
ಗುವಾಹಟಿ(ಸೆ.30): ಐಸಿಸಿ ಏಕದಿನ ವಿಶ್ವಕಪ್‌ಗೂ ಮುನ್ನ ಶನಿವಾರ ಟೀಂ ಇಂಡಿಯಾ ತನ್ನ ಮೊದಲ ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ದ ಸೆಣಸಾಡಲಿದೆ. ಪಂದ್ಯಕ್ಕೆ ಗುವಾಹಟಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಇತ್ತೀಚೆಗಷ್ಟೇ ಏಷ್ಯಾಕಪ್ ಹಾಗೂ ಆಸ್ಟ್ರೇಲಿಯಾ ವಿರುದ್ದದ ತವರಿನ ಸರಣಿ ಗೆಲುವಿನ ಮೂಲಕ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ರೋಹಿತ್ ಶರ್ಮಾ ಪಡೆ, ಬಹುನಿರೀಕ್ಷಿತ ಟೂರ್ನಿಗೂ ಅಭ್ಯಾಸ ಪಂದ್ಯದ ಅಂತಿಮ ಹಂತದ ಸಿದ್ದತೆ ನಡೆಸಲು ಕಾತರದಲ್ಲಿದೆ.
ಭಾರತ ಕ್ರಿಕೆಟ್ ತಂಡವು ಎರಡನೇ ಅಭ್ಯಾಸ ಪಂದ್ಯದಲ್ಲಲಿ ನೆದರ್‌ಲೆಂಡ್ಸ್ ತಂಡವನ್ನು ಎದುರಿಸಲಿದ್ದು, ಈ ಪಂದ್ಯವು ಅಕ್ಟೋಬರ್ 03ರಂದು ತಿರುವನಂತಪುರಂನಲ್ಲಿ ನಡೆಯಲಿದೆ. ಇನ್ನು ಶನಿವಾರದ ಮತ್ತೊಂದು ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ನೆದರ್‌ಲೆಂಡ್ಸ್ ತಂಡಗಳು ಮುಖಾಮುಖಿಯಾಗಲಿವೆ.
Cricket World Cup: ಪಾಕಿಸ್ತಾನ ಸೇರಿದಂತೆ ಯಾವ ತಂಡದ ಆಟಗಾರರಿಗೂ 'ಬೀಫ್' ಖಾದ್ಯವಿಲ್ಲ!
ಅಶ್ವಿನ್ ಮೇಲೆ ನಿರೀಕ್ಷೆ: ಆಸ್ಟ್ರೇಲಿಯಾ ಎದುರಿನ ಮೊದಲೆರಡು ಏಕದಿನ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಕೊನೆಯ ಕ್ಷಣದಲ್ಲಿ ಭಾರತ ತಂಡದೊಳಗೆ ಸ್ಥಾನ ಗಿಟ್ಟಿಸಿಕೊಂಡ ರವಿಚಂದ್ರನ್ ಅಶ್ವಿನ್ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಭಾರತೀಯ ಪಿಚ್‌ನಲ್ಲಿ ಅಪಾಯಕಾರಿ ಸ್ಪಿನ್ನರ್ ಆಗಿರುವ ಅಶ್ವಿನ್, ಏಕದಿನ ಮಾದರಿಗೆ ಸಾಕಷ್ಟು ಸಮಯದ ಬಳಿಕ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ. ಇದೀಗ ಅಭ್ಯಾಸ ಪಂದ್ಯದಲ್ಲಿ ಅಶ್ವಿನ್ ಕಣಕ್ಕಿಳಿಯುತ್ತಾರಾ? ಕಣಕ್ಕಿಳಿದು ಯಾವ ರೀತಿಯ ಪ್ರಯೋಗ ನಡೆಸುತ್ತಾರೆ ಎನ್ನುವ ಕುತೂಹಲ ಜೋರಾಗಿದೆ.
ವಿಶ್ವಕಪ್‌ಗೆ ಭಾರತ ತಂಡ:
ರೋಹಿತ್ ಶರ್ಮಾ(ನಾಯಕ), ಹಾರ್ದಿಕ್ ಪಾಂಡ್ಯ(ಉಪನಾಯಕ), ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್‌ಪ್ರೀತ್ ಬುಮ್ರಾ, ಮೊಹಮದ್ ಸಿರಾಜ್, ಕುಲ್ದೀಪ್ ಯಾದವ್, ಮೊಹಮದ್ ಶಮಿ, ಆರ್.ಅಶ್ವಿನ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್.
ವಿಶ್ವಕಪ್‌ಗೆ ಟೀಂ ಇಂಡಿಯಾ ಆಯ್ಕೆ ಮಾಡುವಾಗ ಆದ ಎಡವಟ್ಟು ಗುರುತಿಸಿದ ಯುವರಾಜ್ ಸಿಂಗ್..!
ಭಾರತದ ಪಂದ್ಯ: ಮಧ್ಯಾಹ್ನ 2ಕ್ಕೆ
ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್, ಡಿಸ್ನಿ+ಹಾಟ್‌ಸ್ಟಾರ್
ಅಭ್ಯಾಸ ಪಂದ್ಯ: ಕಿವೀಸ್, ಬಾಂಗ್ಲಾದೇಶಕ್ಕೆ ಗೆಲುವು
ಹೈದರಾಬಾದ್: ಏಕದಿನ ವಿಶ್ವಕಪ್‌ಗೆ ಮೊದಲ ಅಭ್ಯಾಸ ಪಂದ್ಯಗಳಲ್ಲಿ ಪಾಕಿಸ್ತಾನ, ಶ್ರೀಲಂಕಾ ತಂಡಗಳು ಸೋಲನುಭವಿಸಿದೆ. ಇಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಪಾಕ್‌ಗೆ 5 ವಿಕೆಟ್ ಸೋಲು ಕಂಡಿತು. ಮೊದಲು ಬ್ಯಾಟ್ ಮಾಡಿದ ಪಾಕ್, ರಿಜ್ವಾನ್(103), ಆಜಂ(80), ಶಕೀಲ್(75)ರ ಆಕರ್ಷಕ ಆಟದ ನೆರವಿನಿಂದ 5 ವಿಕೆಟ್‌ಗೆ 345 ರನ್ ಗಳಿಸಿತು. ದೊಡ್ಡ ಗುರಿಯನ್ನು ಕಿವೀಸ್ --- ಓವರ್‌ಗಳಲ್ಲಿ - ವಿಕೆಟ್ ಕಳೆದುಕೊಂಡು ಬೆನ್ನತ್ತಿತು. ಗುವಾಹಟಿಯಲ್ಲಿ ನಡೆದ ಪಂದ್ಯದಲ್ಲಿ ಲಂಕಾವನ್ನು ಬಾಂಗ್ಲಾದೇಶ 7 ವಿಕೆಟ್‌ಗಳಿಂದ ಸೋಲಿಸಿತು. ಲಂಕಾ 49.1 ಓವರ್‌ಗಳಲ್ಲಿ 263ಕ್ಕೆ ಆಲೌಟಾದರೆ, ಬಾಂಗ್ಲಾ 42 ಓವರ್‌ಗಳಲ್ಲಿ ಜಯ ತನ್ನದಾಗಿಸಿಕೊಂಡಿತು. ತಿರುವನಂತಪುರಂನಲ್ಲಿ ನಡೆಯಬೇಕಿದ್ದ ದ.ಆಫ್ರಿಕಾ-ಅಫ್ಘಾನಿಸ್ತಾನ ನಡುವಿನ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.