ಮಳೆ ನಡುವೆ ಪಾಕಿಸ್ತಾನದ ಸೆಮೀಸ್ ಆಸೆ ಜೀವಂತ, ನ್ಯೂಜಿಲೆಂಡ್ ಸೋಲಿನಿಂದ ಆಫ್ರಿಕಾ ಸ್ಥಾನ ಖಚಿತ!

By Suvarna News  |  First Published Nov 4, 2023, 7:41 PM IST

ಸತತ ಸೋಲಿನಿಂದ ಟೀಕೆಗೆ ಒಳಗಾಗಿದ್ದ ಪಾಕಿಸ್ತಾನ ಇದೀಗ ಮಿಂಚಿನ ಪ್ರದರ್ಶನ ಮೂಲಕ ಸೆಮಿಫೈನಲ್ ಆಸೆ ಜೀವಂತವಾಗಿರಿಸಿದೆ. ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಡಕ್ ವರ್ತ್ ನಿಯಮದನ್ವಯ 21 ರನ್‌ಗಳಿಂದ ಮಣಿಸಿದ ಪಾಕಿಸ್ತಾನ, ಸಂಭ್ರಮ ಆಚರಿಸಿದೆ. ಇತ್ತ ನ್ಯೂಜಿಲೆಂಡ್ ಸೋಲು ಸೌತ್ ಆಫ್ರಿಕಾ ಲಕ್ ಡಬಲ್ ಮಾಡಿದೆ.
 


ಬೆಂಗಳೂರು(ನ.04) ಐಸಿಸಿ ವಿಶ್ವಕಪ್ ಟೂರ್ನಿಯಿಂದ ಬಹುತೇಕ ಹೊರಬಿದ್ದಿದ್ದ ಪಾಕಿಸ್ತಾನ ಇದೀಗ ಹೊಸ ಅಧ್ಯಾಯ ಆರಂಭಿಸಿದೆ. ಸತತ ಗೆಲುವಿನ ಮೂಲಕ ಪಾಕಿಸ್ತಾನ ಟೂರ್ನಿಯಲ್ಲಿ ಜೀವಂತವಾಗಿದೆ. ಬೆಂಗಳೂರಿನಲ್ಲಿ ನಡೆದ ಮಹತ್ವದ ಪಂದ್ಯದಲ್ಲಿ ಪಾಕಿಸ್ತಾನ ಬಲಿಷ್ಠ ನ್ಯೂಜಿಲೆಂಡ್ ತಂಡವನ್ನೇ ಮಣಿಸಿದೆ. ಮಳೆ ಕಾರಣ ಪಾಕಿಸ್ತಾನ ಡಕ್‌ವರ್ತ್ ನಿಯಮದನ್ವಯ 21 ರನ್ ಗೆಲುವು ದಾಖಲಿಸಿದೆ. ಈ ಮೂಲಕ ಪಾಕಿಸ್ತಾನ ಸೆಮಿಫೈನಲ್ ಆಸೆ ಜೀವಂತವಾಗಿದೆ. ಇತ್ತ ನ್ಯೂಜಿಲೆಂಡ್ ಸೋಲಿನಿಂದ ಸೌತ್ ಆಫ್ರಿಕಾದ ಸೆಮಿಫೈನಲ್ ಸ್ಥಾನ ಖಚಿತಗೊಂಡಿದೆ. 
 
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ಅಬ್ಬರಿಸಿ 401 ರನ್ ಸಿಡಿಸಿತ್ತು. ಬೃಹತ್ ಮೊತ್ತ ಸಿಡಿಸಿದ ಖುಷಿ ನ್ಯೂಜಿಲೆಂಡ್ ತಂಡಕ್ಕಿತ್ತು. ಆದರೆ ಪಾಕಿಸ್ತಾನ ಮಳೆಯಿಂದ ಪಾಕಿಸ್ತಾನ ಕೇವಲ 25.3 ಓವರ್ ಮಾತ್ರ ಆಟವಾಡಲು ಸಾಧ್ಯವಾಯಿತು. ಫಕರ್ ಜಮಾನ್ ಹಾಗೂ ಬಾಬರ್ ಅಜಮ್ ಹೋರಾಟಕ್ಕೆ ನ್ಯೂಜಿಲೆಂಡ್ ಬೆಚ್ಚಿ ಬಿದ್ದಿತ್ತು. ಫಕರ್ ಸ್ಫೋಟಕ ಶತಕ ಸಿಡಿಸಿದರೆ, ಬಾಬರ್ ಹಾಫ್ ಸೆಂಚುರಿ ಸಿಡಿಸಿದರು. 

21 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡ ಪಾಕಿಸ್ತಾನ 160 ರನ್ ಸಿಡಿಸಿತ್ತು. ಈ ವೇಳೆ ಮಳೆಯಿಂದ ಪಂದ್ಯ ಸ್ಥಗಿತಗೊಂಡಿತ್ತು. ಮತ್ತೆ ಮಳೆ ಹೀಗಾಗಿ ಡಕ್ ವರ್ತ್ ನಿಯಮದನ್ವಯ 41 ಓವರ್‌ಗೆ ಪಂದ್ಯ ಕಡಿತಗೊಳಿಸಿ ಪಾಕಿಸ್ತಾನಕ್ಕೆ 342 ರನ್ ಟಾರ್ಗೆಟ್ ನೀಡಲಾಗಿತ್ತು. ಮತ್ತೆ ಪಂದ್ಯ ಆರಂಭಗೊಂಡ ಬೆನ್ನಲ್ಲೇ ಬಾಬರ್ ಅಜಮ್ ಸ್ಫೋಟಕ ಸಿಕ್ಸರ್ ನ್ಯೂಜಿಲೆಂಡ್ ತಂಡದ ಗೆಲುವಿನ ಆಸೆ ಕಮರಿಸಿತು. ಮತ್ತೆ ಮಳೆ ವಕ್ಕರಿಸಿದ ಕಾರಣ ಪಂದ್ಯ ಪುನರ್ ಆರಂಭಗೊಳ್ಳಲೇ ಇಲ್ಲ. ಆದರೆ ಪಾಕಿಸ್ತಾನ 25.3 ಓವರ್‌ಗಳಲ್ಲಿ 200 ರನ್ ಸಿಡಿಸಿತ್ತು. ಈ ಮೂಲಕ ಡಕ್ ವರ್ತ್ ನಿಯಮದನ್ವಯ 21 ರನ್ ಮುನ್ನಡೆಯಲ್ಲಿತು.

Latest Videos

ಮಳೆಯಿದಂ ಪಂದ್ಯ ರದ್ದುಗೊಳ್ಳುತ್ತಿದ್ದಂತೆ ಪಾಕಿಸ್ತಾನ ಗೆಲುವಿನ ಸಂಭ್ರಮ ಆಚರಿಸಿತು. ಪಾಕಿಸ್ತಾನದ ಸೆಮಿಪೈನಲ್ ಆಸೆ ಜೀವಂತವಾಗಿದೆ. ಇತ್ತ ನ್ಯೂಜಿಲೆಂಡ್ ಸೋಲಿನಿಂದ ಸೌತ್ ಆಫ್ರಿಕಾದ ಸೆಮಿಫೈನಲ್ ಸ್ಥಾನ ಖಚಿತಗೊಂಡಿದೆ. ಎರಡನೇ ತಂಡವಾಗಿ ಐಸಿಸಿ ವಿಶ್ವಕಪ್ ಟೂರ್ನಿ ಸೆಮಿಫೈನಲ್ ಪ್ರವೇಶಿಸಿದೆ.

click me!