ಕರ್ಮಾ ರಿಟರ್ನ್ಸ್, ಟ್ರೋಲ್ ಮಾಡಿದ ಬಾರ್ಮಿ ಆರ್ಮಿಗೆ ಎರಡು ಡಕ್ ಗಿಫ್ಟ್ ನೀಡಿದ ಫ್ಯಾನ್ಸ್!

By Suvarna News  |  First Published Oct 29, 2023, 8:20 PM IST

ಇಂಗ್ಲೆಂಡ್ ಮಾಡಿದ ಟ್ರೋಲ್‌ಗೆ ಮರುಕ್ಷಣದಲ್ಲೇ ಉತ್ತರ ಸಿಕ್ಕಿದೆ. ಇದೀಗ ಕರ್ಮಾ ರಿಟರ್ನ್ಸ್ ಟ್ರೆಂಡ್ ಆಗುತ್ತಿದೆ. ಇಂಗ್ಲೆಂಡ್ ವಿರುದ್ದ ಕೊಹ್ಲಿ ಶೂನ್ಯಕ್ಕೆ ಔಟಾಗಿದ್ದರು. ಇಂಗ್ಲೆಂಡ್‌ನ ಬಾರ್ಮಿ ಆರ್ಮಿ ಫ್ಯಾನ್ಸ್, ಕೊಹ್ಲಿಯನ್ನು ಡಕ್‌ಗೆ ಹೋಲಿಸಿ ಟ್ರೋಲ್ ಮಾಡಿತ್ತು. ಇದೀಗ ಬಾರ್ಮಿ ಆರ್ಮಿಗೆ 2 ಡಕ್ ಗಿಫ್ಟ್ ನೀಡಲಾಗಿದೆ.


ಲಖನೌ(ಅ.29) ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಪಂದ್ಯ ಮೈದಾನಕ್ಕಿಂತ ಹೆಚ್ಚು ರೋಚಕತೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ. ವಿರಾಟ್ ಕೊಹ್ಲಿ ವಿಕೆಟ್ ಪತನವನ್ನು ಇಂಗ್ಲೆಂಡ್ ಅಭಿಮಾನಿಗಳ ಗುಂಪು ಬಾರ್ಮಿ ಆರ್ಮಿ ಅತಿಯಾಗಿ ಸಂಭ್ರಮಿಸಿತ್ತು. ಕೊಹ್ಲಿ ಶೂನ್ಯಕ್ಕೆ ಔಟಾಗಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಬಾರ್ಮಿ ಆರ್ಮಿ, ಕೊಹ್ಲಿಯನ್ನು ಡಕ್‌ಗೆ ಹೋಲಿಸಿ ಟ್ವೀಟ್ ಮಾಡಿತ್ತು. ಆದರೆ ಕರ್ಮಾ ಅಷ್ಟೇ ಬೇಗನೆ ರಿಟರ್ನ್ ಆಗಿದೆ. ಇಂಗ್ಲೆಂಡ್‌ ತಂಡಕ್ಕೆ ಭಾರತದ ಅಭಿಮಾನಿಗಳ ಗುಂಪು ಭಾರ್ಮಿ ಆರ್ಮಿ 2 ಡಕ್ ಗಿಫ್ಟ್ ನೀಡಿ ಟ್ರೋಲ್ ಮಾಡಿದೆ. ಚೇಸಿಂಗ್ ವೇಳೆ ಜೋ ರೂಟ್ ಹಾಗೂ ಬೆನ್ ಸ್ಟೋಕ್ಸ್ ಶೂನ್ಯಕ್ಕೆ ಔಟಾಗಿದ್ದಾರೆ. ಈ ಡಕೌಟನ್ನು ಭಾರತೀಯ ಅಭಿಮಾನಿಗಳು ಬಾರ್ಮಿ ಆರ್ಮಿಗೆ ತಿರುಗೇಟು ನೀಡಿದೆ.

ಜೋ ರೂಟ್ 1 ಎಸೆತ ಎದುರಿಸಿ ಶೂನ್ಯಕ್ಕೆ ಔಟಾದರು. ಜಸ್ಪ್ರೀತ್ ಬುಮ್ರಾ ಮಾರಕ ದಾಳಿಗೆ ರೂಟ್ ಉತ್ತರಿಸಲು ಸಾಧ್ಯವಾಗದೇ ಪೆವಿಲಿಯನ್ ಸೇರಿದರು. ಇತ್ತ ಬೆನ್ ಸ್ಟೋಕ್ಸ್ 10 ಎಸೆದ ಎದುರಿಸಿ ರನ್ ಖಾತೆ ತೆರೆಯದೇ ಔಟಾದರು. ಮೊಹಮ್ಮದ್ ಶಮಿ ದಾಳಿಗೆ ಸ್ಟೋಕ್ಸ್ ವಿಕೆಟ್ ಪತನಗೊಂಡಿತ್ತು. ಇಬ್ಬರೂ ಡಕೌಟ್ ಆಗುವ ಮೂಲಕ ಇಂಗ್ಲೆಂಡ್ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.

