ಪಾಕ್‌ ಬಗ್ಗುಬಡಿದ ಆಫ್ಘಾನ್‌: ಎಕೆ-47ನಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದ ಫ್ಯಾನ್ಸ್

By Naveen Kodase  |  First Published Oct 24, 2023, 11:21 AM IST

ಭಾರತದಲ್ಲಿ ಮಾತ್ರವಲ್ಲದೇ, ಆಫ್ಘಾನಿಸ್ತಾನ ರಾಜಧಾನಿ ಕಾಬೂಲ್‌ನ ರಸ್ತೆಯಾದ್ಯಂತ ತಡರಾತ್ರಿಯವರೆಗೂ ಆಫ್ಘಾನಿಗರ ಸಂಭ್ರಮಾಚರಣೆ ಮುಗಿಲುಮುಟ್ಟಿತು. ಇದು ಪಾಕಿಸ್ತಾನ ಎದುರು ಏಕದಿನ ಕ್ರಿಕೆಟ್‌ನಲ್ಲಿ ಆಫ್ಘಾನಿಸ್ತಾನ ದಾಖಲಿಸಿದ ಮೊದಲ ಗೆಲುವು ಎನಿಸಿಕೊಂಡಿತು. ಹೀಗಾಗಿ ಆಫ್ಘಾನಿಗರು ಕಾಬೂಲ್ ನಗರದಲ್ಲಿ ಪಟಾಕಿ, ರಾಕೇಟ್ ಸಿಡಿಸುವುದರ ಜತೆಗೆ ಎಕೆ-47 ಬಂದೂಕಿನಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದರು. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.


ಚೆನ್ನೈ(ಅ.24): ಕ್ರಿಕೆಟ್ ಜಗತ್ತಿನ ಹೊಸ ಬದ್ದ ಎದುರಾಳಿಗಳೆಂದು ಬಿಂಬಿತವಾಗಿರುವ ಪಾಕಿಸ್ತಾನ ಹಾಗೂ ಆಫ್ಘಾನಿಸ್ತಾನ ತಂಡಗಳ ನಡುವಿನ ಕಾದಾಟದಲ್ಲಿ ಕೊನೆಗೂ ಆಫ್ಘಾನಿಸ್ತಾನ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಇದು ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಆಫ್ಘಾನಿಸ್ತಾನ ದಾಖಲಿಸಿದ ಅತಿದೊಡ್ಡ ಗೆಲುವು ಎನಿಸಿಕೊಂಡಿತು.

ಇಲ್ಲಿನ ಚೆಪಾಕ್‌ ಮೈದಾನದಲ್ಲಿ ನಡೆದ ಜಿದ್ದಾಜಿದ್ದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡವು ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 282 ರನ್ ಬಾರಿಸಿತ್ತು. ಇದಕ್ಕುತ್ತರವಾಗಿ ಆಫ್ಘಾನಿಸ್ತಾನ ತಂಡವು ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ ಕೇವಲ 2 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಯಿತು. ಆಫ್ಘಾನಿಸ್ತಾನ ತಂಡವು ಗೆಲುವು ದಾಖಲಿಸುತ್ತಿದ್ದಂತೆಯೇ ಮೈದಾನದಲ್ಲಿದ್ದ ಆಟಗಾರರು, ಸ್ಟೇಡಿಯಂನಲ್ಲಿದ್ದ ಪ್ರೇಕ್ಷಕರು ಹುಚ್ಚೆದ್ದು ಕುಣಿದು ಸಂಭ್ರಮಿಸಿದರು. ಇನ್ನು ಪಾಕಿಸ್ತಾನ ಎದುರು ಆಫ್ಘಾನ್ ಗೆಲುವಿಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ವೀಕ್ಷಕ ವಿವರಣೆಗಾರ ಇರ್ಫಾನ್ ಪಠಾಣ್ ಕೂಡಾ, ರಶೀದ್ ಖಾನ್ ಜತೆಗೂಡಿ ಕುಣಿದು ಕುಪ್ಪಳಿಸಿದರು.

Tap to resize

Latest Videos

ಪಾಕ್ ವಿರುದ್ದ ಆಫ್ಘಾನಿಸ್ತಾನ ಗೆಲುವು ಸಂಭ್ರಮಿಸಿದ ಭಾರತ, ರಶೀದ್ - ಇರ್ಫಾನ್ ಭರ್ಜರಿ ಸ್ಟೆಪ್ಸ್!

