ಬೆಂಗಳೂರಲ್ಲಿ ಮಳೆ; ಪಾಕ್-ಕಿವೀಸ್ ಪಂದ್ಯ ರದ್ದಾದ್ರೆ ಗೆಲುವು ಯಾರಿಗೆ?

By Naveen Kodase  |  First Published Nov 4, 2023, 5:13 PM IST

ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯಕ್ಕೆ ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯವನ್ನು ವಹಿಸಿದೆ. ನ್ಯೂಜಿಲೆಂಡ್ ನೀಡಿದ ಕಠಿಣ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡವು ಎರಡನೇ ಓವರ್‌ನ ಕೊನೆಯ ಎಸೆತದಲ್ಲೇ ಅಬ್ದುಲ್ ಶಫೀಕ್(4) ವಿಕೆಟ್ ಕಳೆದುಕೊಂಡಿತು. ಟಿಮ್ ಸೌಥಿ, ಪಾಕಿಸ್ತಾನದ ಆರಂಭಿಕ ಬ್ಯಾಟರ್‌ನನ್ನು ಪೆವಿಲಿಯನ್ನಿಗಟ್ಟುವಲ್ಲಿ ಯಶಸ್ವಿಯಾದರು.


ಬೆಂಗಳೂರು(ನ.04): 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯದಲ್ಲಿಂದು ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಿದ್ದು, ಹೈವೋಲ್ಟೇಜ್ ಪಂದ್ಯಕ್ಕೆ ಮಳೆರಾಯ ಅಡ್ಡಿಪಡಿಸಿದ್ದಾನೆ. ನ್ಯೂಜಿಲೆಂಡ್ ನೀಡಿರುವ 402 ರನ್ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡವು ಆರಂಭಿಕ ಆಘಾತದ ಹೊರತಾಗಿಯೂ ಉತ್ತಮ ಆರಂಭ ಪಡೆದಿದೆ. ಪಾಕಿಸ್ತಾನ ತಂಡವು 21.3 ಓವರ್‌ನಲ್ಲಿ ಕೇವಲ ಒಂದು ವಿಕೆಟ್ ಕಳೆದುಕೊಂಡು 160 ರನ್ ಬಾರಿಸಿದೆ. ಇದರ ನಡುವೆ ಪಂದ್ಯಕ್ಕೆ ಮಳೆರಾಯ ಅಡ್ಡಿಯಾಗಿದ್ದಾನೆ.

ಹೌದು, ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯಕ್ಕೆ ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯವನ್ನು ವಹಿಸಿದೆ. ನ್ಯೂಜಿಲೆಂಡ್ ನೀಡಿದ ಕಠಿಣ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡವು ಎರಡನೇ ಓವರ್‌ನ ಕೊನೆಯ ಎಸೆತದಲ್ಲೇ ಅಬ್ದುಲ್ ಶಫೀಕ್(4) ವಿಕೆಟ್ ಕಳೆದುಕೊಂಡಿತು. ಟಿಮ್ ಸೌಥಿ, ಪಾಕಿಸ್ತಾನದ ಆರಂಭಿಕ ಬ್ಯಾಟರ್‌ನನ್ನು ಪೆವಿಲಿಯನ್ನಿಗಟ್ಟುವಲ್ಲಿ ಯಶಸ್ವಿಯಾದರು.

