ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ಸ್ಥಿತಿ ಹೀನಾಯಾವಾಗಿದೆ. ಮೊದಲ ಪಂದ್ಯ ಕೈಚೆಲ್ಲಿದ್ದ ಭಾರತ ಇದೀಗ ಎರಡನೇ ಪಂದ್ಯದಲ್ಲೂ ಸಂಕಷ್ಟಕ್ಕೆ ಸಿಲುಕಿದೆ. ಇದರ ಬೆನ್ನಲ್ಲೇ ಭಾರತಕ್ಕೆ ಶಾಕ್ ಎದುರಾಗಿದೆ. ಗಾಯಗೊಂಡಿರುವ ರೋಹಿತ್ ಶರ್ಮಾ ಆಸ್ಪತ್ರೆ ದಾಖಲಾಗಿದ್ದಾರೆ. ಇದರ ಬೆನ್ನಲ್ಲೇ ಹಲವರು ರೋಹಿತ್ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.
ಢಾಕಾ(ಡಿ.07): ಬಾಂಗ್ಲಾದೇಶ ವಿರುದ್ದದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸ್ಥಿತಿ ಶೋಚನೀಯವಾಗಿದೆ. ಪ್ರಮುಖ ವಿಕೆಟ್ ಕಳೆದುಕೊಂಡು ಇದೀಗ ತಿಣುಕಾಡುತ್ತಿದೆ. ಈಗಾಗಲೇ ಮೊದಲ ಪಂದ್ಯ ಸೋತಿರುವ ಟೀಂ ಇಂಡಿಯಾಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ. ಸರಣಿ ಉಳಿಸಿಕೊಳ್ಳಲು ಈ ಪಂದ್ಯ ಗೆಲ್ಲಲೇಬೇಕು. ಆದರೆ ಪರಿಸ್ಥಿತಿ ಟೀಂ ಇಂಡಿಯಾಗೆ ವಿರುದ್ಧವಾಗಿದೆ. ಈ ಸಂಕಷ್ಟದ ನಡುವೆ ಫೀಲ್ಡಿಂಗ್ ವೇಳೆ ಗಾಯಗೊಂಡ ರೋಹಿತ್ ಶರ್ಮಾ ಲಭ್ಯತೆ ಅನುಮಾನವಾಗುತ್ತಿದೆ. ಕೈಬೆರಳಿನ ಗಾಯಕ್ಕೆ ತುತ್ತಾಗಿರುವ ರೋಹಿತ್ ಶರ್ಮಾ ಈಗಾಗಲೇ ಆಸ್ಪತ್ರೆ ದಾಖಲಾಗಿದ್ದಾರೆ. ರೋಹಿತ್ ಕೈಬೆರಳು ಸ್ಕಾನ್ ಮಾಡಲಾಗಿದೆ. ಬಿಸಿಸಿಐ ವೈದ್ಯರ ತಂಡ ಮುಂದಿನ ನಿರ್ಧಾರ ಕೈಗೊಳ್ಳಲಿದೆ ಎಂದು ಬಿಸಿಸಿಐ ಹೇಳಿದೆ. ಮೂಲಗಳ ಪ್ರಕಾರ ರೋಹಿತ್ ಶರ್ಮಾ ಬಾಂಗ್ಲಾ ವಿರುದ್ಧದ ಸರಣಿಗೆ ಅನುಮಾನ ಎಂದು ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ ರೋಹಿತ್ ಶರ್ಮಾ ವಿರುದ್ದ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೊಹಮ್ಮದ್ ಸಿರಾಜ್ ಎಸೆತದಲ್ಲಿ ಸ್ಲಿಪ್‌ನಲ್ಲಿ ಫೀಲ್ಡಿಂಗ್ ನಿಂತಿದ್ದ ರೋಹಿತ್‌ಗೆ ಕ್ಯಾಚ್ ಬಂದಿತ್ತು. ಈ ವೇಳೆ ರೋಹಿತ್ ಶರ್ಮಾ ಕೈಗೆ ಗಾಯವಾಗಿತ್ತು. ತಕ್ಷಣವೇ ರೋಹಿತ್ ಶರ್ಮಾ ಫೀಲ್ಡ್‌ನಿಂದ ಹೊರಗುಳಿದರು. ರೋಹಿತ್ ಬದಲು ರಜತ್ ಪಾಟಿದಾರ್ ಫೀಲ್ಡಿಂಗ್ ಇಳಿದಿದ್ದರು. ಇತ್ತ ರೋಹಿತ್ ಶರ್ಮಾ ಗಾಯದ ಕುರಿತು ಪರಿಶೀಲನೆ ನಡೆಸಿದ ಬಿಸಿಸಿಐ ವೈದ್ಯಕೀಯ ತಂಡ ಸ್ಕಾನಿಂಗ್ ಸೂಚಿಸಿದ್ದರು. ಹೀಗಾಗಿ ರೋಹಿತ್ ಶರ್ಮಾ ಆಸ್ಪತ್ರೆ ದಾಖಲಾಗಿ ಸ್ಕಾನಿಂಗ್ ಮಾಡಿಸಿದ್ದಾರೆ.
