ವಿರಾಟ್ ಕೊಹ್ಲಿ ಸದ್ಯ 53 ಇನ್ನಿಂಗ್ಸಲ್ಲಿ 2311 ರನ್ ಕಲೆಹಾಕಿ ಮೊದಲ ಸ್ಥಾನಕ್ಕೇರಿದ್ದಾರೆ. ಸಚಿನ್ ತೆಂಡುಲ್ಕರ್ 44 ಇನ್ನಿಂಗ್ಸಲ್ಲಿ 2278 ರನ್ ಚಚ್ಚಿದ್ದರು. ಇನ್ನು ಶ್ರೀಲಂಕಾದ ದಿಗ್ಗಜ ವಿಕೆಟ್ ಕೀಪರ್ ಬ್ಯಾಟರ್ ಕುಮಾರ ಸಂಗಕ್ಕರ 65 ಇನ್ನಿಂಗ್ಸ್‌ಗಳಲ್ಲಿ 2,193 ರನ್‌ಗಳೊಂದಿಗೆ 3ನೇ ಸ್ಥಾನದಲ್ಲಿದ್ದರೆ, 65 ಇನ್ನಿಂಗ್ಸಲ್ಲಿ 2,151 ರನ್ ಕಲೆಹಾಕಿರುವ ಕ್ರಿಸ್ ಗೇಲ್ 4ನೇ ಸ್ಥಾನದಲ್ಲಿದ್ದಾರೆ.
ನವದೆಹಲಿ(ಅ.12): ಏಕದಿನ ವಿಶ್ವಕಪ್‌ನಲ್ಲಿ ಅತಿಹೆಚ್ಚು ರನ್ ಬಾರಿಸಿದ ದಾಖಲೆ ವಿರಾಟ್ ಕೊಹ್ಲಿ ಹೆಸರಿಗೆ ಸೇರಿದೆ. ಟೀಂ ಇಂಡಿಯಾ ರನ್ ಮಷೀನ್ ಎಂದೇ ಗುರುತಿಸಿಕೊಂಡಿರುವ ವಿರಾಟ್ ಕೊಹ್ಲಿ, ಆಫ್ಘಾನಿಸ್ತಾನ ಎದುರಿನ ಪಂದ್ಯದಲ್ಲಿ ಅಜೇಯ 55 ರನ್ ಬಾರಿಸುವ ಮೂಲಕ ಸಚಿನ್ ತೆಂಡುಲ್ಕರ್‌ರ ದಾಖಲೆ ಮುರಿದರು.
ವಿರಾಟ್ ಕೊಹ್ಲಿ ಸದ್ಯ 53 ಇನ್ನಿಂಗ್ಸಲ್ಲಿ 2311 ರನ್ ಕಲೆಹಾಕಿ ಮೊದಲ ಸ್ಥಾನಕ್ಕೇರಿದ್ದಾರೆ. ಸಚಿನ್ ತೆಂಡುಲ್ಕರ್ 44 ಇನ್ನಿಂಗ್ಸಲ್ಲಿ 2278 ರನ್ ಚಚ್ಚಿದ್ದರು. ಇನ್ನು ಶ್ರೀಲಂಕಾದ ದಿಗ್ಗಜ ವಿಕೆಟ್ ಕೀಪರ್ ಬ್ಯಾಟರ್ ಕುಮಾರ ಸಂಗಕ್ಕರ 65 ಇನ್ನಿಂಗ್ಸ್‌ಗಳಲ್ಲಿ 2,193 ರನ್‌ಗಳೊಂದಿಗೆ 3ನೇ ಸ್ಥಾನದಲ್ಲಿದ್ದರೆ, 65 ಇನ್ನಿಂಗ್ಸಲ್ಲಿ 2,151 ರನ್ ಕಲೆಹಾಕಿರುವ ಕ್ರಿಸ್ ಗೇಲ್ 4ನೇ ಸ್ಥಾನದಲ್ಲಿದ್ದಾರೆ.
ಏಕದಿನ ರ್‍ಯಾಂಕಿಂಗ್: 7ನೇ ಸ್ಥಾನಕ್ಕೇರಿದ ವಿರಾಟ್ ಕೊಹ್ಲಿ
ದುಬೈ: ಭಾರತದ ತಾರಾ ಆಟಗಾರ ವಿರಾಟ್ ಕೊಹ್ಲಿ ಐಸಿಸಿ ಏಕದಿನ ರ್‍ಯಾಂಕಿಂಗ್‌ನಲ್ಲಿ 7ನೇ ಸ್ಥಾನಕ್ಕೇರಿದ್ದಾರೆ. ಬುಧವಾರ ಪ್ರಕಟಗೊಂಡ ರ್‍ಯಾಂಕಿಂಗ್ ಪಟ್ಟಿಯಲ್ಲಿ ಕೊಹ್ಲಿ ಒಂದು ಸ್ಥಾನ ಪ್ರಗತಿ ಸಾಧಿಸಿದರು. ಇದೇ ವೇಳೆ ವಿಶ್ವಕಪ್‌ನ ಮೊದಲೆರಡು ಪಂದ್ಯಗಳಿಗೆ ಗೈರಾದ ಹೊರತಾಗಿಯೂ ಶುಭ್‌ಮನ್ ಗಿಲ್ 830 ರೇಟಿಂಗ್ ಅಂಕಗಳೊಂದಿಗೆ 2ನೇ ಸ್ಥಾನ ಕಾಯ್ದುಕೊಂಡಿದ್ದಾರೆ.
