ಇಲ್ಲಿನ ವಾಂಖೇಡೆ ಮೈದಾನದಲ್ಲಿ ನಡೆದ ಮೊದಲ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ಎದುರು ವಿರಾಟ್ ಕೊಹ್ಲಿ ಆಕರ್ಷಕ ಶತಕ ಸಿಡಿಸಿ ಸಂಭ್ರಮಿಸಿದರು. ಈ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿಹೆಚ್ಚು ಶತಕ ಸಿಡಿಸಿದ ದಾಖಲೆ ಹೊಂದಿದ್ದ ಸಚಿನ್ ತೆಂಡುಲ್ಕರ್(49 ಶತಕ) ದಾಖಲೆಯನ್ನು ವಿರಾಟ್ ಕೊಹ್ಲಿ ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾದರು.
ಮುಂಬೈ(ನ.16): ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್ ಬದುಕಿನಲ್ಲಿ 50 ಶತಕ ಸಿಡಿಸಿದ ಅಪರೂಪದ ದಾಖಲೆ ನಿರ್ಮಿಸಿದರು. ಇದರ ಬೆನ್ನಲ್ಲೇ ಜಗತ್ತಿನ ನಾನಾ ಮೂಲೆಗಳಿಂದ ಕೊಹ್ಲಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಇದೀಗ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಕೂಡಾ ಕಿಂಗ್ ಕೊಹ್ಲಿ ಗುಣಗಾನ ಮಾಡಿದ್ದಾರೆ.
ಇಲ್ಲಿನ ವಾಂಖೇಡೆ ಮೈದಾನದಲ್ಲಿ ನಡೆದ ಮೊದಲ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ಎದುರು ವಿರಾಟ್ ಕೊಹ್ಲಿ ಆಕರ್ಷಕ ಶತಕ ಸಿಡಿಸಿ ಸಂಭ್ರಮಿಸಿದರು. ಈ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿಹೆಚ್ಚು ಶತಕ ಸಿಡಿಸಿದ ದಾಖಲೆ ಹೊಂದಿದ್ದ ಸಚಿನ್ ತೆಂಡುಲ್ಕರ್(49 ಶತಕ) ದಾಖಲೆಯನ್ನು ವಿರಾಟ್ ಕೊಹ್ಲಿ ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾದರು.
undefined
ಕಿವೀಸ್ ಎದುರು 7 ವಿಕೆಟ್ ಕಬಳಿಸಿದ ಶಮಿ ಕೈಗೆ ಮುತ್ತಿಕ್ಕಿದ ಅಶ್ವಿನ್..! ವಿಡಿಯೋ ವೈರಲ್
"ಸಚಿನ್ ತೆಂಡುಲ್ಕರ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ವಿರಾಟ್ ಕೊಹ್ಲಿ ಮುರಿದದ್ದು ನೋಡಿ ತುಂಬಾ ಖುಷಿಯಾಯಿತು. ಅವರು ದಾಖಲೆಯ ಶತಕ ಸಿಡಿಸಿದ ಬಳಿಕ ತೆಂಡುಲ್ಕರ್ ಅವರಿಗೆ ತಲೆಬಾಗಿದರು. ವಿರಾಟ್ ಕೊಹ್ಲಿ ಅವರಂತಹ ಆಟಗಾರರು ಪ್ರಶಂಸೆಗೆ ಅರ್ಹರಾದ ವ್ಯಕ್ತಿ. ವಿರಾಟ್ ಕೊಹ್ಲಿ ಸದ್ಯ ವಿಶ್ವ ಕ್ರಿಕೆಟ್‌ನ ನಂಬರ್ ಒನ್ ಆಟಗಾರರಾಗಿದ್ದಾರೆ" ಎಂದು ಅಖ್ತರ್ ತಮ್ಮದೇ ಯೂಟ್ಯೂಬ್ ಚಾನೆಲ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘ದೇವರಿಗೆ’ ನಮನ!
