Timed Out Call ಏಂಜೆಲೋ ಮ್ಯಾಥ್ಯೂಸ್‌ ಕಾಲೆಳೆದ ವಿಲಿಯಮ್ಸನ್‌, ಬೌಲ್ಟ್‌..!

By Kannadaprabha NewsFirst Published Nov 10, 2023, 10:11 AM IST
Highlights

ಆ ಪ್ರಸಂಗದ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿದೆ. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಹೆಲ್ಮೆಟ್‌ ಪಟ್ಟಿ ಕಿತ್ತು ಹೋದ ಕಾರಣ ಬ್ಯಾಟಿಂಗ್‌ ಆರಂಭಿಸಲು ತಡ ಮಾಡಿ ಮ್ಯಾಥ್ಯೂಸ್‌ ಟೈಮ್ಡ್‌ ಔಟ್‌ ಆಗಿದ್ದರು.

ಬೆಂಗಳೂರು(ನ.10): ಶ್ರೀಲಂಕಾದ ಏಂಜೆಲೋ ಮ್ಯಾಥ್ಯೂಸ್‌ ಗುರುವಾರ ಕ್ರೀಸ್‌ಗಿಳಿಯುತ್ತಿದ್ದಂತೆ ನ್ಯೂಜಿಲೆಂಡ್‌ನ ಕೇನ್‌ ವಿಲಿಯಮ್ಸನ್‌ ಹಾಗೂ ಟ್ರೆಂಟ್‌ ಬೌಲ್ಟ್‌ ಹೆಲ್ಮೆಟ್‌ ಸರಿಯಿದೆಯೇ ನೋಡಿಕೊಳ್ಳಿ ಎಂದು ಕಿಚ್ಚಾಯಿಸಿದ ಪ್ರಸಂಗ ನಡೆಯಿತು.

ಆ ಪ್ರಸಂಗದ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿದೆ. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಹೆಲ್ಮೆಟ್‌ ಪಟ್ಟಿ ಕಿತ್ತು ಹೋದ ಕಾರಣ ಬ್ಯಾಟಿಂಗ್‌ ಆರಂಭಿಸಲು ತಡ ಮಾಡಿ ಮ್ಯಾಥ್ಯೂಸ್‌ ಟೈಮ್ಡ್‌ ಔಟ್‌ ಆಗಿದ್ದರು.

ಗೆದ್ದ ಕಿವೀಸ್‌, ಬಹುತೇಕ ಹೊರಬಿದ್ದ ಪಾಕೀಸ್‌!

ಸತತ 4 ಸೋಲಿನಿಂದ ಕಂಗೆಟ್ಟಿದ್ದರೂ ನಿರ್ಣಾಯಕ ಪಂದ್ಯದಲ್ಲಿ ಶ್ರೀಲಂಕಾವನ್ನು 5 ವಿಕೆಟ್‌ಗಳಿಂದ ಹೊಸಕಿ ಹಾಕಿದ ನ್ಯೂಜಿಲೆಂಡ್‌ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ. ದೊಡ್ಡ ಗೆಲುವಿನೊಂದಿಗೆ ನೆಟ್‌ ರನ್‌ರೇಟ್‌(+0.743) ಕೂಡಾ ಹೆಚ್ಚಿಸಿಕೊಂಡ ಕಿವೀಸ್‌ ತಂಡ, ಅಂಕಪಟ್ಟಿಯಲ್ಲಿ 10 ಅಂಕಗಳೊಂದಿಗೆ 4ನೇ ಸ್ಥಾನ ಭದ್ರಪಡಿಸಿಕೊಂಡಿತು. ಅತ್ತ ಲಂಕಾ ಕೇವಲ 2 ಜಯದೊಂದಿಗೆ ಅಭಿಯಾನ ಕೊನೆಗೊಳಿಸಿದ್ದು, 2025ರ ಚಾಂಪಿಯನ್ಸ್‌ ಟ್ರೋಫಿಗೂ ಅರ್ಹತೆ ಪಡೆಯುವುದು ಅನುಮಾನ.

ರಚಿನ್ ರವೀಂದ್ರ ಮುಟ್ಟಿದ್ದೆಲ್ಲಾ ಚಿನ್ನ, ಎರಡು ಅಪರೂಪದ ದಾಖಲೆ ಬರೆದ ಬೆಂಗಳೂರು ಮೂಲದ ಕಿವೀಸ್ ಆಟಗಾರ

ಮೊದಲು ಬ್ಯಾಟ್‌ ಮಾಡಿದ ಲಂಕಾ, ಕುಸಾಲ್‌ ಪೆರೇರಾ ಸ್ಫೋಟಕ ಅರ್ಧಶತಕದ ಹೊರತಾಗಿಯೂ 46.4 ಓವರ್‌ಗಳಲ್ಲಿ 171ಕ್ಕೆ ಆಲೌಟಾಯಿತು. ಪಾಕಿಸ್ತಾನ, ಅಫ್ಘಾನಿಸ್ತಾನಕ್ಕೆ ಅಸಾಧ್ಯ ಗುರಿ ನಿಗದಿಪಡಿಸಲು ನ್ಯೂಜಿಲೆಂಡ್‌ 25 ಓವರ್‌ನೊಳಗೆ ಗೆಲ್ಲಬೇಕಿತ್ತು. ಸಣ್ಣ ಗುರಿಯನ್ನು ಕಿವೀಸ್‌ 23.2 ಓವರ್‌ಗಳಲ್ಲೇ ಬೆನ್ನತ್ತಿತು. ಕಾನ್‌ವೇ(45), ಡ್ಯಾರಿಲ್‌ ಮಿಚೆಲ್‌(43), ರಚಿನ್‌ ರವೀಂದ್ರ(42) ಗೆಲುವಿನ ರೂವಾರಿಗಳು ಎನಿಸಿಕೊಂಡರು.

