
ಲಂಡನ್(ಏ.27): ನಾನು ಭಾರತ ತಂಡದ ಕೋಚ್ ಆಗಿ ನೇಮಕಗೊಂಡಿದ್ದು ಕೆಲವರಿಗೆ ಹೊಟ್ಟೆ ಕಿಚ್ಚು ತರಿಸಿತ್ತು. ನಾನು ವೈಫಲ್ಯ ಕಾಣಬೇಕು ಎಂದು ಆಶಿಸಿದ್ದರು ಎಂದು ರವಿ ಶಾಸ್ತ್ರಿ (Ravi Shastri) ಕಿಡಿಕಾರಿದ್ದಾರೆ. ಇಂಗ್ಲೆಂಡ್‌ನ ಪ್ರಮುಖ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ‘ನಾನು ಯಾವುದೇ ಕೋಚಿಂಗ್ ಪ್ರಮಾಣ ಪತ್ರಗಳನ್ನು ಹೊಂದಿಲ್ಲ. ಹಾಗೆಂದು ಕೋಚ್ ಆಗಬಾರದೆಂದೇನೂ ಇಲ್ಲ. ಭಾರತದಲ್ಲಿ ಹೊಟ್ಟೆ ಕಿಚ್ಚಿನ ಜನ ಇರುತ್ತಾರೆ. ಅವರು ನಮ್ಮ ಸೋಲಿಗೆ ಕಾಯುತ್ತಿದ್ದರೂ ನಾನು ಜಗ್ಗಲಿಲ್ಲ. ನಮ್ಮ ಸುತ್ತಲೂ ನಮ್ಮ ಬಗ್ಗೆ ಜನರು ಏನೆಲ್ಲಾ ಮಾತಾಡಿಕೊಳ್ಳುತ್ತಾರೆ. ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳಬಾರದು’ ಎಂದಿದ್ದಾರೆ.
2014ರಲ್ಲಿ ಭಾರತದ ಕೋಚ್ ಸ್ಥಾನ ಅಲಂಕರಿಸಿದ್ದ ಶಾಸ್ತ್ರಿ 2021ರ ಟಿ20 ವಿಶ್ವಕಪ್ (ICC T20 World Cup) ಬಳಿಕ ಹುದ್ದೆಯಿಂದ ಕೆಳಗಿಳಿದಿದ್ದರು. ಈ ಮಧ್ಯ ಒಂದು ವರ್ಷ ಅನಿಲ್ ಕುಂಬ್ಳೆ (Anil Kumble) ಭಾರತ ಕ್ರಿಕೆಟ್ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. ಇದೀಗ ರವಿಶಾಸ್ತ್ರಿ ಇಂಗ್ಲೆಂಡ್ ಕ್ರಿಕೆಟ್ ತಂಡದ ಕೋಚ್ ಆಗಿ ನೇಮಕವಾಗಬಹುದು ಎನ್ನುವ ಮಾತುಗಳು ಕೇಳಿ ಬಂದಿವೆ. ಇತ್ತೀಚೆಗಷ್ಟೇ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕತ್ವಕ್ಕೆ ಜೋ ರೂಟ್ (Joe Root) ಗುಡ್ ಬೈ ಹೇಳಿದ್ದರು. ಮುಂಬರುವ ದಿನಗಳಲ್ಲಿ ಬೆನ್ ಸ್ಟೋಕ್ಸ್ (Ben Stokes) ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕರಾಗಬಹುದು ಎಂದು ರವಿಶಾಸ್ತ್ರಿ ಭವಿಷ್ಯ ನುಡಿದಿದ್ದಾರೆ.
ಹೆಡ್ ಕೋಚ್ ಆದ ಬಳಿಕ ರವಿಶಾಸ್ತ್ರಿ ಮಾರ್ಗದರ್ಶನದಲ್ಲಿ ಭಾರತ ಕ್ರಿಕೆಟ್ ತಂಡವು ಅತ್ಯುತ್ತಮ ಪ್ರದರ್ಶನ ತೋರಿತ್ತು. ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ತಂಡವು ಎರಡು ಬಾರಿ ಟೆಸ್ಟ್ ಸರಣಿ ಜಯಿಸಿತ್ತು. ಆದರೆ ಐಸಿಸಿ ಟೂರ್ನಿಗಳಲ್ಲಿ ಭಾರತ ತಂಡವು ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿತ್ತು.
ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಗಿಲ್ಲ ಬಯೋಬಬಲ್?
ನವದೆಹಲಿ: ಐಪಿಎಲ್ ಮುಗಿದ ಬಳಿಕ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯನ್ನು ಬಯೋಬಬಲ್ ವ್ಯವಸ್ಥೆಯೊಳಗೆ ನಡೆಸದಿರಲು ಬಿಸಿಸಿಐ ನಿರ್ಧರಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಐಪಿಎಲ್‌ನಲ್ಲಿ ಆಡುತ್ತಿರುವ ಕ್ರಿಕೆಟಿಗರು ಹೆಚ್ಚೂ ಕಡಿಮೆ 3 ತಿಂಗಳು ಬಯೋಬಬಲ್‌ನಲ್ಲಿ ಇರಲಿದ್ದು ಮತ್ತೆ ಅದೇ ವ್ಯವಸ್ಥೆಯೊಳಗೆ ಪಂದ್ಯಗಳನ್ನು ನಡೆಸಿದರೆ ಮಾನಸಿಕ ಸಮಸ್ಯೆಗಳು ಎದುರಾಗಲಿವೆ ಎನ್ನುವ ಕಾರಣಕ್ಕೆ ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. ಅಲ್ಲದೆ 5 ಪಂದ್ಯಗಳು 5 ವಿವಿಧ ನಗರಗಳಲ್ಲಿ ನಡೆಯಲಿರುವ ಕಾರಣ ಬಯೋಬಬಲ್ ವ್ಯವಸ್ಥೆ ಕಷ್ಟಎಂದು ಹೇಳಲಾಗಿದೆ.
ಸ್ವಂತ ಟಿ10 ಲೀಗ್ ಘೋಷಿಸಿದ ಶಾಹಿದ್ ಅಫ್ರಿದಿ!
ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಆಲ್ರೌಂಡರ್ ಶಾಹಿದ್ ಅಫ್ರಿದಿ ತಾವು ಸ್ವಂತ ಟಿ10 ಲೀಗ್ ಆಯೋಜಿಸುವುದಾಗಿ ಘೋಷಿಸಿದ್ದು, ಮೆಗಾ ಸ್ಟಾರ್ಸ್ ಲೀಗ್ ಹೆಸರಿನ(ಎಂಎಸ್‌ಎಲ್) ಟೂರ್ನಿಯ ಉದ್ಘಾಟನಾ ಆವೃತ್ತಿಯನ್ನು ರಾವಲ್ಪಿಂಡಿಯಲ್ಲಿ ಸೆಪ್ಟೆಂಬರ್‌ನಲ್ಲಿ ನಡೆಸುತ್ತೇವೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಮಂಗಳವಾರ ಮಾಹಿತಿ ನೀಡಿರುವ ಅವರು, ಲೀಗ್‌ನ ಉದ್ದೇಶ ನಿವೃತ್ತ ಆಟಗಾರರು, ಅಥ್ಲೀಟ್ಸ್ ಮತ್ತು ಕ್ರೀಡಾ ಪತ್ರಕರ್ತರಿಗೆ ನೆರವಾಗುವುದು ಎಂದಿದ್ದಾರೆ.
IPL 2022: ಎಂಟು ಸೋಲಿನ ಬೆನ್ನಲ್ಲೇ ಭಾವನಾತ್ಮಕ ಸಂದೇಶ ರವಾನಿಸಿದ ರೋಹಿತ್ ಶರ್ಮಾ
‘ಎಂಎಸ್‌ಎಲ್‌ನಲ್ಲಿ 6 ತಂಡಗಳಿವೆ. ಟೂರ್ನಿಯಲ್ಲಿ ವಿದೇಶಿ ಆಟಗಾರರೂ ಪಾಲ್ಗೊಳ್ಳಲಿದ್ದಾರೆ. ಪಾಕಿಸ್ತಾನ ಸೂಪರ್ ಲೀಗ್(ಪಿಎಸ್‌ಎಲ್)ನಲ್ಲಿ ಕಿರಿಯರು ಆಡುತ್ತಿದ್ದಾರೆ. ನನ್ನಂಥ ಹಿರಿಯರು ಎಂಎಸ್‌ಎಲ್‌ನಲ್ಲಿ ಆಡಲಿದ್ದೇವೆ’ ಎಂದು ಅಫ್ರಿದಿ ತಿಳಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.