Tap to resize

Latest Videos

INDvENG ಡಕೌಟ್ ಆದ ಕೊಹ್ಲಿಯನ್ನು ಡಕ್‌ಗೆ ಹೋಲಿಸಿದ ಇಂಗ್ಲೆಂಡ್ ಫ್ಯಾನ್ಸ್, ಭಾರತೀಯರ ತಿರುಗೇಟು!

ಭಾರತದ ಕ್ರಿಕೆಟ್ ಫ್ಯಾನ್ಸ್ ಭಾರತ್ ಆರ್ಮಿ ಇದೀಗ ಬಾರ್ಮಿ ಆರ್ಮಿ ತಿರುಗೇಟು ನೀಡಿದೆ. ಬೆನ್ ಸ್ಟೋಕ್ಸ್ ಹಾಗೂ ಜೋ ರೂಟ್‌ ಮುಖವನ್ನು ಬಾತುಕೋಳಿ ಮುಖಕ್ಕೆ ಎಡಿಟ್ ಮಾಡಿ ಟ್ರೋಲ್ ಮಾಡಲಾಗಿದೆ. ಬಾರ್ಮಿ ಆರ್ಮಿ ಇದೇ ರೀತಿ ಕೊಹ್ಲಿ ಪೋಟೋವನ್ನು ಬಾತುಕೋಳಿ ತಲೆಗೆ ಇಟ್ಟು ಟ್ರೋಲ್ ಮಾಡಿತ್ತು. 

 

Just out for an evening walk 😉 https://t.co/G0P54UrpRB pic.twitter.com/SugpLAQPbB

— The Bharat Army (@thebharatarmy)

 

ಭಾರತ ಕೇವಲ 229 ರನ್‌ ಸಿಡಿಸಿತ್ತು.ಸುಲಭ ಗುರಿಯನ್ನು ಚೇಸ್ ಮಾಡಲು ಕಣಕ್ಕಿಳಿದ ಇಂಗ್ಲೆಂಡ್ ತಂಡಕ್ಕೆ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಶಮಿ ಮಾರಕ ದಾಳಿ ಹಿನ್ನಡೆ ತಂದಿತು. ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳ ಜೊತೆಯಾಟಕ್ಕೆ ಭಾರತ ಅವಕಾಶ ನೀಡಲೇ ಇಲ್ಲ. ಇತ್ತ ಬುಮ್ರಾ ಹಾಗೂ ಶಮಿ ಬೆನ್ನಲ್ಲೇ ಕುಲ್ದೀಪ್ ಯಾದವ್ ವಿಕೆಟ್ ಕಬಳಿಸಿ ಇಂಗ್ಲೆಂಡ್‌ಗೆ ಮತ್ತೊಂದು ಶಾಕ್ ನೀಡಿದ್ದಾರೆ. ಇದೀಗ ಸುಲಭ ಗುರಿ ಚೇಸ್ ಇಂಗ್ಲೆಂಡ್‌ ತಂಡಕ್ಕೆ ಸವಾಲು ಒಡ್ಡಿದೆ.

 

Just give us some time to make the edits. https://t.co/G0P54UrpRB pic.twitter.com/qBZDz1E04Z

— The Bharat Army (@thebharatarmy)

 

ಸಾರಾ ಹೃದಯಭಗ್ನ; ತೆಂಡುಲ್ಕರ್ ಮಗಳ ಹೊಸ ಪೋಸ್ಟ್ ವೈರಲ್..! ಯಾಕೆ? ಏನಾಯ್ತು?

 ಮೊದಲು ಭಾರತ ಬ್ಯಾಟಿಂಗ್ ನಡೆಸಿತ್ತು. ನಾಯಕ ರೋಹಿತ್ ಶರ್ಮಾ 87 ರನ್ ಕಾಣಿಕೆ ನೀಡಿದ್ದರು. ಕೆಎಲ್ ರಾಹುಲ್ 39 ರನ್ ಸಿಡಿಸಿದ್ದರು. ಸೂರ್ಯಕುಮಾರ್ ಯಾದವ್ 49 ರನ್ ಸಿಡಿಸಿದ್ದರು. ಅಂತಿಮ ಹಂತದಲ್ಲಿ ಬುಮ್ರಾ 16 ರನ್ ಡಿಸಿದರು. ಈ ಮೂಲಕ ಭಾರತ 229 ರನ್ ಸಿಡಿಸಿತ್ತು.

click me!