ಸೆಮೀಸ್‌ಗೇರಲು ಪಾಕ್‌, ಆಫ್ಘನ್‌ ಏನು ಮಾಡಬೇಕು?

ಸೆಮೀಸ್‌ಗೇರಲು ಪಾಕಿಸ್ತಾನ, ಅಫ್ಘಾನಿಸ್ತಾನಕ್ಕೆ ಪ್ರಾಯೋಗಿಕವಾಗಿ ಸಾಧ್ಯವಿಲ್ಲದಿದ್ದರೂ ಗಣಿತೀಯವಾಗಿ ಇನ್ನೂ ಅವಕಾಶವಿದೆ. ಇಂಗ್ಲೆಂಡ್‌ ವಿರುದ್ಧ ಪಾಕಿಸ್ತಾನ ಕನಿಷ್ಠ 287 ರನ್‌ಗಳಿಂದ ಗೆಲ್ಲಬೇಕು. ಮೊದಲು ಬ್ಯಾಟ್‌ ಮಾಡಿ 300 ರನ್‌ ಹೊಡೆದರೆ ಆಗ ಇಂಗ್ಲೆಂಡನ್ನು 13 ರನ್‌ಗೆ ಕಟ್ಟಿಹಾಕಬೇಕು. 350 ರನ್‌ ಹೊಡೆದರೆ 63 ರನ್‌ಗೆ ಕಟ್ಟಿಹಾಕಿಬೇಕು, 400 ರನ್‌ ಹೊಡೆದರೆ ಇಂಗ್ಲೆಂಡನ್ನು 112 ರನ್‌ಗೆ ನಿಯಂತ್ರಿಸಬೇಕು. ಒಂದು ವೇಳೆ ಚೇಸ್‌ ಮಾಡುವುದಾದರೆ ಯಾವುದೇ ಮೊತ್ತವನ್ನು ಬೆನ್ನತ್ತುವುದಾದರೂ 3 ಓವರ್‌ಗಳೊಳಗೆ ಗುರಿ ತಲುಪಬೇಕು. ಇನ್ನು ಅಫ್ಘಾನಿಸ್ತಾನ, ದಕ್ಷಿಣ ಆಫ್ರಿಕಾ ವಿರುದ್ಧ ಬರೋಬ್ಬರಿ 438 ರನ್‌ಗಳಿಂದ ಗೆದ್ದರೆ ಮಾತ್ರ ನೆಟ್‌ ರನ್‌ರೇಟ್‌ ನ್ಯೂಜಿಲೆಂಡನ್ನು ಹಿಂದಿಕ್ಕಲು ಸಾಧ್ಯ.

ಬ್ಯಾಟರ್‌ಗಳ ವೈಪಲ್ಯ: ಕಿವೀಸ್‌ಗೆ ಸಾಧಾರಣ ಗುರಿ ನೀಡಿದ ಲಂಕಾ..!

ನ.15ಕ್ಕೆ ಮುಂಬೈನಲ್ಲಿ ಭಾರತ vs ಕಿವೀಸ್‌ ಸೆಮಿ

ನ್ಯೂಜಿಲೆಂಡ್‌ ಸೆಮೀಸ್‌ಗೇರುವುದು ಅಧಿಕೃತಗೊಳ್ಳುವುದಷ್ಟೇ ಬಾಕಿ ಇದೆ. ರೌಂಡ್‌ ರಾಬಿನ್‌ ಹಂತವನ್ನು ಅಗ್ರಸ್ಥಾನದಲ್ಲೇ ಮುಕ್ತಾಯಗೊಳಿಸಲಿರುವ ಭಾರತ, 4ನೇ ಸ್ಥಾನ ಪಡೆಯಲು ಸಿದ್ಧವಾಗಿರುವ ನ್ಯೂಜಿಲೆಂಡ್‌ ವಿರುದ್ಧ ಮೊದಲ ಸೆಮೀಸ್‌ನಲ್ಲಿ ಆಡುವುದು ಬಹುತೇಕ ಖಚಿತ. ಈ ಪಂದ್ಯ ನ.15ರಂದು ಮಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ನ.16ರಂದು ಕೋಲ್ಕತಾದ ಈಡನ್‌ ಗಾರ್ಡನ್ಸ್‌ನಲ್ಲಿ ನಡೆಯಲಿರುವ 2ನೇ ಸೆಮೀಸ್‌ನಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ಸೆಣಸಲಿವೆ.

click me!