IND vs BAN ಬಾಂಗ್ಲಾದೇಶಕ್ಕೆ ಬೃಹತ್ ಗುರಿ, 3ನೇ ದಿನದಲ್ಲಿ ವಿಕೆಟ್ ಉಳಿಸಿಕೊಂಡು ಹೋರಾಟ!

By Suvarna NewsFirst Published Dec 16, 2022, 4:25 PM IST
Highlights

ಬಾಂಗ್ಲಾದೇಶ ವಿರುದ್ದದ ಮೊದಲ ಟೆಸ್ಟ್ ಪಂದ್ಯ 3ನೇ ದಿನವೂ ಟೀಂ ಇಂಡಿಯಾ ಹಿಡಿತ ಬಿಗಿಗೊಳಿಸಿದೆ. ದ್ವಿತೀಯ ಇನ್ನಿಂಗ್ಸ್‌ನಲ್ಲಿ 258 ರನ್ ಸಿಡಿಸಿ ಡಿಕ್ಲೇರ್ ಮಾಡಿಕೊಂಡಿರುವ ಟೀಂ ಇಂಡಿಯಾ ಇದೀಗ ಬಾಂಗ್ಲಾ ಆಲೌಟ್ ಮಾಡಿ ಟೆಸ್ಟ್ ಕೈವಶ ಮಾಡಲು ಸಜ್ಜಾಗಿದೆ.

ಚಿತ್ತಗಾಂಗ್(ಡಿ.16):  ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯ ರೋಚಕ ಘಟ್ಟದತ್ತ ತಲುಪುತ್ತಿದೆ. 3ನೇ ದಿನದಾಟದಲ್ಲಿ ಟೀಂ ಇಂಡಿಯಾ ದಿಟ್ಟ ಹೋರಾಟ ಬಾಂಗ್ಲಾದೇಶವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ. 513 ರನ್ ಟಾರ್ಗೆಟ್ ಬೆನ್ನಟ್ಟುತ್ತಿರುವ ಬಾಂಗ್ಲಾದೇಶ 3ನೇ ದಿನದಾಟದ ಅಂತ್ಯದಲ್ಲಿ ವಿಕೆಟ್ ನಷ್ಟವಿಲ್ಲದೆ 42 ರನ್ ಸಿಡಿಸಿದೆ. ಈ ಮೂಲಕ ಬಾಂಗ್ವಾದೇಶ 471 ರನ್ ಹಿನ್ನಡೆಯಲ್ಲಿದೆ. ನಜ್ಮುಲ್ ಹುಸೈನ್ ಹಾಗೂ ಜಾಕಿರ್ ಹಸನ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ನಜ್ಮುಲ್ ಅಜೇಯ 25 ರನ್ ಸಿಡಿಸಿದರೆ, ಜಾಕಿರ್ ಹಸನ್ ಅಜೇಯ 17 ರನ್ ಸಿಡಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಮೂರನೇ ದಿನದಾಟದಲ್ಲಿ 2ನೇ ಇನ್ನಿಂಗ್ಸ್ ಮೂಲಕ ಟೀಂ ಇಂಡಿಯಾ ಅಬ್ಬರಿಸಿತು. ಶುಭಮನ್ ಗಿಲ್ ಹಾಗೂ ಚೇತೇಶ್ವರ್ ಪೂಜಾರ ಭರ್ಜರಿ ಶತಕ ಟೀಂ ಇಂಡಿಯಾದ  ಬೃಹತ್ ಮೊತ್ತಕ್ಕೆ ಕಾರಣವಾಯಿತು. ನಾಯಕ ಕೆಎಲ್ ರಾಹುಲ್ 23 ರನ್ ಸಿಡಿಸಿ ಔಟಾಗಿದ್ದರು. ಆದರೆ ಶಭುಮನ್ ಗಿಲ್ ಹಾಗೂ ಚೇತೇಶ್ವರ ಪೂಜಾರ ಜೊತೆಯಾಟ ಬಾಂಗ್ಲಾದೇಶದ ಲೆಕ್ಕಾಚಾರ ಉಲ್ಟಾ ಮಾಡಿತು. 

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಪಾಕ್ ಮಾಜಿ ನಾಯಕ ಅಝರ್ ಅಲಿ..!

