ಆಫ್ಘಾನ್ ವಿರುದ್ಧ ಭರ್ಜರಿ ಸೆಂಚುರಿ;ಸಚಿನ್, ಪಾಂಟಿಂಗ್ ದಾಖಲೆ ಮುರಿದ ರೋಹಿತ್ ಶರ್ಮಾ!

By Suvarna News  |  First Published Oct 11, 2023, 8:11 PM IST

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ಸೆಂಚುರಿ ಸಿಡಿಸಿದ್ದಾರೆ. ಆಫ್ಘಾನಿಸ್ತಾನ ವಿರುದ್ಧ ರೋಹಿತ್ ಸೆಂಚುರಿಯಿಂದ ಹಲವು ದಾಖಲೆ ನಿರ್ಮಾಣವಾಗಿದೆ. ಸಚಿನ್ ತೆಂಡುಲ್ಕರ್,ರಿಕಿ ಪಾಂಟಿಂಗ್, ಸನತ್ ಜಯಸೂರ್ಯ ಸೇರಿದಂತೆ ಹಲವು ದಿಗ್ಗರ ದಾಖಲೆ ಪುಡಿ ಮಾಡಿದ್ದಾರೆ.
 


ದೆಹಲಿ(ಅ.11) ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ದಿಗ್ಗಜರ ದಾಖಲೆ ಪುಡಿ ಮಾಡಿದ್ದಾರೆ. ಆಫ್ಘಾನಿಸ್ತಾನ ವಿರುದ್ಧ ಪಂದ್ಯದಲ್ಲಿ ರೋಹಿತ್ ಶರ್ಮಾ ಶತಕ ಸಿಡಿಸಿ ಮಿಂಚಿದ್ದಾರೆ. ರೋಹಿತ್ ಶರ್ಮಾ 63 ಎಸೆತದಲ್ಲಿ ಶತಕ ಪೂರೈಸಿದ್ದಾರೆ. ಏಕದಿನದಲ್ಲಿ 31ನೇ ಸೆಂಚುರಿ ದಾಖಲಿಸಿದ ರೋಹಿತ್ ಶರ್ಮಾ, ಸಚಿನ್ ತೆಂಡೂಲ್ಕರ್, ರಿಕಿ ಪಾಟಿಂಗ್, ಸನತ್ ಜಯಸೂರ್ಯ ಸೇರಿದಂತೆ ಹಲವರ ದಾಖಲೆ ಪುಡಿ ಮಾಡಿದ್ದಾರೆ.

ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ಸೆಂಚುರಿ ಸಿಡಿಸಿದ ದಾಖಲೆ ಇದೀಗ ರೋಹಿತ್ ಶರ್ಮಾ ಪಾಲಾಗಿದೆ. ರೋಹಿತ್ ಶರ್ಮಾ ಇದೀಗ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 7ನೇ ಸೆಂಚುರಿ ದಾಖಲಿಸಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ 6 ಶತಕದ ಮೂಲಕ ಗರಿಷ್ಠ ಸೆಂಚುರಿ ದಾಖಲೆ ಬರೆದಿದ್ದ ಸಚಿನ್ ತೆಂಡೂಲ್ಕರ್ ಇದೀಗ 2ನೇ ಸ್ಥಾನಕ್ಕೆ ಕುಸಿದಿದ್ದಾರೆ.

Tap to resize

Latest Videos

Rohit Sharma: ಸಿಕ್ಸರ್‌ಗಳ ವಿಶ್ವದಾಖಲೆ ನಿರ್ಮಿಸಿದ ಹಿಟ್‌ಮ್ಯಾನ್‌!

ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ಸೆಂಚುರಿ
ರೋಹಿತ್ ಶರ್ಮಾ: 7 ಸೆಂಚುರಿ
ಸಚಿನ್ ತೆಂಡೂಲ್ಕರ್:6 ಸೆಂಚುರಿ
ರಿಕಿ ಪಾಟಿಂಗ್ :5 ಸೆಂಚುರಿ
ಕುಮಾರ್ ಸಂಗಕ್ಕಾರ:5 ಸೆಂಚುರಿ 

ಏಕದಿನದಲ್ಲಿ ಗರಿಷ್ಠ ಸೆಂಚುರಿ ದಾಖಲೆಯಲ್ಲಿ ಸಚಿನ್ ತೆಂಡೂಲ್ಕರ್ ಮೊದಲ ಸ್ಥಾನದಲ್ಲಿದ್ದಾರೆ. ಇದೀಗ ರೋಹಿತ್ ಶರ್ಮಾ 3ನೇ ಸ್ಥಾನದಲ್ಲಿದ್ದ ರಿಕಿ ಪಾಟಿಂಗ್ ಹಿಂದಿಕ್ಕಿದ್ದಾರೆ.

ಏಕದಿನದಲ್ಲಿ ಗರಿಷ್ಠ ಸೆಂಚುರಿ ದಾಖಲೆ
ಸಚಿನ್ ತೆಂಡೂಲ್ಕರ್: 49
ವಿರಾಟ್ ಕೊಹ್ಲಿ: 47
ರೋಹಿತ್ ಶರ್ಮಾ:31
ರಿಕಿ ಪಾಂಟಿಂಗ್: 30
ಸನತ್ ಜಯಸೂರ್ಯ: 28 

ಆರಂಭಿಕನಾಗಿ ಗರಿಷ್ಠ ಸೆಂಚುರಿ ದಾಖಲೆ
ಸಚಿನ್ ತೆಂಡೂಲ್ಕರ್ : 45
ರೋಹಿತ್ ಶರ್ಮಾ: 29
ಸನತ್ ಜಯಸೂರ್ಯ: 28
ಹಾಶಿಮ್ ಆಮ್ಲಾ: 27
ಕ್ರಿಸ್ ಗೇಲ್:25

ಹಶ್ಮತುಲ್ಲಾ ಶಾಹಿದಿ ನಾಯಕನ ಆಟ, ಭಾರತಕ್ಕೆ ಸವಾಲಿನ ಗುರಿ ನೀಡಿದ ಆಫ್ಘಾನ್‌..!

ವಿಶ್ವಕಪ್ ಟೂರ್ನಿಯಲ್ಲಿ ಅತೀ ವೇಗದ ಶತಕದ ದಾಖಲೆ
ಆ್ಯಡಿನ್ ಮರ್ಕ್ರಮ್(ಸೌತ್ ಆಫ್ರಿಕಾ) 49 ಎಸೆತದಲ್ಲಿ ಸೆಂಚುರಿ, 2023
ಕೇವಿನ್ ಒಬ್ರಿಯನ್(ಐರ್ಲೆಂಡ್) 50 ಎಸೆತದಲ್ಲಿ ಸೆಂಚುರಿ, 2011
ಗ್ಲೆನ್ ಮ್ಯಾಕ್ಸ್‌ವೆಲ್(ಆಸ್ಟ್ರೇಲಿಯಾ) 51 ಎಸೆತದಲ್ಲಿ ಸೆಂಚುರಿ, 2015
ಎಬಿ ಡಿವಿಲಿಯರ್ಸ್(ಸೌತ್ ಆಫ್ರಿಕಾ) 52 ಎಸೆತದಲ್ಲಿ ಸೆಂಚುರಿ, 2015
ಇಯಾನ್ ಮಾರ್ಗನ್(ಇಂಗ್ಲೆಂಡ್)57 ಎಸೆತದಲ್ಲಿ ಸೆಂಚುರಿ, 2019
ರೋಹಿತ್ ಶರ್ಮಾ(ಭಾರತ) 63 ಎಸೆತದಲ್ಲಿ ಸೆಂಚುರಿ, 2023

click me!