ಭಾರತ ನ್ಯೂಜಿಲೆಂಡ್ ಸೆಮಿಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ- ಶ್ರೇಯಸ್ ಅಯ್ಯರ್ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಆದರೆ ವಿವಾದವೊಂದು ಶುರುವಾಗಿದೆ. ಸೆಮಿಫೈನಲ್ ಪಂದ್ಯದ ಅಂತಿಮ ಕ್ಷಣದಲ್ಲಿ ಬಿಸಿಸಿಐ ಪಿಚ್ ಬದಲಿಸಿದೆ. ಇದು ವಿವಾದಕ್ಕೆ ಕಾರಣವಾಗಿದೆ. ಐಸಿಸಿ ನಿಗದಿ ಮಾಡಿದ ಪಿಚ್ ಬದಲು ಅಂತಿಮ ಕ್ಷಣದಲ್ಲಿ ಬಿಸಿಸಿಐ ಪಿಚ್ ಬದಲಿಸಿದೆ ಅನ್ನೋ ಆರೋಪ ಕೋಲಾಹಲ ಸೃಷ್ಟಿಸಿದೆ.
ಮುಂಬೈ(ನ.15) ಐಸಿಸಿ ವಿಶ್ವಕಪ್ 2023 ಟೂರ್ನಿಯಲ್ಲಿ ಟೀಂ ಇಂಡಿಯಾಗೆ ಬೇಕಾಗುವಂತೆ ಪಿಚ್, ಭಾರತದ ಬೌಲರ್‌ಗಳಿಗೆ ನೆರವಾಗುವ ಬಾಲ್ ನೀಡಲಾಗುತ್ತಿದೆ. ಡಿಆರ್‌ಎಸ್, ಆಂಪೈರ್ ನಿರ್ಧಾರಗಳು ಭಾರತದ ಪರವಾಗಿ ಬರುತ್ತಿದೆ ಅನ್ನೋ ಆರೋಪ ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಸೇರಿದಂತೆ ಕಲವರು ಮಾಡಿದ್ದಾರೆ. ಈ ಆರೋಪ-ಟೀಕೆಗಳ ನಡುವೆ ಮುಂಬೈ ಪಿಚ್ ವಿವಾದ ಶುರುವಾಗಿದೆ. ಭಾರತ ನ್ಯೂಜಿಲೆಂಡ್ ನಡುವಿನ ಸೆಮಿಫೈನಲ್ ಪಂದ್ಯಕ್ಕೆ ಬಿಸಿಸಿಐ ಅಂತಿಮ ಕ್ಷಣದಲ್ಲಿ ಪಿಚ್ ಬದಲಾಯಿಸಿದೆ ಅನ್ನೋ ಆರೋಪ ಗಂಭೀರ ಸ್ವರೂಪ ಪಡೆದುಕೊಂಡಿದೆ. ವಿರಾಟ್ ಕೊಹ್ಲಿ ದಾಖಲೆಯ ಶತಕ ಹಾಗೂ ಶ್ರೇಯಸ್ ಅಯ್ಯರ್ ಸ್ಫೋಟಕ ಸೆಂಚುರಿ ಬಳಿಕ ಈ ಪಿಚ್ ವಿವಾದ ಜೋರಾಗಿದೆ.
ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಸೆಮಿಫೈನಲ್ ಪಂದ್ಯಕ್ಕೆ ವಾಂಖೆಡೆ ಕ್ರೀಡಾಂಗಣದಲ್ಲಿ ಪಿಚ್‌ಗಳ ಪೈಕಿ ಹೊಸ ಪಿಚ್ ಅಂತಿಮಗೊಳಿಸಲಾಗಿತ್ತು. ಐಸಿಸಿ ಪಿಚ್ ಕನ್ಸಲ್ಟೆಂಟ್ ಆ್ಯಂಡಿ ಅಟ್ಕಿನ್ಸನ್ ಈ ಪಿಚ್ ಅಂತಿಮಗೊಳಿಸಿದ್ದರು. ಆದರೆ ಅಂತಿಮ ಕ್ಷಣದಲ್ಲಿ ಬಿಸಿಸಿಐ ಪಿಚ್ ಬದಲಿಸಿದೆ. ಮುಂಬೈನ ವಾಂಖೆಡೆಯಲ್ಲಿ ಐಸಿಸಿ ಲೀಗ್ ಪಂದ್ಯಕ್ಕೆ ಬಳಸಲಾದ ಪಿಚನ್ನು ಸೆಮಿಫೈನಲ್ ಪಂದ್ಯಕ್ಕೆ ಬಳಸಲಾಗಿದೆ ಎಂದು ಡೈಲ್ ಮೇಲ್ ವರದಿ ಮಾಡಿದೆ.
