ಲಂಕಾ ದಹನ ಮಾಡಿ ಸೆಮೀಸ್‌ಗೆ ಲಗ್ಗೆಯಿಡಲು ಟೀಂ ಇಂಡಿಯಾ ರೆಡಿ..!

Published : Nov 02, 2023, 11:54 AM IST
ಲಂಕಾ ದಹನ ಮಾಡಿ ಸೆಮೀಸ್‌ಗೆ ಲಗ್ಗೆಯಿಡಲು ಟೀಂ ಇಂಡಿಯಾ ರೆಡಿ..!

ಸಾರಾಂಶ

ಈ ವಿಶ್ವಕಪ್‌ನಲ್ಲಿ ಭಾರತ ಪರ ಗರಿಷ್ಠ ರನ್ ಕಲೆಹಾಕಿರುವ ನಾಯಕ ರೋಹಿತ್ ತಮ್ಮ ತವರು ಮೈದಾನದಲ್ಲಿ ಆರ್ಭಟಿಸಲು ಕಾಯುತ್ತಿದ್ದಾರೆ. 6 ಪಂದ್ಯಗಳಲ್ಲಿ ರೋಹಿತ್ 66.33ರ ಸರಾಸರಿಯಲ್ಲಿ 1 ಶತಕ, 2 ಅರ್ಧಶತಕಗಳೊಂದಿಗೆ 398 ರನ್ ಕಲೆಹಾಕಿದ್ದಾರೆ. ಕಳೆದ ಪಂದ್ಯದಲ್ಲಿ ಸೊನ್ನೆಗೆ ಔಟಾಗಿದ್ದ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ದೊಡ್ಡ ಸ್ಕೋರ್ ಮೇಲೆ ಕಣ್ಣಿಟ್ಟಿದ್ದಾರೆ. 

ಮುಂಬೈ(ನ.02): 12 ವರ್ಷಗಳ ಬಳಿಕ ಭಾರತ ಹಾಗೂ ಶ್ರೀಲಂಕಾ ವಿಶ್ವಕಪ್ ಪಂದ್ಯವನ್ನಾಡಲು ವಾಂಖೇಡೆ ಕ್ರೀಡಾಂಗಣಕ್ಕೆ ಕಾಲಿಡಲಿವೆ. 2011ರ ವಿಶ್ವಕಪ್‌ನಲ್ಲಿ ಎರಡೂ ತಂಡಗಳು ಫೈನಲ್‌ನಲ್ಲಿ ಟ್ರೋಫಿಗಾಗಿ ಸೆಣಸಲಿವೆ. ಗುರುವಾರದ ಪಂದ್ಯ 2011ರ ಪಂದ್ಯದಷ್ಟು ಮಹತ್ವದ್ದಲ್ಲದಿದ್ದರೂ, ಎರಡೂ ತಂಡಗಳು ತಮ್ಮದೇ ಕಾರಣಗಳನ್ನಿಟ್ಟುಕೊಂಡು ಗೆಲ್ಲಲು ಹೋರಾಡಲಿವೆ.

ಆಡಿರುವ ಆರೂ ಪಂದ್ಯಗಳನ್ನು ಗೆದ್ದಿರುವ ಭಾರತ, ಈ ಪಂದ್ಯವನ್ನೂ ಗೆದ್ದರೆ ಸೆಮಿಫೈನಲ್ ಪ್ರವೇಶ ಅಧಿಕೃತಗೊಳ್ಳಲಿದೆ. ಇದಾದ ಮೇಲೆ ಬಲಿಷ್ಠ ದಕ್ಷಿಣ ಆಫ್ರಿಕಾವನ್ನು ಎದುರಿಸಲಿರುವ ಭಾರತಕ್ಕೆ ಕೊನೆಯ ಪಂದ್ಯದಲ್ಲಿ ನೆದರ್‌ಲೆಂಡ್ಸ್ ಎದುರಾಗಲಿದೆ. ಕೊನೆವರೆಗೂ ಕಾಯದೆ ಲಂಕಾ ವಿರುದ್ಧವೇ ಗೆದ್ದು ಸೆಮೀಸ್ ಸ್ಥಾನ ಖಚಿತಪಡಿಸಿಕೊಳ್ಳುವುದು ಟೀಂ ಇಂಡಿಯಾದ ಗುರಿ. 