ವಿಶ್ವಕಪ್‌ನಲ್ಲಿ ಭಾರತಕ್ಕೆ ಸತತ 2ನೇ ಗೆಲುವು, ರೋಹಿತ್ ಅಬ್ಬರಕ್ಕೆ ಶರಣಾದ ಆಫ್ಘಾನಿಸ್ತಾನ!
ಅವರು ಸದ್ಯ ನಂ.1 ಸ್ಥಾನದಲ್ಲಿರುವ ಪಾಕಿಸ್ತಾನದ ಬಾಬರ್ ಆಜಂ(835 ಅಂಕ)ಗಿಂತ ಕೇವಲ 5 ಅಂಕಗಳಿಂದ ಹಿಂದಿದ್ದಾರೆ. ಇನ್ನು, ಬೌಲರ್‌ಗಳ ಪಟ್ಟಿಯಲ್ಲಿ ಸ್ಪಿನ್ನರ್ ಕುಲ್ದೀಪ್ ಯಾದವ್ 8ನೇ ಸ್ಥಾನಕ್ಕೇರಿದ್ದು, ವೇಗಿ ಮೊಹಮದ್ ಸಿರಾಜ್ 2ನೇ ಸ್ಥಾನದಲ್ಲೇ ಮುಂದುವರಿದಿದ್ದಾರೆ.
ವಿಶ್ವಕಪ್‌ನಲ್ಲಿ 7ನೇ ಶತಕ: ಸಚಿನ್ ದಾಖಲೆ ಮುರಿದ ರೋಹಿತ್!
ಆಫ್ಘನ್ ವಿರುದ್ಧದ ಪಂದ್ಯದಲ್ಲಿ ರೋಹಿತ್‌ರ ಶತಕ ಏಕದಿನ ವಿಶ್ವಕಪ್‌ನಲ್ಲಿ ಅವರಿಂದ ದಾಖಲಾದ 7ನೇ ಶತಕ. ಇದರೊಂದಿಗೆ ವಿಶ್ವಕಪ್ ಇತಿಹಾಸದಲ್ಲೇ ಅತಿಹೆಚ್ಚು ಶತಕ ಬಾರಿಸಿದ ಆಟಗಾರ ಎನ್ನುವ ದಾಖಲೆಗೆ ರೋಹಿತ್ ಪಾತ್ರರಾಗಿದ್ದಾರೆ. ಕೇವಲ 19 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆಗೈದ ರೋಹಿತ್, 44 ಇನ್ನಿಂಗ್ಸಲ್ಲಿ 6 ಶತಕ ಬಾರಿಸಿರುವ ಸಚಿನ್ ತೆಂಡುಲ್ಕರ್‌ರ ದಾಖಲೆ ಮುರಿದಿದ್ದಾರೆ. ಆಸ್ಟ್ರೇಲಿಯಾದ ಲಂಕಾದ ಕುಮಾರ್ ಸಂಗಕ್ಕರ (35 ಇನ್ನಿಂಗ್ಸ್) ಹಾಗೂ ರಿಕಿ ಪಾಂಟಿಂಗ್(42 ಇನ್ನಿಂಗ್ಸ್) ತಲಾ 5 ಶತಕ ಬಾರಿಸಿದ್ದಾರೆ.
ಆಫ್ಘಾನ್ ವಿರುದ್ಧ ಭರ್ಜರಿ ಸೆಂಚುರಿ;ಸಚಿನ್, ಪಾಂಟಿಂಗ್ ದಾಖಲೆ ಮುರಿದ ರೋಹಿತ್ ಶರ್ಮಾ!
63 ಎಸೆತ
ಏಕದಿನದಲ್ಲಿ ಅತಿವೇಗದ ಶತಕ ಬಾರಿಸಿದ ಭಾರತೀಯ ರೋಹಿತ್. ಕಪಿಲ್ ದೇವ್ ಹೆಸರಲ್ಲಿದ್ದ ದಾಖಲೆ ಮುರಿದ ರೋಹಿತ್. ಕಪಿಲ್ 1983ರ ವಿಶ್ವಕಪ್‌ನಲ್ಲಿ ಜಿಂಬಾಬ್ವೆ ವಿರುದ್ಧ 72 ಎಸೆತದಲ್ಲಿ ಶತಕ ಸಿಡಿಸಿದ್ದರು.
19 ಇನ್ನಿಂಗ್ಸ್
ಏಕದಿನ ವಿಶ್ವಕಪ್‌ನಲ್ಲಿ ಅತಿವೇಗವಾಗಿ 1000 ರನ್ ಮೈಲಿಗಲ್ಲು ತಲುಪಿದ ಭಾರತೀಯ ಬ್ಯಾಟರ್ ರೋಹಿತ್. ಸಚಿನ್ 20, ಗಂಗೂಲಿ 21 ಇನ್ನಿಂಗ್ಸ್ ತೆಗೆದುಕೊಂಡಿದ್ದರು. ಒಟ್ಟಾರೆಯಾಗಿ ಜಂಟಿ ಮೊದಲ ಸ್ಥಾನಕ್ಕೆ ರೋಹಿತ್. ವಾರ್ನರ್ 19 ಇನ್ನಿಂಗ್ಸಲ್ಲಿ 1000 ರನ್ ಪೂರೈಸಿದ್ದರು.