INDvNZ ಸೆಮಿಫೈನಲ್‌ಗೆ ಕಾಡುತ್ತಾ ಮಳೆ? ರಿಸರ್ವ್ ಡೇನಲ್ಲೂ ವರುಣ ವಕ್ಕರಿಸಿದೆ ಫೈನಲ್‌ಗೆ ಯಾರು?

By Suvarna News  |  First Published Nov 14, 2023, 5:04 PM IST

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಸೆಮಿಫೈನಲ್ ಪಂದ್ಯ ಮಳೆಯಿಂದ ರದ್ದಾದರೆ? ಮುಂಬೈ ಹವಾಮಾನ? ರಿಸರ್ವ್ ಡೇನಲ್ಲೂ ಮಳೆ ಬಂದರೆ, ಫೈನಲ್ ಪ್ರವೇಶಿಸುವ ತಂಡ ಯಾವುದು? ಈ ರೀತಿಯ ಪ್ರಶ್ನೆಗಳು ಹಲವರಲ್ಲಿ ಕಾಡುತ್ತಿದೆ. ಇದಕ್ಕೆ ಉತ್ತರ ಇಲ್ಲಿದೆ. 


ಮುಂಬೈ(ನ.14) ಐಸಿಸಿ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದ ಕುತೂಹಲ ಹೆಚ್ಚಾಗಿದೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡ ನವೆಂಬರ್ 15ರಂದು ಮೊದಲ ಸೆಮಿಫೈನಲ್ ಪಂದ್ಯ ಆಡಲಿದೆ. ಹವಾಮಾನ ವರದಿ ಪ್ರಕಾರ ಸೆಮಿಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಕಡಿಮೆ. ಹೀಗಾಗಿ ಮಳೆ ಆತಂಕ ಇಲ್ಲ. ಒಂದು ವೇಳೆ ದಿಢೀರ್ ಮಳೆ ವಕ್ಕರಿಸಿ ಪಂದ್ಯ ರದ್ದಾದರೂ ರಿಸರ್ವ್ ಡೇನಲ್ಲಿ ಸೆಮಿಫೈನಲ್ ಪಂದ್ಯ ಆಡಿಸಲಾಗುತ್ತದೆ. ರಿಸರ್ವ್ ಡೇನಲ್ಲೂ ಮಳೆಯಿಂದ ಪಂದ್ಯ ರದ್ದಾದರೆ ಅಂಕಪಟ್ಟಿಯಲ್ಲಿ ಗರಿಷ್ಠ ಅಂಕ ಸಂಪಾದಿಸಿದ ತಂಡ ಫೈನಲ್ ಪ್ರವೇಶಿಸಲಿದೆ. ಹೀಗಾದಲ್ಲಿ ಭಾರತ ಸೆಮಿಫೈನಲ್ ಪಂದ್ಯ ಆಡದೇ ಫೈನಲ್ ಪ್ರವೇಶಿಸಲಿದೆ.

ಎರಡು ಸೆಮಿಫೈನಲ್ ಪಂದ್ಯ ಹಾಗೂ ಫೈನಲ್ ಪಂದ್ಯಕ್ಕೆ ಮೀಸಲು ದಿನ ಕಾಯ್ದಿರಿಸಲಾಗಿದೆ. ಸದ್ಯದ ಹವಾಮಾನ ವರದಿ ಪ್ರಕಾರ 2 ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಕ್ಕೆ ಮಳೆ ಕಾಟ ಇಲ್ಲ. ನವೆಂಬರ್ 15ರಂದು ಗರಿಷ್ಠ ತಾಪಮಾನ  36°C. ಇನ್ನು ಪಶ್ಚಿಮ ಭಾಗದತ್ತ ವಾಯು ಚಲನೆ ಇರಲಿದೆ. ಗಂಟೆಗೆ 28 ಕೀಲೋಮೀಟರ್ ವೇಗದಲ್ಲಿ ವಾಯು ಚಲನೆ ಇರಲಿದೆ.

Tap to resize

Latest Videos

ಸೆಮೀಸ್-ಫೈನಲ್‌ನಲ್ಲಿ ನ್ಯೂಜಿಲೆಂಡ್‌ಗೆ ಆತಿಥೇಯರ ಶಾಪ, ಕಳೆದ 3 ವಿಶ್ವಕಪ್ ಟೂರ್ನಿಯಲ್ಲೂ ಸೋಲು!

ಹ್ಯುಮಿಡಿಟಿ ಪ್ರಮಾಣ ಶೇಕಡಾ 30. ಶೇಕಡಾ 15 ರಷ್ಟು ಇಬ್ಬನಿ ಬೀಳುವ ಸಂದರ್ಭವಿದೆ. ಮಳೆಯಾಗುವ ಯಾವುದೇ ಲಕ್ಷಣವಿಲ್ಲ. ಹೀಗಾಗಿ ಮುಂಬೈನ ವಾಂಖೆಡೆಯಲ್ಲಿ ಸಂಪೂರ್ಣ ಪಂದ್ಯ ಯಾವುದೇ ಅಡೆ ತಡೆ ಇಲ್ಲದೆ ನಡೆಯಲಿದೆ.

ಎರಡೂ ಸೆಮಿಫೈನಲ್ ಪಂದ್ಯಗಳ ದಿನ ಹಾಗೂ ರಿಸರ್ವ್ ಡೇ ಮಳೆಯಿಂದ ಪಂದ್ಯ ಆಯೋಜನೆಗೊಳ್ಳಲಿದ್ದರೆ, ಅಂಕಪಟ್ಟಿಯಲ್ಲಿ ಟಾಪ್ 2 ತಂಡಗಳು ಫೈನಲ್ ಪ್ರವೇಶಿಸಲಿದೆ. ಇನ್ನು ಫೈನಲ್ ಪಂದ್ಯ ನವೆಂಬರ್ 19 ರಂದು ಅಹಮ್ಮಾದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಕ್ಕೂ ಮಳೆ ವಕ್ಕರಿಸಿದರೆ, ರಿಸರ್ವ್ ಡೇನಲ್ಲಿ ಪಂದ್ಯ ನಡೆಯಲಿದೆ. ರಿಸರ್ವ್ ಡೇನಲ್ಲೂ ಮಳೆ ಅಡ್ಡಿಯಾದರೆ ಎರಡೂ ತಂಡಗಳು ಜಂಟಿ ಚಾಂಪಿಯನ್ ಎಂದು ಘೋಷಿಸಲಾಗುತ್ತದೆ.

ಮಗಳನ್ನು ಮನೆಗೆ ಕರೆದುಕೊಂಡು ಹೋಗಬೇಕು, ಫೊಟೋ ತೆಗೆಯಬೇಡಿ, ಕೊಹ್ಲಿ ಮನವಿ ವಿಡಿಯೋ ವೈರಲ್!

ನವೆಂಬರ್ 15ರ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ಹೋರಾಟ ನಡೆಸಿದರೆ, ನವೆಂಬರ್ 16ರ ಸೆಮಿಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ಹೋರಾಟ ನಡೆಸಲಿದೆ. ಭಾರತ ಲೀಗ್ ಹಂತದಲ್ಲಿ 9 ಪಂದ್ಯ ಗೆದ್ದ 18 ಅಂಕ ಸಂಪಾದಿಸಿ ಸೆಮಿಫೈನಲ್‌ಗೆ ಎಂಟ್ರಿಕೊಟ್ಟಿದೆ.

click me!