'ದಿನಕ್ಕೆ 8 ಕೆಜಿ ಮಟನ್ ತಿಂದ್ರೆ ಫಿಟ್ನೆಸ್ ಎಲ್ಲಿಂದ ಬರುತ್ತೆ?': ಪಾಕ್ ಕ್ರಿಕೆಟಿಗರ ಮೇಲೆ ವಾಸೀಂ ಅಕ್ರಂ ಸಿಡಿಮಿಡಿ

By Naveen Kodase  |  First Published Oct 24, 2023, 2:18 PM IST

ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆದ ಪಂದ್ಯಲ್ಲಿ ಪಾಕಿಸ್ತಾನ ಎದುರು ಸಂಘಟಿತ ಪ್ರದರ್ಶನ ತೋರಿದ ಆಫ್ಘಾನಿಸ್ತಾನ ತಂಡವು 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಇನ್ನು 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ಕ್ರಿಕೆಟ್ ತಂಡವು ಹ್ಯಾಟ್ರಿಕ್ ಸೋಲು ಅನುಭವಿಸಿದೆ. ಈ ಮೂಲಕ ಪ್ಲೇ ಆಫ್ ಹಾದಿಯನ್ನು ಮತ್ತಷ್ಟು ದುರ್ಗಮ ಮಾಡಿಕೊಂಡಿದೆ. 


ಚೆನ್ನೈ(ಅ.24): 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡವನ್ನು ರೋಚಕವಾಗಿ ಮಣಿಸುವಲ್ಲಿ ಆಫ್ಘಾನಿಸ್ತಾನ ತಂಡವು ಯಶಸ್ವಿಯಾಗಿದೆ. ಮಾಜಿ ಚಾಂಪಿಯನ್ ಪಾಕಿಸ್ತಾನ ತಂಡವು ತನಗಿಂತ ಕೆಳಗಿರುವ ಶ್ರೇಯಾಂಕ ಹೊಂದಿರುವ ಆಫ್ಘಾನಿಸ್ತಾನ ಎದುರು ಮಂಡಿಯೂರುವ ಮೂಲಕ ಮುಖಭಂಗ ಅನುಭವಿಸಿದೆ. ಇದು ಪಾಕಿಸ್ತಾನ ಮಾಜಿ ನಾಯಕ ವಾಸೀಂ ಅಕ್ರಂ ಕೆಂಗಣ್ಣಿಗೆ ಗುರಿಯಾಗಿದ್ದು, ಆಟಗಾರರ ಫಿಟ್ನೆಸ್ ಕುರಿತಂತೆ ಅಸಮಾಧಾನ ಹೊರಹಾಕಿದ್ದಾರೆ.

ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆದ ಪಂದ್ಯಲ್ಲಿ ಪಾಕಿಸ್ತಾನ ಎದುರು ಸಂಘಟಿತ ಪ್ರದರ್ಶನ ತೋರಿದ ಆಫ್ಘಾನಿಸ್ತಾನ ತಂಡವು 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಇನ್ನು 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ಕ್ರಿಕೆಟ್ ತಂಡವು ಹ್ಯಾಟ್ರಿಕ್ ಸೋಲು ಅನುಭವಿಸಿದೆ. ಈ ಮೂಲಕ ಪ್ಲೇ ಆಫ್ ಹಾದಿಯನ್ನು ಮತ್ತಷ್ಟು ದುರ್ಗಮ ಮಾಡಿಕೊಂಡಿದೆ. 

Tap to resize

Latest Videos

ಗಾಯದ ಮೇಲೆ ಬರೆ.! ಪಾಕಿಸ್ತಾನದಿಂದ ಗಡಿಪಾರಾಗಿರುವ ಆಫ್ಘನ್‌ ಜನರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಅರ್ಪಿಸಿದ ಜದ್ರಾನ್.!

ಈ ಪಂದ್ಯಕ್ಕೂ ಮುನ್ನ ಏಕದಿನ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ಹಾಗೂ ಆಫ್ಘಾನಿಸ್ತಾನ ತಂಡಗಳು 7 ಬಾರಿ ಮುಖಾಮುಖಿಯಾಗಿದ್ದವು. ಆದರೆ ಏಳು ಪಂದ್ಯಗಳಲ್ಲೂ ಪಾಕಿಸ್ತಾನ ತಂಡವು ಗೆಲುವಿನ ನಗೆ ಬೀರಿತ್ತು. ಆದರೆ ಇದೀಗ ಎಂಟನೇ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಸೋಲಿನ ರುಚಿ ತೋರಿಸುವಲ್ಲಿ ಆಫ್ಘಾನಿಸ್ತಾನ ತಂಡವು ಯಶಸ್ವಿಯಾಗಿದೆ. ನಾಯಕ ಬಾಬರ್ ಅಜಂ ಹಾಗೂ ಅಬ್ದುಲ್ ಶಫೀಕ್ ಸಮಯೋಚಿತ ಅರ್ಧಶತಕ ಹಾಗೂ ಕೊನೆಯಲ್ಲಿ ಇಫ್ತಿಕಾರ್ ಅಹಮ್ಮದ್ ಹಾಗೂ ಶಾದಾಬ್ ಖಾನ್ ಬಾರಿಸಿದ ತಲಾ 40 ರನ್‌ಗಳ ನೆರನಿಂದ ಪಾಕಿಸ್ತಾನ ತಂಡವು ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 282 ರನ್ ಬಾರಿಸಿತ್ತು. 

