ಪಾಕಿಸ್ತಾನ ಬ್ಯಾಟ್ಸ್‌ಮನ್ ಮೊಹಮ್ಮದ್ ರಿಜ್ವಾನ್ ಇತ್ತೀಚೆಗೆ ಶತಕ ಸಿಡಿಸಿ ಗಾಜಾ ಜನರಿಗೆ ಅರ್ಪಿಸಿದ್ದರು. ಇದೀಗ ಪಾಕಿಸ್ತಾನ ವಿರುದ್ಧದ ಗೆಲುವನ್ನು ಕ್ರಿಕೆಟ್ ಅಭಿಮಾನಿಗಳು ಇಸ್ರೇಲ್ ಅಣ್ಣ ತಂಗಿಯರಿಗೆ ಅರ್ಪಿಸಿದ್ದಾರೆ.
ಅಹಮ್ಮದಾಬಾದ್(ಅ.14) ವಿಶ್ವಕಪ್ ಟೂನಿಯಲ್ಲಿ ಭಾರಿ ಕುತೂಹಲ, ನಿರೀಕ್ಷೆ ಮೂಡಿಸಿದ್ದ ಭಾರತ ಪಾಕಿಸ್ತಾನ ಪಂದ್ಯ ಮುಗಿದೆ. ಪಾಕಿಸ್ತಾನ ವಿರುದ್ಧ ಭಾರತ 7 ವಿಕೆಟ್ ಭರ್ಜರಿ ಗೆಲುವು ದಾಖಲಿಸಿದೆ. ಪಂದ್ಯ ಮುಗಿದರೂ ಸಂಭ್ರಮ ಮುಗಿದಿಲ್ಲ. ಇತ್ತ ಸಾಮಾಜಿಕ ಜಾಲತಾಣದಲ್ಲಿ ಸೇಡು ತೀರಿಸಿಕೊಳ್ಳುವುದು ಮುಗಿದಿಲ್ಲ. ಇತ್ತೀಚೆಗೆ ಪಾಕಿಸ್ತಾನ ಬ್ಯಾಟ್ಸ್‌ಮನ್ ಮೊಹಮ್ಮದ್ ರಿಜ್ವಾನ್ ಶತಕ ಸಿಡಿಸಿ ಗಾಜಾ ಜನರಿಗೆ ಅರ್ಪಣೆ ಎಂದಿದ್ದರು. ಇದು ಭಾರತೀಯರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಪಾಕಿಸ್ತಾನ ವಿರುದ್ಧದ ಗೆಲುವನ್ನು ಕೆಲ ಕ್ರಿಕೆಟ್ ಅಭಿಮಾನಿಗಳು ಇಸ್ರೇಲ್‌ಗೆ ಅರ್ಪಿಸಿದ್ದಾರೆ.
ಪಾಕಿಸ್ತಾನ ವಿರುದ್ಧ ಭಾರತ ಭರ್ಜರಿ ಗೆಲುವು ದಾಖಲಿಸುತ್ತಿದ್ದಂತೆ ಹಲವು ಕ್ರಿಕೆಟ್ ಅಭಿಮಾನಿಗಳು ಮೊಹಮ್ಮದ್ ರಿಜ್ವಾನ್‌ಗೆ ತಿರುಗೇಟು ನೀಡಿದ್ದಾರೆ. ರಿಜ್ವಾನ್ ತಮ್ಮ ಶತಕವನ್ನು ಗಾಜಾ ಜನರಿಗೆ ಅರ್ಪಿಸಿದ ಟ್ವೀಟ್‌ಗೆ ರಿಟ್ವೀಟ್ ಮಾಡಿರುವ ಕೆಲ ಅಭಿಮಾನಿಗಳು, ಈ ಗೆಲುವು ನನ್ನ ಇಸ್ರೇಲ್ ಸಹೋದರ-ಸಹೋದರಿಯರಿಗೆ ಹೆಸರಿಗೆ ಎಂದು ಟ್ವೀಟ್ ಮಾಡಿದ್ದಾರೆ.
यह जीत इसराइली भाइयों और बहनों के नाम! https://t.co/8xVJFzQk9p
— Sonu Nigam (@SonuNigamSingh)
IND vs PAK ಪಂದ್ಯದ ನಡುವೆ ಕಾಣಿಸಿಕೊಂಡ ಸ್ಟಾಂಡ್ ವಿಥ್ ಇಸ್ರೇಲ್ ಪ್ಲಕಾರ್ಡ್, ಪ್ರತಿಕ್ರಿಯಿಸಿದ ಸರ್ಕಾರ!