ಶುಭಮನ್ ಗಿಲ್ 152 ಎಸೆತದಲ್ಲಿ 110 ರನ್ ಸಿಡಿಸಿದರು. ಗಿಲ್ ಬಳಿಕ ವಿರಾಟ್ ಕೊಹ್ಲಿ ಜೊತೆ ಚೇತೇಶ್ವರ ಪೂಜಾರ ಇನ್ನಿಂಗ್ಸ್ ಮುಂದುವರಿಸಿದರು. ಪೂಜಾರ ಆಕರ್ಷಕ ಶತಕದ ಮೂಲಕ ಅಬ್ಬರಿಸಿದರು. ಪೂಜಾರ 130 ಎಸೆತದಲ್ಲಿ ಅಜೇಯ 102 ರನ್ ಸಿಡಿಸಿದರು. ಇತ್ತ ಕೊಹ್ಲಿ ಅಜೇಯ 19 ರನ್ ಸಿಡಿಸಿದರು. ಟೀಂ ಇಂಡಿಯಾ 2 ವಿಕೆಟ್ ನಷ್ಟಕ್ಕೆ 258 ರನ್ ಸಿಡಿಸಿ ಎರಡನೇ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿತು. ಈ ಮೂಲಕ ಬಾಂಗ್ಲಾದೇಶಕ್ಕೆ 513 ರನ್ ಟಾರ್ಗೆಟ್ ನೀಡಿತು. 

ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್
ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್‌ನಲ್ಲಿ ದಿಟ್ಟ ಹೋರಾಟ ನೀಡಲು ಸಾಧ್ಯವಾಗಲಿಲ್ಲ. ಟೀಂ ಇಂಡಿಯಾ ಬೌಲರ್‌ಗಳ ಪರಾಕ್ರಮಕ್ಕೆ ಬಾಂಗ್ಲಾದೇಶ ತತ್ತರಿಸಿತು. ನಜ್ಮುಲ್ ಹುಸೈನ್ ಡಕೌಟ್ ಆದರೆ ಜಾಕೀರ್ ಹಸನ್ 20 ರನ್ ಸಿಡಿಸಿ ಔಟಾದರು. ಯಾಸಿರ್ ಆಲಿ 4 ರನ್ ಸಿಡಿಸಿ ಔಟಾದರು. ಲಿಟ್ಟನ್ ಜದಾಸ್ 24 ರನ್ ಕಾಣಿಕೆ ನೀಡಿದರು. ಇತ್ತ ಮುಶ್ಫಿಕರ್ ರೆಹಮಾನ್ 28 ರನ್ ಕಾಣಿಕೆ ನೀಡಿದರು. ನಾಯಕ ಶಕೀಬ್ ಅಲ್ ಹಸನ್ ಕೇವಲ 3 ರನ್ ಸಿಡಿಸಿ ಔಟಾದರು. ನೂರುಲ್ ಹಸನ್ 16 ರನ್ ಕಾಣಿಕೆ ನೀಡಿದರು. ಮೆಹದಿ ಹಸನ್ ಮಿರಾಜ್ 25 ರನ್ ಸಿಡಿಸಿ ಔಟಾದರು . ತಜ್ಲುಮ್ ಇಸ್ಲಾಮ್ ಶೂನ್ಯ ಸುತ್ತಿದರು. ಇನ್ನು ಇಬಾದತ್ ಹುಸೈನ್ 17 ರನ್ ಸಿಡಿಸಿದರು. ಈ ಮೂಲಕ ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್‌ನಲ್ಲಿ 150 ರನ್‌ಗಳಿಗೆ ಆಲೌಟ್ ಆಯಿತು.

ಟೀಂ ಇಂಡಿಯಾ ಆಟಗಾರರ ವಾರ್ಷಿಕ ವೇತನ ಹೆಚ್ಚಳಕ್ಕೆ BCCI ಚಿಂತನೆ?

ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 404 ರನ್ ಸಿಡಿಸಿತ್ತು. ಚೇತೇಶ್ವರ ಪೂಜಾರ 90 ರನ್ ಸಿಡಿಸಿದರೆ, ಶ್ರೇಯಸ್ ಅಯ್ಯರ್ 86 ರನ್ ಸಿಡಿಸಿದರು. ಆರ್ ಅಶ್ವಿನ್ 58, ರಿಷಬ್ ಪಂತ್ 46 ಹಾಗೂ ಕುಲ್ದೀಪ್ ಯಾದವ್ 40 ರನ್ ಸಿಡಿಸಿ ಮಿಂಚಿದರು.

click me!