ಆಸೀಸ್ ಬಲಿಷ್ಠವಾಗಿಯೇ ತೋರುತ್ತಿದ್ದರೂ ಕಳೆದ ಕೆಲ ಪಂದ್ಯಗಳ ಫಲಿತಾಂಶ ತಂಡದ ಆತ್ಮವಿಶ್ವಾಸ ತೀರಾ ಕುಗ್ಗಿಸಿದೆ. ವಿಶ್ವಕಪ್‌ಗೆ ಕೆಲ ದಿನಗಳ ಮೊದಲು ದ.ಆಫ್ರಿಕಾ ವಿರುದ್ಧವೇ ಹ್ಯಾಟ್ರಿಕ್ ಸೋಲು ಕಂಡಿತ್ತು.
ಲಖನೌ(ಅ.12): ಭಾರತದ ವಿರುದ್ಧದ ಸೋಲಿನೊಂದಿಗೆ ವಿಶ್ವಕಪ್ ಅಭಿಯಾನ ಆರಂಭಿಸಿರುವ ದಾಖಲೆಯ 5 ಬಾರಿ ಚಾಂಪಿಯನ್ ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ವಿರುದ್ಧ ದೊಡ್ಡ ಗೆಲುವಿನೊಂದಿಗೆ ಟೂರ್ನಿಗೆ ಕಾಲಿರಿಸಿರುವ ದಕ್ಷಿಣ ಆಫ್ರಿಕಾ ತಂಡಗಳು ಗುರುವಾರ ಹೈವೋಲ್ಟೇಜ್ ಪಂದ್ಯದಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. ಪಂದ್ಯಕ್ಕೆ ಲಖನೌ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.
ಆಸೀಸ್ ಬಲಿಷ್ಠವಾಗಿಯೇ ತೋರುತ್ತಿದ್ದರೂ ಕಳೆದ ಕೆಲ ಪಂದ್ಯಗಳ ಫಲಿತಾಂಶ ತಂಡದ ಆತ್ಮವಿಶ್ವಾಸ ತೀರಾ ಕುಗ್ಗಿಸಿದೆ. ವಿಶ್ವಕಪ್‌ಗೆ ಕೆಲ ದಿನಗಳ ಮೊದಲು ದ.ಆಫ್ರಿಕಾ ವಿರುದ್ಧವೇ ಹ್ಯಾಟ್ರಿಕ್ ಸೋಲು ಕಂಡಿತ್ತು. ಭಾರತ ವಿರುದ್ಧದ ವಿಶ್ವಕಪ್ ಪಂದ್ಯದಲ್ಲೂ ದಿಢೀರ್ ಬ್ಯಾಟಿಂಗ್ ವೈಫಲ್ಯಕ್ಕೊಳಗಾಗಿದ್ದು, ಬೌಲರ್‌ಗಳು ಕೂಡಾ ನಿರೀಕ್ಷೆ ಉಳಿಸಿಕೊಂಡಿರಲಿಲ್ಲ. ಹೀಗಾಗಿ ಈ ಪಂದ್ಯದಲ್ಲಿ ದ.ಆಫ್ರಿಕಾದ ಬಿಗ್ ಹಿಟ್ಟರ್‌ಗಳಿಂದ ಆಸೀಸ್ ಬೌಲರ್‌ಗಳಿಗೆ ದೊಡ್ಡ ಸವಾಲು ಎದುರಾಗುವುದಂತೂ ಖಚಿತ. ಸದ್ಯ ಆಲ್ರೌಂಡರ್ ಸ್ಟೋಯ್ನಿಸ್ ಸಂಪೂರ್ಣ ಫಿಟ್ ಆಗಿದ್ದು, ಲಯದ ಸಮಸ್ಯೆ ಎದುರಿಸುತ್ತಿರುವ ಕ್ಯಾಮರೂನ್ ಗ್ರೀನ್
ಬದಲು ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
undefined
ವಿಶ್ವಕಪ್‌ನಲ್ಲಿ ಗರಿಷ್ಠ ರನ್: ಸಚಿನ್ ದಾಖಲೆ ನುಚ್ಚುನೂರು ಮಾಡಿದ ಕಿಂಗ್ ಕೊಹ್ಲಿ..!
