INDvENG ಗಿರಗಿರ ತಿರುಗಿದ ಇಂಗ್ಲೆಂಡ್ 129 ರನ್‌ಗೆ ಆಲೌಟ್, ಭಾರತದ ವಿಶ್ವಕಪ್ ಸೆಮೀಸ್ ಹಾದಿ ಸುಲಭ!

By Suvarna News  |  First Published Oct 29, 2023, 9:26 PM IST

ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಗೆಲುವಿನ ಓಟ ಮುಂದುವರಿದಿದೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರದ್ಧವೂ ಗೆಲುವಿನ ಸಂಭ್ರಮ ಆಚರಿಸಿದೆ. ಸುಲಭ ಟಾರ್ಗೆಟ್ ನೀಡಿ, ಮಾರಕ ಬೌಲಿಂಗ್ ದಾಳಿ ಮೂಲಕ ಭಾರತ 100 ರನ್ ಭರ್ಜರಿ ಗೆಲುವಿನ ಕೇಕೆ ಹಾಕಿದೆ. ಈ ಮೂಲಕ ಭಾರತದ ಸೆಮಿಫನಲ್ ಪ್ರವೇಶ ಬಹುತೇಕ ಖಚಿತಗೊಂಡಿದೆ. ಇತ್ತ ಇಂಗ್ಲೆಂಡ್ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದೆ.


ಲಖನೌ(ಅ.29) ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಅಜೇಯ ಓಟ ಮುಂದುವರಿದಿದೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ದದ ಪಂದ್ಯ ಟೀಂ ಇಂಡಿಯಾಗೆ ಅತ್ಯಂತ ಸವಾಲು ಒಡ್ಡಿತ್ತು. ಕಾರಣ ಕೇವಲ 229 ರನ್ ಸಿಡಿಸಿದ್ದ ಭಾರತಕ್ಕೆ ರನ್ ಢಿಪೆಂಡ್ ಮಾಡಿಕೊಳ್ಳುವುದೇ ದೊಡ್ಡ ಸವಾಲಾಗಿತ್ತು. ಆದರೆ ಭಾರತದ ಅದ್ಬುತ ಬೌಲಿಂಗ್ ದಾಳಿಗೆ ಇಂಗ್ಲೆಂಡ್ ಬಳಿ ಉತ್ತರವೇ ಇರಲಿಲ್ಲ. ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಹಾಗೂ ಕುಲ್ದೀಪ್ ಯಾದವ್ ಬೌಲಿಂಗ್‍‌ಗೆ ಆಂಗ್ಲರ ಪಡೆ ತತ್ತರಿಸಿತು. ಪರಿಣಾಮ ಕೇವಲ 129 ರನ್‌ಗೆ ಇಂಗ್ಲೆಂಡ್ ಆಲೌಟ್ ಆಗಿದೆ. ಭಾರತ ರನ್ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಭಾರತದ ಸೆಮಿಫೈನಲ್ ಪ್ರವೇಶ ಬಹುತೇಕ ಖಚಿತಗೊಂಡಿದೆ.

2019ರ ಏದಿನ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದ ಇಂಗ್ಲೆಂಡ್ ಈ ಬಾರಿ ಸೋಲಿನ ಸುಳಿಗೆ ಸಿಲುಕಿದೆ. ಭಾರತ ವಿರುದ್ಧ ಗೆಲುವಿನ ಲೆಕ್ಕಾಚಾರದಲ್ಲಿದ್ದ ಇಂಗ್ಲೆಂಡ್‌ಗೆ ಹೋರಾಟಕ್ಕೆ ಅವಕಾಶವೇ ಸಿಗಲಿಲ್ಲ. ಬುಮ್ರಾ ಹಾಗೂ ಶಮಿ ವೇಗಕ್ಕೆ ತತ್ತರಿಸಿತು. ಟಾರ್ಗೆಟ್ ಸುಲಭವಾಗಿತ್ತು. ಆದರೆ ಎದುರಾಳಿ ಮಾತ್ರ ಸುಲಭ ತುತ್ತಾಗಿರಲಿಲ್ಲ. 

Tap to resize

Latest Videos

ಕರ್ಮಾ ರಿಟರ್ನ್ಸ್, ಟ್ರೋಲ್ ಮಾಡಿದ ಬಾರ್ಮಿ ಆರ್ಮಿಗೆ ಎರಡು ಡಕ್ ಗಿಫ್ಟ್ ನೀಡಿದ ಫ್ಯಾನ್ಸ್!