ಇಸ್ರೇಲ್ ಮೇಲೆ ಗಾಜಾದಿಂದ ಹಮಾಸ್ ಉಗ್ರರು ನಡೆಸಿದ ಭೀಕರ ದಾಳಿಗೆ ಪ್ರತಿಯಾಗಿ ಇಸ್ರೇಲ್ ಪ್ರತಿದಾಳಿ ನಡೆಸಿದೆ. ಉಗ್ರರನ್ನು ಟಾರ್ಗೆಟ್ ಮಾಡಿ ದಾಳಿ ನಡೆಸಲಾಗಿತ್ತು. ಆದರೆ ಅರಬ್ ರಾಷ್ಟ್ರಗಳು, ಮುಸ್ಲಿಂ ಸಂಘಟನೆಗಳು, ಭಾರತದ ಕೆಲ ಮುಸ್ಲಿಂ ಸಂಘಟನೆಗಳು ಇಸ್ರೇಲ್ ಉಗ್ರರ ಮೇಲೆ ನಡೆಸಿದ ದಾಳಿಯನ್ನು ಖಂಡಿಸಿತ್ತು. ಪ್ಯಾಲೆಸ್ತಿನ್ ಹಾಗೂ ಗಾಜಾ ಜನರ ಪರ ಬೆಂಬಲ ಘೋಷಿಸಿತ್ತು. ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಮೂಲಕ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯೂಹು ಜೊತೆ ಮಾತನಾಡಿ ಇಸ್ರೇಲ್‌ಗೆ ಬೆಂಬಲ ಘೋಷಿಸಿದ್ದರು. ಇದೇ ವೇಳೆ ಭಯೋತ್ಪಾದನೆ ವಿರುದ್ಧ ಭಾರತ ಗಟ್ಟಿಯಾಗಿ ಧ್ವನಿ ಎತ್ತಲಿದೆ ಎಂದಿದ್ದರು.
ಭಾರತ, ಅಮೆರಿಕ ಸೇರಿದಂತೆ ಹಲವು ದೇಶಗಳು ಇಸ್ರೇಲ್‌ಗೆ ಬೆಂಬಲ ಸೂಚಿಸಿದರೆ ಮತ್ತೆ ಕೆಲ ದೇಶಗಳು ಪ್ಯಾಲೆಸ್ತಿನ್ ಪರ, ಹಮಾಸ್ ಉಗ್ರರ ಪರ ಬೆಂಬಲ ನೀಡಿತ್ತು. ಈ ಬೆಳವಣಿಗೆ ನಡುವೆ ಏಕದಿನ ವಿಶ್ವಕಪ್‌ನ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ತಾವು ಸಿಡಿಸಿದ ಹೋರಾಟದ ಶತಕವನ್ನು ಪಾಕಿಸ್ತಾನದ ತಾರಾ ಬ್ಯಾಟರ್ ಮೊಹಮದ್ ರಿಜ್ವಾನ್ ಗಾಜಾದ ಜನರಿಗೆ ಅರ್ಪಿಸಿದ್ದರು. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ಈ ಶತಕ ಗಾಜಾದ ನನ್ನ ಸಹೋದರ, ಸಹೋದರಿಯರಿಗೆ ಅರ್ಪಣೆ’ ಎಂದಿದ್ದರು. ಆದರೆ ರಿಜ್ವಾನ್ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಹಲವರು ಭಾರಿ ಟೀಕೆ ವ್ಯಕ್ತಪಡಿಸಿದ್ದು, ರಿಜ್ವಾನ್‌ರನ್ನು ವಿಶ್ವಕಪ್‌ನಿಂದ ಹೊರಹಾಕುವಂತೆ ಆಗ್ರಹಿಸಿದ್ದರು. ಪಾಕಿಸ್ತಾನ ತಂಡವನ್ನೇ ಟೂರ್ನಿಯಿಂದ ಹೊರ ಕಳುಹಿಸಬೇಕು ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು.
IND vs PAK ಪೆವಿಲಿಯನ್ ರೈಡ್ ಸಹಾಯಕ್ಕಿದೆ ಹೆಕ್ಟರ್, ಪಾಕಿಸ್ತಾನ ಬ್ಯಾಟಿಂಗ್ ಕುಟುಕಿದ ಎಂಜಿ ಮೋಟಾರ್ಸ್!
ಹಲವರು ಅಭಿಮಾನಿಗಳು ಭಾರತ ಅಭೂತ ಪೂರ್ವ ಗೆಲುವನ್ನು ಇಸ್ರೇಲ್‌ಗೆ ಅರ್ಪಿಸಿದ್ದಾರೆ. ಇನ್ನು ನರೇಂದ್ರ ಮೋದಿ ಕ್ರೀಡಾಂಗಣಧಲ್ಲಿ ಅಭಿಯಾನಿಯೊಬ್ಬರು ಭಾರತ ಇಸ್ರೇಲ್ ಜೊತೆ ನಿಲ್ಲಲಿದೆ ಅನ್ನೋ ಪೋಸ್ಟರ್ ಹಿಡಿದು ಮಿಂಚಿದ್ದರು. ಈ ಫೋಟೋ ವೈರಲ್ ಆಗಿತ್ತು. ಇಸ್ರೇಲ್ ಸೇನೆ, ಇಸ್ರೇಲ್ ಸರ್ಕಾರ, ಇಸ್ರೇಲ್ ಇಂಟೆಲಿಜೆನ್ಸ್ ಮೋಸಾದ್ ಕೂಡ ಭಾರತದ ಅಭಿಮಾನಿಯ ಬೆಂಬಲಕ್ಕೆ ಧನ್ಯವಾದ ಹೇಳಿದೆ.