ಕೊಹ್ಲಿ-ರಾಹುಲ್ ಹೋರಾಟಕ್ಕೆ ತಲೆಬಾಗಿದ ಆಸ್ಟ್ರೇಲಿಯಾ, ವಿಶ್ವಕಪ್‌ನಲ್ಲಿ ಭಾರತ ಶುಭಾರಂಭ!

By Suvarna News  |  First Published Oct 8, 2023, 9:53 PM IST

ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಶುಭಾರಂಭ ಮಾಡಿದೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಲೀಗ್ ಪಂದ್ಯದಲ್ಲಿ  ವಿರಾಟ್ ಕೊಹ್ಲಿ ಹಾಗೂ  ಕೆಎಲ್ ರಾಹುಲ್ ಹೋರಾಟಕ್ಕೆ ಭಾರತ ಗೆಲುವಿನ ಸಿಹಿ ಕಂಡಿದೆ. 


ಚೆನ್ನೈ(ಅ.08) ಐಸಿಸಿ ವಿಶ್ವಕಪ್ ಟೂರ್ನಿಯಯನ್ನು ಆತಿಥೇಯ ಟೀಂ ಇಂಡಿಯಾ ಗೆಲುವಿನೊಂದಿಗೆ ಆರಂಭಿಸಿದೆ. ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ದಿಟ್ಟ ಹೋರಾಟ ಟೀಂ ಇಂಡಿಯಾಗೆ ಗೆಲುವಿನ ಸಿಹಿ ನೀಡಿತು. ಆರಂಭದಲ್ಲೇ ಇಶಾನ್ ಕಿಶನ್, ನಾಯಕ ರೋಹಿತ್ ಶರ್ಮಾ ಹಾಗೂ ಶ್ರೇಯಸ್ ಅಯ್ಯರ್ ವಿಕೆಟ್ ಕಳೆದುಕೊಂಡ ಭಾರತ ತಂಡ ಆಘಾತಕ್ಕೊಳಗಾಗಿತ್ತು. ಆದರೆ ಕೊಹ್ಲಿ ಹಾಗೂ ರಾಹುಲ್ ಜೊತೆಯಾಟ ಆಸ್ಟ್ರೇಲಿಯಾ ತಂಡದ ಲೆಕ್ಕಾಚಾರ ಉಲ್ಟಾ ಮಾಡಿತು. ರಾಹುಲ್ ಭರ್ಜರಿ ಸಿಕ್ಸರ್ ಮೂಲಕ ಪಂದ್ಯ ಫಿನೀಶ್ ಮಾಡಿ ಭಾರತಕ್ಕೆ 6 ವಿಕೆಟ್ ಭರ್ಜರಿ ಗೆಲುವು ತಂದುಕೊಟ್ಟಿದ್ದಾರೆ.

ಬೌಲಿಂಗ್‌ನಲ್ಲಿ ಮೋಡಿ ಮಾಡಿದ ಟೀಂ ಇಂಡಿಯಾ, ಆಸ್ಟ್ರೇಲಿಯಾ ತಂಡವನ್ನು 199 ರನ್‌ಗೆ ಆಲೌಟ್ ಮಾಡಿತು. 200 ರನ್ ಟಾರ್ಗೆಟ್ ಪಡೆದ ಟೀಂ ಇಂಡಿಯಾ ಸುಲಭ ಗೆಲುವಿನ ಲೆಕ್ಕಾಚಾರದಲ್ಲಿತ್ತು. ಆದರೆ ಮಿಚೆಲ್ ಸ್ಟಾರ್ಕ್ ಹಾಗೂ ಜೋಶ್ ಹೇಜಲ್‌ವುಡ್ ಆರಂಭಿಕ ಓವರ್‌ಗೆ ಟೀಂ ಇಂಡಿಯಾ ನಲುಗಿತು. ಇಶಾನ್ ಕಿಶನ್, ರೋಹಿತ್ ಶರ್ಮಾ ಹಾಗೂ ಶ್ರೇಯಸ್ ಅಯ್ಯರ್ ಡಕೌಟ್‌ ಆದರು.

