಕಬಳಿಸಿ ಮಿಂಚಿದರು.

click me!