ಡೇವಿಡ್ ಮಲನ್ 16 ರನ್‌ಗೆ ಔಟಾದರು.ಇತ್ತ ಜೋ ರೂಟ್ ಡಕೌಟ್ ಆದರು.. 30 ರನ್‌ಗೆ ಇಂಗ್ಲೆಂಡ್ 2 ವಿಕೆಟ್ ಕಳೆದುಕೊಂಡಿತು. ಇದರ ಬೆನ್ನಲ್ಲೇ ಬೆನ್ ಸ್ಟೋಕ್ಸ್ ಕೂಡ ಶೂನ್ಯ ಸುತ್ತಿದರು.  ಜಾನಿ ಬೈರ್‌ಸ್ಟೋ ಕೇವಲ 14 ರನ್ ಸಿಡಿಸಿ ನಿರ್ಗಮಿಸಿದರು.ಜೋಸ್ ಬಟ್ಲರ್ 10 ಹಾಗೂ ಮೋಯಿನ್ ಆಲಿ 15 ರನ್ ಸಿಡಿಸಿ ಪೆವಿಲಿಯನ್ ಸೇರಿದರು. 

ಲಿಯಾಮ್ ಲಿವಿಂಗ್‌ಸ್ಟೋನ್ ಹಾಗೂ ಕ್ರಿಸ್ ವೋಕ್ಸ್ ಜೊತೆಯಾಟ ಟೀಂ ಇಂಡಿಯಾ ತಲೆನೋವು ಹೆಚ್ಚಿಸಿತು. ಆದರೆ ರವೀಂದ್ರ ಜಡೇಜಾ ಮೋಡಿಗೆ ಕ್ರಿಸ್ ವೋಕ್ಸ್ ವಿಕೆಟ್ ಪತನಗೊಂಡಿತು. ಇತ್ತ 27 ರನ್ ಸಿಡಿಸಿದ ಲಿಯಾಮ್ ಲಿವಿಂಗ್‌ಸ್ಟೋನ್ ವಿಕೆಟ್ ಪತನ ಇಂಗ್ಲೆಂಡ್ ತಂಡದ ಸೋಲಿನ ಸಂಕಷ್ಟ ಹೆಚ್ಚಿಸಿತು. ಆದಿಲ್ ರಶೀದ್ 13 ರನ್ ಸಿಡಿಸಿ ಔಟಾದರು.ಮಾರ್ಕ್ ವುಡ್ ವಿಕೆಟ್ ಪತನದೊಂದಿಗೆ ಇಂಗ್ಲೆಂಡ್ 34.5 ಓವರ್‌ಗಲ್ಲಿ 129 ರನ್‌ಗೆ ಆಲೌಟ್ ಆಯಿತು. ಭಾರತ 100 ರನ್ ಭರ್ಜರಿ ಗೆಲುವು ದಾಖಲಿಸಿತು. ಇತ್ತ ಇಂಗ್ಲೆಂಡ್ ತಂಡ ಟೂರ್ನಿಯಿಂದ ಹೊರಬೀಳುವ ಸಾಧ್ಯತೆ ಪಕ್ಕಾ ಆಗಿದೆ.

INDvENG ಡಕೌಟ್ ಆದ ಕೊಹ್ಲಿಯನ್ನು ಡಕ್‌ಗೆ ಹೋಲಿಸಿದ ಇಂಗ್ಲೆಂಡ್ ಫ್ಯಾನ್ಸ್, ಭಾರತೀಯರ ತಿರುಗೇಟು!

ಮೊಹಮ್ಮದ್ ಶಮಿ 4 ವಿಕೆಟ್ ಕಬಳಿಸಿದೆ, ಜಸ್ಪ್ರೀತ್ ಬುಮ್ರಾ 3, ಕುಲ್ದೀಪ್ ಯಾದವ್ 2, ರವೀಂದ್ರ ಜಡೇಜಾ 1 ವಿಕೆಟ್ ಕಬಳಿಸಿದರು. ಈ ಮೂಲಕ ಇಂಗ್ಲೆಂಡ್ 34.5 ಓವರ್‌ಗಳಲ್ಲೇ ಆಲೌಟ್ ಆಗಿದೆ. ಭಾರತ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದರೆ, ಇಂಗ್ಲೆಂಡ್ ಕೊನೆಯ ಸ್ಥಾನದಲ್ಲೇ ಉಳಿದುಕೊಂಡಿದೆ.

click me!