Tap to resize

Latest Videos

ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ದಾಖಲೆ ಬರೆದ ಕೊಹ್ಲಿ-ರಾಹುಲ್ ಜೊತೆಯಾಟ!

2 ರನ್‌ಗಳಿಸುವಷ್ಟರಲ್ಲೇ ಟೀಂ ಇಂಡಿಯಾ ಪ್ರಮುಖ 3 ವಿಕೆಟ್ ಕಳೆದುಕೊಂಡಿತು. ಅಭಿಮಾನಿಗಳಲ್ಲಿ ಆತಂಕ ಎದುರಾಗಿತ್ತು. ಆದರೆ ಎಲ್ಲರ ಆತಂಕವನ್ನು ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ದೂರ ಮಾಡಿದರು. ಇದರ ನಡುವೆ ವಿರಾಟ್ ಕೊಹ್ಲಿ ಕ್ಯಾಚ್ ನೀಡಿ ಆತಂಕ ಸೃಷ್ಟಿಸಿದ್ದರು. ಆದರೆ ಕ್ಯಾಚ್ ಕೈಚೆಲ್ಲಿ ಜೀವದಾನ ಪಡೆದ ವಿರಾಟ್ ಕೊಹ್ಲಿ ಮತ್ತಷ್ಟು ಎಚ್ಚರಿಕೆಯಿಂದ ಬ್ಯಾಟ್ ಬೀಸಿದರು.

ಕೊಹ್ಲಿ ಹಾಗೂ ರಾಹುಲ್ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಕೊಹ್ಲಿ ರಾಹುಲ್ ಜೊತೆಯಾಟದಿಂದ ಆಸ್ಟ್ರೇಲಿಯಾ ಆತಂಕ ಹೆಚ್ಚಾಯಿತು. ಆದರೆ ಕೊಹ್ಲಿ 85 ರನ್ ಸಿಡಿಸಿ ಔಟಾದರು. ಕೊಹ್ಲಿ ವಿಕೆಟ್ ಪತನದ ಬಳಿಕ ಟೀಂ ಇಂಡಿಯಾ ಆಕ್ರಮಣಕಾರಿ ಆಟವಾಡಿತು. ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್ ಸ್ಫೋಟಕ ಬ್ಯಾಟಿಂಗ್ ಮೂಲಕ ಟಾರ್ಗೆಟ್ ಚೇಸ್ ಮಾಡಿದರು. ಕೆಎಲ್ ರಾಹುಲ್ ಭರ್ಜರಿ ಸಿಕ್ಸರ್ ಸಿಡಿಸಿ ಭಾರತಕ್ಕೆ 6 ವಿಕೆಟ್ ಗೆಲುವು ತಂದುಕೊಟ್ಟರು. 

ಮೈದಾನಕ್ಕೆ ನುಗ್ಗಿದ ಜಾರ್ವೋಗೆ ಸಾಂತ್ವನ ಹೇಳಿ ಹೊರಕಳುಹಿಸಿದ ಕೊಹ್ಲಿ, ಐಸಿಸಿಯಿಂದ ಬಿತ್ತು ಬರೆ!

ಕೆಎಲ್ ರಾಹುಲ್ ಅಜೇಯ 97 ರನ್ ಸಿಡಿಸಿದರೆ, ಹಾರ್ದಿಕ್ ಪಾಂಡ್ಯ ಅಜೇಯ 11 ರನ್ ಸಿಡಿಸಿದರು. ಈ ಮೂಲಕ ಟೀಂ ಇಂಡಿಯಾ 41.2 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಗೆಲುವಿನ ದಡ ಸೇರಿತು. ಆಸ್ಟ್ರೇಲಿಯಾ ವಿರುದ್ದ ಗೆಲುವು ದಾಖಲಿಸಿದ ಟೀಂ ಇಂಡಿಯಾ ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು.
 

click me!