ಮತ್ತೊಂದೆಡೆ ಲಂಕಾಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯ. 6 ಪಂದ್ಯಗಳಲ್ಲಿ ಕೇವಲ 2ರಲ್ಲಿ ಗೆದ್ದಿರುವ ಲಂಕಾ ಸೆಮೀಸ್ ರೇಸ್‌ನಲ್ಲಿ ಉಳಿಯಬೇಕಿದ್ದರೆ ಈ ಪಂದ್ಯವನ್ನು ಗೆಲ್ಲಲೇಬೇಕು. ಭಾರತಕ್ಕೆ ಬಹುತೇಕ ಯಾವ ತಂಡದಿಂದಲೂ ಸಂಪೂರ್ಣವಾಗಿ ಕಠಿಣ ಸವಾಲು ಎದುರಾಗಿಲ್ಲ. ಎಲ್ಲಾ ಪಂದ್ಯಗಳಲ್ಲೂ ಕೆಲವೊಂದು ಸಂದರ್ಭಗಳಲ್ಲಷ್ಟೇ ಭಾರತ ಹಿನ್ನಡೆ ಕಂಡಿದೆ ಹೊರತು, ಹೆಚ್ಚು ಸಮಯ ತಾನೇ ಎದುರಾಳಿಯ ಮೇಲೆ ಹಿಡಿತ ಸಾಧಿಸಿದೆ. ಆದರೂ ಸೆಮಿಫೈನಲ್‌ಗೂ ಮುನ್ನ ಕೆಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದ ಅನಿವಾರ್ಯತೆ ಟೀಂ ಇಂಡಿಯಾಗಿದೆ.

ನ್ಯೂಜಿಲೆಂಡ್ ವಿರುದ್ದ ಸೌತ್ ಆಫ್ರಿಕಾ ಗೆಲುವು ಸಂಭ್ರಮಿಸಿದ ಪಾಕ್, ಸೆಮಿಫೈನಲ್ ಆಸೆ ಜೀವಂತ!

ಅನಾರೋಗ್ಯದ ಕಾರಣ ಮೊದಲೆರಡು ಪಂದ್ಯಗಳನ್ನು ತಪ್ಪಿಸಿಕೊಂಡಿದ್ದ ಶುಭ್‌ಮನ್ ಗಿಲ್, ತಂಡಕ್ಕೆ ಮರಳಿದ ಬಳಿಕ ಕೇವಲ ಒಂದು ಅರ್ಧಶತಕ ಬಾರಿಸಿದ್ದಾರೆ. ಸುಲಭವಾಗಿ ವಿಕೆಟ್ ಕೈಚೆಲ್ಲುತ್ತಿರುವ ಗಿಲ್, ಹೆಚ್ಚು ಜವಾಬ್ದಾರಿಯಿಂದ ಆಡಬೇಕಿದೆ. ಶ್ರೇಯಸ್ ಅಯ್ಯರ್ ಕೂಡ ಕೆಲ ಸನ್ನಿವೇಶಗಳಲ್ಲಿ ಬೇಜವಾಬ್ದಾರಿತನದಿಂದ ಔಟಾಗಿದ್ದು, ಅವರೂ ಸಹ ತಮ್ಮ ಸುಧಾರಿತ ಆಟವಾಡಬೇಕಿದೆ. ಹಾರ್ದಿಕ್ ಪಾಂಡ್ಯ ಅನುಪಸ್ಥಿತಿ ತಂಡವನ್ನು ಕಾಡದಿರಲು ಮೊಹಮದ್ ಶಮಿ ಬೌಲಿಂಗ್‌ನಲ್ಲಿ ತೋರುತ್ತಿರುವ ಅಭೂತಪೂರ್ವ ಪ್ರದರ್ಶನ ಕಾರಣ. ಆದರೆ ಶಮಿ ಅತಿಯಾಗಿ ದಣಿಯದಂತೆ ನೋಡಿಕೊಳ್ಳುವ ಹೊಣೆ ತಂಡದ ಆಡಳಿತದ ಮೇಲಿದೆ. ಜಸ್‌ಪ್ರೀತ್ ಬುಮ್ರಾ ಸಹ ನಾಕೌಟ್ ಪಂದ್ಯಗಳಿಗೆ ಸಂಪೂರ್ಣ ಫಿಟ್ ಆಗಿ ಇರಬೇಕಿದ್ದು, ಲಂಕಾ ವಿರುದ್ಧ ಭಾರತ ಗೆದ್ದರೆ, ಕೊನೆಯ 2 ಪಂದ್ಯಗಳಲ್ಲಿ ಕೆಲ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲು ಅನುಕೂಲವಾಗಲಿದೆ.

ಈ ವಿಶ್ವಕಪ್‌ನಲ್ಲಿ ಭಾರತ ಪರ ಗರಿಷ್ಠ ರನ್ ಕಲೆಹಾಕಿರುವ ನಾಯಕ ರೋಹಿತ್ ತಮ್ಮ ತವರು ಮೈದಾನದಲ್ಲಿ ಆರ್ಭಟಿಸಲು ಕಾಯುತ್ತಿದ್ದಾರೆ. 6 ಪಂದ್ಯಗಳಲ್ಲಿ ರೋಹಿತ್ 66.33ರ ಸರಾಸರಿಯಲ್ಲಿ 1 ಶತಕ, 2 ಅರ್ಧಶತಕಗಳೊಂದಿಗೆ 398 ರನ್ ಕಲೆಹಾಕಿದ್ದಾರೆ. ಕಳೆದ ಪಂದ್ಯದಲ್ಲಿ ಸೊನ್ನೆಗೆ ಔಟಾಗಿದ್ದ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ದೊಡ್ಡ ಸ್ಕೋರ್ ಮೇಲೆ ಕಣ್ಣಿಟ್ಟಿದ್ದಾರೆ. 