ಇನ್ನು ಸವಾಲಿನ ಗುರಿ ಬೆನ್ನತ್ತಿದ ಆಫ್ಘಾನಿಸ್ತಾನ ತಂಡವು ರೆಹಮನುಲ್ಲಾ ಗುರ್ಬಾಜ್, ಇಬ್ರಾಹಿಂ ಜದ್ರಾನ್ ಹಾಗೂ ರೆಹಮತ್ ಶಾ ಬಾರಿಸಿದ ಆಕರ್ಷಕ ಅರ್ಧಶತಕಗಳ ನೆರವಿನಿಂದ ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ 8 ವಿಕೆಟ್ ಭರ್ಜರಿ ಜಯ ಸಾಧಿಸುವಲ್ಲಿ ಆಫ್ಘಾನಿಸ್ತಾನ ತಂಡವು ಯಶಸ್ವಿಯಾಗಿದೆ. 

ಪಾಕ್‌ ಬಗ್ಗುಬಡಿದ ಆಫ್ಘಾನ್‌: ಎಕೆ-47ನಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದ ಫ್ಯಾನ್ಸ್

ಪಂದ್ಯ ಮುಕ್ತಾಯದ ಬಳಿಕ 'ಎ' ಸ್ಪೋರ್ಟ್ಸ್‌ ವಾಹಿನಿಯಲ್ಲಿ ಮಾತನಾಡಿದ ವಾಸೀಂ ಅಕ್ರಂ, "ಇದು ಅವಮಾನಕಾರಿ. ಕೇವಲ 2 ವಿಕೆಟ್. 280-290 ನಿಜಕ್ಕೂ ದೊಡ್ಡ ಸ್ಕೋರ್. ಈ ಪಿಚ್ ಒದ್ದೆಯಾಗಿರಲಿ ಅಥವಾ ಆಗದೇ ಇರಲಿ, ಫೀಲ್ಡಿಂಗ್ ಅಂತೂ.... ಅವರ ಫಿಟ್ನೆಸ್ ಲೆವೆಲ್ ನೋಡಿ. ಕಳೆದ ಎರಡು ವರ್ಷಗಳಿಂದ ಪಾಕಿಸ್ತಾನದ ಆಟಗಾರರಲ್ಲಿ ಫಿಟ್ನೆಸ್ ಇಲ್ಲ ಎನ್ನುವುದನ್ನು ನಾವೆಲ್ಲರೂ ಮಾತನಾಡುತ್ತಲೇ ಬಂದಿದ್ದೇವೆ. ನಾನು ಬೇಕಿದ್ದರೇ, ಕೆಲವರು ಹೆಸರನ್ನು ಬೇಕಿದ್ದರೂ ಪಾಯಿಂಟ್ ಮಾಡಿ ಹೇಳಬಲ್ಲೆ. ಅವರೆಲ್ಲರದ್ದೂ ಫಿಟ್ನೆಸ್ ಇಲ್ಲ. ಅವರನ್ನೆಲ್ಲ ನೋಡಿದರೆ, ದಿನಕ್ಕೆ 8 ಕೆಜಿ ಮಟನ್ ತಿನ್ನುತ್ತಾರೆ ಎಂದು ಅನಿಸುತ್ತದೆ ಎಂದು ಅಕ್ರಂ ಕಿಡಿಕಾರಿದ್ದಾರೆ.

“8-8 kilo Kadhai khate hain.”

Wasim Akram lashes out Pakistani players on their fitness.pic.twitter.com/dPRgjzn0Uv

— Cricketopia (@CricketopiaCom)

"ಪಾಕಿಸ್ತಾನ ತಂಡದಲ್ಲಿ ಫಿಟ್ನೆಸ್ ಟೆಸ್ಟ್ ಎನ್ನುವುದೇ ಇಲ್ಲ. ವೃತ್ತಿಪರವಾಗಿ ನೀವು ನಿಮ್ಮ ದೇಶವನ್ನು ಪ್ರತಿನಿಧಿಸುತ್ತಿದ್ದೀರ. ನಿಮಗೆ ಸಂಬಳವನ್ನು ನೀಡಲಾಗುತ್ತಿದೆ. ಈ ವಿಚಾರದಲ್ಲಿ ನಾನು ಮಿಸ್ಬಾ ಪರ ವಹಿಸುತ್ತೇನೆ. ಅವರು ಪಾಕಿಸ್ತಾನ ತಂಡದ ಕೋಚ್ ಆಗಿದ್ದಾಗ ಫಿಟ್ನೆಸ್‌ಗೆ ಒತ್ತು ನೀಡುತ್ತಿದ್ದರು. ಹೀಗಾಗಿ ಕ್ರಿಕೆಟಿಗರು ಅವರನ್ನು ದ್ವೇಷಿಸುತ್ತಿದ್ದರು. ಆದರೆ ಅದು ತಂಡಕ್ಕೆ ಅನುಕೂಲವಾಗುತ್ತಿತ್ತು. ಫೀಲ್ಡಿಂಗ್, ಆಟಗಾರರ ಫಿಟ್ನೆಸ್ ಅವಲಂಭಿಸಿದೆ, ಅದು ಮೈದಾನದಲ್ಲೂ ಕಾಣ ಸಿಗುತ್ತದೆ" ಎಂದು ವಾಸೀಂ ಅಕ್ರಂ ಹೇಳಿದ್ದಾರೆ.
 

click me!