ವಾಂಖೇಡೆಯಲ್ಲಿ ರನ್ ಸುರಿಮಳೆ; ಕೊಹ್ಲಿ-ಅಯ್ಯರ್ ಶತಕ ನಂಟು, ಕಿವೀಸ್ ಗೆಲ್ಲಲು ಗುರಿ 398
ಬಿಸಿಸಿಐ ಟೀಂ ಇಂಡಿಯಾಗೆ ಅನುಗುಣವಾಗಿ ಪಿಚ್ ಬದಲಿಸಲಾಗಿದೆ ಅನ್ನೋ ಆರೋಪಗಳು ಕೇಳಿಬಂದಿದೆ. ಲೀಗ್ ಹಂತದ ಪಂದ್ಯದಲ್ಲಿ ಬಳಕೆಯಾದ ಪಿಚ್‌ನ್ನು ಐಸಿಸಿ ಅಂತಿಮಗೊಳಿಸಿತ್ತು. ಆದರೆ ಬಿಸಿಸಿಐ ಸ್ಲೋ ಪಿಚ್‌ಗೆ ಬದಲಾಯಿಸಿದೆ. ಇದು ಟೀಂ ಇಂಡಿಯಾಗೆ ವರವಾಗಲಿದೆ ಅನ್ನೋ ಆರೋಪಗಳು ಎದುರಾಗಿದೆ. ಪಿಚ್ ಲಾಭ ಪಡೆದಿರುವ ಭಾರತ ಈಗಾಗಲೇ ಎರಡು ಸೆಂಚುರಿ ಸಿಡಿಸಿದೆ. ಇನ್ನು ಬೌಲಿಂಗ್‌ನಲ್ಲೂ ಉತ್ತಮ ಪ್ರದರ್ಶನ ನೀಡುವ ಸಾಧ್ಯತೆ ಇದೆ ಅನ್ನೋ ಆರೋಪಗಳು ವ್ಯಕ್ತವಾಗಿದೆ.
ವಾಂಖೆಡೆ ಪಿಚ್ ವಿವಾದದ ಕುರಿತು ಪ್ರತಿಕ್ರಿಯಿಸಿರುವ ಸುನಿಲ್ ಗವಾಸ್ಕರ್, ಒಂದು ಪಿಚ್ ಆಯ್ಕೆ ಮಾಡಿದರೆ ಎರಡೂ ತಂಡಗಳು ಅದೇ ಪಿಚ್‌ನಲ್ಲಿ ಆಡಲಿದೆ. ಭಾರತ ತಂಡ ಯಾವುದೇ ಪಿಚ್‌ನಲ್ಲಿ ಉತ್ತಮ ಪ್ರದರ್ಶನ ನೀಡಲಿದೆ. ಲೀಗ್ ಹಂತದ 9 ಪಂದ್ಯದಲ್ಲಿ ಭಾರತ ತಂಡದ ಸಾಮರ್ಥ್ಯವನ್ನು ಎಲ್ಲೂ ಕಂಡಿದ್ದಾರೆ. ಮುಂಬೈನ ವಾಂಖೆಡೆ ಪಿಚ್ ಬ್ಯಾಟಿಂಗ್ ಸಹಕಾರಿ ಪಿಚ್‌ಗಳಾಗಿದೆ. ಹೀಗಾಗಿ ಇಲ್ಲಿ ರನ್ ಮಳೆ ಹರಿಯುತ್ತದೆ. ಅನಗತ್ಯ ಪಿಚ್ ಚರ್ಚೆಯ ಅಗತ್ಯವಿಲ್ಲ. ಭಾರತದ ಅದ್ಭುತ ಬೌಲಿಂಗ್ ದಾಳಿ ಹೊಂದಿದೆ. ಹೀಗಾಗಿ ಯಾವುದೇ ಟಾರ್ಗೆಟ್ ನೀಡಿದರೂ ಡಿಫೆಂಡ್ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿದೆ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.
ಮಾಧ್ಯಮಗಳು ಅನಗತ್ಯ ವಿವಾದ ಸೃಷ್ಟಿಸುವ ಅಗತ್ಯವಿಲ್ಲ. ಟಾಸ್ ಬಳಿಕ ಪಿಚ್ ಬದಲಾಯಿಸಿದ್ದರೆ ಅದು ಅಕ್ರಮ. ಅಂತಹ ಸಂದರ್ಭದಲ್ಲಿ ಈ ಚರ್ಚೆ ಅವಶ್ಯಕತ. ಇಲ್ಲಿ ಪಂದ್ಯದ ದಿನಕ್ಕೂ ಮೊದಲೇ ಪಿಚ್ ಬದಲಾಯಿಸಲಾಗಿದೆ. ಹೀಗಾಗಿ ಪಿಚ್ ವಿವಾದದ ಅಗತ್ಯವಿಲ್ಲ ಎಂದು ಗವಾಸ್ಕರ್ ಹೇಳಿದ್ದಾರೆ.
ಒನ್‌ಡೇ ಕ್ರಿಕೆಟ್‌ನಲ್ಲಿ 50 ಶತಕ; ಈ ಸಾಧನೆ ಮಾಡಿದ ಜಗತ್ತಿನ ಮೊದಲ ಕ್ರಿಕೆಟಿಗ ಕಿಂಗ್ ಕೊಹ್ಲಿ..!
ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಬಿಸಿಸಿಐಗೆ ಟಾಂಗ್ ನೀಡಿದ್ದಾರೆ. ಸೆಮಿಫೈನಲ್ ಪಂದ್ಯಕ್ಕೆ ಫ್ರೆಶ್ ಪಿಚ್ ಬಳಕೆ ಮಾಡಬೇಕು, ಅಷ್ಟೆ ಎಂದು ವಾನ್ ಟ್ವೀಟ್ ಮಾಡಿದ್ದಾರೆ.