ಮತ್ತೊಂದೆಡೆ ಸ್ಫೋಟಕ ಬ್ಯಾಟಿಂಗ್ ಮೂಲಕವೇ ಗಮನ ಸೆಳೆಯುತ್ತಿರುವ ದ.ಆಫ್ರಿಕಾ ಮತ್ತೊಮ್ಮೆ ಅಬ್ಬರಿಸಲು ಕಾಯುತ್ತಿದೆ. ಟೂರ್ನಿಗೆ ಮುನ್ನ ಆಸೀಸ್ ವಿರುದ್ಧ ತವರಲ್ಲಿ ಸರಣಿ ಆಡಿದ್ದ ದ.ಆಫ್ರಿಕಾ, ಕೊನೆ 3 ಪಂದ್ಯಗಳಲ್ಲಿ ಕ್ರಮವಾಗಿ 338, 416 ಮತ್ತು 315 ರನ್ ಗಳಿಸಿತ್ತು. ಇನ್ನು ಲಂಕಾ ವಿರುದ್ಧ ಆರಂಭಿಕ ಪಂದ್ಯದಲ್ಲಿ ಬರೋಬ್ಬರಿ 428 ರನ್ ಚಚ್ಚಿತ್ತು. ಕ್ವಿಂಟನ್ ಡಿ ಕಾಕ್, ಡುಸ್ಸೆನ್, ಏಡನ್ ಮಾರ್ಕ್‌ರಮ್, ಕ್ಲಾಸೆನ್, ಮಿಲ್ಲರ್ ಎಲ್ಲರೂ ಅಭೂತಪೂರ್ವ ಲಯದಲ್ಲಿದ್ದು, ಮತ್ತೊಮ್ಮೆ ಸ್ಫೋಟಕ ಆಡವಾಡಿ ತಂಡಕ್ಕೆ ಸತತ 2ನೇ ಗೆಲುವು ತಂದುಕೊಡುವ ನಿರೀಕ್ಷೆಯಲ್ಲಿದ್ದಾರೆ. ಆಸೀಸ್ ಬ್ಯಾಟರ್ ಗಳು ಸ್ಪಿನ್ನರ್‌ಗಳ ವಿರುದ್ಧ ಪರದಾಡುತ್ತಿರುವ ಕಾರಣ ಹರಿಣ ಪಡೆ ಹೆಚ್ಚುವರಿ ಸ್ಪಿನ್ನರ್‌ನೊಂದಿಗೆ ಕಣಕ್ಕಿಳಿಯಲು ನಿರ್ಧರಿಸಬಹುದು. ಹೀಗಾದರೆ ಗೋಟ್ಜೀ ಬದಲು ತಬ್ರೇಜ್ ಶಮ್ಸಿಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚು.
ICC World Cup 2023 ಭಾರತ-ಪಾಕಿಸ್ತಾನ ಪಂದ್ಯಕ್ಕೆ ಮುನ್ನ ಅದ್ಧೂರಿ ಸಮಾರಂಭ?
ಸಂಭವನೀಯ ಆಟಗಾರರ ಪಟ್ಟಿ:
ಆಸ್ಟ್ರೇಲಿಯಾ:
ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್, ಮಾರ್ನಸ್ ಲಬುಶೇನ್, ಗ್ಲೆನ್ ಮ್ಯಾಕ್ಸ್‌ವೆಲ್, ಅಲೆಕ್ಸ್ ಕೇರಿ, ಮಾರ್ಕಸ್ ಸ್ಟೋನಿಸ್/ಕ್ಯಾಮರೋನ್ ಗ್ರೀನ್, ಪ್ಯಾಟ್ ಕಮಿನ್ಸ್(ನಾಯಕ), ಮಿಚೆಲ್ ಸ್ಟಾರ್ಕ್, ಆಡಂ ಜಂಪಾ, ಜೋಶ್ ಹೇಜಲ್‌ವುಡ್.
ದಕ್ಷಿಣ ಆಫ್ರಿಕಾ:
ಕ್ವಿಂಟನ್ ಡಿ ಕಾಕ್, ತೆಂಬಾ ಬವುಮಾ(ನಾಯಕ), ವ್ಯಾನ್ ಡರ್ ಡುಸೇನ್, ಏಯ್ಡನ್ ಮಾರ್ಕ್‌ರಮ್, ಹೆನ್ರಿಚ್ ಕ್ಲಾಸೇನ್, ಡೇವಿಡ್ ಮಿಲ್ಲರ್, ಮಾರ್ಕೊ ಯಾನ್ಸನ್, ತಬ್ರೀಜ್ ಶಮ್ಸಿ, ಕೇಶವ್ ಮಹಾರಾಜ್, ಕಗಿಸೋ ರಬಾಡ, ಲುಂಗಿ ಎಂಗಿಡಿ.
ಪಂದ್ಯ ಆರಂಭ: ಮಧ್ಯಾಹ್ನ 2ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ+ ಹಾಟ್‌ಸ್ಟಾರ್.