ಇಂಗ್ಲೆಂಡ್ ವಿರುದ್ಧದ 4ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಕೈ ಹಿಡಿದ ಸೂರ್ಯಕುಮಾರ್ ಯಾದವ್ ಕೆಲ ದಾಖಲೆ ಬರೆದಿದ್ದಾರೆ. ಹಾಫ್ ಸೆಂಚುರಿ ಸಿಡಿಸಿ ಸೂರ್ಯಕುಮಾರ್ ಯಾದವ್ ಬರೆದ ದಾಖಲೆ ಏನು? ಇಲ್ಲಿದೆ ವಿವರ.
ಅಹಮ್ಮದಾಬಾದ್(ಮಾ.18): ಇಂಗ್ಲೆಂಡ್ ವಿರುದ್ಧದ 4ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್‌ನಲ್ಲಿ ಅಬ್ಬರಿಸಲು ಸಾಧ್ಯವಾಗಿಲ್ಲ. ಆದರೆ ಸೂರ್ಯಕುಮಾರ್ ಯಾದವ್ ಹಾಫ್ ಸೆಂಚುರಿ ಸಿಡಿಸೋ ಮೂಲಕ ದಾಖಲೆ ಬರೆದಿದ್ದಾರೆ. 3 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದ ಸೂರ್ಯಕುಮಾರ್ ಯಾದವ್ ದಾಖಲೆ ವಿವರ ಇಲ್ಲಿದೆ.
ಫಾರ್ಮ್‌ನಲ್ಲಿದ್ರೆ ಸೆಂಚುರಿ, ಇಲ್ದಿದ್ರೆ ಶೂನ್ಯ; ರಾಹುಲ್ ಬ್ಯಾಟಿಂಗ್ ಸೀಕ್ರೆಟ್ ಬಿಚ್ಚಿಟ್ಟ ಗಂಭೀರ್
undefined
ಟಿ20ಗೆ ಪಾದರ್ಪಣಾ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ದಾಖಲೆ ಬರೆದಿದ್ದಾರೆ. ಎದುರಿಸಿದ ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸಿದ ಭಾರತದ ಮೊದಲ ಟಿ20 ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಷ್ಟೇ ಅಲ್ಲ ಮೊದಲ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಹಾಫ್ ಸೆಂಚುರಿ ಸಿಡಿಸಿ ದಾಖಲೆ ಬರೆದಿದ್ದಾರೆ.
ಇಶಾನ್ ಕಿಶನ್ ಬದಲು 4ನೇ ಟಿ20 ಪಂದ್ಯದಲ್ಲಿ ಸ್ಥಾನ ಪಡೆದ ಸೂರ್ಯಕುಮಾರ್ ಯಾದವ್ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಿದ್ದಾರೆ. ಚೊಚ್ಚಲ ಟಿ20 ಪಂದ್ಯದಲ್ಲಿ ಹಾಫ್ ಸೆಂಚುರಿ ಸಿಡಿಸಿದ ಭಾರತದ 5ನೇ ಬ್ಯಾಟ್ಸ್‌ಮನ್ ಅನ್ನೋ ಹೆಗ್ಗಳಿಕೆಗೆ ಸೂರ್ಯಕುಮಾರ್ ಯಾದವ್ ಪಾತ್ರರಾಗಿದ್ದಾರೆ.
ಟಿ20 ಪದಾರ್ಪಣಾ ಪಂದ್ಯದಲ್ಲಿ 50+ ಸಿಡಿಸಿದ ಟೀಂ ಇಂಡಿಯಾ ಬ್ಯಾಟ್ಸ್‌ಮನ್:
61 ಅಜಿಂಕ್ಯ ರಹಾನೆ vs ಇಂಗ್ಲೆಂಡ್, 2011
56 ಇಶಾನ್ vs ಅಹಮ್ಮದಾಬಾದ್, 2021
50* ರೋಹಿತ್ ಶರ್ಮಾ vs ಸೌತ್ ಆಫ್ರಿಕಾ, 2007
50 ರಾಬಿನ್ ಉತ್ತಪ್ಪ vs ಪಾಕಿಸ್ತಾನ, 2007
57 ಸೂರ್ಯಕುಮಾರ್ ಯಾದವ್ vs ಅಹಮ್ಮದಾಬಾದ್, 2021