Free-flowing Fakhar Zaman hits a fiery ton in Bengaluru 🔥 Milestones 🏏 | pic.twitter.com/ozkVsBJ4Pf

— ICC (@ICC)

Tap to resize

Latest Videos

ಫಖರ್ ಭರ್ಜರಿ ಬ್ಯಾಟಿಂಗ್: ಆರಂಭದಲ್ಲೇ ಶಫೀಕ್ ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಪಾಕಿಸ್ತಾನ ತಂಡಕ್ಕೆ ಎರಡನೇ ವಿಕೆಟ್‌ಗೆ ಫಖರ್ ಜಮಾನ್ ಹಾಗೂ ನಾಯಕ ಬಾಬರ್ ಅಜಂ ಆಸರೆಯಾಗಿದ್ದಾರೆ. ಬ್ಯಾಟಿಂಗ್ ಸ್ನೇಹಿ ಪಿಚ್ ಎನಿಸಿಕೊಂಡಿರುವ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಈ ಜೋಡಿ ಎರಡನೇ ವಿಕೆಟ್‌ಗೆ ಕೇವಲ 117 ಎಸೆತಗಳನ್ನು ಎದುರಿಸಿ ಮುರಿಯದ 154 ರನ್‌ಗಳ ಜತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ಯುತ್ತಿದ್ದಾರೆ. ಅದರಲ್ಲೂ ಸ್ಪೋಟಕ ಬ್ಯಾಟಿಂಗ್ ನಡೆಸಿದ ಅನುಭವಿ ಆರಂಭಿಕ ಬ್ಯಾಟರ್ ಫಖರ್ ಜಮಾನ್ ಕೇವಲ 63 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ, ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಪಾಕಿಸ್ತಾನ ಪರ ಅತಿವೇಗದ ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಇದೀಗ ಫಖರ್ ಜಮಾನ್ 69 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ 9 ಸಿಕ್ಸರ್ ಸಹಿತ ಅಜೇಯ 106 ರನ್ ಸಿಡಿಸಿದರೆ, ನಾಯಕ ಬಾಬರ್ ಅಜಂ 51 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 47 ರನ್ ಸಿಡಿಸಿದ್ದಾರೆ. ಈ ವೇಳೆ ಪಂದ್ಯಕ್ಕೆ ಮಳೆರಾಯ ಅಡ್ಡಿಯಾಗಿದ್ದಾನೆ.

ಪಂದ್ಯ ರದ್ದಾದ್ರೆ ಯಾರಿಗೆ ಗೆಲುವು: ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಬ್‌ ಏರ್ ಸಿಸ್ಟಂ ವ್ಯವಸ್ಥೆಯಿದೆ. ಒಂದು ವೇಳೆ ಎಷ್ಟೇ ಮಳೆ ಬಂದರೂ ಕೆಲವೇ ನಿಮಿಷಗಳ ಬಳಿಕ ಪಂದ್ಯ ಆರಂಭಿಸಲು ಅವಕಾಶವಿದೆ. ಆದರೆ ನಿರಂತರವಾಗಿ ಮಳೆ ಸುರಿಯುತ್ತಲೇ ಇದ್ದರೇ ಪಂದ್ಯ ಆಯೋಜಿಸುವುದು ಕಷ್ಟವಾಗುವ ಸಾಧ್ಯತೆಯಿದೆ. ಇಂದು ಸಂಜೆ 5.40 ನಿಮಿಷಗಳ ಬಳಿಕ ಓವರ್ ಕಡಿತಗೊಳ್ಳುವ ಸಾಧ್ಯತೆಯಿದೆ. ಇನ್ನು ಪಂದ್ಯ ಮುಂದುವರೆಸಲು ಸಾಧ್ಯವಾಗದೇ ಹೋದರೇ ಫಲಿತಾಂಶಕ್ಕಾಗಿ ಡೆಕ್ವರ್ಥ್ ಲೂಯಿಸ್ ನಿಯಮದ ಮೊರೆ ಹೋಗಬೇಕಾಗುತ್ತದೆ. ಹೀಗಾದಲ್ಲಿ ಪಾಕಿಸ್ತಾನ ತಂಡವು 10 ಅಂತರದಲ್ಲಿ ಗೆಲುವು ದಾಖಲಿಸಿ, ಸೆಮೀಸ್ ಆಸೆ ಜೀವಂತವಾಗಿರಿಸಿಕೊಳ್ಳಲಿದೆ.
 

click me!