IND VS BAN ಸವಾಲಿನ ಗುರಿ ಬೆನ್ನತ್ತಿದ ಟೀಂ ಇಂಡಿಯಾಗೆ ಆಘಾತ, ಆರಂಭಿಕರಿಬ್ಬರೂ ಔಟ್..!
ರೋಹಿತ್ ಶರ್ಮಾ ಕುರಿತು ಬಿಸಿಸಿಐ ಟ್ವೀಟ್ ಮಾಡಿದ ಬೆನ್ನಲ್ಲೇ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳಪೆ ಪ್ರದರ್ಶನ, ಬಾಂಗ್ಲಾ ವಿರುದ್ದದ ಸೋಲಿನಿಂದ ಕಂಗೆಟ್ಟಿರುವ ಅಭಿಮಾನಿಗಳು, ರೋಹಿತ್ ಶರ್ಮಾ ಐಪಿಎಲ್ ಟೂರ್ನಿ ವೇಳೆಗೆ ಫಿಟ್ ಆಗಲಿದ್ದಾರೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತೆ ಕೆಲವರೂ ರೋಹಿತ್ ಶರ್ಮಾ ಟೀಂ ಇಂಡಿಯಾ ಪರ ಬ್ಯಾಟಿಂಗ್ ಹಾಗೂ ನಾಯಕತ್ವ ಮಾಡಿರುವುದಕ್ಕಿಂತಲೂ ಹೆಚ್ಚು ಇಂಜುರಿಯಾಗಿ ಹೊರಗುಳಿದಿದ್ದೇ ಹೆಚ್ಚು ಎಂದಿದ್ದಾರೆ. ಇದೀಗ ಟೀಂ ಇಂಡಿಯಾ ಕಳೆಪೆ ಪ್ರದರ್ಶನದ ವಿರುದ್ಧ ಟೀಕೆ ಕೇಳಿಬಂದಿದೆ. ಟೀಂ ಇಂಡಿಯಾ ಜವಾಬ್ದಾರಿಯುತ ಪ್ರದರ್ಶನ ನೀಡುತ್ತಿಲ್ಲ ಅನ್ನೋ ಮಾತುಗಳು ಕೇಳಿಬಂದಿದೆ.
Ind vs Ban: ಕುಸಿದ ಬಾಂಗ್ಲಾಗೆ ಮೆಹದಿ ಹಸನ್ ಶತಕದಾಸರೆ, ಟೀಂ ಇಂಡಿಯಾಗೆ ಸ್ಪರ್ಧಾತ್ಮಕ ಗುರಿ
ರೋಹಿತ್ ಶರ್ಮಾ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿರವ ಬೆನ್ನಲ್ಲೇ ಪರವಾಗಿ ಹಲವು ಟ್ವೀಟ್‌ಗಳು ಪೋಸ್ಟ್ ಆಗಿವೆ. ರೋಹಿತ್ ಶರ್ಮಾ ಇಂಜುರಿಗೆ ತುತ್ತಾಗಿದ್ದಾರೆ. ಈ ವೇಳೆ ರೋಹಿತ್ ವಿರುದ್ಧ ಮುಗಿ ಬೀಳುವುದು ಸರಿಯಲ್ಲ. ಎಲ್ಲರಂತೆ ರೋಹಿತ್ ಕೂಡ ಕಳಪೆ ಫಾರ್ಮ್‌ನಲ್ಲಿದ್ದಾರೆ. ಇದೇ ಸಂದರ್ಭ ಬಳಸಿ ಟೀಕಿಸುವುದು ಸರಿಯಲ್ಲ ಅನ್ನೋ ಮಾತುಗಳು ಕೇಳಿ ಬಂದಿದೆ.
ಮೊದಲ ಪಂದ್ಯದಲ್ಲಿ ಮುಗ್ಗರಿಸಿದ್ದ ಭಾರತ
ಕೊನೆ ವಿಕೆಟ್‌ಗೆ ಮುಸ್ತಾಫಿಜುರ್ ಜೊತೆ ಸೇರಿ 51 ರನ್ ಜೊತೆಯಾಟವಾಡಿದ ಮೆಹಿದಿ ಹಸನ್ ಭಾರತ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶಕ್ಕೆ 1 ವಿಕೆಟ್ ರೋಚಕ ಗೆಲುವು ತಂದುಕೊಟ್ಟರು. 3 ಪಂದ್ಯಗಳ ಸರಣಿಯಲ್ಲಿ ಬಾಂಗ್ಲಾ 1-0 ಮುನ್ನಡೆ ಪಡೆಯಿತು. ಮೊದಲು ಬ್ಯಾಟ್ ಮಾಡಿದ ಭಾರತ ಕಳಪೆ ಆಟವಾಡಿತು. ಕೆ.ಎಲ್.ರಾಹುಲ್ ಅರ್ಧಶತಕ ಗಳಿಸಿದರೂ ಬಾಲಂಗೋಚಿ ಬ್ಯಾಟರ್‌ಗಳನ್ನು ಜೊತೆಯಾಗಿಟ್ಟುಕೊಂಡು ಪೂರ್ತಿ 50 ಓವರ್ ಬ್ಯಾಟ್ ಮಾಡಲು ವಿಫಲದಾದರು. ಭಾರತ 41.2 ಓವರಲ್ಲಿ 186 ರನ್‌ಗೆ ಆಲೌಟ್ ಆಯಿತು.