ಕಿವೀಸ್ ಇನ್ನಿಂಗ್ಸ್‌ನ 10ನೇ ಓವರ್ ವೇಳೆ ರೋಹಿತ್ ಚೆಂಡು ಹಿಡಿಯುವಾಗ ಜಾರಿ ಬಿದ್ದು, ಕೈಬೆರಳಿಗೆ ಸಣ್ಣ ಪ್ರಮಾಣದ ಗಾಯವಾದ ಕಾರಣ ಕೆಲ ಕಾಲ ಮೈದಾನದಿಂದ ಹೊರಗುಳಿಯುವಂತಾಯಿತು. ಅಲ್ಲದೆ ಮೈದಾನದಲ್ಲೇ ಔಟ್‌ಫೀಲ್ಡ್ ಬಗ್ಗೆ ರೋಹಿತ್ ಅಸಮಾಧಾನವನ್ನೂ ವ್ಯಕ್ತಪಡಿಸುತ್ತಿದ್ದ ದೃಶ್ಯ ಕಂಡುಬಂತು.
ಧರ್ಮಶಾಲಾ(ಅ.23): ವಿಶ್ವಕಪ್ ಆರಂಭದಲ್ಲೇ ವಿವಿಧ ದೇಶಗಳ ಆಟಗಾರರಿಂದ ಟೀಕೆಗೆ ಗುರಿಯಾಗಿದ್ದ ಧರ್ಮಶಾಲಾ ಕ್ರೀಡಾಂಗಣದ ಔಟ್‌ಫೀಲ್ಡ್ ಈಗ ರೋಹಿತ್ ಶರ್ಮಾ ಸೇರಿದಂತೆ ಭಾರತೀಯ ಕ್ರಿಕೆಟಿಗರ ಅಸಮಾಧಾನಕ್ಕೂ ಕಾರಣವಾಗಿದೆ. ಭಾನುವಾರದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತೀಯರು ಗಾಯದ ಭೀತಿಯಿಂದಲೇ ಫೀಲ್ಡ್ ಮಾಡಬೇಕಾದ ಅನಿವಾರ್ಯತೆ ಎದುರಾಯಿತು.
ಕಿವೀಸ್ ಇನ್ನಿಂಗ್ಸ್‌ನ 10ನೇ ಓವರ್ ವೇಳೆ ರೋಹಿತ್ ಚೆಂಡು ಹಿಡಿಯುವಾಗ ಜಾರಿ ಬಿದ್ದು, ಕೈಬೆರಳಿಗೆ ಸಣ್ಣ ಪ್ರಮಾಣದ ಗಾಯವಾದ ಕಾರಣ ಕೆಲ ಕಾಲ ಮೈದಾನದಿಂದ ಹೊರಗುಳಿಯುವಂತಾಯಿತು. ಅಲ್ಲದೆ ಮೈದಾನದಲ್ಲೇ ಔಟ್‌ಫೀಲ್ಡ್ ಬಗ್ಗೆ ರೋಹಿತ್ ಅಸಮಾಧಾನವನ್ನೂ ವ್ಯಕ್ತಪಡಿಸುತ್ತಿದ್ದ ದೃಶ್ಯ ಕಂಡುಬಂತು.
undefined
ICC World Cup 2023: ಆಫ್ಘನ್ ಸ್ಪಿನ್ ಸವಾಲು ಗೆಲ್ಲುತ್ತಾ ಪಾಕಿಸ್ತಾನ?
ಕಿವೀಸ್ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಪಾಸ್!
ಧರ್ಮಶಾಲಾ: ಐಸಿಸಿ ಟೂರ್ನಿಗಳಲ್ಲಿ ಬಲವಾಗಿ ಕಾಡುತ್ತಿದ್ದ ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಕೊನೆಗೂ ಜಯ ಸಿಕ್ಕಿದೆ. 4 ವಿಕೆಟ್ ರೋಚಕ ಗೆಲುವು ಸಾಧಿಸಿ ತನ್ನ ಅಜೇಯ ಓಟ ಮುಂದುವರಿಸಿರುವ ಭಾರತ, 5ನೇ ಜಯದೊಂದಿಗೆ 10 ಅಂಕಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿ, ಸೆಮಿಫೈನಲ್ ಪ್ರವೇಶಿಸುವತ್ತ ಹೆಜ್ಜೆ ಇರಿಸಿದೆ.
