ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ದಾಖಲೆ ಬರೆದ ಕೊಹ್ಲಿ-ರಾಹುಲ್ ಜೊತೆಯಾಟ!

ಆಸ್ಟ್ರೇಲಿಯಾ ವಿರುದ್ದಧ ವಿಶ್ವಕಪ್ ಲೀಗ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ 85 ರನ್ ಸಿಡಿಸಿ ಔಟಾಗಿದ್ದಾರೆ. ಕೆಎಲ್ ರಾಹುಲ್ ಜೊತೆ ಅತ್ಯುತ್ತಮ ಜೊತೆಯಾಟ ನೀಡಿದ ಕೊಹ್ಲಿ ದಾಖಲೆ ನಿರ್ಮಿಸಿದ್ದಾರೆ. 
 

ICC World cup 2023 Virat Kohli depart for 85 runs 4th wicket record partnership with KL rahul ckm

ಚೆನ್ನೈ(ಅ.08) ಸುಲಭ ಮೊತ್ತ, ಆದರೆ ಆತಂಕ. ಆರಂಭದಲ್ಲೇ ಪ್ರಮುಖ 3 ವಿಕೆಟ್ ಪತನ. ಒತ್ತಡ, ಮಿಂಚಿನ ದಾಳಿ ನಡುವೆ ದಿಟ್ಟ ಹೋರಾಟ ನೀಡಬೇಕಾದ ಅನಿವಾರ್ಯತೆ. ಈ ವೇಳೆ ಸಂಪೂರ್ಣ ಜವಾಬ್ದಾರಿ ಹೊತ್ತು ಕೊಂಡ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಭಾರತದ ಆತಂಕ ದೂರ ಮಾಡಿದರು. ಇವರಿಬ್ಬರ ಜೊತೆಯಾಟದಿಂದ ಟೀಂ ಇಂಡಿಯಾ ಗೆಲುವಿನತ್ತ ದಾಪುಗಾಲಿಟ್ಟಿದೆ. ವಿರಾಟ್ ಕೊಹ್ಲಿ 85 ರನ್ ಸಿಡಿಸಿ ನಿರ್ಗಮಿಸಿದರು. ಕೊಹ್ಲಿ ಹಾಗೂ ಕೆಎಲ್ ರಾಹುಲ್ 4ನೇ ವಿಕೆಟ್ ದಾಖಲೆ ಜೊತೆಯಾಟ ನೀಡಿದ್ದಾರೆ

ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 4ನೇ ಹಾಗೂ ಅದಕ್ಕಿಂತ ಕೆಳಗಿನ ಕ್ರಮಾಂಕದಲ್ಲಿ ಮೂಡಿ ಬಂದ ಟೀಂ ಇಂಡಿಯಾದ 2ನೇ ಅತ್ಯುತ್ತಮ ಜೊತೆಯಾಟ ಅನ್ನೋ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಪಾತ್ರರಾಗಿದ್ದಾರೆ. ಕೊಹ್ಲಿ ಹಾಗೂ ರಾಹುಲ್ 165 ರನ್ ಜೊತೆಯಾಟ ನೀಡಿದ್ದಾರೆ. 

ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 4ನೇ ಅಥವಾ ಅದಕ್ಕಿಂತ ಕೆಳಕ್ರಮಾಂಕದಲ್ಲಿ ಭಾರತದ ಗರಿಷ್ಠ ಜೊತೆಯಾಟ
196* ರನ್; ಎಂಎಸ್ ಧೋನಿ ಹಾಗೂ ಸುರೇಶ್ ರೈನಾ vs ಜಿಂಬಾಬ್ವೆ, 2015
165 ರನ್; ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್  vs ಆಸ್ಟ್ರೇಲಿಯಾ, 2023*
142 ರನ್; ವಿನೋದ್ ಕಾಂಬ್ಲಿ ಹಾಗೂ ನವಜೋತ್ ಸಿಂಗ್ ಸಿಧು vs ಜಿಂಬಾಬ್ವೆ, 1996
141 ರನ್; -ಅಜಯ್ ಜಡೇಜಾ ಹಾಗೂ ರಾಬಿನ್ ಸಿಂಗ್ vs ಆಸ್ಟ್ರೇಲಿಯಾ,1999

ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪ್ರತಿ ಬಾರಿ ದಿಟ್ಟ ಹೋರಾಟ ನೀಡಿದ್ದಾರೆ. 2021ರ ವಿಶ್ವಕಪ್‌ನಿಂದ ಹಿಡಿದು ಇದೀಗ 2023ರ ವಿಶ್ವಕಪ್ ವರೆಗೂ ಮೊದಲ ಪಂದ್ಯದಲ್ಲಿ ಕೊಹ್ಲಿ ಪ್ರದರ್ಶನ ಇಲ್ಲಿದೆ
100* ರನ್ vs ಬಾಂಗ್ಲಾದೇಶ, ಮೀರಪುರ, 2011
107 ರನ್ vs ಪಾಕಿಸ್ತಾನ, ಆಡಿಲೇಡ್, 2015
18 ರನ್ vs ಸೌತ್ ಆಫ್ರಿಕಾ, ಸೌಥಾಂಪ್ಟನ್, 2019
85 ರನ್ vs ಆಸ್ಟ್ರೇಲಿಯಾ, ಚೆನ್ನೈ, 2023

Latest Videos
Follow Us:
Download App:
  • android
  • ios