ನ್ಯೂಜಿಲೆಂಡ್ ವಿರುದ್ದ ಸೌತ್ ಆಫ್ರಿಕಾ ಗೆಲುವು ಸಂಭ್ರಮಿಸಿದ ಪಾಕ್, ಸೆಮಿಫೈನಲ್ ಆಸೆ ಜೀವಂತ!

ಮತ್ತೊಂದೆಡೆ ಗಾಯಾಳುಗಳ ಸಮಸ್ಯೆ ಲಂಕಾವನ್ನು ಬಲವಾಗಿ ಕಾಡುತ್ತಿದ್ದು, ಇರುವ ಸಂಪನ್ಮೂಲಗಳಿಂದಲೂ ನಿರೀಕ್ಷಿತ ಯಶಸ್ಸು ಸಿಗುತ್ತಿಲ್ಲ. ಸ್ಥಿರತೆಯ ಕೊರತೆಯೂ ತಂಡದ ಈ ಸ್ಥಿತಿಗೆ ಕಾರಣ. ಅದರಲ್ಲೂ ಕಳೆದ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧದ ಸೋಲು ತಂಡವನ್ನು ಮಾನಸಿಕವಾಗಿ ಕುಗ್ಗಿಸಿರುವುದು ಸುಳ್ಳಲ್ಲ. ಆದರೂ ಪ್ರತಿಭಾನ್ವಿತ ಆಟಗಾರರನ್ನು ಹೊಂದಿರುವ ಸಿಂಹಳೀಯ ಪಡೆಯನ್ನು ಭಾರತ ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ.

ಲಂಕಾ ವಿರುದ್ಧ ಈ ವರ್ಷ 5 ಬಾರಿ ಗೆದ್ದಿದೆ ಭಾರತ!

ಲಂಕಾ ವಿರುದ್ಧ 2023ರಲ್ಲಿ ಭಾರತ 5 ಏಕದಿನ ಪಂದ್ಯಗಳನ್ನಾಡಿದ್ದು, ಐದರಲ್ಲೂ ಜಯಭೇರಿ ಬಾರಿಸಿದೆ. ವಿಶ್ವಕಪ್‌ಗೂ ಮುನ್ನ ನಡೆದ ಏಷ್ಯಾಕಪ್‌ನ ಫೈನಲ್‌ನಲ್ಲಿ ಲಂಕಾವನ್ನು ಭಾರತ ಕೇವಲ 50 ರನ್‌ಗೆ ಆಲೌಟ್ ಮಾಡಿ, 10 ವಿಕೆಟ್‌ಗಳಿಂದ ಗೆದ್ದಿತ್ತು.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್ ಶರ್ಮಾ(ನಾಯಕ), ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

ಶ್ರೀಲಂಕಾ: ಪಥುಮ್ ನಿಸ್ಸಾಂಕ, ದೀಮುತ್ ಕರುಣರತ್ನೆ, ಕುಸಾಲ್ ಮೆಂಡೀಸ್(ನಾಯಕ), ಸಮರವಿಕ್ರಮ, ಚರಿತ್ ಅಸಲಂಕ, ಧನಂಜಯ ಡಿ ಸಿಲ್ವಾ/ವೆಲ್ಲಲಗೆ, ಏಂಜಲೋ ಮ್ಯಾಥ್ಯೂಸ್, ದುಸ್ಮಂತ ಚಮೀರಾ, ಮಹೀಶ್ ತೀಕ್ಷಣ. ಕಸುನ್ ರಜಿತಾ, ಮಧುಶಂಕ.

ಪಂದ್ಯ ಆರಂಭ: ಮಧ್ಯಾಹ್ನ 2 ಗಂಟೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ+ ಹಾಟ್‌ಸ್ಟಾರ್.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸೈಲೆಂಟ್ ಆದ ಸೌತ್ ಆಫ್ರಿಕಾ , 74 ರನ್‌ಗೆ ಆಲೌಟ್ ಮಾಡಿ 101 ರನ್ ಗೆಲುವು ದಾಖಲಿಸಿದ ಭಾರತ
100 ಸಿಕ್ಸರ್ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ, ಸೌತ್ ಆಫ್ರಿಕಾಗೆ 176 ರನ್ ಟಾರ್ಗೆಟ್