Afghanistan Cricket Fans and Supporters are celebrating this massive win over @TheReaPCB on the streets of Kabul! 🤩👏🎊 | | | pic.twitter.com/JZ2Rb0S4C9

— Afghanistan Cricket Board (@ACBofficials)

ಇನ್ನು ಭಾರತದಲ್ಲಿ ಮಾತ್ರವಲ್ಲದೇ, ಆಫ್ಘಾನಿಸ್ತಾನ ರಾಜಧಾನಿ ಕಾಬೂಲ್‌ನ ರಸ್ತೆಯಾದ್ಯಂತ ತಡರಾತ್ರಿಯವರೆಗೂ ಆಫ್ಘಾನಿಗರ ಸಂಭ್ರಮಾಚರಣೆ ಮುಗಿಲುಮುಟ್ಟಿತು. ಇದು ಪಾಕಿಸ್ತಾನ ಎದುರು ಏಕದಿನ ಕ್ರಿಕೆಟ್‌ನಲ್ಲಿ ಆಫ್ಘಾನಿಸ್ತಾನ ದಾಖಲಿಸಿದ ಮೊದಲ ಗೆಲುವು ಎನಿಸಿಕೊಂಡಿತು. ಹೀಗಾಗಿ ಆಫ್ಘಾನಿಗರು ಕಾಬೂಲ್ ನಗರದಲ್ಲಿ ಪಟಾಕಿ, ರಾಕೇಟ್ ಸಿಡಿಸುವುದರ ಜತೆಗೆ ಎಕೆ-47 ಬಂದೂಕಿನಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದರು. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

ಗಾಜಾಗೆ ಶತಕ ಅರ್ಪಿಸಿದ ಬಳಿಕ ಮೂರಕ್ಕೆ 3 ಪಂದ್ಯ ಸೋತ ಪಾಕ್ ತಂಡ ಫುಲ್ ಟ್ರೋಲ್!

ಹೀಗಿತ್ತು ನೋಡಿ ಆ ಕ್ಷಣ:

The celebrations in Afghanistan. pic.twitter.com/7d040PgQgM

— Mufaddal Vohra (@mufaddal_vohra)

ಇನ್ನು ಪಂದ್ಯದ ಬಗ್ಗೆ ಹೇಳುವುದಾದರೇ, ಟಾಸ್ ಗೆದ್ದ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಅಬ್ದುಲ್ ಶಫೀಕ್(58), ನಾಯಕ ಬಾಬರ್ ಅಜಂ(74) ಬಾರಿಸಿದ ಸಮಯೋಚಿತ ಅರ್ಧಶತಕ, ಶದಾಬ್ ಖಾನ್(40) ಹಾಗೂ ಇಫ್ತಿಕಾರ್ ಅಹಮ್ಮದ್(40) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಪಾಕಿಸ್ತಾನ ತಂಡವು 282 ರನ್‌ ಕಲೆಹಾಕಿತು.

ಇನ್ನು ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಆಫ್ಘಾನಿಸ್ತಾನ ತಂಡಕ್ಕೆ ಆರಂಭಿಕರಾದ ರೆಹಮನುಲ್ಲಾ ಗುರ್ಬಾಜ್ ಹಾಗೂ ಇಬ್ರಾಹಿಂ ಜದ್ರಾನ್ ಮೊದಲ ವಿಕೆಟ್‌ಗೆ 130 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು. ಗುರ್ಬಾಜ್‌ 65 ರನ ಬಾರಿಸಿ ವಿಕೆಟ್ ಒಪ್ಪಿಸಿದರೆ, ಮತ್ತೋರ್ವ ಆರಂಭಿಕ ಬ್ಯಾಟರ್ ಜದ್ರಾನ್‌ 87 ರನ್ ಸಿಡಿಸಿ ಪೆವಿಲಿಯನ್ ಸೇರಿದರು. ಇನ್ನು ರೆಹಮನ್ ಶಾ ಅಜೇಯ 77 ಹಾಗೂ ನಾಯಕ ಹಸ್ಮತುಲ್ಲಾ ಶಾಹಿದಿ ಅಜೇಯ 48 ರನ್ ಬಾರಿಸುವ ಮೂಲಕ ತಂಡಕ್ಕೆ ಸ್ಮರಣೀಯ ಗೆಲುವು ತಂದಿತ್ತರು.
 

click me!