ಇಬ್ಬನಿ ಬೀಳಬಹುದು ಎನ್ನುವ ನಿರೀಕ್ಷೆಯೊಂದಿಗೆ ಟಾಸ್ ಗೆದ್ದ ಬಳಿಕ ರೋಹಿತ್, ಮೊದಲು ಫೀಲ್ಡ್ ಮಾಡಲು ನಿರ್ಧಿರಿಸಿದರು. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಭಾರತ 2 ಬದಲಾವಣೆಯೊಂದಿಗೆ ಕಣಕ್ಕಿಳಿಯಬೇಕಾಯಿತು. ಮೊಹಮದ್ ಶಮಿ ಈ ವಿಶ್ವಕಪ್‌ನಲ್ಲಿ ತಮಗೆ ಸಿಕ್ಕ ಮೊದಲ ಅವಕಾಶದಲ್ಲೇ ಅತ್ಯಮೋಘ ಪ್ರದರ್ಶನ ನೀಡಿ, 320-330 ರನ್ ಕಲೆಹಾಕುವ ನಿರೀಕ್ಷೆಯಲ್ಲಿದ್ದ ನ್ಯೂಜಿಲೆಂಡ್ 273 ರನ್‌ಗೆ ಕುಸಿಯುವಂತೆ ಮಾಡಿದರು.
ICC World Cup 2023: ಆಫ್ಘನ್ ಸ್ಪಿನ್ ಸವಾಲು ಗೆಲ್ಲುತ್ತಾ ಪಾಕಿಸ್ತಾನ?
ರೋಹಿತ್‌ರ ಲೆಕ್ಕಾಚಾರದಂತೆ ಸಂಜೆ ಬಳಿಕ ಇಬ್ಬನಿ ಬಿದ್ದರೂ, ಕಿವೀಸ್ ಅಷ್ಟು ಸುಲಭವಾಗಿ ಭಾರತಕ್ಕೆ ಗೆಲ್ಲಲು ಬಿಡಲಿಲ್ಲ. ಆದರೆ ನಿರ್ಣಾಯಕ ಹಂತಗಳಲ್ಲಿ ವಿಕೆಟ್ ಕಳೆದುಕೊಂಡರೂ, ಹೋರಾಟ ಬಿಡದ ಭಾರತ ಇನ್ನೂ ಒಂದು ಓವರ್ ಬಾಕಿ ಇರುವಂತೆ ಜಯಿಸಿತು.
ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಮತ್ತೊಮ್ಮೆ ಆಪತ್ಬಾಂಧವರಾದರೆ, ತಮ್ಮ ಬ್ಯಾಟಿಂಗ್ ಬಗ್ಗೆ ಇತ್ತೀಚೆಗೆ ಎದುರಿಸುತ್ತಿದ್ದ ಟೀಕೆಗೆ ರವೀಂದ್ರ ಜಡೇಜಾ ಬ್ಯಾಟ್‌ನಿಂದಲೇ ಉತ್ತರಿಸಿ ತಂಡದ ಗೆಲುವಿಗೆ ಕೊಡುಗೆ ನೀಡಿದರು.
ಟರ್ನಿಂಗ್ ಪಾಯಿಂಟ್
320-330 ರನ್ ಗಳಿಸುವ ನಿರೀಕ್ಷೆಯಲ್ಲಿದ್ದ ಕಿವೀಸನ್ನು 273ಕ್ಕೆ ನಿಯಂತ್ರಿಸಿದ್ದು ಭಾರತದ ಗೆಲುವಿಗೆ ಪ್ರಮುಖ ಕಾರಣಗಳಲ್ಲೊಂದು. ಒಬ್ಬ ಬ್ಯಾಟರ್ ಕೊರತೆ ಇದ್ದ ಕಾರಣ, ಕೊಹ್ಲಿ ಹಾಗೂ ಜಡೇಜಾ ನಡುವಿನ 78 ರನ್ ಜೊತೆಯಾಟ ಪಂದ್ಯ ಭಾರತದ ಕೈಜಾರದಂತೆ ನೋಡಿಕೊಂಡಿತು ಎನ್ನುವುದರಲ್ಲಿ ಅನುಮಾನವಿಲ್ಲ.
IND vs NZ ರೋಹಿತ್-ವಿರಾಟ್ ನಡುವೆ ನಡೆಯಿಯಾ ಮಾತಿನ ಚಕಮಕಿ? ವಿಡಿಯೋ ವೈರಲ್!
2003ರ ಬಳಿಕ ಮೊದಲ ಜಯ!
ಈ ಗೆಲುವು ಐಸಿಸಿ ಟೂರ್ನಿಗಳಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 2003ರ ಬಳಿಕ ಮೊದಲ ಗೆಲುವು. 2007, 2016, 2021ರ ಟಿ20 ವಿಶ್ವಕಪ್, 2019ರ ಏಕದಿನ ವಿಶ್ವಕಪ್ ಸೆಮಿಫೈನಲ್, 2021ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಕಿವೀಸ್ ವಿರುದ್ಧ ಭಾರತ ಸೋಲುಂಡಿತ್ತು.