ಕೊಹ್ಲಿ ತಮ್ಮ 50 ಶತಕಗಳ ಮೈಲಿಗಲ್ಲನ್ನು ಸಚಿನ್ ತೆಂಡುಲ್ಕರ್‌ರ ತವರು ವಾಂಖೇಡೆ ಕ್ರೀಡಾಂಗಣದಲ್ಲಿ, ಸ್ವತಃ ಸಚಿನ್‌ರ ಎದುರೇ ಸಾಧಿಸಿದ್ದು ವಿಶೇಷ. ಸೆಂಚುರಿ ಪೂರ್ತಿಗೊಳಿಸಿದ ಬಳಿಕ ಕೊಹ್ಲಿ, ಕ್ರೀಡಾಂಗಣದ ಸ್ಟ್ಯಾಂಡ್‌ನಲ್ಲಿದ್ದ ಸಚಿನ್‌ಗೆ ತಲೆಬಾಗಿ ನಮಿಸಿದರು. ಸಚಿನ್ ಕೂಡಾ ಎದ್ದುನಿಂತು ಚಪ್ಪಾಳೆ ಮೂಲಕ ಕೊಹ್ಲಿಯನ್ನು ಅಭಿನಂದಿಸಿದರು. ಇನ್ನಿಂಗ್ಸ್ ಮುಕ್ತಾಯಗೊಂಡ ಬಳಿಕ ಮೈದಾನಕ್ಕೆ ಆಗಮಿಸಿ ಕೊಹ್ಲಿಯನ್ನು ಆಲಂಗಿಸಿ ಮತ್ತೊಮ್ಮೆ ಅಭಿನಂದನೆ ಸಲ್ಲಿಸಿದರು.
ICC World Cup 2023: ವಿರಾಟ್ ಕೊಹ್ಲಿ ಕೊಂಡಾಡಿದ ಪ್ರಧಾನಿ ಮೋದಿ..!
ವಿರಾಟ್ ಕೊಹ್ಲಿ, ನ್ಯೂಜಿಲೆಂಡ್ ಎದುರು ಲೀಗ್ ಹಂತದಲ್ಲಿ ಶತಕ ಸಿಡಿಸುವ ಅವಕಾಶವನ್ನು ಕೈಚೆಲ್ಲಿದ್ದರು. ಲೀಗ್ ಹಂತದಲ್ಲಿ ಕಿವೀಸ್ ಎದುರು ವಿರಾಟ್ ಕೊಹ್ಲಿ 95 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದರು. ಇದೀಗ ವಾಂಖೇಡೆ ಮೈದಾನದಲ್ಲಿ ಹಳೆಯ ತಪ್ಪು ಮಾಡಲಿಲ್ಲ. ವಿರಾಟ್ ಕೊಹ್ಲಿ, 113 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ ಎರಡು ಸಿಕ್ಸರ್ ಸಹಿತ 117 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ವಿಶ್ವಕಪ್‌ನಲ್ಲಿ ಗರಿಷ್ಠ ರನ್: ಸಚಿನ್‌ರ ಹಿಂದಿಕ್ಕಿದ ಕೊಹ್ಲಿ
ಕಿವೀಸ್ ವಿರುದ್ಧದ ಪಂದ್ಯದಲ್ಲಿ ಸಚಿನ್‌ರ ಮತ್ತೊಂದು ದಾಖಲೆಯನ್ನೂ ಕೊಹ್ಲಿ ಮುರಿದಿದ್ದಾರೆ. ಈ ವರೆಗೆ ವಿಶ್ವಕಪ್ ಆವೃತ್ತಿಯೊಂದರಲ್ಲಿ ಗರಿಷ್ಠ ರನ್ ಕಲೆಹಾಕಿದ ದಾಖಲೆ ಸಚಿನ್ ಹೆಸರಲ್ಲಿತ್ತು. 2003ರಲ್ಲಿ ಸಚಿನ್ 1 ಶತಕ, 6 ಅರ್ಧಶತಕಗಳೊಂದಿಗೆ 673 ರನ್ ಗಳಿಸಿದ್ದರು. 20 ವರ್ಷಗಳಿಂದ ಇದ್ದ ದಾಖಲೆ ಕೊನೆಗೂ ವಿರಾಟ್‌ರಿಂದಲೇ ಪತನಗೊಂಡಿದೆ. ಈ ಬಾರಿ 10 ಪಂದ್ಯಗಳಲ್ಲಿ ಕೊಹ್ಲಿ 711 ರನ್ ದಾಖಲಿಸಿದ್ದಾರೆ. ಅವರಿಂದ 3 ಶತಕ, 5 ಶತಕ ದಾಖಲಾಗಿದೆ. ವಿಶ್ವಕಪ್‌ನ ಆವೃತ್ತಿಯೊಂದರಲ್ಲಿ 700 ರನ್ ದಾಟಿದ ಮೊದಲ ಕ್ರಿಕೆಟಿಗ ಎನ್ನುವ ದಾಖಲೆಯನ್ನೂ ಕೊಹ್ಲಿ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.